ಇನ್ಮುಂದೆ ಸಂಸತ್ತಿನಲ್ಲಿ ಈ ಪದಗಳ ಬಳಕೆ ನಿಷೇಧ: ಸರ್ಕಾರ ಟೀಕಿಸಲು ಪ್ರತಿಪಕ್ಷಗಳು ಈಗ ಬೇರೆ ಶಬ್ದ ಹುಡುಕ್ಬೇಕು..!

ನವದೆಹಲಿ: ಲೋಕಸಭೆ ಸೆಕ್ರೆಟರಿಯೇಟ್‌ನ ಹೊಸ ಕಿರುಪುಸ್ತಕದ ಪ್ರಕಾರ, ‘ಜುಮ್ಲಜೀವಿ’, ‘ಬಾಲ್ ಬುದ್ಧಿ’, ‘ಕೋವಿಡ್ ಸ್ಪ್ರೆಡರ್’ ಮತ್ತು ‘ಸ್ನೂಪ್‌ಗೇಟ್’ ನಂತಹ ಪದಗಳ ಬಳಕೆ ಮತ್ತು ಸಾಮಾನ್ಯವಾಗಿ ಬಳಸುವ ‘ಶೇಮ್ಡ್’, ‘ಅಬ್ಯುಸ್ಡ್’, ‘ಬಿಟ್ರೇಯ್ಡ್‌’, ಕರಪ್ಟ್‌ (ಭ್ರಷ್ಟ), ಡ್ರಾಮಾ (ನಾಟಕ), ‘ಬೂಟಾಟಿಕೆ’ ಮತ್ತು ‘ಅಸಮರ್ಥ’ ಈ ಪದಗಳನ್ನು ಇನ್ನು ಮುಂದೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅಸಂಸದೀಯ ಎಂದು ಪರಿಗಣಿಸಲಾಗುತ್ತದೆ. … Continued

ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಪಲಾಯನ ಮಾಡಿದ ಗೊತಬಯ ರಾಜಪಕ್ಸೆ , ನಂತರ ಸೌದಿ ಅರೇಬಿಯಾಕ್ಕೆ? : ಆದರೆ ಇನ್ನೂ ರಾಜೀನಾಮೆ ನೀಡಿಲ್ಲ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ನಡುವೆ ತನ್ನ ದೇಶದ ಜನರನ್ನು ಎದುರಿಸಲಾಗದೆ ದೇಶದಿಂದ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ನಂತರ ಶ್ರೀಲಂಕಾದ ಅಧ್ಯಕ್ಷ ಗೊತಬಯ ರಾಜಪಕ್ಸೆ ಗುರುವಾರ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ತೆರಳಿದ್ದಾರೆ, ಅಲ್ಲಿಂದ ಅವರು ಸೌದಿ ಅರೇಬಿಯಾಕ್ಕೆ ತೆರಳಲಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. 73 ವರ್ಷದ ನಾಯಕ ಬುಧವಾರ ಸೌದಿ ಏರ್‌ಲೈನ್ಸ್ ವಿಮಾನವನ್ನು ಹತ್ತಿದರು, ಅದು … Continued

ಪ್ರಧಾನಿ ಮೋದಿ ಗುರಿಯಾಗಿಸಿಕೊಂಡಿದ್ದ ಭಯೋತ್ಪಾದನಾ ಘಟಕ ಭೇದಿಸಿದ ಬಿಹಾರ ಪೊಲೀಸರು: ನಿವೃತ್ತ ಪೋಲೀಸ್ ಅಧಿಕಾರಿ ಸೇರಿ ಇಬ್ಬರ ಬಂಧನ

ಪಾಟ್ನಾ: ಪಾಟ್ನಾದಲ್ಲಿ ಶಂಕಿತ ಭಯೋತ್ಪಾದಕ ಘಟಕವನ್ನು ಭೇದಿಸಲಾಗಿದ್ದು, ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮಾಡ್ಯೂಲ್ 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಯೋಜಿಸುತ್ತಿದೆ. ಜುಲೈ 12 ರಂದು ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸುವ ಸಂಚು ಕೂಡ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ … Continued

ಕೇರಳದಲ್ಲಿ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ : ವೈರಲ್ ಝೂನೋಟಿಕ್ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು

ತಿರುವನಂತಪುರಂ (ಕೇರಳ): ಇತ್ತೀಚೆಗಷ್ಟೇ ವಿದೇಶದಿಂದ ಕೇರಳಕ್ಕೆ ಮರಳಿದ ವ್ಯಕ್ತಿಯೊಬ್ಬರು ಮಂಕಿ ಪಾಕ್ಸ್‌ ಲಕ್ಷಣಗಳನ್ನು ತೋರಿಸಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ. ಅವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದು ಭಾರತದಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳನ್ನು ತೋರಿಸುತ್ತಿರುವ ಮೊದಲ … Continued

145 ದಿನಗಳ ನಂತರ ಮೊದಲ ಬಾರಿಗೆ 20 ಸಾವಿರದ ಗಡಿ ದಾಟಿದ ಭಾರತದ ದೈನಂದಿನ ಕೊರೊನಾ ಪ್ರಕರಣಗಳು..!

ನವದೆಹಲಿ: ಗುರುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳು 145 ದಿನಗಳ ಅಂತರದ ನಂತರ 20,000 ಕ್ಕಿಂತ ಹೆಚ್ಚು ದಾಖಲಾಗಿವೆ ಮತ್ತು ಸಕ್ರಿಯ ಪ್ರಕರಣಗಳು 1,36,076 ಕ್ಕೆ ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 20,139 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ … Continued

ನೂರಾರು ಜನ ನೋಡುತ್ತಿದ್ದಂತೆ ಓಮನ್ ಬೀಚ್‌ನಲ್ಲಿ ಸಮುದ್ರ ಪಾಲಾದ ಭಾರತೀಯ ವ್ಯಕ್ತಿ, ಇಬ್ಬರು ಮಕ್ಕಳು

ನವದೆಹಲಿ: ಮಹಾರಾಷ್ಟ್ರದ ವ್ಯಕ್ತಿ ಮತ್ತು ಅವರ ಆರು ವರ್ಷದ ಮಗ ನಿನ್ನೆ ಓಮನ್‌ನ ಬೀಚ್‌ನಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಬೃಹತ್‌ ತೆರೆ ಎಳೆದುಕೊಂಡು ಹೋಗಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಒಂಬತ್ತು ವರ್ಷದ ಮಗಳು ಕಾಣೆಯಾಗಿದ್ದು, ರಕ್ಷಕರು ಅವಳನ್ನು ಹುಡುಕುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಶಶಿಕಾಂತ್ ಮ್ಮಾಮನೆ (42), ಅವರ ಪತ್ನಿ ಮತ್ತು ಅವರ ಮಕ್ಕಳಾದ ಶ್ರುತಿ (9) … Continued

45 ಪಿಸ್ತೂಲ್‌ಗಳನ್ನು ತಂದಿದ್ದ ಭಾರತೀಯ ದಂಪತಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

ನವದೆಹಲಿ: 45 ಪಿಸ್ತೂಲ್‌ಗಳನ್ನು ಹೊತ್ತಿದ್ದ ಇಬ್ಬರು ಭಾರತೀಯರನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂದೂಕುಗಳು ನಿಜವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಘಟಕ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಬಂದೂಕುಗಳು ‘ಸಂಪೂರ್ಣವಾಗಿ ನೈಜ’ವಾಗಿ ಕಾಣುತ್ತವೆ ಎಂದು ವರದಿಗಳು ಹೇಳಿವೆ. … Continued

ಭಯೋತ್ಪಾದನೆ ಕುರಿತಾದ ಚರ್ಚೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಆಹ್ವಾನಿಸಿಲ್ಲ, ಭೇಟಿಯಾಗಿಲ್ಲ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

ನವದೆಹಲಿ: ತಾನು ಭಾರತಕ್ಕೆ ಬಂದು ಗೂಢಾಚಾರಿಕೆ ನಡೆಸಿದ್ದೆ ಎಂದು ಹೇಳಿರುವ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಭೇಟಿಯಾಗಿಲ್ಲ. ಭಯೋತ್ಪಾದನೆ ಕುರಿತಾದ ಚರ್ಚೆಗೆ ಭಾರತಕ್ಕೆ ಆಹ್ವಾನಿಸಿಲ್ಲ ಎಂಬುದಾಗಿ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಉಪರಾಷ್ಟ್ರಪತಿಯಾಗಿದ್ದಾಗ ಪಾಕಿಸ್ತಾನಿ ಪತ್ರಕರ್ತರೊಬ್ಬರನ್ನು ಭಾರತಕ್ಕೆ ಆಹ್ವಾನಿಸಿದ್ದರು ಎಂಬ ಆರೋಪಕ್ಕೆ ಬಿಜೆಪಿಗೆ ಹಮೀದ್ ಅನ್ಸಾರಿ ತಿರುಗೇಟು … Continued

ಆಮದು ಸುಂಕ ವಂಚನೆಗಾಗಿ ಚೀನಾ ಫೋನ್ ತಯಾರಕ ಒಪ್ಪೋ ಕಂಪನಿಗೆ ₹ 4,389 ಕೋಟಿ ನೊಟೀಸ್

ನವದೆಹಲಿ: ₹ 4,389 ಕೋಟಿ ಆಮದು ಸುಂಕ ವಂಚನೆ ಆರೋಪದ ಮೇಲೆ ಚೀನಾದ ಫೋನ್‌ ತಯಾರಕಾ ಕಂಪನಿ ಒಪ್ಪೊದ ಭಾರತ ಘಟಕಕ್ಕೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ಕೆಲವು ಆಮದುಗಳು ಮತ್ತು ರಾಯಧನ ಮತ್ತು ಪರವಾನಗಿ ಶುಲ್ಕಗಳ ರವಾನೆಗಳ ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಹೇಳಿಕೆಯನ್ನು ಸೂಚಿಸಿದ ನಂತರ ಕಂಪನಿಯ ಆವರಣದಲ್ಲಿನ … Continued

ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೂ ಮೊದಲು ಮಹಾರಾಷ್ಟ್ರ ವಿಕಾಸ ಅಘಾಡಿಯಲ್ಲಿ ಬಿರುಕು…!

ಮುಂಬೈ: ಮಹಾರಾಷ್ಟ್ರದ ಮೂರು ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಂಗ್ರೆಸ್‌ ನಾಯಕ ಮಿಲಿಂದ್ ದೇವೋರಾ  ಮುಂಬೈನಲ್ಲಿ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಲಾಭ ಪಡೆಯಲು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಪಾಲುದಾರ ಶಿವಸೇನೆಯು ವಾರ್ಡ್‌ಗಳನ್ನು ಪುನರ್‌ರಚನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹಾಗೂ ಶಿವಸೇನೆಯು ಸಮ್ಮಿಶ್ರ ಧರ್ಮ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ತನ್ನ … Continued