ಕಾಂಗ್ರೆಸ್ ನಾಯಕನ ಮಗನ ಮದುವೆಯಲ್ಲಿ ಊಟ ಮಾಡಿದ 1,200 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮೆಹ್ಸಾನಾ: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕನ ಮಗನ ಮದುವೆಯಲ್ಲಿ ಆಹಾರ ಸೇವಿಸಿದ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವಿಸ್ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಮದುವೆಯಲ್ಲಿ ಆಹಾರ … Continued

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಮುಂಚೂಣಿ ಹಡಗಿನಲ್ಲಿ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸುವ ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರ ಮತ್ತೊಂದು ಅವತರಣಿಕೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯು ಪಿನ್ ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಮುಟ್ಟಿತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ದೀರ್ಘ-ಶ್ರೇಣಿಯ ನಿಖರವಾದ ಸ್ಟ್ರೈಕ್ ಸಾಮರ್ಥ್ಯವನ್ನು … Continued

ಆಪರೇಷನ್ ಗಂಗಾ ಅಡಿ ಉಕ್ರೇನ್‌ನಿಂದ ಸುಮಾರು 11,000 ಭಾರತೀಯರು ವಾಪಸ್‌: ಸರ್ಕಾರ

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ‘ಆಪರೇಷನ್ ಗಂಗಾ’ ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 17 ವಿಶೇಷ ವಿಮಾನಗಳು ಶುಕ್ರವಾರ (ಮಾರ್ಚ್ 4) ದೇಶಕ್ಕೆ ಬಂದಿವೆ. ಈ ವಿಶೇಷ ವಿಮಾನಗಳಲ್ಲಿ 14 ನಾಗರಿಕ ವಿಮಾನಗಳು ಮತ್ತು 3 C-17 ಐಎಎಫ್‌ (IAF) ವಿಮಾನಗಳು ಸೇರಿವೆ. ಇನ್ನೂ ಒಂದು ನಾಗರಿಕ ವಿಮಾನವು ದಿನದ ನಂತರ ಆಗಮಿಸುವ … Continued

ಉಕ್ರೇನ್-ರಷ್ಯಾ ಯುದ್ಧ : ಯುದ್ಧ ಬೇಡ ಎಂದು ಘೋಷಿಸಿ ನೇರ ಪ್ರಸಾರ ಕಾರ್ಯಕ್ರಮದಲ್ಲೇ ಸಾಮೂಹಿಕ ರಾಜೀನಾಮೆ ನೀಡಿ ಹೊರ ನಡೆದ ರಷ್ಯಾದ ಟಿವಿ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ..! ವೀಕ್ಷಿಸಿ

ಅಂತಿಮ ಟೆಲಿಕಾಸ್ಟ್‌ನಲ್ಲಿ “ಯುದ್ಧ ಬೇಡ” ಎಂದು ಘೋಷಿಸಿದ ನಂತರ ರಷ್ಯಾದ ದೂರದರ್ಶನ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ ಟಿವಿಯಲ್ಲಿ ನೇರ ಪ್ರಸಾರ ನಡೆಯುತ್ತಿದ್ದಾಗಲೇ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ…! ಉಕ್ರೇನ್ ಯುದ್ಧದ ಕವರೇಜ್‌ನ ಮೇಲೆ ರಷ್ಯಾದ ಅಧಿಕಾರಿಗಳು ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಟಿವಿ ರೇನ್ (ಡೊಜ್ಡ್) ಸಿಬ್ಬಂದಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚಾನೆಲ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ … Continued

ಉಕ್ರೇನ್‌ನಲ್ಲಿ ದಿನಗಟ್ಟಲೆ ಆಹಾರ-ನೀರಿಲ್ಲದೆ ಪರಿತಪಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈಗ ನೀರಿಗಾಗಿ ಹಿಮವನ್ನೇ ಕರಗಿಸುತ್ತಿದ್ದಾರೆ… | ವೀಕ್ಷಿಸಿ

ಕೀವ್‌: ಉಕ್ರೇನ್ ಆಕ್ರಮಣದ ನಂತರ ಆಹಾರ ಮತ್ತು ನೀರಿಲ್ಲದೆ ದಿನಗಟ್ಟಲೆ ಸಿಲುಕಿರುವ ಈಶಾನ್ಯ ನಗರದ ಸುಮಿಯ ಹಾಸ್ಟೆಲ್‌ನಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳು ನೀರಿಗಾಗಿ ಹಿಮವನ್ನೇ ಕರಗಿಸಲು ಹಿಮವನ್ನು ಸಂಗ್ರಹಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಅವರಲ್ಲಿ ಸುಮಾರು 800-900 ವಿದ್ಯಾರ್ಥಿಗಳು ಒಂದು ವಾರದಿಂದ ಸುಮಿ ಸ್ಟೇಟ್ ಯೂನಿವರ್ಸಿಟಿಯ ವೈದ್ಯಕೀಯ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಬಂಧಿಯಾಗಿದ್ದಾರೆ ಮತ್ತು … Continued

ರಷ್ಯಾ-ಉಕ್ರೇನ್ ಬಿಕ್ಕಟ್ಟು : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ದೂರ ಉಳಿದ ಭಾರತ

ನವದೆಹಲಿ: ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಪರಿಣಾಮವಾಗಿ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗವನ್ನು ತುರ್ತಾಗಿ ಸ್ಥಾಪಿಸಲು ನಿರ್ಧರಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿನ ಮತದಾನದ ವೇಳೆ ಭಾರತವು ದೂರ ಉಳಿದಿದೆ. 47 ಸದಸ್ಯರ ಕೌನ್ಸಿಲ್ ಉಕ್ರೇನ್‌ನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ಕರಡು ನಿರ್ಣಯದ ಮೇಲೆ ಮತ ಚಲಾಯಿಸಿತು. ಈ ನಿರ್ಣಯವನ್ನು ಪರವಾಗಿ 32 ಮತಗಳು, ಎರಡು … Continued

ಹರ್ಯಾಣ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆ ಮಂಡಿಸಿದ ಸರ್ಕಾರ, ಕೋಲಾಹಲ

ಚಂಡೀಗಡ: ಹರ್ಯಾಣ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಿದ್ದು, ಧಾರ್ಮಿಕ ತಾರತಮ್ಯವನ್ನು ಉಲ್ಲೇಖಿಸಿ ಪ್ರತಿಪಕ್ಷಗಳು ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೋಲಾಹಲಕ್ಕೆ ಕಾರಣವಾಯಿತು. ಇಂದು, ಶುಕ್ರವಾರ ಬಜೆಟ್ ಅಧಿವೇಶನದಲ್ಲಿ ಕಾನೂನುಬಾಹಿರ ಮತಾಂತರ ತಡೆ ಮಸೂದೆಯನ್ನು ಮಂಡಿಸಲಾಯಿತು. ತಪ್ಪು ನಿರೂಪಣೆ, ಬಲವಂತ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ … Continued

2.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ 72 ಸಾವಿರ ಕೋಟಿ ರೂ. ಸಾಲದ ಪ್ರಸ್ತಾಪ…!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ ಮಂಡಿಸಿದ್ದಾರೆ. ಒಟ್ಟು 2,65,721 ಕೋಟಿ ರೂ. ಮೊತ್ತದ ಕೊರತೆ ಬಜೆಟ್‌ ಮಂಡಿಸಿದ್ದು, ಆದಾಯಕ್ಕಿಂತಲೂ 5 ಸಾವಿರ ಕೋಟಿ ರೂ. ಹೆಚ್ಚಿನ ಬಜೆಟ್‌ ಮಂಡನೆಯಾಗಿದ್ದು, ರಾಜ್ಯದ ಮೇಲೆ ಒಟ್ಟು 72 ಸಾವಿರ ಕೋಟಿ ರೂ. ಸಾಲ ಇದೆ ಎಂದು ಬೊಮ್ಮಾಯಿ ತಮ್ಮ ಆಯವ್ಯಯದಲ್ಲಿ ತಿಳಿಸಿದ್ದಾರೆ. ಯಾವುದೇ … Continued

ಕರ್ನಾಟಕ ಬಜೆಟ್‌-2022-23: ಕೃಷಿ ವಲಯಕ್ಕೆ 33,700 ಕೋಟಿ ರೂ. ಅನುದಾನ, ರಿಯಾಯ್ತಿ ಬಡ್ಡಿಯಲ್ಲಿ 33 ಲಕ್ಷ ರೈತರಿಗೆ ಸಾಲ ಸೌಲಭ್ಯ

ಬೆಂಗಳೂರು: ಪ್ರಸಕ್ತ ರಾಜ್ಯ ಬಜೆಟ್​ನಲ್ಲಿ ಕೃಷಿ ವಲಯಕ್ಕೆ 33,700 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ‘ರೈತಶಕ್ತಿ’ ಎಂಬ ಹೊಸ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಸಮಗ್ರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. 33 ಲಕ್ಷ ರೈತರಿಗೆ ಕೃಷಿ ಸಾಲ ಸೌಲಭ್ಯ ವಿಸ್ತರಣೆ, ಬೆಳಗಾವಿ, ಬಳ್ಳಾರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ ಪ್ರಸ್ತಾಪ, … Continued

ಕರ್ನಾಟಕ ಬಜೆಟ್‌ 2022 -23: ಈ ಬಾರಿ ಯಾವುದೇ ತೆರಿಗೆಯಲ್ಲಿ ಹೆಚ್ಚಳವಿಲ್ಲ-ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣ ಆರ್ಥಿಕ ಬೆಳವಣಿಗೆ ಕುಂಠೀತವಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳದ ಹೆಚ್ಚಳವಾಗಬಹುದು ಎಂಬ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್ ನೀಡಿದ್ದು, ಈ ಬಾರಿ ಯಾವುದೇ ತೆರಿಗೆ ಹೆಚ್ಚಳವಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಕರ್ನಾಟಕ ಬಜೆಟ್ 2022-23 ಮಂಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡುವುದಿಲ್ಲ … Continued