ಟಿ20 ವಿಶ್ವಕಪ್ : ಫಿನ್ ಅಲೆನ್ ವೇಗದ ಶತಕಕ್ಕೆ ದಾಖಲೆ ಧೂಳೀಪಟ ; ದಕ್ಷಿಣ ಆಫ್ರಿಕಾ ಮಣಿಸಿ ನ್ಯೂಜಿಲೆಂಡ್ ಫೈನಲ್‌ಗೆ

ಕೋಲ್ಕತ್ತಾ : ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ನಡೆದ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 2024ರ ರನ್ನರ್-ಅಪ್ ದಕ್ಷಿಣ ಆಫ್ರಿಕಾದ ವಿಶ್ವಕಪ್ ಕನಸು ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯಕ್ಕೂ ಮುನ್ನ ಟಿ20 … Continued

ಟಿ20 ವಿಶ್ವಕಪ್ 2026 : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ ; ಸೆಮಿಫೈನಲ್‌ ಪ್ರವೇಶಿಸಿದ ಟೀಂ ಇಂಡಿಯಾ

ಕೋಲ್ಕತ್ತಾ: 2026ರ ಟಿ20 ವಿಶ್ವಕಪ್‌ನ ಸೂಪರ್‌ ೮ರ ಹಂತದಲ್ಲಿ ಭಾರತವು ತಂಡವು ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್‌ಗಳ ಜಯಗಳಿಸಿ ಸೆಮಿ ಫೈನಲ್‌ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ ಸಮಯೋಚಿತ ಪ್ರದರ್ಶನ ನೀಡುವ ಮೂಲಕ ಈಡನ್ ಗಾರ್ಡನ್‌ನಲ್ಲಿ ಆತಿಥೇಯರಿಗೆ ಗೆಲುವು ತಂದುಕೊಟ್ಟರು. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಸೆಮಿ ಫೈನಲ್‌ ಪಂದ್ಯ ನಡೆಯಲಿದೆ. ವಿಂಡೀಸ್ … Continued

ಟಿ20 ವಿಶ್ವಕಪ್‌ : ತಂಡಕ್ಕೆ ಮರಳಿದ್ದ ಮರುದಿನವೇ ರಿಂಕು ಸಿಂಗ್ ತಂದೆ ನಿಧನ

ನವದೆಹಲಿ : ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ (61) ಅವರು ನಾಲ್ಕನೇ ಹಂತದ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲವು ದಿನಗಳಿಂದ ಕ್ಷೀಣಿಸಿತ್ತು. ಪ್ರಸ್ತುತ ಟಿ20 ವಿಶ್ವಕಪ್‌ಗಾಗಿ ತಂಡದೊಂದಿಗೆ ಇರುವ ರಿಂಕು ಸಿಂಗ್, … Continued

ಟಿ20 ವಿಶ್ವಕಪ್ ; ಜಿಂಬಾಬ್ವೆ ವಿರುದ್ಧ ಭರ್ಜರಿಯಾಗಿ ಗೆದ್ದ ನಂತರ ಈಗ ಭಾರತದ ಸೆಮಿಫೈನಲ್ ಪ್ರವೇಶದ ಲೆಕ್ಕಾಚಾರ ಏನು..?

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯಕುಮಾರ ಯಾದವ್ ನಾಯಕತ್ವದ ಭಾರತ ತಂಡವು ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಫಾರ್ಮ್‌ಗೆ ಮರಳಿದೆ. ಈ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶಿಸುವ ಆಸೆ ಮತ್ತೆ ಚಿಗುರಿದೆ. ಜಿಂಬಾವ್ವೆ ವಿರುದ್ಧ ಮೊದಲು ಬ್ಯಾಟ್ ಮಾಡಿದ ಭಾರತದ ತಂಡವು ಅಭಿಷೇಕ ಶರ್ಮಾ (55) ಮತ್ತು ಹಾರ್ದಿಕ್ … Continued

ಟಿ20 ವಿಶ್ವಕಪ್‌ : ಇಂದಿನ ಪಂದ್ಯದಲ್ಲಿ ಭಾರತದ ಭವಿಷ್ಯ ನಿರ್ಧಾರ : ಸೆಮಿಫೈನಲ್ ಪ್ರವೇಶಕ್ಕೆ ಇರುವ 3 ಪ್ರಮುಖ ಹಾದಿಗಳು…

2026ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಲು ಸೂರ್ಯಕುಮಾರ ಯಾದವ್ ನೇತೃತ್ವದ ಭಾರತ ತಂಡಕ್ಕೆ ಇಂದು ಗುರುವಾರ (ಫೆ.೨೬) ಅತ್ಯಂತ ನಿರ್ಣಾಯಕ ದಿನವಾಗಿದೆ. ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲು ಅನುಭವಿಸಿರುವುದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗುರುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಮತ್ತು ಭಾರತ … Continued

ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತ ತಂಡ ಸೇರಿಕೊಳ್ಳಲಿರುವ ಬ್ಯಾಟರ್‌ ರಿಂಕು ಸಿಂಗ್

ಚೆನ್ನೈ: ಫೆಬ್ರವರಿ 25, ಬುಧವಾರ ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಬ್ಯಾಟಿಂಗ್ ಕೋಚ್ ನೀಡಿದ ಮಾಹಿತಿ ಪ್ರಕಾರ, ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ. ಗುರುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್ 8 ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಕುಟುಂಬದ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ … Continued

ಟಿ20 ವಿಶ್ವಕಪ್‌ | ಬ್ರೂಕ್ ಬ್ಯಾಟಿಂಗ್ ಅಬ್ಬರ: ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್

ಕ್ಯಾಂಡಿ (ಶ್ರೀಲಂಕಾ): ಟಿ20 ವಿಶ್ವಕಪ್‌ನ ಸೂಪರ್-8 ಹಂತದ ರೋಚಕ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಸಿಡಿಸಿದ ಮನಮೋಹಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 2 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರಸಕ್ತ ಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರೂಕ್ ಸಿಡಿಲಬ್ಬರದ ಶತಕ 165 ರನ್‌ಗಳ … Continued

ಟಿ20 ವಿಶ್ವಕಪ್ : ತುರ್ತು ಕಾರಣಕ್ಕೆ ಮನೆಗೆ ತೆರಳಿದ ಬ್ಯಾಟರ್‌ ರಿಂಕು ಸಿಂಗ್‌ ; ಜಿಂಬಾವ್ವೆ ವಿರುದ್ಧ ಆಡುವುದು ಅನುಮಾನ

ನವದೆಹಲಿ : ಭಾರತ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರು ಕುಟುಂಬದಲ್ಲಿ ಎದುರಾಗಿರುವ ತುರ್ತು ಪರಿಸ್ಥಿತಿಯಿಂದಾಗಿ ಟಿ20 ವಿಶ್ವಕಪ್ ತಂಡವನ್ನು ಅರ್ಧದಲ್ಲೇ ಬಿಟ್ಟು ಮನೆಗೆ ಮರಳಿದ್ದಾರೆ. ಫೆಬ್ರವರಿ 23ರಂದು ತಂಡದೊಂದಿಗೆ ಚೆನ್ನೈಗೆ ಪ್ರಯಾಣಿಸಿದ್ದ ರಿಂಕು, ಮಂಗಳವಾರ ಬೆಳಿಗ್ಗೆಯೇ ಅಲ್ಲಿಂದ ಹೊರಟಿದ್ದಾರೆ. ಫೆಬ್ರವರಿ 26ರಂದು ಜಿಂಬಾಬ್ವೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಿಂಕು ಸಿಂಗ್ ಕಣಕ್ಕಿಳಿಯುವುದು ಅನುಮಾನ … Continued

ಟಿ20 ವಿಶ್ವಕಪ್ | ಜಿಂಬಾಬ್ವೆ ವಿರುದ್ಧ ವಿಂಡೀಸ್‌ಗೆ ಭರ್ಜರಿ ಜಯ ; ಭಾರತದ ‘ಸೆಮಿಫೈನಲ್‌’ ಹಾದಿ ಕಠಿಣ : ಆದ್ರೂ ಇದೆ ಛಾನ್ಸ್ ; ಲೆಕ್ಕಾಚಾರವೇನು ?

ಮುಂಬೈ: ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆ ವಿರುದ್ಧ ದಾಖಲಿಸಿದ 107 ರನ್‌ಗಳ ಬೃಹತ್ ಗೆಲುವು, ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶಿಸುವ ಹಾದು ಮತ್ತಷ್ಟು ದುರ್ಗಮವಾಗಿದೆ. ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಅಬ್ಬರಿಸುವ ಮೂಲಕ ಗ್ರೂಪ್-1ರ ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಿಂದಿಕ್ಕಿ  ಅಗ್ರ … Continued

ಟಿ20 ವಿಶ್ವಕಪ್ 2026 : ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಸೋಲು : ಸೆಮಿಫೈನಲ್ ತಲುಪಲು ಭಾರತದ ಮುಂದಿರುವ ಲೆಕ್ಕಾಚಾರಗಳೇನು..?

ಅಹ್ಮದಾಬಾದ್‌ನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿದ ಸೂರ್ಯಕುಮಾರ ಯಾದವ್ ನೇತೃತ್ವದ ಭಾರತ ತಂಡಕ್ಕೆ ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ಈ ಸೋಲು ಕೇವಲ ಒಂದು ಪಂದ್ಯದ ಸೋಲಲ್ಲ, ಬದಲಾಗಿ ಭಾರತದ ನೆಟ್ ರನ್ ರೇಟ್ (NRR) ಅನ್ನು ಪಾತಾಳಕ್ಕೆ (-3.800) … Continued