ಹೆಲ್ಮೆಟ್ ಧರಿಸದಿದ್ದರೆ ISI ಮಾರ್ಕ್ ಇಲ್ಲದಿದ್ದರೆ ಬೀಳುತ್ತೆ 2,000 ರೂ. ದಂಡ…!

ನವದೆಹಲಿ: ಇನ್ನೂ ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ( Helmet ) ಇಲ್ಲದೆ ಸವಾರಿ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ. ಭಾರತ ಸರಕಾರ 1998 ರ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಅದರ ಪ್ರಕಾರ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ. ಅಪಘಾತಗಳಲ್ಲಿ … Continued

ಆರೋಗ್ಯದ ಕಾರಣ ನೀಡಿ ರೋಡ್ ರೇಜ್ ಪ್ರಕರಣದಲ್ಲಿ ಶರಣಾಗಲು ಹೆಚ್ಚಿನ ಸಮಯ ಕೋರಿದ ನವಜೋತ್‌ ಸಿಧು

ನವದೆಹಲಿ: ಪಂಜಾಬ್‌ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರು 1988 ರ ರೋಡ್ ರೇಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ನಂತರ ವೈದ್ಯಕೀಯ ಕಾರಣಗಳಿಗಾಗಿ ಶರಣಾಗಲು ಹೆಚ್ಚಿನ ಸಮಯ ಕೋರಿದ್ದಾರೆ. ಆದರೆ ನವಜೋತ್ ಸಿಂಗ್ ಸಿಧು ಅವರ ಮನವಿಯನ್ನು … Continued

ಪೆಗಾಸಸ್ ತನಿಖಾ ವರದಿ ಸಲ್ಲಿಸಲು 4 ವಾರಗಳ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಪೆಗಾಸಸ್ ಹಗರಣದ ತನಿಖಾ ವರದಿ ಸಲ್ಲಿಸಲು ತಾಂತ್ರಿಕ ಮತ್ತು ಮೇಲ್ವಿಚಾರಣಾ ಸಮಿತಿಗೆ ಸುಪ್ರೀಂಕೋರ್ಟ್ ನಾಲ್ವು ವಾರಗಳ ಕಾಲಾವಕಾಶವನ್ನು ವಿಸ್ತರಣೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ವಿಭಾಗೀಯ ಪೀಠ, ತನಿಖೆಯ ವರದಿಯನ್ನು ನಾಲ್ಕು ವಾರಗಳ ಒಳಗಾಗಿ ತನಿಖೆಯ ಮೇಲ್ವಿಚಾರಣಾ ನ್ಯಾಯಮೂರ್ತಿ ಅವರಿಗೆ ನೀಡಬೇಕು ಎಂದು ಸೂಚಿಸಿದೆ. ಕಳೆದ … Continued

‘ಉದ್ಯೋಗ ಪಡೆಯಲು ಭೂಮಿʼ ಹಗರಣದಲ್ಲಿ ಲಾಲು ಪ್ರಸಾದ, ಮಗಳು ಮಿಸಾ ಭಾರತಿಗೆ ಸೇರಿದ 17 ಸ್ಥಳಗಳ ಮೇಲೆ ಸಿಬಿಐ ದಾಳಿ

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪುತ್ರಿ ಮಿಸಾ ಭಾರ್ತಿ ಅವರಿಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ದಾಳಿ ನಡೆಸಿದೆ. ಲಾಲು ಪ್ರಸಾದ ಯಾದವ, ಅವರ ಪತ್ನಿ ರಾಬ್ರಿದೇವಿ ಮತ್ತು ಮಗಳು ಮಿಸಾ ಅವರಿಗೆ ಸಂಬಂಧಿಸಿದ ಸ್ಥಳಗಳು … Continued

56 ವರ್ಷದ ವ್ಯಕ್ತಿಯ ದೇಹದಿಂದ ಬರೋಬ್ಬರಿ 206 ಕಿಡ್ನಿ ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್‌: ಆರು ತಿಂಗಳ ಕಾಲ ತೀವ್ರ ನೋವಿನಿಂದ ಬಳಲುತ್ತಿದ್ದ ಹೈದರಾಬಾದ್‌ನಲ್ಲಿ 56 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ಅವರ ಮೂತ್ರ ಪಿಂಡದಿಂದ 206 ಕಲ್ಲುಗಳನ್ನು ತೆಗೆದುಹಾಕಲಾಯಿತು…! ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ರೋಗಿಗೆ ಒಂದು ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆ ಮಾಡಿದ ನಂತರ ಈ ಕಲ್ಲುಗಳನ್ನು ತೆಗೆಯಲಾಯಿತು. “ಶಸ್ತ್ರಚಿಕಿತ್ಸೆ ನಂತರ ರೋಗಿಯು ಚೆನ್ನಾಗಿ ಚೇತರಿಸಿಕೊಂಡಿದ್ದು, ಎರಡನೇ … Continued

ಮಹತ್ವದ ಹೆಜ್ಜೆ…. 300 ರೂ.ಗಳ ವರೆಗಿನ ಎಲ್ಲ ಪರೀಕ್ಷೆಗಳೂ ಇನ್ಮುಂದೆ ದೆಹಲಿ ಏಮ್ಸ್‌ನಲ್ಲಿ ಉಚಿತ

ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿರುವ ರೋಗಿಗಳಿಗೆ ₹ 300 ರೂ.ಗಳ ವರೆಗಿನ ವೆಚ್ಚದ ಪರೀಕ್ಷೆಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಪ್ರಧಾನ ಸಂಸ್ಥೆ ಗುರುವಾರ ಘೋಷಿಸಿದ್ದು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಇದರಿಂದ ದೊಡ್ಡ ರೀತಿಯಲ್ಲಿ ಅನುಕೂಲವಾಗಲಿದೆ. ರಕ್ತ, ಮೂತ್ರ ಪರೀಕ್ಷೆಗಳು, ಅಲ್ಟ್ರಾಸೌಂಡ್, ಎಕ್ಸ್-ರೇ, ಇತ್ಯಾದಿ ಈಗ ಉಚಿತವಾಗಿ ಲಭ್ಯವಿರುತ್ತದೆ. … Continued

ಐಐಟಿ ಮದ್ರಾಸ್‌ನಲ್ಲಿ ಟ್ರಯಲ್ ನೆಟ್‌ವರ್ಕ್‌ನಿಂದ ಮೊದಲ 5G ಕರೆ ಮಾಡಿದ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಐಐಟಿ ಮದ್ರಾಸ್‌ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಟೆಲಿಕಾಂ ಗೇರ್‌ಗಳನ್ನು ಬಳಸಿಕೊಂಡು ಸ್ಥಾಪಿಸಲಾದ ಪ್ರಾಯೋಗಿಕ ನೆಟ್‌ವರ್ಕ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಮೊದಲ 5G ಕರೆ ಮಾಡಿದ್ದಾರೆ. ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮದವರು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಮತ್ತು ವಿದೇಶಿ ಸೌಲಭ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಐಐಟಿ ಮದ್ರಾಸ್‌ನಲ್ಲಿ ದೇಶದ ಮೊದಲ … Continued

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್: ಭಾರತಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟ ನಿಖತ್ ಜರೀನ್

ನವದೆಹಲಿ: ಭಾರತದ ನಿಖತ್ ಝರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಥಾಯ್ಲೆಂಡ್‌ನ ಜುಟಾಮಾಸ್ ಜಿಟ್‌ಪಾಂಗ್ ಅವರನ್ನು ಫೈನಲ್‌ನಲ್ಲಿ ಸರ್ವಾನುಮತದ ನಿರ್ಧಾರದಿಂದ ಸೋಲಿಸಿ ಚಿನ್ನ ಗೆದ್ದಿದ್ದಾರೆ. ಹೆಚ್ಚು ರೇಟಿಂಗ್ ಪಡೆದ ಭಾರತೀಯ ಲೈಟ್‌ವೇಟ್ಸ್‌ ಬಾಕ್ಸರ್ ನಿಖತ್ ಜರೀನ್ IBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಪ್ರತಿನಿಧಿಯಾಗಿದ್ದರು. ದೊಡ್ಡ ಬಲಗೈ ಜಾಬ್‌ಗಳಿಂದ ತನ್ನ ಎದುರಾಳಿಯನ್ನು ಸಾಕಷ್ಟು ಆಕ್ರಮಣಕಾರಿಯಾಗಿ … Continued

ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್

ನವದೆಹಲಿ: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಅವರು, ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ‌ ಜಾಖರ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಕೇಸರಿ ಶಾಲು ಧರಿಸಿದರು. ಕಾಂಗ್ರೆಸ್ ನಾಯಕತ್ವ ಮತ್ತು ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕಾಗಿ ಪಕ್ಷವು … Continued

ತಾಲಿಬಾನ್‌ನಿಂದ ಹೊಸ ನಿಯಮ: ಟಿವಿ ಚಾನೆಲ್‌ಗಳಲ್ಲಿ ನಿರೂಪಕಿಯರು ಮುಖ ಮುಚ್ಚಿಕೊಂಡೇ ಕಾರ್ಯಕ್ರಮ ನೀಡ್ಬೇಕಂತೆ..!

ಕಾಬೂಲ್: ಇತ್ತೀಚೆಗಷ್ಟೇ ಮಹಿಳೆಯರಿಗೆ ಶಿಕ್ಷಣ, ಮಹಿಳಾ ಉದ್ಯೋಗಿಗಳಿಗೆ ನಿಷೇಧ ಮತ್ತು ಮಹಿಳೆಯರ ಚಾಲನಾ ಪರವಾನಗಿ ರದ್ದು, ಮಾನವ ಹಕ್ಕುಗಳ ಆಯೋಗ ರದ್ದು ಸೇರಿದಂತೆ ಹಲವು ವಿವಾದಿತ ಕ್ರಮ ಕೈಗೊಂಡಿದ್ದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈಗ ಟಿವಿ ಚಾನೆಲ್‌ಗಳಲ್ಲಿ ಕೆಲಸ ಮಾಡುವ ಎಲ್ಲ ಮಹಿಳಾ ನಿರೂಪಕರಿಗೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವಂತೆ ನಿರ್ದೇಶಿಸಿದೆ ಎಂದು ವರದಿಯಾಗಿದೆ. … Continued