ಇಫ್ಕೋದಿಂದ ಬೆಳೆ ಪೋಷಕಾಂಶ ಗೊಬ್ಬರಗಳ ಬೆಲೆ 14% ರಷ್ಟು ಕಡಿತ..?

ನವದೆಹಲಿ: ಭಾರತದ ಅತಿದೊಡ್ಡ ರಸಗೊಬ್ಬರ ತಯಾರಕರಾದ ಇಫ್ಕೋ (IFFCO) ಲಿಮಿಟೆಡ್, ವ್ಯಾಪಕವಾಗಿ ಬಳಸಿದ ಬೆಳೆ ಪೋಷಕಾಂಶಗಳ (ಗೊಬ್ಬರ) ಬೆಲೆಯನ್ನು ಸುಮಾರು 14% ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯ ಕಾರ್ಯನಿರ್ವಾಹಕರ ಪ್ರಕಾರ, ಈ ಕ್ರಮವು ಜಾಗತಿಕ ಆಹಾರ ಬಿಕ್ಕಟ್ಟಿನ ವರ್ಷದಲ್ಲಿ ಕೃಷಿ ವೆಚ್ಚಗಳು ಮತ್ತು ಸಬ್ಸಿಡಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು … Continued

ಎಎಪಿಯ ಶೆಲ್ಲಿ ಒಬೆರಾಯ್ ದೆಹಲಿಯ ನೂತನ ಮೇಯರ್, ಮೊಹಮ್ಮದ್ ಇಕ್ಬಾಲ್ ಉಪಮೇಯರ್‌

ನವದೆಹಲಿ: ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ ಮೇಯರ್‌ ಚುನಾವಣೆಯಲ್ಲಿ ಮೂರು ವಿಫಲ ಪ್ರಯತ್ನಗಳ ನಂತರ, ಆಮ್ ಆದ್ಮಿ ಪಕ್ಷದ ನಾಯಕಿ ಶೆಲ್ಲಿ ಒಬೆರಾಯ್ ಅವರು 150 ಮತಗಳೊಂದಿಗೆ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಅವರು ಬುಧವಾರ ಬಿಜೆಪಿಯ ರೇಖಾ ಗುಪ್ತಾ ಅವರನ್ನು 34 ಮತಗಳಿಂದ ಸೋಲಿಸಿದರು. ಆಮ್ ಆದ್ಮಿ ಪಕ್ಷ (ಎಎಪಿ)ದ ಮೊಹಮ್ಮದ್ ಇಕ್ಬಾಲ್ ಬುಧವಾರ ದೆಹಲಿಯ ನೂತನ … Continued

ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು

ಚೆನ್ನೈ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಖ್ಯಾತ ನಟ ಪ್ರಭು ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತಪಾಸಣೆ ನಡೆಸಿದ್ದು, ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. ವರದಿಗಳ ಪ್ರಕಾರ, ಪ್ರಬು ಅವರನ್ನು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು ಮತ್ತು ಅವರಿಗೆ ಲೇಸರ್ ಎಂಡೋಸ್ಕೋಪಿ ಮಾಡಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವರದಿಯಾಗಿದೆ. ಒಂದೆರಡು ದಿನಗಳಲ್ಲಿ … Continued

ಜಾತಿ ತಾರತಮ್ಯವನ್ನು ಕಾನೂನುಬಾಹಿರ ಎಂದು ಘೋಷಿಸಿದ ಅಮೆರಿಕದ ಮೊದಲ ನಗರವಾದ ಸಿಯಾಟಲ್

ವಾಷಿಂಗ್ಟನ್: ಸಿಯಾಟಲ್ ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸಿದ ಅಮೆರಿಕದ ಮೊದಲ ನಗರವಾಗಿದೆ. ಕ್ಷಮಾ ಸಾವಂತ್ ಅವರು ಮಂಡಿಸಿದ ನಿರ್ಣಯವನ್ನು ಸಿಯಾಟಲ್ ಸಿಟಿ ಕೌನ್ಸಿಲ್ 6-1 ಮತದಿಂದ ಅನುಮೋದಿಸಿತು. ಮತದಾನದ ಫಲಿತಾಂಶಗಳು ಅಮೆರಿಕದಲ್ಲಿ ಜಾತಿ ತಾರತಮ್ಯದ ವಿಷಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ಇದು ಅಧಿಕೃತವಾಗಿದೆ: ನಮ್ಮ ಚಳವಳಿಯು ಸಿಯಾಟಲ್‌ನಲ್ಲಿ ಜಾತಿ ತಾರತಮ್ಯದ ಮೇಲೆ ಐತಿಹಾಸಿಕ, ರಾಷ್ಟ್ರದ ಮೊದಲ … Continued

ಬೃಹತ್ ಹವಾಮಾನ ಬದಲಾವಣೆಯ ಅಪಾಯ ಎದುರಿಸುತ್ತಿರುವ ವಿಶ್ವದ ಟಾಪ್-100 ಪ್ರಾಂತ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿ ಭಾರತದ 14 ರಾಜ್ಯಗಳು…!

ನವದೆಹಲಿ: ಭಾರತದಲ್ಲಿ ಕನಿಷ್ಠ 14 ರಾಜ್ಯಗಳು ಹವಾಮಾನ ವೈಪರೀತ್ಯ ಮತ್ತು ಹವಾಮಾನ ಬದಲಾವಣೆಯಿಂದ ಹಾನಿಗೊಳಗಾಗುವ ಏಷ್ಯಾದ ಟಾಪ್-100 ಪ್ರಾಂತ್ಯಗಳಲ್ಲಿ ಸೇರಿವೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಕ್ರಾಸ್ ಡಿಪೆಂಡೆನ್ಸಿ ಇನಿಶಿಯೇಟಿವ್ (XDI) ಮೂಲಕ ಎಕ್ಸ್‌ಡಿಐ (XDI) ಗ್ರೋಸ್‌ ಡೊಮೆಸ್ಟಿಕ್ ಕ್ಲೈಮೇಟ್ ರಿಸ್ಕ್ ಡೇಟಾದ ಮೂಲಸೌಕರ್ಯಕ್ಕೆ ಸಂಭವನೀಯ ಹಾನಿಯ ಮೊದಲ ವಿಶ್ಲೇಷಣೆಯ ಪ್ರಕಾರ, ಹವಾಮಾನ ವೈಪರೀತ್ಯದ ಪರಿಣಾಮಕ್ಕೆ … Continued

ಸ್ನೂಪಿಂಗ್ ಕೇಸ್: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ವಿಚಾರಣೆಗೆ ಕೇಂದ್ರದ ಒಪ್ಪಿಗೆ

ನವದೆಹಲಿ: ಫೀಡ್‌ಬ್ಯಾಕ್‌ ಯುನಿಟ್‌ (ಎಫ್‌ಬಿಯು) ಸ್ನೂಪಿಂಗ್ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಗೃಹ ಸಚಿವಾಲಯವು ಅನುಮತಿ ನೀಡಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ಮೊಕದ್ದಮೆಗೆ ಅನುಮತಿಗಾಗಿ ಕೋರಿದ್ದ ಮನವಿಯನ್ನು ಅನುಮೋದಿಸಿದರು ಮತ್ತು ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ … Continued

WPL 2023: ಮಹಿಳೆಯರ ಪ್ರೀಮಿಯರ್ ಲೀಗ್‌ ಟೈಟಲ್‌ ಹಕ್ಕು ಪಡೆದುಕೊಂಡ ಟಾಟಾ ಗ್ರೂಪ್

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2023 ರ ಟೈಟಲ್‌ ಹಕ್ಕುಗಳನ್ನು ಟಾಟಾ ಗ್ರೂಪ್ ಪಡೆದುಕೊಂಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಂಗಳವಾರ (ಫೆಬ್ರವರಿ 21) ಪ್ರಕಟಿಸಿದ್ದಾರೆ. ಈ ಸುದ್ದಿಯನ್ನು ಜಯ್ ಶಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟಾಟಾ ಗ್ರುಪ್‌ (TataGroup) ಅನ್ನು ಉದ್ಘಾಟನಾ ಡಬ್ಲ್ಯುಪಿಎಲ್ (WPL)ನ ಟೈಟಲ್‌ … Continued

ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ 1980ರಲ್ಲಿ ನನ್ನ ತಂದೆಯನ್ನು ಕೇಂದ್ರ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದರು : ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ: ತಾವು ಅಧಿಕಾರಶಾಹಿಗಳ ಕುಟುಂಬಕ್ಕೆ ಸೇರಿದವರು ಮತ್ತು ಕೇಂದ್ರ ಸಚಿವರಾಗುವ ರಾಜಕೀಯ ಅವಕಾಶ 2019 ರಲ್ಲಿ ಬಂದಿರುವುದು ತನಗೆ ಅಚ್ಚರಿಯ ಸಂಗತಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಹೇಳಿದ್ದಾರೆ. 1980 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಪುನಃ ಅಧಿಕಾರಕ್ಕೆ ಬಂದ ನಂತರ ತಮ್ಮ ತಂದೆ ಡಾ.ಕೆ.ಸುಬ್ರಹ್ಮಣ್ಯಂ ಅವರನ್ನು ರಕ್ಷಣಾ ಉತ್ಪಾದನೆ ಕಾರ್ಯದರ್ಶಿ ಹುದ್ದೆಯಿಂದ … Continued

ಲಾಹೋರ್‌ ಕಾರ್ಯಕ್ರಮದಲ್ಲಿ ತೂರಿ ಬಂದ ಪ್ರಶ್ನೆಗೆ ಪಾಕಿಸ್ತಾನ ನೆಲದಲ್ಲೇ ಮಾತಿನಲ್ಲಿ ಪಾಕ್‌ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ ಬರಹಗಾರ ಜಾವೇದ್‌ ಅಖ್ತರ್‌ | ವೀಕ್ಷಿಸಿ

ಖ್ಯಾತ ಕವಿ ಮತ್ತು ಬರಹಗಾರ ಜಾವೇದ್ ಅಖ್ತರ್ ಕಳೆದ ವಾರ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಉತ್ಸವವೊಂದರಲ್ಲಿ ಮಾತನಾಡುತ್ತ  ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತವು ಹಲವಾರು ದೂರುಗಳ ಹೊರತಾಗಿಯೂ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳು “ಇನ್ನೂ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ” ಎಂದು ಅಖ್ತರ್ ಹೇಳಿದ್ದಾರೆ. ಭಾರತದಲ್ಲಿ ಪಾಕಿಸ್ತಾನಿ … Continued

ಮಾರ್ಕ್ಸ್‌ಕಾರ್ಡ್‌ ಕೊಡಲು ವಿಳಂಬ : ಕಾಲೇಜು ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ..!

ಇಂದೋರ್‌: ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಖಾಸಗಿ ಕಾಲೇಜೊಂದರ ಹಳೆ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜು ಪ್ರಾಂಶುಪಾಲರ ಮೇಲೆ ಪೆಟ್ರೋಲು ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇಂದೋರ್‌ನ ಬಿಎಂ ಫಾರ್ಮಸಿ ಕಾಲೇಜಿನ 49 ವರ್ಷದ ಮಹಿಳಾ ಪ್ರಾಂಶುಪಾಲರು 80 ಪ್ರತಿಶತ ಸುಟ್ಟಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, 22 ವರ್ಷದ ಅಶುತೋಷ್ ಶ್ರೀವಾಸ್ತವ … Continued