“ವಿರಾಟ್ ಕೊಹ್ಲಿ ನನ್ನ ನಾಯಕತ್ವದ ಅಡಿಯಲ್ಲಿ ಆಡಿದ್ದಾರೆ, ಭಾರತದ ಅನೇಕ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು..”: ತೇಜಸ್ವಿ ಯಾದವ್ ಹೇಳಿಕೆ ವೈರಲ್‌

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಅಡಿಯಲ್ಲಿ ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಡಿದ್ದಾರೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರ ತೇಜಸ್ವಿ ಯಾದವ್‌, ತಾನು ದೇಶೀಯ ಕ್ರಿಕೆಟ್‌ನಲ್ಲಿ … Continued

ವೀಡಿಯೊ..| ಎಂ.ಎಸ್. ಧೋನಿಯನ್ನು ನಾನು ಎಂದಿಗೂ ಕ್ಷಮಿಸಲ್ಲ ; ಕ್ರಿಕೆಟರ್‌ ಯುವರಾಜ ಸಿಂಗ್ ತಂದೆ ಹೀಗೆ ಹೇಳಿದ್ಯಾಕೆ…?

ನವದೆಹಲಿ : ಭಾರತದ ಮಾಜಿ ಬ್ಯಾಟರ್ ಯುವರಾಜ ಸಿಂಗ್ ಅವರ ತಂದೆ ಯೋಗರಾಜ ಸಿಂಗ್ ಅವರು ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಜೀ ಸ್ವಿಚ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಯೋಗರಾಜ ಸಿಂಗ್ ಅವರು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. … Continued

ಮುಂದಿನ ಐಸಿಸಿ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವಿರೋಧ ಆಯ್ಕೆ

ನವದೆಹಲಿ: ಭಾರತೀಯ ಕ್ರಿಕೆಟ್‌ ಮಂಡಳಿಯ (BCCI) ಹಾಲಿ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಸ್ವತಂತ್ರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು 1 ಡಿಸೆಂಬರ್ 2024 ರಂದು ಅವರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಆಗಸ್ಟ್ 20 ರಂದು, ಪ್ರಸ್ತುತ ಐಸಿಸಿ (ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯ ಮುಕ್ತಾಯವಾಗಲಿದೆ. ಅಧ್ಯಕ್ಷ … Continued

ಅಂತಾರಾಷ್ಟ್ರೀಯ-ದೇಶೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಬ್ಯಾಟರ್‌ ಶಿಖರ್ ಧವನ್

ನವದೆಹಲಿ: ಭಾರತದ ಅತ್ಯುತ್ತಮ ವೈಟ್ ಬಾಲ್ ಆರಂಭಿಕ ಬ್ಯಾಟರ್‌ ಗಳಲ್ಲಿ ಒಬ್ಬರಾದ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಧವನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದರೂ ಲೀಗ್ ಕ್ರಿಕೆಟ್‌ನಲ್ಲಿ – ಪ್ರಮುಖವಾಗಿ ಐಪಿಎಲ್‌ನಲ್ಲಿ ಮುಂದುವರಿಯುವ ಸುಳಿವು ನೀಡಿದ್ದಾರೆ. 2022 ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನದ ಪಂದ್ಯದಲ್ಲಿ ಭಾರತಕ್ಕಾಗಿ ಕೊನೆಯದಾಗಿ … Continued

ಬಾಂಗ್ಲಾದೇಶದಲ್ಲಿ ಪ್ರತಿಭಟನೆ ವೇಳೆ ಕೊಲೆ ಪ್ರಕರಣ ; ಎಫ್‌ಐಆರ್‌ನಲ್ಲಿ ಖ್ಯಾತ ಕ್ರಿಕೆಟರ ಶಕೀಬ್ ಅಲ್ ಹಸನ್ ಹೆಸರು ಉಲ್ಲೇಖ : ವರದಿ

ಆಗಸ್ಟ್ 5 ರಂದು ಬಾಂಗ್ಲಾದೇಶದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರನ್ನು ಹತ್ಯೆಗೈದ ಆರೋಪದ ಮೇಲೆ ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಶಕೀಬ್ ಜೊತೆಗೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ 147 ಜನರಲ್ಲಿ … Continued

ವೀಡಿಯೊ..| ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ; ಶಾಕ್‌ ಆದ ಕ್ರಿಕೆಟ್‌ ಪ್ರೇಮಿಗಳು

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತ ವಿನೋದ್ ಕಾಂಬ್ಳಿ ಅವರು ನಡೆದುಕೊಂಡು ಹೋಗಲಾರದ ಸ್ಥಿತಿಯಲ್ಲಿದ್ದಾರೆಯೇ…? ಅವರು ನಡೆದುಕೊಂಡು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದವರ ಸಹಾಯ ಕೇಳಿದ ವೀಡಿಯೊವೊಂದು ವೈರಲ್‌ ಆಗಿದೆ. ಭಾರತದ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಭಾನ್ವಿತ ಎಡಗೈ ಆಟಗಾರರಲ್ಲಿ ಒಬ್ಬರಾಗಿದ್ದ ವಿನೋದ ಕಾಂಬ್ಳಿ ಅವರಿಗೆ ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದೆ ಬೈಕ್‌ನ ಆಸರೆ … Continued

ಬಾಂಗ್ಲಾದೇಶ ಬಿಕ್ಕಟ್ಟು : ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಮಾಜಿ ನಾಯಕನ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ಅವರು ಸೋಮವಾರ ದೇಶದಿಂದ ನಿರ್ಗಮಿಸಿದ ನಂತರ ಬಾಂಗ್ಲಾದೇಶದಲ್ಲಿ ಉಂಟಾದ ಹಿಂಸಾಚಾರ ಮತ್ತು ಅರಾಜಕತೆಯ ನಡುವೆ, ಪ್ರತಿಭಟನಾಕಾರರು ಬಾಂಗ್ಲಾದೇಶದ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಖುಲ್ನಾ ವಿಭಾಗದ ನರೈಲ್-2 ಕ್ಷೇತ್ರದ ಸಂಸದರಾಗಿರುವ ಮಶ್ರಫೆ … Continued

ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ ಗಂಭೀರ ನೇಮಕ

ನವದೆಹಲಿ: ಭಾರತದ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ಭಾರತದ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ ಗಂಭೀರ ಅವರನ್ನು ನೇಮಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಮಂಗಳವಾರ ಪ್ರಕಟಿಸಿದ್ದಾರೆ. T20 ವಿಶ್ವಕಪ್ 2024ರ ಮುಕ್ತಾಯದ ನಂತರ ಮುಖ್ಯ ಕೋಚ್‌ ಹುದ್ದೆ ತೊರೆದ ರಾಹುಲ್ ದ್ರಾವಿಡ್‌ ಅವರ ಬದಲಿಗೆ ಗೌತಮ ಗಂಭೀರ ಅವರನ್ನು … Continued

ರಾಹುಲ್ ದ್ರಾವಿಡ್ ಕುರಿತು ಭಾವನಾತ್ಮಕ ʼಬರಹʼ ಹಂಚಿಕೊಂಡ ಭಾರತದ ಕ್ರಿಕೆಟ್‌ ತಂಡದ ನಾಯಕ ರೋಹಿತ ಶರ್ಮಾ

ರೋಹಿತ್ ಶರ್ಮಾ ಅವರು ನಿರ್ಗಮಿತ ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಟಿಪ್ಪಣಿ ಬರೆದಿದ್ದಾರೆ. ಅವರ ನಮ್ರತೆ ಮತ್ತು ಆಟಗಾರರನ್ನು ಸಮಾಧಾನದಲ್ಲಿ ಇರಿಸುವ ಅವರ ಸಾಮರ್ಥ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. “ಆತ್ಮೀಯ ರಾಹುಲ್ ಭಾಯ್, ಈ ಬಗ್ಗೆ ನನ್ನ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಾನು ಸರಿಯಾದ ಪದಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನಗೆ … Continued

T20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ನೀಡಿದ 125 ಕೋಟಿ ರೂ. ಬಹುಮಾನದ ಹಂಚಿಕೆ ಹೇಗೆ ? ಯಾರಿಗೆ ಎಷ್ಟು ಸಿಗಲಿದೆ? ವಿವರ ಇಲ್ಲಿದೆ

 ನವದೆಹಲಿ: ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ 15 ಸದಸ್ಯರ ಭಾತರದ ತಂಡವು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆದ T20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಕಪ್‌ ಗೆದ್ದ ನಂತರ ಬಿಸಿಸಿಐ ಅವರಿಗೆ 125 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿತು. ಒಟ್ಟು 42 ಜನರ … Continued