ಡಿಸೆಂಬರ್ 19 ರಂದು ಇಂಡಿಯಾ ಮೈತ್ರಿಕೂಟದ 4ನೇ ಸಭೆ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19 ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಭಾನುವಾರ ಹೇಳಿದ್ದಾರೆ. ಡಿಸೆಂಬರ್ 17ರಿಂದ ಸಭೆಯನ್ನು ಮುಂದೂಡಿದ್ದಕ್ಕೆ ಅವರು ಯಾವುದೇ ಕಾರಣಗಳನ್ನು ನೀಡಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ … Continued

ಕಾಂಗ್ರೆಸ್ ಸಂಸದರ ನಿವೇಶನದ ಮೇಲೆ ನಡೆದ ದಾಳಿಯಲ್ಲಿ 176 ಬ್ಯಾಗ್ ನಗದು ವಶ : ₹353 ಕೋಟಿ ಎಣಿಕೆ… ಎಣಿಕೆ ಮುಂದುವರೆದಿದೆ….!

ನವದೆಹಲಿ: ನವದೆಹಲಿ: ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ವಶಪಡಿಸಿಕೊಂಡ ಹಣದ ಎಣಿಕೆಯನ್ನು ಭಾನುವಾರದೊಳಗೆ ಮುಗಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 6 ರಂದು ದಾಳಿಗಳು ಪ್ರಾರಂಭವಾಗಿದ್ದು, ಅಧಿಕಾರಿಗಳು ಒಟ್ಟು 176 ಬ್ಯಾಗ್‌ಗಳಲ್ಲಿ 140 ಬ್ಯಾಗ್‌ಗಳ ಎಣಿಕೆಯನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಸಂಬಂಧಿಸಿದ ನಿವೇಶನಗಳಲ್ಲಿ ಆದಾಯ ತೆರಿಗೆ … Continued

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಆಫರ್ ನೀಡಿದ ಡಿಕೆಶಿ : ಅದಕ್ಕೆ ಶಿವರಾಜಕುಮಾರ ಹೇಳಿದ್ದೇನೆಂದರೆ….

ಬೆಂಗಳೂರು: ನಟ ಶಿವರಾಜಕುಮಾರ (ShivaRajkumar) ಅವರಿಗೆ ಲೋಕಸಭೆಗೆ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಹ್ವಾನ ನೀಡಿದ್ದಾರೆ. ಆದರೆ, ನಟ ಶಿವರಾಜಕುಮಾರ ಅವರು ಈ ಆಫರ್‌ ಅನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ ಅವರು, ವೇದಿಕೆಯಲ್ಲಿ ಕುಳಿತಿದ್ದಾಗ ನಾನು ನಟ ಶಿವರಾಜಕುಮಾರ ಅವರಿಗೆ ನೀವು … Continued

ತೆರಿಗೆ ದಾಳಿಯಲ್ಲಿ ದಾಖಲೆ ಪ್ರಮಾಣದ ನಗದು ಹಣ ವಶ : ತನ್ನ ಪಕ್ಷದ ಸಂಸದರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ನವದೆಹಲಿ; ಆದಾಯ ತೆರಿಗೆ ಇಲಾಖೆಯು ಸುಮಾರು 300 ಕೋಟಿ ರೂಪಾಯಿಗಳಷ್ಟು ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಂಡಿರುವ ವರದಿಯ ನಂತರ ಸಂಸದ ಧೀರಜ್ ಸಾಹು ಅವರ ವ್ಯವಹಾರಗಳ ಜೊತೆ ಪಕ್ಷ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಶನಿವಾರ ಹೇಳಿದ್ದಾರೆ. “ಅವರ ವ್ಯವಹಾರಗಳ ಮೇಲೆ ದಾಳಿಯ ಮೇಲೆ ಆದಾಯ ತೆರಿಗೆ … Continued

ಹಾಸನ: ಬೇಲೂರಿನ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

  ಹಾಸನ : ಹಾಸನದ ಬೇಲೂರಿನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಭೆಗಾಗಿ ಹಾಕಲಾಗಿದ್ದ ಕುರ್ಚಿಗಳನ್ನು ಒಡೆದು ಪುಡಿ, ಪುಡಿ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಸ್ಥಳೀಯ ಮಟ್ಟದಲ್ಲಿ … Continued

ಹಿಂದಿ ರಾಜ್ಯಗಳಿಗೆ ʼಗೋ ಮೂತ್ರʼ ರಾಜ್ಯಗಳೆಂದು ಟೀಕಿಸಿದ ಡಿಎಂಕೆ ಸಂಸದ : ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ನಂತರ ಸೆಂಥಿಲ್ ಕುಮಾರ ಕ್ಷಮೆಯಾಚನೆ

ನವದೆಹಲಿ: ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ ಅವರು ಸಂಸತ್ತಿನಲ್ಲಿ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿ ಪಕ್ಷಾತೀತವಾಗಿ ಟೀಕೆ ಎದುರಿಸಿದ ನಂತರ ಹೇಳಿಕೆಗಾಗಿ ಬುಧವಾರ ಕ್ಷಮೆಯಾಚಿಸಿದ್ದಾರೆ. ಧರ್ಮಪುರಿ ಸಂಸದರ ಹೇಳಿಕೆಗೆ ಬಿಜೆಪಿ ಮತ್ತು ಡಿಎಂಕೆ ಮಿತ್ರಪಕ್ಷ ಕಾಂಗ್ರೆಸ್‌ನಿಂದ ತಕ್ಷಣವೇ ಖಂಡನೆ ವ್ಯಕ್ತವಾಗಿದ್ದು, ಅವರು ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಸದನದಲ್ಲಿ ಜೆ … Continued

ಉನ್ನತ ನಾಯಕರು ಸಭೆಯಿಂದ ಹೊರಗುಳಿಯಲು ನಿರ್ಧರಿಸಿದ ನಂತರ ನಾಳೆ ನಡೆಯಬೇಕಿದ್ದ ಇಂಡಿಯಾ ಮೈತ್ರಿಕೂಟದ ಸಭೆ ಮುಂದಕ್ಕೆ

ನವದೆಹಲಿ: ದೆಹಲಿಯಲ್ಲಿ ಬುಧವಾರ ನಡೆಯಲಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ ಸಭೆಯನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಕರೆದಿದ್ದ ಇಂಡಿಯಾ ಮೈತ್ರಿಕೂಟದ ಸಭೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ … Continued

“ಇದು ಕಾಂಗ್ರೆಸ್ ಸೋಲು, ಜನರ ಸೋಲಲ್ಲ”: 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು ಇತರ ಇಂಡಿಯಾ ಮೈತ್ರಿಕೂಟ ಸದಸ್ಯ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳೊಂದಿಗೆ ಕಾಂಗ್ರೆಸ್‌ ಸೀಟು ಹಂಚಿಕೆಯು ಮೂರು ರಾಜ್ಯಗಳಲ್ಲಿ ವಿಭಿನ್ನ ಫಲಿತಾಂಶವನ್ನು ಕಾಣಬಹುದಿತ್ತು … Continued

ತೆಲಂಗಾಣದಲ್ಲಿ ನಟ ಪವನ್ ಕಲ್ಯಾಣ ಪಕ್ಷಕ್ಕೆ ಹೀನಾಯ ಸೋಲು : ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಅಭ್ಯರ್ಥಿಗಳು…!

ಹೈದರಾಬಾದ್‌ : ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ತೆಲುಗು ಸೂಪರ್‌ ಸ್ಟಾರ್‌ ಜನಸೇನಾ ಪಕ್ಷವು ಸ್ಪರ್ಧಿಸಿದ್ದು, ತಾನು ಸ್ಪರ್ಧಿಸಿದ್ದ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಕಳಪೆ ಸಾಧನೆ ಮಾಡಿದೆ. ಆಶ್ವರಪೇಟೆ ಮತ್ತು ವೈರಾ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷವು ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿದೆ. ಮೂರನೇ ಸ್ಥಾನ ಪಡೆದ ಕುಕಟ್‌ಪಲ್ಲಿ ಕ್ಷೇತ್ರದಲ್ಲಿ ಮಾತ್ರ … Continued

ಎಬಿವಿಪಿ ಕಾರ್ಯಕರ್ತನಿಂದ ಕಾಂಗ್ರೆಸ್ ಸಿಎಂ ಹುದ್ದೆ ರೇಸ್‌ ವರೆಗೆ ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ್ ರೆಡ್ಡಿಯ ರಾಜಕೀಯ ದಾರಿ….

ಹೈದರಾಬಾದ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಚಟುವಟಿಕೆಯಿಂದ ಆರಂಭವಾದ ಅನುಮುಲಾ ರೇವಂತ ರೆಡ್ಡಿ ಅವರ ರಾಜಕೀಯ ಮಾರ್ಗವು ಈಗ ತೆಲಂಗಾಣದ ಸಂಭಾವ್ಯ ಮುಖ್ಯಮಂತ್ರಿ ಹುದ್ದೆಯ ವರೆಗೆ ಅವರನ್ನು ತಂದು ನಿಲ್ಲಿಸಿದೆ. 56ರ ಹರೆಯದ ಕಾಂಗ್ರೆಸ್ ನಾಯಕ ಹಾಗೂ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರ ಕಟುಟೀಕಾಕಾರ, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ ರೆಡ್ಡಿ … Continued