ಪಶ್ಚಿಮ ಬಂಗಾಳದ 29 ಉಪಕುಲಪತಿಗಳ ನೇಮಕಾತಿ ರದ್ದುಗೊಳಿಸಿದ ಕೋಲ್ಕತ್ತಾ ಹೈಕೋರ್ಟ್; ನೇಮಕಕ್ಕೆ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಹೈಕೋರ್ಟ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ (ವಿಸಿ) ನೇಮಕ, ಮರುನೇಮಕ ಅಥವಾ ಅಧಿಕಾರಾವಧಿಯನ್ನು ವಿಸ್ತರಿಸಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಮಂಗಳವಾರ ಹೇಳಿದೆ. ಆದ್ದರಿಂದ ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯಗಳ ಕಾಯಿದೆಗೆ ಕೈಗೊಂಡ 2012 ಮತ್ತು 2014 ರಲ್ಲಿ ಮಾಡಿದ ತಿದ್ದುಪಡಿಗಳ ಆಧಾರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದಿಂದ ನೇಮಕಗೊಂಡ ಅಥವಾ ಮರುನೇಮಕಗೊಂಡ ರಾಜ್ಯದ … Continued

ಅದಾನಿ ಕುರಿತ ಹಿಂಡೆನ್‌ಬರ್ಗ್ ವರದಿ ತನಿಖೆಗೆ ಒತ್ತಾಯಿಸಿ ವಿಪಕ್ಷದ ಸಂಸದರಿಂದ ಸಂಸತ್ತಿನಿಂದ ಇ.ಡಿ ಕಚೇರಿವರೆಗೆ ಮೆರವಣಿಗೆ

ನವದೆಹಲಿ: ಅದಾನಿ ವಿವಾದದ ಬಗ್ಗೆ ತನಿಖೆಗೆ ಒತ್ತಾಯಿಸಿ 18 ವಿರೋಧ ಪಕ್ಷಗಳ ನಾಯಕರು ಇಂದು, ಬುಧವಾರ ಮಧ್ಯಾಹ್ನ ಸಂಸತ್ತಿನಿಂದ ಆರಂಭವಾದ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದಿದ್ದಾರೆ. ಅದಾನಿ ಗ್ರೂಪ್‌ ಕುರಿತು ಹಿಂಡೆನ್‌ಬರ್ಗ್ ವರದಿ ಬಗ್ಗೆ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕರು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಗೆ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ. ದೆಹಲಿ ಪೊಲೀಸರು ಇ.ಡಿ. … Continued

ತಾಯಿ ಗರ್ಭದೊಳಗಿದ್ದಗಾಲೇ ಮಗುವಿನ ದ್ರಾಕ್ಷಿ ಗಾತ್ರದ ಹೃದಯದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ಏಮ್ಸ್ ವೈದ್ಯರ ತಂಡ…!

ನವದೆಹಲಿ: ದೆಹಲಿಯ ಏಮ್ಸ್‌ನ ವೈದ್ಯರ ತಂಡವು ತಾಯಿ ಗರ್ಭದೊಳಗಿದ್ದ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯದ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ…! ಮೂರು ಬಾರಿ ಗರ್ಭಪಾತವಾಗಿದ್ದ 28 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗುವಿನ ಹೃದಯದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಗರ್ಭದಲ್ಲಿರುವ ಭ್ರೂಣದ ಹೃದಯ ಸ್ಥಿತಿಯ ಬಗ್ಗೆ ವೈದ್ಯರು ತಿಳಿಸಿದಾಗ ಮಹಿಳೆ ನಿರಾಶೆಗೊಂಡಿದ್ದಾರೆ. … Continued

ಎರಡು ಮದುವೆಯಾದ ಗಂಡ : ಈಗ ಇಬ್ಬರು ಹೆಂಡತಿಯರ ನಡುವೆ ವಾರದಲ್ಲಿ 3-3 ದಿನ ಗಂಡನ ಹಂಚಿಕೆಯ ಒಪ್ಪಂದ…!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಪತ್ನಿಯರ ನಡುವೆ ಪತಿಯ ಹಂಚಿಕೊಳ್ಳುವಿಕೆ ಚರ್ಚೆಗೆ ಕಾರಣವಾಗಿದೆ. ಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿದ್ದು, ಇಬ್ಬರು ಮಹಿಳೆಯರನ್ನು ಮದೆಯಾಗಿದ್ದಾನೆ. ಇದು ಜಗಳಕ್ಕೆ ಕಾರಣವಾಗಿ ನಂತರ ನ್ಯಾಯಾಲಯದ ಹೊರಗೆ ನಡೆದ ಕೌನ್ಸೆಲಿಂಗ್ ನಲ್ಲಿ ಪತಿ-ಪತ್ನಿಯರ ನಡುವೆ ವಿಶಿಷ್ಟ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದ ಪ್ರಕಾರ, ಆತ ವಾರದಲ್ಲಿ ಮೂರು ದಿನ ಮೊದಲ ಪತ್ನಿಯೊಂದಿಗೆ ಹಾಗೂ … Continued

ಮಾರ್ಚ್‌ 21ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಯುಗಾದಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಡೌಟ್‌

ಬೆಂಗಳೂರು: ವೇತನ ಪರಿಷ್ಕರಣೆ ಹಾಗೂ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮಾರ್ಚ್‌ 21ರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಯುಗಾದಿ ಹಬ್ಬಕ್ಕೆ ಮುನ್ನವೇ ರಾಜ್ಯಾದ್ಯಂತ 23 ಸಾವಿರ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ … Continued

2022ರಲ್ಲಿ ಭಾರತದ ವಾಯುಗುಣಮಟ್ಟದಲ್ಲಿ ಕೊಂಚ ಸುಧಾರಣೆ; ದೆಹಲಿ ಈಗ ವಿಶ್ವದ ಅತಿ ಹೆಚ್ಚು ಮಾಲಿನ್ಯದ ನಗರವಲ್ಲ | ಪಟ್ಟಿ ಇಲ್ಲಿದೆ..

ನವದೆಹಲಿ: ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ IQAir ಪ್ರಕಟಿಸಿದ ವರದಿಯ ಪ್ರಕಾರ, ವಾಯು ಮಾಲಿನ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2022 ರಲ್ಲಿ ಮೂರು ಸ್ಥಾನ ಸುಧಾರಿಸಿದೆ ಮತ್ತು ಅತ್ಯಂತ ಕಳಪೆ ಗಾಳಿಯ ಗುಣಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿದೆ. ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್, ಬಾಂಗ್ಲಾದೇಶ, ಬುರ್ಕಿನಾ ಫಾಸೊ ಮತ್ತು ಕುವೈತ್ … Continued

ಸೊಂಡಿಲಿನಲ್ಲಿ ನೀರಿನ ಪೈಪ್ ಹಿಡಿದು ಮಾನವನಂತೆ ತಾನೇ ಸ್ನಾನ ಮಾಡುತ್ತಿರುವ ಆನೆ : ಅದರ ಬುದ್ಧಿಶಕ್ತಿಗೆ ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಕೆಲಸ ಸುದೀರ್ಘವಾದಾಗ ಮತ್ತು ದಣಿದಾಗ ಬೇಕಾಗಿರುವುದು ಸ್ವಲ್ಪ ವಿಶ್ರಾಂತಿ. ಕೆಲವರು ಸಂಜೆಯ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಲು ಇಷ್ಟಪಡುತ್ತಾರೆ, ಇತರರು ಟಿವಿಯಲ್ಲಿ ಚಲನಚಿತ್ರ, ಧಾರಾವಾಹಿ, ಇತರ ಮನರಂಜನಾ ಕಾರ್ಯಕ್ರಮಗಳು, ವೆಬ್ ಸರಣಿಯನ್ನು ವೀಕ್ಷಿಸಲು ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಮನರಂಜನೆ ಪಡೆದು ಆನಂದಿಸುತ್ತಾರೆ. ಇಂಟರ್ನೆಟ್‌ನಲ್ಲಿ ಮನಸ್ಸಿಗೆ ಮುದ ನೀಡುವ ಅನೇಕ ಸಂಗತಿಗಳು ಹಾಗೂ … Continued

ಬೈಕ್‌ ಮೇಲೆ ಬಂದ ಕಳ್ಳರಿಂದ ಮಹಿಳಾ ನ್ಯಾಯಾಧೀಶರ ಬ್ಯಾಗ್‌ ಕಸಿದುಕೊಳ್ಳಲು ಯತ್ನ: ಕೆಳಕ್ಕೆ ಬಿದ್ದು ನ್ಯಾಯಾಧೀಶರ ತಲೆಗೆ ಗಾಯ

ನವದೆಹಲಿ: ಉತ್ತರ ದೆಹಲಿಯ ಗುಲಾಬಿ ಬಾಗ್‌ ಪ್ರದೇಶದಲ್ಲಿ ಬೈಕ್‌ ಮೇಲೆ ಬಂದು ಬ್ಯಾಗ್‌ ದರೋಡೆ ಮಾಡಿಕೊಂಡು ಪರಾರಿಯಾಗಲು ಯತ್ನಿಸದವರಿಂದ ತನ್ನ ಬ್ಯಾಗ್‌ ರಕ್ಷಿಸಿಕೊಳ್ಳಲು ಯತ್ನಿಸಿದ ವೇಳೆ ಮಹಿಳಾ ನ್ಯಾಯಾಧೀಶರು ರಸ್ತೆಯ ಮೇಲೆ ಬಿದ್ದು ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳಾ ನ್ಯಾಯಾಧೀಶರು ಮಾರ್ಚ್ 6 ರಂದು ರಾತ್ರಿ 10 … Continued

ಮತ್ತೆ 10000 ಉದ್ಯೋಗಿಗಳ ವಜಾ ಮಾಡಲಿರುವ ಮೆಟಾ : ಮಾರ್ಕ್ ಜುಕರ್‌ಬರ್ಗ್

ನವದೆಹಲಿ: 2023 ರಲ್ಲಿ ಮೆಟಾ ಮತ್ತೆ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಪ್ರಕಟಿಸಿದೆ. ಕಳೆದ ವರ್ಷ, ಕಂಪನಿಯು 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ 10,000 ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ. ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ವಜಾಗೊಳಿಸುವ ಕುರಿತು ಪ್ರಕಟಿಸಿದೆ ಮತ್ತು ಟೆಕ್ ದೈತ್ಯ ತನ್ನ ಇತ್ತೀಚಿನ ನಿರ್ಧಾರಕ್ಕಾಗಿ ಕ್ಷಮೆಯಾಚಿಸಿದೆ. ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು … Continued

ಮಹಿಳಾ ಪ್ರಯಾಣಿಕಳ ಮೇಲೆ ಟಿಟಿಇ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ: ಟಿಟಿಇ ವಜಾಗೊಳಿಸಿದ ರೈಲ್ವೆ ಸಚಿವರು

ನವದೆಹಲಿ: ಅಮೃತಸರ-ಕೋಲ್ಕತ್ತಾ ರೈಲಿನಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಕೆಟ್ ಪರೀಕ್ಷಕನನ್ನು ಇಂದು, ಮಂಗಳವಾರ ವಜಾಗೊಳಿಸಲಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಪ್ರಯಾಣಿಕಳ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಒಂದು ದಿನದ ನಂತರ ರೈಲ್ವೆ ಟಿಟಿಇ ಹಾಗೂ … Continued