ಹುಲಿ ಹೆದ್ದಾರಿ ದಾಟಲು ವಾಹನಗಳನ್ನು ತಡೆದ ಸಂಚಾರಿ ಪೋಲೀಸರು | ವೀಕ್ಷಿಸಿ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಕಾಡು ಹುಲಿಗೆ ರಸ್ತೆ ದಾಟಲು ಅನುವು ಮಾಡಿಕೊಡಲು ಹೆದ್ದಾರಿ ಸಿಗ್ನಲ್‌ನಲ್ಲಿ ಟ್ರಾಫಿಕ್ ಪೊಲೀಸ್ ವಾಹನಗಳನ್ನು ನಿಲ್ಲಿಸುವುದನ್ನು ತೋರಿಸುತ್ತದೆ. ಭಾರತೀಯ ಅರಣ್ಯ ಅಧಿಕಾರಿ (IFS) ಪರ್ವೀನ್ ಕಸ್ವಾನ್ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಹುಲಿಗೆ ಮಾತ್ರ ಹಸಿರು ಸಿಗ್ನಲ್ ಎಂದು ಶೀರ್ಷಿಕೆ ನೀಡಿದ್ದಾರೆ. ವೀಡಿಯೊದಲ್ಲಿ, ಟ್ರಾಫಿಕ್ ಪೊಲೀಸರು ರಸ್ತೆಯ ಎರಡೂ … Continued

ಈಗ ರಾಷ್ಟ್ರ ಧ್ವಜವನ್ನು ರಾತ್ರಿಯೂ ಹಾರಿಸಬಹುದು

ನವದೆಹಲಿ: ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಲು ಮತ್ತು ಪಾಲಿಯೆಸ್ಟರ್‌ನ ಜೊತೆಗೆ ಯಂತ್ರದಿಂದ ತಯಾರಿಸುವ ಧ್ವಜಗಳನ್ನು ಬಳಸಲು ಅವಕಾಶ ನೀಡುವ ಮೂಲಕ ಸರ್ಕಾರವು ದೇಶದ ಧ್ವಜ ಸಂಹಿತೆಯನ್ನು ಬದಲಾಯಿಸಿದೆ. ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಸರ್ಕಾರವು ಆಗಸ್ಟ್ 13 ರಿಂದ 15 ರವರೆಗೆ ‘ಹರ್ ಘರ್ ತಿರಂಗ’ (ಪ್ರತಿ ಮನೆಯಲ್ಲೂ ಧ್ವಜಾರೋಹಣ) ಪ್ರಾರಂಭಿಸಲಿರುವುದರಿಂದ ಈ … Continued

ಬಂಧಿತ ಬಂಗಾಳದ ಸಚಿವ ಪಾರ್ಥ ಚಟರ್ಜಿ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಯಿಂದ ಶನಿವಾರ ಬಂಧಿಸಲ್ಪಟ್ಟ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರು ಅಸ್ವಸ್ಥತೆಯ ದೂರು ನೀಡಿದ ನಂತರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿರಿಯ ಸಚಿವರನ್ನು ಸಿಟಿ ನ್ಯಾಯಾಲಯವು ಎರಡು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದ … Continued

ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಸಂಸತ್ತಿನಲ್ಲಿ ಬೀಳ್ಕೊಡುಗೆ ಸಮಾರಂಭ

ನವದೆಹಲಿ: ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸದರು ಸಹ ಭಾಗವಹಿಸಿದ್ದರು. ಶುಕ್ರವಾರ ಕೋವಿಂದ್ ಅವರ ಗೌರವಾರ್ಥ … Continued

ತಾಯಿ ಹೇಳಿದ ಸಂಸ್ಕೃತ ಶ್ಲೋಕ ಪೂರ್ಣಗೊಳಿಸುವ ಬೋರಲು ಬೀಳಲಿಕ್ಕೂ ಬಾರದ ಪುಟಾಣಿ ಶಿಶು : ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (social media) ವೈವಿಧ್ಯಮಯ ವೀಡಿಯೊಗಳು ನೋಡಲು ಸಿಗುತ್ತವೆ. ಆದರೆ ಇಂಥದೊಂದು ವಿಡಿಯೋವನ್ನು ಬಹುಶಃ ನೋಡುವುದು ಅಪರೂಪ. ಇನ್ನೂ ಬೋರಲು ಬೀಳಲು ಕೂಡ ಬಾರದ ಮಗುವೊಂದು ತನ್ನಮ್ಮನ ಜೊತೆ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿರುವುದನ್ನು ಚಿತ್ರೀಕರಿಸಿರುವ ವೀಡಿಯೋ ಇದಾಗಿದೆ. ವೀಡಿಯೊ ನೋಡಿದವರು ಈ ಬೊಚ್ಚುಬಾಯಿ ಮಗುವಿನ ಜ್ಞಾಮಪಕ ಶಕ್ತಿಗೆ ಬೆರಗಾಗಿದ್ದಾರೆ. ವೀಡಿಯೋದಲ್ಲಿ … Continued

ಪಕ್ಷಪಾತಿ, ಮಾಹಿತಿಯಿಲ್ಲದ, ಅಜೆಂಡಾ-ಚಾಲಿತ”: ಮಾಧ್ಯಮಗಳನ್ನು ಟೀಕಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ರಮಣ

ನವದೆಹಲಿ: ಟಿವಿ ಚರ್ಚೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗರೂ ನ್ಯಾಯಾಲಯಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಶನಿವಾರ ಟೀಕಿಸಿದ್ದಾರೆ. ಹಾಗೂ ನಡವಳಿಕೆಯನ್ನು “ಪಕ್ಷಪಾತ”, ಸರಿಯಾದ ಮಾಹಿತಿಯಿಲ್ಲದ ಮತ್ತು “ಅಜೆಂಡಾ-ಚಾಲಿತ” ಎಂದು ಆಕ್ಷೇಪಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ … Continued

ಸ್ಮೃತಿ ಇರಾನಿ ಮಗಳು ಗೋವಾದ “ಅಕ್ರಮ ಬಾರ್” ವ್ಯವಹಾರದಲ್ಲಿ ಭಾಗಿ-ಕಾಂಗ್ರೆಸ್ ಆರೋಪ: ಇದು ಆಧಾರರಹಿತ ಎಂದ ಜೋಯಿಶ್ ವಕೀಲ

ನವದೆಹಲಿ: ಗೋವಾದಲ್ಲಿ “ಅಕ್ರಮ ಬಾರ್” ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳ ನಡುವೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಜೋಯಿಶ್ ಶನಿವಾರ ಈ ಆರೋಪಗಳನ್ನು “ಆಧಾರರಹಿತ” ಎಂದು ಹೇಳಿದ್ದಾರೆ ಮತ್ತು ತಾವು ರೆಸ್ಟೋರೆಂಟ್ ಮಾಲೀಕರಾಗಲೀ ಅಥವಾ ನಿರ್ವಹಿಸುವವರಾಗಲೀ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೇಳಿಕೆಯೊಂದರಲ್ಲಿ, ಜೋಯಿಶ್ ಇರಾನಿ ಅವರ ವಕೀಲ ಕಿರಾತ್ ನಾಗ್ರಾ ತಮ್ಮ ಕಕ್ಷಿದಾರರ … Continued

ದೆಹಲಿ-ಹೈದರಾಬಾದ್ ವಿಮಾನದಲ್ಲಿ ಪ್ರಯಾಣಿಕನ ಜೀವ ಉಳಿಸಿದ ‘ತೆಲಂಗಾಣ ರಾಜ್ಯಪಾಲರು’

ಹೈದರಾಬಾದ್‌: ತೆಲಂಗಾಣ ರಾಜ್ಯಪಾಲ ತಮಿಳಿಸಾಯಿ ಸೌಂದರರಾಜನ್ ಅವರು ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕರಿಗೆ ಗೋಲ್ಡನ್ ಅವರ್ ಚಿಕಿತ್ಸೆ ನೀಡಿದ್ದಾರೆ. ರಾಜಕೀಯ ಪ್ರವೇಶಿಸುವ ಮೊದಲು ವೈದ್ಯರಾಗಿದ್ದ ಅವರು ಸ್ತ್ರೀರೋಗತಜ್ಞರಾಗಿದ್ದರು. ತಮಿಳಿಸೈ ಸೌಂದರರಾಜನ್, ಪ್ರಯಾಣಿಕರಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಜೀವಾಧಾರಗಳನ್ನು ಪರೀಕ್ಷಿಸಿ, ಸಹಾಯಕ ಚಿಕಿತ್ಸೆ ನೀಡಿದರು. ತೆಲಂಗಾಣ ರಾಜ್ಯಪಾಲರು ವಾರಣಾಸಿಯಿಂದ ನವದೆಹಲಿ ಮೂಲಕ … Continued

ನವದೆಹಲಿ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಯಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನ

ನವದೆಹಲಿ:ನವದೆಹಲಿ: ಶುಕ್ರವಾರ ನಸುಕಿನಲ್ಲಿ ನವದೆಹಲಿಯ ರೈಲ್ವೇ ನಿಲ್ದಾಣದ ರೈಲ್ವೆ ವಿದ್ಯುತ್ ನಿರ್ವಹಣಾ ಸಿಬ್ಬಂದಿಗಾಗಿ ಇರುವ ರೈಲು ದೀಪದ ಶೆಡ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರನ್ನು ಇಬ್ಬರು ರೈಲ್ವೆ ಉದ್ಯೋಗಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಮಹಿಳೆಯ ಮೇಲೆ  ಇಬ್ಬರು ಅತ್ಯಾಚಾರ ಮಾಡಿದರೆ ಇಬ್ಬರು ಸಹಚರರು ಕೊಠಡಿಯನ್ನು ಹೊರಗೆ ಕಾವಲು ಕಾಯುತ್ತಿದ್ದರು ಎಂದು ಪೊಲೀಸರು … Continued

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಸಚಿವ ಪಾರ್ಥ ಚಟರ್ಜಿ ಬಂಧಿಸಿದ ಇ.ಡಿ., ಸಹಾಯಕಿ ಅರ್ಪಿತಾ ಮುಖರ್ಜಿ ವಶಕ್ಕೆ

ನವದೆಹಲಿ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಶನಿವಾರ ಬಂಧಿಸಿದೆ. ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವರನ್ನು ಬಂಧಿಸಲಾಗಿದ್ದು, ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಇಡಿ ವಶಕ್ಕೆ ಪಡೆದಿದೆ ಎಂದು ವರದಿ ತಿಳಿಸಿದೆ. ಪಾರ್ಥ ಚಟರ್ಜಿಯವರ “ಆಪ್ತ ಸಹಾಯಕಿ ಮನೆ ಮೇಲೆ … Continued