ಆಗ್ರಾ ಆಸ್ಪತ್ರೆಯಲ್ಲಿ ದೇವರಿಗೆ ಬ್ಯಾಂಡೇಜ್‌…!: ಗೋಳಾಡಿ ಕೃಷ್ಣನ ವಿಗ್ರಹದ ಮುರಿದ ಕೈಗೆ ವೈದ್ಯರಿಂದ ಬ್ಯಾಂಡೇಜ್ ಹಾಕಿಸಿಕೊಂಡ ಅರ್ಚಕ…!!

ಆಗ್ರಾ: ಇತ್ತೀಚಿನ ದಿನಗಳಲ್ಲಿ ಕರಾಳ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಈಗ ಚಿತ್ರವಿಚಿತ್ರ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಆಗ್ರಾದ ಜಿಲ್ಲಾ ಆಸ್ಪತ್ರೆಗೆ ಇಂದು (ಶುಕ್ರವಾರ) ಅರ್ಚಕರೊಬ್ಬರು ಕೃಷ್ಣನ ವಿಗ್ರಹವನ್ನು ಹೊತ್ತು ಬಂದಿದ್ದರು. ನನ್ನ ಕೃಷ್ಣನ ಕೈ ಮುರಿದು ಹೋಗಿದೆ. ಇದಕ್ಕೆ ಬ್ಯಾಂಡೇಜ್ ಹಾಕಿ ಎಂದು ವೈದ್ಯರ ಬಳಿ ಮನವಿ ಮಾಡಿದ್ದು, ಅವರ ಮಾತನ್ನು ಕೇಳಿದ … Continued

ಪತ್ನಿಗೆ ಮಾಡಿದ ಅವಮಾನ ಸಹಿಸಲ್ಲ ..ಮತ್ತೆ ಸಿಎಂ ಆಗುವವರೆಗೂ ವಿಧಾಸಭೆಗೆ ಹೋಗಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

ಅಮರಾವತಿ: ನವೆಂಬರ್ 19, ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರವೇ ಆಂಧ್ರ ಪ್ರದೇಶ ವಿಧಾನಸಭೆಗೆ ಮತ್ತೆ ಕಾಲಿಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಎರಡನೇ ದಿನದಂದು, ಆಡಳಿತಾರೂಢ ವೈಎಸ್‌ಆರ್‌ಸಿಪಿ ಸದಸ್ಯರಿಂದ ತಾವು ಎದುರಿಸುತ್ತಿರುವ ನಿರಂತರ ಅವಮಾನದಿಂದ ನೋವಾಗಿದೆ … Continued

ತಿರುಪತಿಯಲ್ಲಿ ಅಭೂತಪೂರ್ವ ಮಳೆ-ಪ್ರವಾಹ: ಭಕ್ತರ ದರ್ಶನಕ್ಕೆ ವೆಂಕಟೇಶ್ವರ ದೇವಸ್ಥಾನ ಬಂದ್‌ ಮಾಡಿದ ಟಿಟಿಡಿ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ನವೆಂಬರ್ 19 ಶುಕ್ರವಾರದಂದು ಭಕ್ತರಿಗೆ ಮುಚ್ಚಲಾಗಿದೆ. ದೇವಾಲಯವು ಏಳು ಬೆಟ್ಟಗಳಿಂದ ಆವೃತವಾದ ತಿರುಪತಿ ಪಟ್ಟಣದಲ್ಲಿ ಅಭೂತಪೂರ್ವ ಭಾರೀ ಮಳೆಯ ನಂತರ ತಿರುಪತಿ ತುರುಮಲಾ ಟ್ರಸ್ಟ್‌ (ಟಿಟಿಡಿ) ಈ ನಿರ್ಧಾರ ಕೈಗೊಂಡಿದೆ. ವೆಂಕಟಾದ್ರಿಯ ಏಳನೇ ಬೆಟ್ಟದ ಶಿಖರದಲ್ಲಿ ದೇವಾಲಯವಿದ್ದು, ಭಾರೀ ಮಳೆಯಿಂದಾಗಿ ಮಳೆ ನೀರು … Continued

ತಮಿಳುನಾಡಿನಲ್ಲಿ ಭಾರೀ ಮಳೆ: ವೆಲ್ಲೂರಿನಲ್ಲಿ ಮನೆ ಕುಸಿದು ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 9 ಜನರು ಸಾವು

ಚೆನ್ನೈ: ಭಾರೀ ಮಳೆಯಿಂದಾಗಿ ಇಂದು (ಶುಕ್ರವಾರ) ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದ ಮನೆ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಸಾವಿಗೀಡಾದ ದುರಂತ ಘಟನೆ ನಡೆದ ವರದಿಯಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಮನೆಯ … Continued

ವಂಚನೆ ಮಾಡಿದ ಆರೋಪ: ಇಬ್ಬರು ಉದ್ಯಮಿಗಳ ವಿರುದ್ಧ ದೂರು ದಾಖಲಿಸಿದ ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ

ಚೆನ್ನೈ: : ಸ್ನೇಹಾ ಮತ್ತು ಪ್ರಸನ್ನ ತಮಿಳು-ತೆಲುಗು ಚಿತ್ರರಂಗದ ಪ್ರಸಿದ್ಧ ಜೋಡಿಗಳಲ್ಲಿ ಒಂದು. ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ಬೆಲೆಬಾಳುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ವರದಿಯ ಪ್ರಕಾರ, ಸಿಮೆಂಟ್ ಕಂಪನಿ ಹೊಂದಿರುವ ಇಬ್ಬರು ಉದ್ಯಮಿಗಳ ವಿರುದ್ಧ ಸ್ನೇಹಾ ಮತ್ತು ಪ್ರಸನ್ನ ಪೊಲೀಸ್ ದೂರು ದಾಖಲಿಸಿದ್ದಾರೆ. ಉದ್ಯಮಿಗಳು ತಮಗೆ ಮೋಸ ಮಾಡಿದ್ದಾರೆ ಎಂದು … Continued

ದೋಣಿ ಆಗಸದಲ್ಲಿ ತೇಲುತ್ತಿದೆಯೋ…? ನದಿಯಲ್ಲಿ ತೇಲುತ್ತಿದೆಯೋ…ಈ ಫೋಟೊಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯೋ ಅಚ್ಚರಿ..!

ನವದೆಹಲಿ: ಭಾರತದಲ್ಲಿ ಹೆಚ್ಚಿನ ನದಿಗಳು ಮಲೀನಗೊಳ್ಳುತ್ತಿವೆ. ಯಮುನಾ ನದಿಯಂತೂ ವಿಷವನ್ನೇ ತುಂಬಿಕೊಂಡು ಈಗ ನೊರೆ ಕಾರಲು ಆರಂಭಿಸಿದೆ. ಇತ್ತೀಚಿಗೆ ಯಮುನಾ ನದಿ ಮಲಿನಗೊಂಡು, ಅದರ ಮೇಲೆ ವಿಷಕಾರಿ ನೊರೆ ತೇಲುತ್ತಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಈಗ ಮೇಘಾಲಯದ ಸ್ಫಟಿಕದಷ್ಟು ಶುಭ್ರವಾಗಿರುವ ನದಿಯೊಂದರ ಶುಭ್ರತೆಯ ನಿರ್ದಶಣದ ಫೋಟೊವೊಂದು ವೈರಲ್ ಆಗಿದೆ. ಇದು ನೋಡಿದರೆ ಫೋಟೊ … Continued

ಅನ್ನದಾತರ ಪ್ರತಿಭಟನೆಗೆ ಮಣಿದ ಸರ್ಕಾರ..ಮೂರು ಕೃಷಿ ಕಾನೂನಿಗಳಿಗೆ ಗುಡ್‌ ಬೈ ಹೇಳಿದ ಮೋದಿ..ರೈತರ ಹೋರಾಟದ ಘಟನಾವಳಿಗಳ ವಿವರ ಇಲ್ಲಿದೆ

ನವದೆಹಲಿ: ದೆಹಲಿ ಗಡಿಯಲ್ಲಿ ರೈತರ ಸುದೀರ್ಘ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ ಕಾನೂನುಗಳನ್ನು ಕೇಂದ್ರವು ಜಾರಿಗೆ ತಂದ ಒಂದು ವರ್ಷದ ನಂತರ, ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಈ ಅವಧಿಯಲ್ಲಿ ರೈತರು ಜಲಫಿರಂಗಿ, ರಾಷ್ಟ್ರವ್ಯಾಪಿ ರಸ್ತೆ ತಡೆ, ಗಣರಾಜ್ಯೋತ್ಸವದಂದು ಹಿಂಸಾಚಾರ, ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆಗಳು, ರೈಲು … Continued

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟ್ಸಮನ್‌ ಎಬಿ ಡಿವಿಲಿಯರ್ಸ್

ಮಿ. 360 ಡಿಗ್ರಿ ಖ್ಯಾತಿಯ ಸ್ಫೋಟಕ ಬ್ಯಾಟ್ಸಮನ್‌ ಎಬಿ ಡಿವಿಲಿಯರ್ಸ್ (AB de Villiers) ಎಲ್ಲ ಮಾದರಿಯ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಎಬಿಡಿ ಎಂದೇ ಖ್ಯಾತರಾದ ಅವರು ಈ ಹಿಂದೆಯೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದರು. ಆದರೆ, ಇತರೆ ದೇಶೀಯ ಟೂರ್ನಮೆಂಟ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್‌) ನಲ್ಲಿ ರಾಯಲ್ … Continued

ತಮಿಳುನಾಡಿನಲ್ಲಿ 40,000 ಬ್ರಾಹ್ಮಣ ವರಗಳಿಗೆ ವಧು ಕ್ಷಾಮ…! ಈಗ ವಧುಗಳಿಗಾಗಿ ಉತ್ತರದತ್ತ ನೋಟ..!!

ಚೆನ್ನೈ: ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಹೃದಯ ಭಾಗದಲ್ಲಿ ಸಮುದಾಯದ 40,000 ವರಗಳಿಗೆ ವಧುಗಳನ್ನು ಹುಡುಕುವ ವಿಶೇಷ ಅಭಿಯಾನವನ್ನು ತಮಿಳುನಾಡು ಬ್ರಾಹ್ಮಣ ಸಂಘ (ಟಿಬಿಎ) ಪ್ರಾರಂಭಿಸಿದೆ…! ಕಾರಣ ತಮಿಳುನಾಡಿನಲ್ಲಿ ಸಂಭಾವ್ಯ ವಧುಗಳ ಕೊರತೆ. ತಮಿಳುನಾಡು ಬ್ರಾಹ್ಮಣ ಸಂಘ(TBA)ದ ಮಾಸಿಕ ತಮಿಳು ನಿಯತಕಾಲಿಕದ ನವೆಂಬರ್ ಸಂಚಿಕೆಯ ಪ್ರಕಾರ, ಈ ಪರಿಸ್ಥಿತಿಯು ಈಗ ಕನಿಷ್ಠ 10 … Continued

ಅನ್ನದಾತನಿಗೆ ತಲೆಬಾಗಿದ ದುರಹಂಕಾರ..: ರಾಹುಲ್‌ ಗಾಂಧಿ- ತಮ್ಮ ಹಳೆಯ ವಿಡಿಯೊ ಮರುಟ್ವೀಟ್

ನವದೆಹಲಿ: ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ರೈತರ ಸತ್ಯಾಗ್ರಹವು ದುರಹಂಕಾರವನ್ನು ಸೋಲಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ದೇಶದ ಅನ್ನದಾತರು ತಮ್ಮ ಸತ್ಯಾಗ್ರಹದಿಂದ ದುರಹಂಕಾರದ ತಲೆ ಬಗ್ಗಿಸಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್” … Continued