ಬಿಜೆಪಿಗೆ ಸೇರ್ಪಡೆಗೊಂಡ ಟಿಎಂಸಿ ಸಂಸದ ಸಿಸಿರ್‌ ಅಧಿಕಾರಿ

ಕೋಲ್ಕತ್ತ: ನಿರೀಕ್ಷೆಯಂತೆ ಪಶ್ಚಿಮ ಬಂಗಾಳ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಅವರ ತಂದೆ ಟಿಎಂಸಿ ಸಂಸದ ಸಿಸಿರ್‌ ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಎಗ್ರಾದಲ್ಲಿ ನಡೆದ ಗೃಹ ಸಚಿವ ಅಮಿತ್‌ ಶಾ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿ, ಬಂಗಾಳವನ್ನು ದೌರ್ಜನ್ಯದಿಂದ ರಕ್ಷಿಸಲು ಬಿಜೆಪಿ ಅಧಿಕಾರಕ್ಕೆ ತರುವುದು ಅಗತ್ಯವಾಗಿದೆ … Continued

ಕೇರಳದಲ್ಲಿ  ಬಿಜೆಪಿಗೆ ಹಿನ್ನಡೆ: ಮೂರು ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ರಾಜ್ಯದ ತಲಚೇರಿ, ಗುರುವಾಯುರ್ ಮತ್ತು ದೇವಿಕುಲಂ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರ ತಿರಸ್ಕರಿಸಲಾಗಿದೆ.ಏಪ್ರಿಲ್ 6ರಂದು ನಡೆಯಲಿರುವ ಕಣ್ಣೂರು ಜಿಲ್ಲೆಯ ತಲಚೇರಿ, ಗುರುವಾಯುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸದ ಕಾರಣಕ್ಕೆ ನಾಮಪತ್ರ ತಿರಸ್ಕರಿಸಲಾಗಿದೆ ಎಂದು … Continued

ಬಿಜೆಪಿಯಿಂದ ರಾಮ ಮಾಧವ್‌ ಪುನಃ ಆರೆಸ್ಸೆಸ್‌ಗೆ ವಾಪಸ್‌

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ ಮಾಧವ್ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಬೆಂಗಳೂರು ನಗರದ ಹೊರವಲಯದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ರಾಮ್ ಮಾಧವ್ ಅವರಿಗೆ ಅಖಿಲ ಭಾರತ ಕಾರ್ಯಕಾರಣಿ ಸದಸ್ಯ ಸ್ಥಾನ ನೀಡಲಾಗಿದೆ. ರಾಮ್ ಮಾಧವ್ … Continued

ಬಿಜೆಪಿ ಕೋರ್‌ ಕಮಿಟಿ ಸಭೆ: ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಚರ್ಚೆ

ಬೆಂಗಳೂರು: ಮೂರೂ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಪಕ್ಷದ ಕಚೇರಿಯಲ್ಲಿ ಶನಿವಾರ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಹ ಉಸ್ತುವಾರಿ ಡಾ.ಅರುಣಾ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಬೆಳಗಅವಿ … Continued

ಸಿಡಿ ಪ್ರಕರಣ ಬಯಲಾದ 24 ತಾಸಿನೊಳಗೆ ನೈತಿಕವಾಗಿ ರಾಜೀನಾಮೆ ಪಡೆಯುವುದು ಬಿಜೆಪಿ ಮಾತ್ರ

ಬೆಂಗಳೂರು: ಸಿಡಿ ಪ್ರಕರಣ ಬಯಲಾದ 24 ಗಂಟೆಯೊಳಗೆ ಬಿಜೆಪಿಯಲ್ಲಿ ಮಾತ್ರ ನೈತಿಕವಾಗಿ ರಾಜೀನಾಮೆ ಪಡೆಯಲಾಗುತ್ತದೆ. ಆರೋಪ ಬಂದಾಗ ನೈತಿಕವಾಗಿ ಸ್ವತಃ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಅರುಣ್ ಸಿಂಗ್ … Continued

ಹೃದಯಾಘಾತ: ಬಿಜೆಪಿ ಹಿರಿಯ ನಾಯಕ ವಾಲ್ಮೀಕಿ ನಾಯಕ ನಿಧನ

ಕಲಬುರಗಿ: ಬಿಜೆಪಿಯ ಹಿರಿಯ ಧುರೀಣ ಹಾಗೂ ಮಾಜಿ ಶಾಸಕ ವಾಲ್ಮೀಕ ನಾಯಕ (೭೦) ಶುಕ್ರವಾರ (ಮಾ.೧೯) ಹೃದಯಾಪಘಾತದಿಂದ ನಿಧನರಾಗಿದ್ದಾರೆ. ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ತೀವ್ರ ಎದೆ ನೋವಿನಿಂದಾಗಿ ದಾಖಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ನಿಧನರಾಗಿದ್ದಾರೆ. ನಾಯಕ ಅವರು ಕಳೆದ ಬಾರಿ ಚಿತ್ತಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಮೊದಲು ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, … Continued

ರಾಮಾಯಣ ಟೀವಿ ಸೀರಿಯಲ್‌ ಶ್ರೀ‌ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಬಿಜೆಪಿಗೆ ಸೇರ್ಪಡೆ

ನವ ದೆಹಲಿ:ಪ್ರಖ್ಯಾತ ರಾಮಾಯಣ ಧಾರಾವಾಹಿ ಶ್ರೀರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿ ಸೇರುತ್ತಿರುವುದು ಮಹತ್ವ ಪಡೆದಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಅವರು ಸೇಪಡೆಯಾಗಿದ್ದಾರೆ. 1987ರಿಂದ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ್‌ ಅವರ ಜನಪ್ರಿಯ ಧಾರಾವಾಹಿ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರವನ್ನು ಅರುಣ್‌ ಗೋವಿಲ್‌ ನಿರ್ವಹಿಸಿದ್ದ … Continued

ಸದ್ದಾಂ ಹುಸೇನ್, ಗಡಾಫಿ ಸಹ ಚುನಾವಣೆ ಗೆಲ್ಲುತ್ತಿದ್ದರು: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

ನವ ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇರಾಕ್​ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಮುಅಮ್ಮರ್ ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ. ಮಂಗಳವಾರ ಅಮೆರಿಕದ ಬ್ರೌನ್ ಯುನಿವರ್ಸಿಟಿಯ ಪ್ರೊಫೆಸರ್ ಅಶುತೋಷ್ ವಾರ್ಷ್ಣೆ ಅವರೊಂದಿಗೆ ಆನ್​ಲೈನ್ ಸಂವಾದ ನಡೆಸಿದ ರಾಹುಲ್, 21ನೇ ಶತಮಾನದಲ್ಲಿ ಸಾಮಾಜಿಕ ಮಾಧ್ಯಮ … Continued

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬ್ಯಾಂಕ್‌ ಮುಚ್ತಾರೆ:ಮಮತಾ ವಾಗ್ದಾಳಿ

ಕೊಲ್ಕತ್ತಾ : ಬಿಜೆಪಿ ಬಂದರೆ ಅದು ಜನರ ಹಕ್ಕುಗಳು ಕೊನೆಯಾಗಲಿದೆ, ರಾಜ್ಯದಲ್ಲಿರುವ ಎಲ್ಲ ಬ್ಯಾಂಕ್‌ಗಲೂ ಮುಚ್ಚಲಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಂಗಳವಾರ ಬಂಗೂರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಒಂದು ವೇಳೆ ಬಿಜೆಪಿ ಆಯ್ಕೆಯಾದರೆ, ರಾಜ್ಯದ ಎಲ್ಲ ಬ್ಯಾಂಕ್ ಗಳನ್ನು ಮುಚ್ಚಲಾಗುವುದು, ನಿಮ್ಮ … Continued

ಬಿಜೆಪಿಯಲ್ಲೇ ಜಂಗೀ ಕುಸ್ತಿ: ಯತ್ನಾಳ ಹೀಗೆ ಮಾತಾಡಿದ್ರೆ ಉಚ್ಚಾಟನೆಗೆ ಒತ್ತಾಯಿಸ್ಬೇಕಾಗುತ್ತೆ ಎಂದ ರೇಣುಕಾಚಾರ್ಯ

ಬೆಂಗಳೂರು: : ವಿಧಾನಸೌಧದಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಯತ್ನಾಳ್ ಅವರೇ ನಾಟಕ ಮಾಡುವುದನ್ನು ಬಿಡಿ, ಏಕೆ ಪದೇ ಪದೆ ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡಿಕೊಂಡು ಓಡಾಡುತ್ತೀರಿ. ನಿಮಗೆ … Continued