ವೀಡಿಯೊ : ವಾಗ್ವಾದದ ನಂತರ ಬೆಂಗಳೂರಿನ ಟೋಲ್‌ ನಲ್ಲಿ ವ್ಯಕ್ತಿಯ ಶರ್ಟ್‌ ಹಿಡಿದು ಕಾರು ಚಲಾಯಿಸಿ ಎಳೆದೊಯ್ದ ಚಾಲಕ…!

ಬೆಂಗಳೂರು : ಬೆಂಗಳೂರಿನ ಟೋಲ್ ಬೂತ್‌ನಲ್ಲಿ ಓವರ್‌ಟೇಕ್ ಮಾಡುವ ವಿಚಾರದಲ್ಲಿ ತೀವ್ರ ಮಾತಿನ ಚಕಮಕಿ ನಡೆದ ನಂತರ ವ್ಯಕ್ತಿಯೊಬ್ಬನ ಶರ್ಟ್‌ ಹಿಡಿದುಕೊಂಡು ಕಾರಿನ ಚಾಲಕನೊಬ್ಬ ಸುಮಾರು 50 ಮೀಟರ್ ವರೆಗೆ ಆತನನ್ನು ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಂಗಲ ಹೆದ್ದಾರಿ ಟೋಲ್ ಬೂತ್ ನಲ್ಲಿ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಟೋಲ್ ಬೂತ್ … Continued

ಪಟಿಯಾಲ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ ಬೆಂಗಳೂರಿಗೆ ಏರ್‌ಲಿಫ್ಟ್‌

ಬೆಂಗಳೂರು : ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ ಅವರನ್ನು ಭಾನುವಾರ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ.‌ ಚಿಕಿತ್ಸೆಗಾಗಿ ಶಾಂತಕುಮಾರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಕುರುಬೂರು ಶಾಂತಕುಮಾರ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. … Continued

ಜಯಲಲಿತಾ ಬಳಿ ಇದ್ದ 27 ಕೆಜಿ ಚಿನ್ನಾಭರಣ, 1116 ಕೆಜಿ ಬೆಳ್ಳಿ, 1526 ಎಕರೆ ಭೂಮಿ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ; ಆಸ್ತಿ ಹರಾಜಿನ ಹಣ ಸಾರ್ವಜನಿಕ ಕಲ್ಯಾಣಕ್ಕೆ ಬಳಸಲು ಆದೇಶ

ಬೆಂಗಳೂರು : ಬೆಂಗಳೂರಿನ ವಿಶೇಷ ಕೋರ್ಟ್ ನ ವಶದಲ್ಲಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಬೆಲೆಬಾಳುವ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ. ಬೆಂಗಳೂರು ನ್ಯಾಯಾಲಯದ ಆದೇಶದ ಒಂದು ದಿನದ ನಂತರ, ವಶಪಡಿಸಿಕೊಂಡ ಆಸ್ತಿಯನ್ನು ಶನಿವಾರ ಅಧಿಕೃತವಾಗಿ ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸಲಾಯಿತು. ಕರ್ನಾಟಕ ಅಧಿಕಾರಿಗಳು ತಮಿಳುನಾಡಿಗೆ ಹಸ್ತಾಂತರಿಸಿದ ಐಷಾರಾಮಿ ವಸ್ತುಗಳಲ್ಲಿ ಚಿನ್ನದಿಂದ ಮಾಡಿದ ಖಡ್ಗ ಮತ್ತು … Continued

ಐಪಿಎಲ್- 2025 | ಆರ್‌ಸಿಬಿ ತಂಡಕ್ಕೆ ನೂತನ ನಾಯಕನ ಘೋಷಣೆ

ಬೆಂಗಳೂರು: ಬಲಗೈ ಬ್ಯಾಟರ್ ರಜತ ಪಾಟೀದಾ‌ರ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡವು ಈ ನಿರ್ಧಾರ ಪ್ರಕಟಿಸಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಮತ್ತೆ ತಂಡದ ನಾಯಕತ್ವ ನೀಡಲಾಗುತ್ತದೆ ಎಂಬ … Continued

ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅನಾಹುತ ; ಇಬ್ಬರು ಕಾರ್ಮಿಕರು ಸಜೀವ ದಹನ

ಬೆಂಗಳೂರು: ಬೆಂಗಳೂರಿನ ಉತ್ತರ ತಾಲೂಕಿನ ಸೀಗೆಹಳ್ಳಿಯಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಅನಾಹುತದಲ್ಲಿ ಇಬ್ಬರು ಸಜೀವವಾಗಿ ದಹನವಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಮೃತರನ್ನು ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪೇಂಟರ್, … Continued

ʼಒನ್ ಮಿನಿಟ್ ಅಪಾಲಜಿʼ ಪುಸ್ತಕವನ್ನು ಓದಿ ; ಡಿ.ರೂಪಾ, ರೋಹಿಣಿ ಸಿಂಧೂರಿಗೆ ನ್ಯಾಯಾಲಯ ಸಲಹೆ

ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಪರಸ್ಪರ ನ್ಯಾಯಾಂಗ ಹೋರಾಟ ನಡೆಸುವ ಬದಲಿಗೆ ರಾಜಿಯಾಗುವ ಬಗ್ಗೆ ಪರಿಶೀಲಿಸುವುದು ಸೂಕ್ತ ಎಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಬುಧವಾರ ಅಭಿಪ್ರಾಯಪಟ್ಟಿದೆ. ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ದಾಖಲಿಸಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 5ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ … Continued

ಬೆಂಗಳೂರು | ಕದ್ದ ಹಣದಿಂದ ಗರ್ಲ್‌ ಫ್ರಂಡ್‌ಗೆ 3 ಕೋಟಿ ಮೌಲ್ಯ ಮನೆ ಗಿಫ್ಟ್‌ ನೀಡಿದ್ದ ಖತರ್ನಾಕ ಕಳ್ಳ…!

ಬೆಂಗಳೂರು: ದರೋಡೆ ಮಾಡಿದ ಹಣದಲ್ಲಿ ತನ್ನ ಗೆಳತಿಗೆ 3 ಕೋಟಿ ರೂಪಾಯಿ ಮನೆ ಕಟ್ಟಿಸಿಕೊಟ್ಟ ಕಳ್ಳನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 37 ವರ್ಷದ ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದ್ದು, ಈತನಿಗೆ ಖ್ಯಾತ ಚಿತ್ರನಟಿಯೊಂದಿಗೂ ಸಂಪರ್ಕವಿತ್ತು ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನ ಮಡಿವಾಳ ಪೊಲೀಸರು ದೀರ್ಘಕಾಲದ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದ ಈತನನ್ನು … Continued

ವೀಡಿಯೊ : ಬೆಂಗಳೂರು ; ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್ ಕಾರಿಗೆ ಹಿಂದಿನಿಂದ ಗುದ್ದಿದ ಗೂಡ್ಸ್ ಆಟೋ

ಬೆಂಗಳೂರು: ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮಂಗಳವಾರ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಕಾರಿಗೆ ಗೂಡ್ಸ್ ಆಟೋವೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಟ್ರಾಫಿಕ್ ಜಾಮ್ ವೇಳೆ ಕಾರಿಗೆ ಗೂಡ್ಸ್ ಆಟೋ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರಿಗೆ ಗೂಡ್ಸ್ ಆಟೋ ಗುದ್ದಿದ ಬಳಿಕ ರಾಹುಲ್ ದ್ರಾವಿಡ್ … Continued

ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಸೇರಿ 17 ಜನರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಭಾರತೀಯ ವಿಜ್ಞಾನ ಸಂಸ್ಥೆ(IISc)ಯ ನಿರ್ದೇಶಕ ಬಲರಾಮ ಮತ್ತು ಇತರ 16 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ. 71ನೇ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ (ಸಿಸಿಎಚ್) ನಿರ್ದೇಶನದ ಮೇರೆಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು … Continued

ವೀಡಿಯೊ..| ಬೆಂಗಳೂರು : ಆಂಬುಲೆನ್ಸ್‌ ಗೆ ದಾರಿ ಕೊಡದ ಆಟೋ ಚಾಲಕ ; ಮುಂದಾಗಿದ್ದು…?

ಬೆಂಗಳೂರು: ತೀವ್ರ ಅಸ್ವಸ್ಥ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ಆಟೋ ರಿಕ್ಷಾ ಚಾಲಕನೊಬ್ಬ ದಾರಿಕೊಡದೆ ಸತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹರ್ಲೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಟೋ ಚಾಲಕನ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತುರ್ತು ಅಗತ್ಯವಿರುವ ರೋಗಿಯನ್ನು ಕರೆದೊಯ್ಯಲಾಗುತ್ತಿದೆ. … Continued