ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಗುರುವಾರ ಜಾಮೀನು ನಿರಾಕರಿಸಿದೆ. ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ರನ್ಯಾ ಜಾಮೀನು ಅರ್ಜಿ ಆದೇಶವನ್ನು ಮಂಗಳವಾರ ಕಾಯ್ದಿರಿಸಿತ್ತು. ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಈರಪ್ಪಣ್ಣ ಪವಡಿ … Continued

ರಾಜ್ಯ ಸರ್ಕಾರಕ್ಕೆ ಮುಜುಗರ ; ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಕಳುಹಿಸಿದ ಗವರ್ನರ್

ಬೆಂಗಳೂರು : ವಿಪಕ್ಷಗಳ ವಿರೋಧದ ನಡೆಯು ಸದನದಲ್ಲಿ ಅಂಗೀಕಾರವಾಗಿದ್ದ ಗ್ರೇಟರ್ ಬೆಂಗಳೂರು ವಿಧೇಯಕವನ್ನು ರಾಜ್ಯಪಾಲರು ಸಹಿ ಹಾಕದೆ ವಾಪಸ್ ಕಳುಹಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಅನಮೋದನೆ ಸಿಕ್ಕಿತ್ತು. ಆದರೆ, ಇದೀಗ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಅವರು ಕೆಲವೊಂದು ಸ್ಪಷ್ಟನೆ ಕೇಳಿ … Continued

ಮಾರ್ಚ್‌ 30ರಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮತ್ತೊಂದು ವಿಮಾನ ಹಾರಾಟ

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ (Hubballi) ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಮತ್ತೊಂದು ವಿಮಾನಯಾನ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಭಾನುವಾರ ಇಂಡಿಗೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಈ ಸೇವೆ ಆರಂಭಿಸುವ ಕುರಿತು ನಿರ್ಣಯಕೈಗೊಳ್ಳಲಾಗಿದೆ ಮಾರ್ಚ್‌ 30 ವಿಮಾನಯಾನ ಪ್ರಾರಂಭವಾಗಲಿದ್ದು, ಈ ಮೂಲಕ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆ ; ಬೆಂಗಳೂರಲ್ಲಿ ಮಳೆಯಿಂದ 10 ವಿಮಾನಗಳ ಮಾರ್ಗ ಬದಲಾವಣೆ

 ಬೆಂಗಳೂರು: ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇಂದು ದಿಢೀರ್ ಬಂದ ಮಳೆ(Rain)ಯಾಗಿದೆ. ಭಾರೀ ಮಳೆಯಿಂದಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕನಿಷ್ಠ 10 ವಿಮಾನಗಳನ್ನು ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂಡಿಗೋ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ವಿಮಾನಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಿದೆ. “ನಾವು ಹವಾಮಾನವನ್ನು … Continued

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ; ವಾಟಾಳ ನಾಗರಾಜ ಸೇರಿ ಕನ್ನಡಪರ ಹೋರಾಟಗಾರರು ವಶಕ್ಕೆ

ಬೆಂಗಳೂರು: ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು.ಹೆಚ್ಚಿನ ಜಿಲ್ಲೆಗಳಲ್ಲಿ ದೈನಂದಿನ ಜೀವನ ಸಹಜ ಸ್ಥಿತಿಯಲ್ಲೇ ಇತ್ತು ಬಹುತೇಕ ಜಿಲ್ಲೆಗಳಲ್ಲಿ ಬಸ್‌ ಸೇರಿದಂತೆ … Continued

₹50 ಕೋಟಿ ಕೊಟ್ಟು ಜಗತ್ತಿನ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ…! ಈ ತೋಳರೂಪದ ನಾಯಿ ವಿಶೇಷತೆ ಏನು ಗೊತ್ತೆ..?

ಬೆಂಗಳೂರು ಮೂಲದ ಶ್ವಾನ ಸಾಕಣೆದಾರ ಎಸ್ ಸತೀಶ್ ಅವರು ಅತ್ಯಂತ ಅಪರೂಪದ ತೋಳರೂಪದ ನಾಯಿ ಅಥವಾ ತೋಳನಾಯಿ(wolfdog)ಯನ್ನು ₹50 ಕೋಟಿಗೆ (ಅಂದಾಜು 4.4 ಮಿಲಿಯನ್ ಪೌಂಡ್‌ಗಳು) ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಕ್ಯಾಡಬೊಮ್ಸ್ ಒಕಾಮಿ ಎಂದು ಹೆಸರಿಸಲಾದ ವಿಶಿಷ್ಟ ನಾಯಿ, ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಈ ರೀತಿಯ ಹೈಬ್ರಿಡ್‌ ತಳಿ (cross breed) ಎಂದು … Continued

ಬಿಡದಿಯ ಕಾರ್ಖಾನೆಯಲ್ಲಿ ಪಾಕಿಸ್ತಾನ ಪರ ಬರಹ; ಇಬ್ಬರ ಬಂಧನ

ರಾಮನಗರ : ವ ಬಿಡದಿಯಲ್ಲಿರುವ ಟೊಯೋಟಾ ಬೋಷೂಕೂ ಆಟೋಮೇಟಿವ್ ಇಂಡಿಯಾ ಕಂಪನಿಯ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಿಡದಿಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹೈಮದ್ ಹುಸೇನ್ (24) ಮತ್ತು ಸಾದಿಕ್ (20) ಎಂಬವರು ಬಂಧಿತ ಆರೋಪಿಗಳು. ಇವರು ಟೊಯೋಟಾ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶೌಚಾಲಯದ … Continued

ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಬಿದ್ದ ವಿದ್ಯುತ್‌ ಕಂಬ ; ಇಬ್ಬರು ಮಹಿಳೆಯರು ಸಾವು

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಘಟನೆ ಸಂಭವಿಸಿದ್ದು, ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದುಬಿದ್ದ ಪರಿಣಾಮ  4 ತಿಂಗಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ ಹೊಡೆದಿತ್ತು.  ಪರಿಣಾಮ ಕೆಲ ಹೊತ್ತಿನ ನಂತರ  … Continued

ಬೆಂಗಳೂರಿನ ಎಂಜಿ ರಸ್ತೆಯ 1950ರ ಫೋಟೋ ವೈರಲ್

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ತನ್ನ ಸಂಚಾರ ದಟ್ಟಣೆಯ ಕಾರಣಕ್ಕೆ ಹೆಸರಾಗಿದೆ. ಆದರೆ, ‘ಭಾರತದ ಸಿಲಿಕಾನ್ ವ್ಯಾಲಿ’ ಯಾವಾಗಲೂ ಹೀಗಿರಲಿಲ್ಲ. ಬೆಂಗಳೂರಿನ ಎಂಜಿ ರಸ್ತೆಯ ಹಳೆಯ ಛಾಯಾಚಿತ್ರವೊಂದು ವೈರಲ್ ಆಗಿದ್ದು, ಇದು ಆ ಪ್ರದೇಶದ ಪಾರ್ಕಿಂಗ್ ದೃಶ್ಯವನ್ನು ತೋರಿಸಿದೆ. ಈ ಚಿತ್ರವನ್ನು ಎಕ್ಸ್ ನಲ್ಲಿ ಇಂಡಿಯನ್ ಹಿಸ್ಟರಿ ಪಿಕ್ಸ್ ಹಂಚಿಕೊಂಡಿದೆ. ಈ ಫೋಟೋ ಪಾರ್ಕಿಂಗ್‌ನಲ್ಲಿ ವಿಂಟೇಜ್ ಕಾರುಗಳು … Continued

ಕರ್ನಾಟಕದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು; 75 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ…!

ಮಂಗಳೂರು: ಕರ್ನಾಟಕ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ 75 ಕೋಟಿ ರೂಪಾಯಿ ಮೌಲ್ಯದ 37.870 ಕೆಜಿ ನಿಷೇಧಿತ ಎಂಡಿಎಂ (ಮಾದಕ ದ್ರವ್ಯ) ಅನ್ನು ಮಂಗಳೂರು ನಗರ ಪೊಲೀಸರು ಬೆಂಗಳೂರಿನಲ್ಲಿ ವಶಪಡಿಸಿಕೊಂಡಿದ್ದು, ಇಬ್ಬರು ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಬಾಂಬಾ ಫಾಂಟಾ, ಅಲಿಯಾಸ್ ಅಡೋನಿಸ್ ಜಬುಲಿಲೆ (31) ಮತ್ತು ಅಬಿಗಾಲಿ ಅಡೋನಿಸ್ ಅಲಿಯಾಸ್ ಓಡಿಜೋ … Continued