ಅರವಿಂದ ಕೇಜ್ರಿವಾಲಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌ : ಆದರೆ…

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 13) ಅವರಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಕೇಜ್ರಿವಾಲ್‌ಗೆ ಜಾಮೀನು ನೀಡಿದೆ. ಆದಾಗ್ಯೂ, ಜಾಮೀನಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ, ಇದರಲ್ಲಿ 10 ಲಕ್ಷ ರೂಪಾಯಿ … Continued

ಸಿಪಿಐ(ಎಂ) ಮುಖಂಡ ಸೀತಾರಾಮ ಯೆಚೂರಿ ಸ್ಥಿತಿ ʼಚಿಂತಾನಜಕʼ

ನವದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಪ್ರಸ್ತುತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನವದೆಹಲಿಯಲ್ಲಿ ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಪಕ್ಷವು ಮಂಗಳವಾರ ತಿಳಿಸಿದೆ. 72 ವರ್ಷದ ರಾಜಕಾರಣಿ ಯೆಚೂರಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಮತ್ತು ತೀವ್ರ ಉಸಿರಾಟದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ … Continued

ಶಾಲೆಗೆ ಪಿಸ್ತೂಲ್ ತಂದ 6ನೇ ತರಗತಿ ವಿದ್ಯಾರ್ಥಿ…!

ನವದೆಹಲಿ: ಆಘಾತಕಾರಿ ಘಟನೆಯಲ್ಲಿ, ಶಾಲೆಯ ಆಡಳಿತವು 10 ವರ್ಷದ ಮಗುವಿನ ಬ್ಯಾಗ್‌ ನಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ನಂತರ ಅವರು ಅದನ್ನು ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಆಟಿಕೆ ಎಂದು ಭಾವಿಸಿರುವುದಾಗಿ ಬಾಲಕ ಪೊಲೀಸ್ ತಂಡಕ್ಕೆ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಶನಿವಾರ ದೀಪಕ ವಿಹಾರ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ … Continued

ಬಾಂಗ್ಲಾದೇಶದಲ್ಲಿ ದಂಗೆ | ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ದೆಹಲಿಯ ಬಳಿ ಬಂದಿಳಿದ ಶೇಖ್ ಹಸೀನಾ ; ಅಜಿತ ದೋವಲ್ ಭೇಟಿ

ನವದೆಹಲಿ: ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ ಅವರು ಸೋಮವಾರ ಸಂಜೆ ದೆಹಲಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ. ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದರು. ಕೆಲವು ಗಂಟೆಗಳ ಹಿಂದೆ 76 ವರ್ಷ ವಯಸ್ಸಿನ ಹಾಗೂ ಐದು ಬಾರಿ ಬಾಂಗ್ಲಾದೇಶದ … Continued

ನೀತಿ ಆಯೋಗದ ಸಭೆಗೆ ವಿಪಕ್ಷಗಳ 7 ಸಿಎಂಗಳು ಗೈರು : ಅಸಮಾಧಾನದಿಂದ ಅರ್ಧದಲ್ಲೇ ಎದ್ದು ಹೋದ ಮಮತಾ ಬ್ಯಾನರ್ಜಿ

ನವದೆಹಲಿ : ಇಂದಿನಿಂದ(ಜುಲೈ 27) ನಡೆಯುತ್ತಿರುವ ನೀತಿ ಆಯೋಗದ ೯ನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ತಾರತಮ್ಯದ ಆರೋಪ ಹೊರಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಭೆಯಿಂದ ಅರ್ಧದಲ್ಲೇ ಎದ್ದು ಹೊರಬಂದಿದ್ದಾರೆ. ನನಗೆ ಮಾತನಾಡಲು ಸಮಯ ನೀಡಲಿಲ್ಲ ಹಾಗೂ ನನ್ನ ಮೈಕ್ ಅನ್ನು ಆಫ್ ಮಾಡಲಾಯಿತು ಎಂದು ಸಭೆಯಿಂದ ಹೊರಬಂದ ನಂತರ … Continued

ಅಸಾದುದ್ದೀನ್ ಒವೈಸಿ ಮನೆಗೆ ಕಪ್ಪು ಮಸಿ ಎರಚಿದ ದುಷ್ಕರ್ಮಿಗಳು; ಇದಕ್ಕೆ ʼಹೆದರಲ್ಲ’ ಎಂದ ಸಂಸದ

ನವದೆಹಲಿ:ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿಯ ಅಧಿಕೃತ ನಿವಾಸವನ್ನು ಗುರುವಾರ (ಜೂನ್ 27) ಕೆಲವು ಅಪರಿಚಿತ ದುಷ್ಕರ್ಮಿಗಳು ಕಪ್ಪು ಶಾಯಿ ಎರಚಿದ್ದಾರೆ. ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಎಕ್ಸ್ ಪೋಸ್ಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. .ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ‘ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗಿದ್ದಕ್ಕಾಗಿ ಎಐಎಂಐಎಂ ಸಂಸದ ಕಳೆದ ಕೆಲವು … Continued

ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ನವದೆಹಲಿ: 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ. ಎರಡು ದಿನಗಳ ಕಾಲ ಕೇಜ್ರಿವಾಲ ಮತ್ತು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದ ನಂತರ ರಜಾಕಾಲದ ನ್ಯಾಯಾಧೀಶರಾದ ನಿಯಾಯ್ ಬಿಂದು ಅವರು ಜಾಮೀನು ನೀಡಿ … Continued

ದೆಹಲಿ ಮುಂಗೇಶಪುರದಲ್ಲಿ ದಾಖಲೆ ಮಟ್ಟದ 52.9 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲು ; ಇದು ಸೆನ್ಸರ್‌ ದೋಷದಿಂದ ಆಗಿದೆ ಎಂದ ಐಎಂಡಿ

ನವದೆಹಲಿ: ದೆಹಲಿಯು ತೀವ್ರತರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಬುಧವಾರ ಮಾಧ್ಯಮ ವರದಿಗಳು ಮುಂಗೇಶಪುರದಲ್ಲಿ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ಮಾಡಿವೆ. ಇದು ನಗರದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಆದಾಗ್ಯೂ, ಭಾರತೀಯ ಹವಾಮಾನ ಇಲಾಖೆ (IMD), ಸೆನ್ಸರ್‌ನಲ್ಲಿನ ದೋಷ ಅಥವಾ ಸ್ಥಳೀಯ ಅಂಶದಲ್ಲಿನ ದೋಷ” ಎಂದು ನಂತರ ಸ್ಪಷ್ಟಪಡಿಸಿದೆ. ಹಾಗೂ ಡೇಟಾ ಮತ್ತು … Continued

ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡಲು 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣಿಸಿದ್ದ ಈ ಮಹಾಕಳ್ಳ…!

ನವದೆಹಲಿ: ವಿವಿಧ ವಿಮಾನಗಳಲ್ಲಿ ಸಹ ಪ್ರಯಾಣಿಕರ ಬ್ಯಾಗ್‌ಗಳಿಂದ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈತ ವಿಮಾನದಲ್ಲಿ ಕದ್ದ ಹಣದಿಂದ ಕೇಂದ್ರ ದೆಹಲಿಯಲ್ಲಿ ಹೋಟೆಲ್ ಅನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದ ಎಂಬ ವರದಿಯೂ ಇದೆ…! ಆರೋಪಿ ರಾಜೇಶ ಕಪೂರ್ ಎಂಬಾತ … Continued

ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ನವದೆಹಲಿ : ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ ಮಹೀಂದ್ರಾ ಅವರು ರಸ್ತೆ ಬದಿಯ ಸ್ಟಾಲ್‌ನಲ್ಲಿ ರೋಲ್‌ಗಳನ್ನು ಮಾರಾಟ ಮಾಡುತ್ತಿರುವ 10 ವರ್ಷದ ಬಾಲಕನ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ವೈರಲ್ ವೀಡಿಯೊದಲ್ಲಿ ಕಂಡುಬರುವ 10 ವರ್ಷದ ಬಾಲಕ ಜಸ್‌ಪ್ರೀತ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮಿದುಳಿನ ಕ್ಷಯರೋಗದಿಂದ ಕೆಲವು ದಿನಗಳ ಹಿಂದೆ ತಂದೆ ಮರಣಹೊಂದಿದ ನಂತರ ಈ … Continued