ವೀಡಿಯೊ..| ಮಗುವನ್ನು ಎದೆಗವಚಿಕೊಂಡು ಲಾಠಿ ಹಿಡಿದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಿಸುತ್ತಿರುವ ಮಹಿಳಾ ಕಾನ್​ಸ್ಟೆಬಲ್…!

ನವದೆಹಲಿ: ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್‌ಪಿಎಸ್‌ಎಫ್) ಮಹಿಳಾ ಕಾನ್‌ಸ್ಟೆಬಲ್ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಎದೆಗವಚಿಕೊಂಡು ಪ್ರಯಾಣಿಕರ ರಕ್ಷಣೆಗಾಗಿ ಗಸ್ತು ತಿರುಗುತ್ತಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಮಗುವನ್ನು ಎದೆಗಚಿಕೊಂಡು ಒಂದು ಕೈಯಲ್ಲಿ ಲಾಠಿ ಹಿಡಿದು ಜನಸಂದಣಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. “ಅವಳು ಕೆಲಸ ಮಾಡುತ್ತಾಳೆ, ಅವಳು ಪೋಷಿಸುತ್ತಾಳೆ, ಅವಳು ಎಲ್ಲವನ್ನೂ ಮಾಡುತ್ತಾಳೆ… ತಾಯಿ, … Continued

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : 11 ಮಹಿಳೆಯರು, 4 ಮಕ್ಕಳು ಸೇರಿ 18 ಮಂದಿ ಸಾವು

ನವದೆಹಲಿ: ಮಹಾಕುಂಭಕ್ಕೆ ಹೋಗುವ ಎರಡು ರೈಲುಗಳು ತಡವಾಗಿ ಬಂದಿದ್ದರಿಂದ ಜನದಟ್ಟಣೆಯಿಂದ ಕೂಡಿದ್ದ ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಹಠಾತ್ ನೂಕು ನುಗ್ಗಲು ಉಂಟಾಗಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯ ಮುಖ್ಯ ಅಪಘಾತ ವೈದ್ಯಕೀಯ ಅಧಿಕಾರಿ ಸಾವುಗಳನ್ನು ದೃಢಪಡಿಸಿದ್ದಾರೆ. ಘಟನೆಯಲ್ಲಿ … Continued

ಸೌರ ವಿದ್ಯುತ್‌ ಚಾಲಿತ 3 ಟವರ್‌ಗಳು, 12 ಅಂತಸ್ತಿನ ಕಟ್ಟಡ, 300 ಕೊಠಡಿಗಳು, ಆಸ್ಪತ್ರೆ, ಸಭಾಂಗಣ ; ದೆಹಲಿಯಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ನವೀಕರಿಸಿದ ಆರ್‌ ಎಸ್‌ ಎಸ್ ಕಚೇರಿ

ನವದೆಹಲಿ: 3.75 ಎಕರೆಯಲ್ಲಿ ಹರಡಿರುವ ಆರ್‌ಎಸ್‌ಎಸ್ ಕಚೇರಿಯು ಮೂರು 12 ಅಂತಸ್ತಿನ 3 ಎತ್ತರದ ಕಟ್ಟಡಗಳು, 300 ಕೊಠಡಿಗಳಿಂದ ಕೂಡಿದೆ. ದೆಹಲಿಯ ಜಾಂಡೆವಾಲನ್ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೊಸ ಕಚೇರಿಯು ಆರ್‌ಎಸ್‌ಎಸ್‌ನ ಭವಿಷ್ಯದ ಕಾರ್ಯಚಟುವಟಿಕೆಗಳ ನೀಲನಕ್ಷೆಗಳನ್ನು ರಚಿಸುವ ಶಕ್ತಿ ಕೇಂದ್ರವಾಗಲಿದೆ. ಸುಮಾರು 75,000 ಪ್ರೇರಿತ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಸೇನೆಯಿಂದ 150 ಕೋಟಿ ರೂಪಾಯಿಗಳ … Continued

ಬಿಜೆಪಿಯಲ್ಲಿ ದೆಹಲಿ ಸಿಎಂ ಹುದ್ದೆಗೆ ಯಾರು. ? ಇಲ್ಲಿವೆ ಪ್ರಮುಖ ಹೆಸರುಗಳು…

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ವು 27 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ದೆಹಲಿಯ ವಿದಾನಸಭೆಯ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಧಿಕಾರದ ʼಬರʼವನ್ನು ನೀಗಿಸಿದೆ. ಬಿಜೆಪಿಯು ಚುನಾವಣೆ ವೇಳೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. … Continued

ದೆಹಲಿ ವಿಧಾನಸಭೆ ಚುನಾವಣೆ: ಸೋತುಹೋದ ಎಎಪಿ ಘಟನಾಘಟಿ ನಾಯಕರು ಇವರು…

ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ್ದು, ಒಟ್ಟು 70 ವಿದಾನಸಭಾ ಕ್ಷೇತ್ರಗಳಲ್ಲಿ 48ರಲ್ಲಿ ಬಿಜೆಪಿ ಜಯಗಳಿಸಿದೆ. ಕಳೆದ ಬಾರಿ 62 ಸ್ಥಾನಗಳಲ್ಲಿ ಜಯಗಳಿಸಿದ್ದು ಎಎಪಿ ಈ ಬಾರಿ ಕೇವಲ 22 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮುಗ್ಗರಿಸಿದೆ. ಅರವಿಂದ ಕೇಜ್ರಿವಾಲ್‌ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರು ಸೋತುಹೋಗಿದ್ದಾರೆ. ಮನೀಶ ಸಿಸೋಡಿಯಾ ಮತ್ತು ಪ್ರಮುಖ ಸಚಿವ ಸೌರಭ … Continued

ದೆಹಲಿ ವಿಧಾನಸಭೆ ಚುನಾವಣೆ ; ಆಮ್‌ ಆದ್ಮಿ ಪಾರ್ಟಿಗೆ ಆಘಾತ ; ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಮಾಜಿ ಡಿಸಿಎಂ ಸಿಸೋಡಿಯಾಗೆ ಸೋಲು

 ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಅವರು ಸೋಲನುಭವಿಸಿದ್ದಾರೆ. ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಪ್ರವರ್ಧಮಾನಕ್ಕೆ ಏರಿದ ಅರವಿಂದ ಕೇಜ್ರಿವಾಲ್‌ ಅವರು ಮಾಜಿ ಮುಖ್ಯಮಂತ್ರಿಯ ಸಾಹಿಬ್‌ … Continued

ದೆಹಲಿ ಚುನಾವಣೆ ಫಲಿತಾಂಶ | ಆರಂಭಿಕ ಟ್ರೆಂಡ್‌ ; ಭರ್ಜರಿ ಗೆಲುವಿನತ್ತ ಬಿಜೆಪಿ ದಾಪುಗಾಲು

ನವದೆಹಲಿ : ದೆಹಲಿ ವಿದಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಟ್ರೆಂಡ್‌ ಪ್ರಕಾರ ಬಿಜೆಪಿ ಭರ್ಜರಿ ಜಯದತ್ತ ದಾಪುಗಾಲು ಇಡುತ್ತಿದೆ. ಇದೇ ಟ್ರೆಂಡ್‌ ಮುಂದುವರಿದರೆ ಒಂದು ದಶಕದಿಂದ ಪ್ರಾಬಲ್ಯ ಹೊಂದಿದ್ದ ದೆಹಲಿಯ ರಾಜಕೀಯ ಭೂದೃಶ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷವು ಅಧಿಕಾರ ಕಳೆದುಕೊಳ್ಳಲಿದೆ. ಮತ ಎಣಿಕೆ ನಡೆಯುತ್ತಿದ್ದು, 27 ವರ್ಷಗಳ ನಂತರ ಬಿಜೆಪಿ … Continued

‘ಆಪರೇಷನ್‌ ಕಮಲ’ ಆರೋಪಕ್ಕೆ ಪುರಾವೆ ಕೊಡಿ ; ಅರವಿಂದ ಕೇಜ್ರಿವಾಲಗೆ ಎಸಿಬಿ ನೋಟಿಸ್

ನವದೆಹಲಿ: ಬಿಜೆಪಿ ವಿರುದ್ಧ ಮಾಡಿದ ಆಮಿಷದ ಆರೋಪಕ್ಕೆ ಪುರಾವೆಗಳನ್ನು ನೀಡುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದೆ. ಕೇಜ್ರಿವಾಲ್ ಅವರ “ಆಪರೇಷನ್ ಕಮಲ” ಕ್ಕೆ ಸಂಬಂಧಿಸಿದ ಆರೋಪಗಳಿಗೆ ಸಂಬಂಧಿಸಿದೆ, ಇದರಲ್ಲಿ ಅವರು ಮತ್ತು ಇತರ ಎಎಪಿ ನಾಯಕರು ಬಿಜೆಪಿಯು ತಮ್ಮ ಪಕ್ಷದ … Continued

ತಮ್ಮ ಪಕ್ಷ ಸೇರುವಂತೆ ಎಎಪಿ ನಾಯಕರಿಗೆ 15 ಕೋಟಿ ರೂ. ಆಫರ್‌ ನೀಡಿದ ಬಿಜೆಪಿ ; ಕೇಜ್ರಿವಾಲ್‌ ಆರೋಪ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಬಿಜೆಪಿಯು ತನ್ನ ಪಕ್ಷದ ನಾಯಕರಿಗೆ ಹಣದ ಆಫರ್‌ ನೀಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ತನ್ನ 16 ಅಭ್ಯರ್ಥಿಗಳನ್ನು ಕರೆದು ಬಿಜೆಪಿಗೆ ಸೇರಲು ತಲಾ 15 ಕೋಟಿ ರೂ.ಗಳ ಆಫರ್‌ ನೀಡಿದೆ ಎಂದು ದೆಹಲಿ … Continued

ಚೋಲಿ ಕೆ ಪೀಚೆ.. ಸಿನೆಮಾ ಹಾಡಿಗೆ ಡ್ಯಾನ್ಸ್‌ ಮಾಡಿದ ಮದುಮಗ ; ಮದುವೆಯನ್ನೇ ರದ್ದುಗೊಳಿಸಿದ ಮದುಮಗಳ ಅಪ್ಪ…!

ನವದೆಹಲಿ: ದೆಹಲಿಯ ಮದುಮಗ ತನ್ನ ಮದುವೆಯಲ್ಲಿ ಬಾಲಿವುಡ್ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ ನಂತರ ಮದುವೆಯೇ ರದ್ದುಗೊಂಡ ವಿದ್ಯಮಾನ ನಡೆದಿದೆ. ಮದುಮಗ ಚೋಲಿ ಕೆ ಪೀಚೆ ಕ್ಯಾ ಹೈ ಎಂಮ ಹಾಡಿಗೆ ವರ ನೃತ್ಯ ಮಾಡಿದ್ದು ವಧುವಿನ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಅವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ…! ಮದುಮಗ ಮೆರವಣಿಗೆಯಲ್ಲಿ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ … Continued