ಗರ್ಭಿಣಿ ಸಾವಿಗೆ ಮಹಿಳಾ ವೈದ್ಯರ ವಿರುದ್ಧ ಪ್ರಕರಣ ದಾಖಲು: ಮನನೊಂದು ಸ್ತ್ರೀರೋಗ ವೈದ್ಯೆ ಆತ್ಮಹತ್ಯೆ

ನವದೆಹಲಿ: 42 ವರ್ಷದ ಸ್ತ್ರೀರೋಗ ತಜ್ಞೆ ಅರ್ಚನಾ ಶರ್ಮಾ ಅವರು ಮಂಗಳವಾರ ರಾಜಸ್ಥಾನದ ದೌಸಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ತಮ್ಮ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಮನನೊಂದು ಮಹಿಳಾ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಲ್ಡ್​ ಮೆಡಲಿಸ್ಟ್​ ಆಗಿದ್ದ ಅರ್ಚನಾ ಶರ್ಮಾ ಆತ್ಮಹತ್ಯೆಗೂ ಮುನ್ನ ಆತ್ಮಹತ್ಯೆ … Continued

26/11 ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್ ಪಾಕಿಸ್ತಾನದ ಪ್ರಜೆ ಎಂದು 14 ವರ್ಷಗಳ ನಂತರ ಒಪ್ಪಿಕೊಂಡ ಪಾಕ್‌ ಸಚಿವ..ವೀಡಿಯೊ ವೀಕ್ಷಿಸಿ

2008 ನವೆಂಬರ್ 26/11ರ ಮುಂಬೈನ ಭಯೋತ್ಪಾದಕ ದಾಳಿಯನ್ನು ಯಾರೂ ಮರೆತಿಲ್ಲ. ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗವಾಗಿ ಬಂದಿದ್ದ ಭಯೋತ್ಪಾದಕರು, ಸುಮಾರು 174 ಅಮಾಯಕರನ್ನ ಹತ್ಯೆ ಮಾಡಿದ್ದರು. ಪಾಕಿಸ್ತಾನದ ಲಷ್ಕರ್ ಏ ತಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್​ ಸಯೀದ್​ನಿಂದ ಕಳಿಸಲ್ಪಟ್ಟಿದ್ದವರಲ್ಲಿ ಈ ಭಯೋತ್ಪಾದಕರಲ್ಲಿ ಉಗ್ರ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ. ಇತ್ತೀಚೆಗಷ್ಟೇ, ಪಾಕಿಸ್ತಾನದ ಆಂತರಿಕ … Continued

ದೆಹಲಿ: ಸಿಎಂ ಕೇಜ್ರಿವಾಲ್ ನಿವಾಸದ ಹೊರಗೆ ಸಿಸಿಟಿವಿ ಕ್ಯಾಮೆರಾ, ತಡೆಗೋಡೆ ಧ್ವಂಸಗೊಳಿಸಿದ ಬಿಜೆಪಿ ಯುವ ಘಟಕದ ಕಾರ್ಯಕರ್ತರು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆಯ ಹೊರಗೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸದಸ್ಯರು ಬುಧವಾರ ಸಿಸಿಟಿವಿ ಕ್ಯಾಮರಾಗಳು ಹಾಗೂ ಭದ್ರತಾ ತಡೆಗಳನ್ನು ಧ್ವಂಸ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆ ಮೇಲೆ ಸಮಾಜವಿರೋಧಿಗಳು ದಾಳಿ ನಡೆಸಿದ್ದಾರೆ. ಅವರು ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ತಡೆಗಳನ್ನು ಮುರಿದರು. ಗೇಟ್‌ನಲ್ಲಿನ … Continued

ಇರಿತದ ಗಾಯಗಳೊಂದಿಗೆ ಒಂದೇ ಕುಟುಂಬದ 4 ಮಂದಿ ಶವವಾಗಿ ಪತ್ತೆ

ಅಹಮದಾಬಾದ್: ಗುಜರಾತಿನ ಅಹಮದಾಬಾದ್‌ನ ವಿರಾಟ್‌ನಗರದ ಮನೆಯೊಂದರಲ್ಲಿ ಮಂಗಳವಾರ ಸಂಜೆ ಒಂದೇ ಕುಟುಂಬದ ನಾಲ್ವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಮಹಿಳೆ ಸೋನಾಲ್ ಮರಾಠಿ (37), ಅವರ ಮಕ್ಕಳಾದ ಪ್ರಗತಿ (15) ಮತ್ತು ಗಣೇಶ್ (17) ಮತ್ತು ಸೋನಾಲ್ ಅವರ ಅತ್ತೆ ಸುಭದ್ರಾ (75) ಎಂದು ಗುರುತಿಸಲಾಗಿದೆ. ಇರಿತ ಮತ್ತು ಗಾಯಗಳನ್ನು ಹೊಂದಿರುವ ದೇಹಗಳು ಕೊಳೆತ ಸ್ಥಿತಿಯಲ್ಲಿ … Continued

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ..: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಈ ಹಿಂದೆ ಇದ್ದ ಶೇ.31ರಿಂದ ಶೇ.34ಕ್ಕೆ ಶೇ.3ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಜನವರಿ 1, 2022ರಿಂದ ಜಾರಿಗೆ ತರಲು ಸಂಪುಟ ಅನುಮೋದನೆ ನೀಡಿದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರದ ಪ್ರಕಾರ ಡಿಎ ಹೆಚ್ಚಳವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ … Continued

ಶ್ರೀನಗರದ ಸೋಪೋರ್‌ನಲ್ಲಿನ ಸಿಆರ್‌ಪಿಎಫ್ ಶಿಬಿರದ ಮೇಲೆ ಬಾಂಬ್ ಎಸೆದ ಬುರ್ಖಾ ಧರಿಸಿದ ಮಹಿಳೆ.. ಕೃತ್ಯ ಸಿಸಿಟಿಯಲ್ಲಿ ಸೆರೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತಾ ಶಿಬಿರದ ಮೇಲೆ ನಿನ್ನೆ ಬುರ್ಖಾಧಾರಿ ಮಹಿಳೆಯೊಬ್ಬರು ಬಾಂಬ್ ಎಸೆಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಮಹಿಳೆ ರಸ್ತೆಯ ಮಧ್ಯದಲ್ಲಿ ನಿಂತು ತನ್ನ ಬ್ಯಾಗ್‌ನಿಂದ ಬಾಂಬ್ ಅನ್ನು ಹೊರತೆಗೆದು ಸಿಆರ್‌ಪಿಎಫ್ ಬಂಕರ್‌ಗೆ ತರಾತುರಿಯಲ್ಲಿ ಎಸೆದಿದ್ದಾಳೆ. ರಸ್ತೆಯಲ್ಲಿ ಒಂದೆರಡು ಪಾದಚಾರಿಗಳು … Continued

ಭಾರತದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ತಿಗೆ ಬಂದ ನಿತಿನ್ ಗಡ್ಕರಿ..!

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಹಸಿರು ಹೈಡ್ರೋಜನ್ ಚಾಲಿತ (green hydrogen-powered) ಕಾರಿನಲ್ಲಿ ಸಂಸತ್ತಿಗೆ ಆಗಮಿಸಿದರು. ಈ ಕಾರಿನಲ್ಲಿ ಸಚಿವರು ತಮ್ಮ ನಿವಾಸದಿಂದ ಸಂಸತ್ತಿಗೆ ಪ್ರಯಾಣಿಸಿದರು. ಇದು ಭಾರತದಲ್ಲಿ ಮೊದಲನೆಯದು ಮತ್ತು ಗಡ್ಕರಿ ಇದು ಭಾರತದ ಭವಿಷ್ಯ ಎಂದು ಶ್ಲಾಘಿಸಿದ್ದಾರೆ. ಹೈಡ್ರೋಜನ್ ಕಾರ್ ಭವಿಷ್ಯ ಎಂದು ನಿತಿನ್ ಗಡ್ಕರಿ ಹೇಳಿದರು, … Continued

ಆಶಿಶ್ ಮಿಶ್ರಾಗೆ ಜಾಮೀನು ರದ್ದು ಕೋರಿ ಸಲ್ಲಿಸಿರುವ ಎಸ್‌ಐಟಿ ವರದಿಗಳಿಗೆ ಉತ್ತರಿಸುವಂತೆ ಉತ್ತರ ಪ್ರದೇಶಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಎಸ್‌ಐಟಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಾಧೀಶರ ಎರಡು ವರದಿಗಳಿಗೆ ಏಪ್ರಿಲ್ 4 ರೊಳಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಜಾಮೀನು ರದ್ದುಗೊಳಿಸುವಂತೆ … Continued

100ಕ್ಕೂ ಹೆಚ್ಚು ಬೀದಿನಾಯಿಗಳಿಗೆ ವಿಷಪ್ರಾಶನ ಮಾಡಿ ಹತ್ಯೆ: ದೂರು ದಾಖಲು

ತೆಲಂಗಾಣದ ಸಿದ್ದಿಪೇಟ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅದುಲಾಪುರಂ ಗೌತಮ್ ಹೇಳಿದ್ದಾರೆ. ಗ್ರಾಮದ ಸರಪಂಚ ಮತ್ತು ಗ್ರಾಮ ಪಂಚಾಯತ ಕಾರ್ಯದರ್ಶಿ ನಾಯಿಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿ ಗೌತಮ್ ದೂರು ದಾಖಲಿಸಿದ್ದಾರೆ. ಗೌತಂ ಅವರು ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾದ ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ದೂರಿನ ಮೇರೆಗೆ ಪ್ರಕರಣ … Continued

ಇಂದೂ ಪೆಟ್ರೋಲ್‌-ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, 9 ದಿನದಲ್ಲಿ 5.60 ರೂ.ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬುಧವಾರ (ಮಾರ್ಚ್ 30)ವೂ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಒಟ್ಟು 8ನೇ ಬಾರಿಗೆ ದರ ಏರಿಕೆ ಮಾಡಲಾಗಿದ್ದು, ಕಳೆದ 9 ದಿನಗಳಲ್ಲಿ ಲೀಟರ್‌ಗೆ 5.60 ರೂ.ಗಳಷ್ಟು ಹೆಚ್ಚಾಗಿದೆ. . ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮಕ್ಕೆ … Continued