ಇಂದ್ರ ದೇವನ ವಿರುದ್ಧವೇ ದೂರು ದಾಖಲಿಸಿದ ರೈತ…! ಮಳೆ ಆಗದಿರುವುದಕ್ಕೆ ಆತನ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ…!! ದೂರಿನಲ್ಲಿ ಏನಿದೆ..?

ಗೊಂಡಾ: ಗೊಂಡಾ: ವಿಲಕ್ಷಣ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ರೈತರೊಬ್ಬರು ಮಳೆ ದೇವರಾದ ಇಂದ್ರನ ವಿರುದ್ಧವೇ ಲಿಖಿತ ದೂರು ಸಲ್ಲಿಸಿದ್ದಾರೆ…! ಮತ್ತು ಮಳೆ ಕೊರತೆಯಿಂದಾಗಿ ಇಂದ್ರನ ವಿರುದ್ಧ ಕ್ರಮ ಕೈಗೊಳ್ಳಬೇಕಂತೆ…!! ಹೀಗೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ಗಮನಾರ್ಹವಾಗಿ, ಜಿಲ್ಲೆಯ ಝಾಲಾ ಗ್ರಾಮದ ನಿವಾಸಿ ಸುಮಿತ್‌ಕುಮಾರ ಯಾದವ್ ಎಂದು ಗುರುತಿಸಲಾದ ರೈತ, “ಸಮಾಧಾನ ದಿವಸ” (ದೂರು … Continued

ಶಿಕ್ಷಕರಿಗೆ ಹಿಜಾಬ್ ಧರಿಸಲು ಅಡ್ಡಿ ಆರೋಪ: ಪರಿಶೀಲನೆ ನಂತರ ಆದೇಶ ಮಾಡ್ತೇನೆ ಎಂದ ಗೃಹ ಸಚಿವರು

ಬೆಂಗಳೂರು: ಹಿಜಾಬ್ ಧರಿಸಿದ ಕಾರಣಕ್ಕಾಗಿ ಶಿಕ್ಷಕರನ್ನು ತರಗತಿ ಒಳಗಡೆ ಬಿಡದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ಆದೇಶ ಮಾಡುತ್ತೇವೆ ಎಂದು … Continued

ಸರ್ಕಾರಿ ಕೊಠಡಿ ಕಾಣೆಯಾಗಿದೆ ಹುಡುಕಿಕೊಡಿ: ಪೊಲೀಸ್‌ ಠಾಣೆಗೆ ಬಂದ ಹೀಗೊಂದು ದೂರು…!

ಕೆ.ಆರ್.ಪೇಟೆ: ಕೃಷ್ಣರಾಜಪೇಟೆಯಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಕೊಠಡಿ ಕಾಣೆಯಾಗಿದೆ. ಹುಡುಕಿಕೊಡಿ ಎಂಬ ದೂರೊಂದು ಪೊಲೀಸ್‌ ಠಾಣೆಗೆ ಬಂದಿದೆ. ಈಗ ಕಾಣೆಯಾದ ಕಟ್ಟಡ ಹುಡುಕುವುದು ಹೇಗೆಂಬ ತಲೆನೋವು ಪೊಲೀಸರದ್ದು. ಪುರಸಭೆ ಮಾಲೀಕತ್ವದ ಖಾಸಿಂ ಖಾನ್ ಸಮುದಾಯ ಭವನದಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಿದ್ದ ಕಟ್ಟಡ ಕಾಣೆಯಾಗಿದ್ದು. ಅಧಿಕಾರಿಗಳು ತಕ್ಷಣ ಪತ್ತೆಮಾಡಿ ಸಾರ್ವಜನಿಕರ … Continued

ಅಂತಹ ಸರ್ಕಾರವನ್ನೇ ಉರುಳಿಸಿದ್ದೇನೆ.. ಇದ್ಯಾವ ಲೆಕ್ಕ..

ಬೆಂಗಳೂರು: ಅಂತಹ ಸರ್ಕಾರವನ್ನೇ(ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ) ಉರುಳಿಸಿದ್ದೇನೆ. ಇದ್ಯಾವ ಲೆಕ್ಕ..?. ಇನ್ನೂ ಇಂತಹ 10 ಸಿಡಿಗಳು ಬಂದರೂ ಅದನ್ನು ಎದುರಿಸಲು ಸಿದ್ಧವಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಯುವತಿ ಪೊಲೀಸರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಮ್ಮೆ ಸಿಡಿ ಯುವತಿ ತಾನು ಸಂತ್ರಸ್ತೆ ಎನ್ನುವುದೇ ಆಗಿದ್ದರೆ ಆಕೆ … Continued

ಹಲ್ಲೆ ಪ್ರಕರಣ: ಡೆಲಿವರಿ ಬಾಯ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಮಹಿಳೆ ನಾಪತ್ತೆ

ಬೆಂಗಳೂರು: ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಆರೋಪ ಮಾಡಿದ್ದ ಮಹಿಳೆ ಬೆಂಗಳೂರಿನಲ್ಲಿ ಇಲ್ಲ. ಆಹಾರ ಡೆಲಿವರಿ ವಿಳಂಬ ಪ್ರಶ್ನಿಸಿದ್ದ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದರು. ದೂರು ಹಿನ್ನೆಲೆಯಲ್ಲಿ ಪೊಲೀಸರು … Continued

ಸಿಡಿ ಪ್ರಕರಣದಲ್ಲಿ ಗಟ್ಟಿ ಸಾಕ್ಷ್ಯ ಸಂಗ್ರಹ ಮಾಡಿಕೊಂಡೇ ಮೂವರು ಕಿಂಗ್‌ ಪಿನ್‌ ವಿರುದ್ಧ ದೂರು: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪಕ್ಕಾ ಸಾಕ್ಷ್ಯ ಸಂಗ್ರಹ ಮಾಡಿದ ನಂತರ ಈ ಪ್ರಕರಣದ ಮೂವರು ಕಿಂಗ್‌ ಪಿನ್‌ಗಳ ಬಗ್ಗೆ ದೂರು ನೀಡಲಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಎಸ್‌ಐಟಿ ತನಿಖೆ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಅವರು, ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಕಾನೂನು … Continued

ದಿನೇಶ ಕಲ್ಹಳ್ಳಿಗೆ ಸಂಕಷ್ಟ: ಅಶ್ಲೀಲ ವಿಡಿಯೋ ಬಿಡುಗಡೆ ವಿರುದ್ಧ ಮಹಿಳೆಯಿಂದ ದೂರು ದಾಖಲು

ಬೆಂಗಳೂರು : ಈಗ ದಿನೇಶ ಕಲ್ಹಳ್ಳಿ ಅವರಿಗೆ ಸಂಕಷ್ಟ ಎದುರಾಗಿದೆ. ಅದೂ ಮಹಿಳೆಯೊಬ್ಬರಿಂದ. ದಿನೇಶ್ ಕಲ್ಹಳ್ಳಿ ಹೆಣ್ಣಿನ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮುಲಾನಿಯವರು ಇನ್ನೂ ಇಂಥ ಕೆಲ ಸಿಡಿಗಳಿವೆ ಎಂದಿದ್ದಾರೆ. ಈ ಮೂಲಕ ಯುವತಿ ಕುಟುಂಬದ ಮರ್ಯಾದೆ ತೆಗೆದಿದ್ದಾರೆ. ಹೀಗಾಗಿ ದಿನೇಶ್ ಕಲ್ಹಳ್ಳಿ ಹಾಗೂ ಮುಲಾನಿ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ … Continued