ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ಸುಪ್ರೀಂಕೋರ್ಟ್ ತೀರ್ಪಿನ ವರೆಗೆ ಕಾಯಲು ನಿರ್ಧಾರ- ಸಿಎಂಗಳಾದ ಬೊಮ್ಮಾಯಿ-ಶಿಂಧೆ ಭೇಟಿ ನಂತರ ಅಮಿತ್ ಶಾ ಹೇಳಿಕೆ

ನವದೆಹಲಿ; ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ಸಮಸ್ಯೆಯ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಾಲ್ಗೊಂಡಿದ್ದರು.. ಸಭೆಯ … Continued

ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇರಾನ್ ಫುಟ್ಬಾಲ್ ಆಟಗಾರನಿಗೆ ಮರಣದಂಡನೆ ಶಿಕ್ಷೆಯ ಭೀತಿ

ಟೆಹ್ರಾನ್‌: ಇರಾನ್‌ನಲ್ಲಿ ರಾಷ್ಟ್ರವ್ಯಾಪಿ ನಡೆದ ಹಿಜಾಬ್‌ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇರಾನ್ ವೃತ್ತಿಪರ ಫುಟ್ಬಾಲ್‌ ಆಟಗಾರ ಮರಣದಂಡನೆ ಭೀತಿ  ಎದುರಿಸುತ್ತಿದ್ದಾರೆ. ನವೆಂಬರ್‌ನಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ 26 ವರ್ಷದ ಅಮೀರ್ ನಸ್ರ್-ಅಜಾದಾನಿ ಅವರನ್ನು ಬಂಧಿಸಲಾಯಿತು ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್‌ನ ಸಾವಿಗೆ ಸಂಬಂಧಿಸಿದಂತೆ ಅವರ ಮೇಲೆ ಆರೋಪ ಹೊರಿಸಲಾಯಿತು ಎಂದು ನ್ಯೂಸ್‌ವೀಕ್ ವರದಿ … Continued

ಭಾರತ-ಚೀನಾ ತವಾಂಗ್ ಎಲ್‌ಎಸಿ ಉದ್ವಿಗ್ನತೆ ನಡುವೆ ಭಾರತೀಯ ಸೈನಿಕರು ಚೀನೀ ಸೈನಿಕರನ್ನು ಹಿಮ್ಮೆಟ್ಟಿಸುವ 2021ರ ವೀಡಿಯೊ ವೈರಲ್

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್ 9 ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯನ್ನು ಸರ್ಕಾರ ಖಚಿತಪಡಿಸಿದ ಒಂದು ದಿನದ ನಂತರ, ಭಾರತ ಮತ್ತು ಚೀನಾ ಸೈನಿಕರ ಹಿಂದಿನ ಘರ್ಷಣೆಯ ವೀಡಿಯೊ ಹೊರಬಿದ್ದಿದೆ. ಅರುಣಾಚಲ ಪ್ರದೇಶದ ತವಾಂಗ್‌ನ ಅದೇ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಘರ್ಷಣೆಯನ್ನು ಈ ವೀಡಿಯೊ ತೋರಿಸುತ್ತದೆ. ಈ ವೀಡಿಯೊ … Continued

ಜಿಪಂ, ತಾಪಂ ಕ್ಷೇತ್ರ ಮರುವಿಂಗಡಣೆಗೆ ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ, 5 ಲಕ್ಷ ರೂ. ದಂಡ

ಬೆಂಗಳೂರು; ಕ್ಷೇತ್ರಗಳ ಮರು ವಿಗಂಡಣೆ ಮತ್ತು ಮೀಸಲು ನಿಗದಿಗೆ ಪದೇ ಪದೇ ಕಾಲಾವಕಾಶ ಕೋರಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಚುನಾವಣೆಗೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಛೀಮಾರಿ ಹಾಕಿರುವ ಹೈಕೋರ್ಟ್ ಸರ್ಕಾರಕ್ಕೆ 5 ಲಕ್ಷ ರೂ.ಗಳ ದಂಡ ವಿಧಿಸಿದೆ. ಆ ಮೂಲಕ ಸಾಂವಿಧಾನ ಬದ್ಧವಾಗಿ ಚುನಾವಣೆ ನಡೆಸದೆ ನೆಪಗಳನ್ನು … Continued

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಎಲೋನ್ ಮಸ್ಕ್ : ಈಗ ವಿಶ್ವದ ನಂ.1 ಶ್ರೀಮಂತ ಯಾರೆಂಬುದು ಇಲ್ಲಿದೆ

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಉಳಿದಿಲ್ಲ. ಫೋರ್ಬ್ಸ್ ಪ್ರಕಾರ ಸೋಮವಾರದ ಕೊನೆಯಲ್ಲಿ ಎಲ್‌ವಿಎಂಎಚ್‌ (LVMH) ಅಧ್ಯಕ್ಷ ಮತ್ತು ಸಿಇಒ (CEO) ಬರ್ನಾರ್ಡ್ ಅರ್ನಾಲ್ಟ್‌ ಅವರು ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಟೆಸ್ಲಾ ಷೇರುಗಳು ಸೋಮವಾರ ಸುಮಾರು 6.3% ರಷ್ಟು ಕುಸಿತ ಕಂಡವು ಮತ್ತು ಮಸ್ಕ್‌ನ $ … Continued

ಚೀನಾದ ಮಾನವರಹಿತ ವೈಮಾನಿಕ ವಾಹನಗಳನ್ನು ಬೆದರಿಸಿದ ಸುಖೋಯ್-30MKI ಫೈಟರ್ ಜೆಟ್; ಇದೆಂದರೆ ಶತ್ರುಗಳಿಗೆ ದುಃಸ್ವಪ್ನ ಯಾಕೆ..? ಮಾಹಿತಿ ಇಲ್ಲಿದೆ

ಹಲವು ದಿನಗಳಿಂದ ಚೀನಾ ಅರುಣಾಚಲದ ತವಾಂಗ್ ನಲ್ಲಿ ಭಾರತೀಯ ಸೈನಿಕರನ್ನು ಕೆರಳಿಸುವ ಕೆಲಸ ಮಾಡುತ್ತಿತ್ತು. ಗಡಿಯಾಚೆಯಿಂದ ಡ್ರೋನ್‌ಗಳನ್ನು ಒಳಗೆ ಕಳುಹಿಸುತ್ತಿತ್ತು. ಇದಕ್ಕೆ ಉತ್ತರಿಸಲು, ಭಾರತವು ತೇಜ್‌ಪುರ ವಾಯುಪಡೆ ನಿಲ್ದಾಣದಿಂದ ಸುಖೋಯ್-30MKI ಫೈಟರ್ ಜೆಟ್‌ಗಳನ್ನು ಬಳಸಿತು. ಭಾರತೀಯ ವಾಯುಪಡೆಯ (ಐಎಎಫ್) ಈ ಯುದ್ಧ ವಿಮಾನಗಳು ಗಡಿ ಪ್ರದೇಶದ ಆಗಸದಲ್ಲಿ ಹಾರಾಟ ಮಾಡಿದ ಕೂಡಲೇ ಚೀನಿಯರು ತಮ್ಮ ಡ್ರೋನ್‌ಗಳನ್ನು … Continued

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬೇಡಿಕೆ: ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವ ಕುರಿತು ರಾಜ್ಯ ಸರ್ಕಾರವು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸಮಿತಿಗೆ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷರಾದರೆ ಸಚಿವರಾದ ಗೋವಿಂದ ಎಂ.ಕಾರಜೋಳ, ಎಸ್.ಅಂಗಾರ, ಪ್ರಭು ಚವ್ಹಾಣ ಹಾಗೂ ಡಾ.ಕೆ.ಸುಧಾಕರ ಅವರು ಸದಸ್ಯರಾಗಿದ್ದಾರೆ. ಈ ಸಮಿತಿಯು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಕುರಿತು … Continued

ರಾಜೀವ್ ಗಾಂಧಿ ಫೌಂಡೇಶನ್ ಜಾಕಿರ್ ನಾಯ್ಕ್‌, ಚೀನಾದಿಂದ ಅನುದಾನ ತೆಗೆದುಕೊಂಡಿದೆ : ಅಮಿತ್ ಶಾ

ನವದೆಹಲಿ: ರಾಜೀವ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಚೀನಾ ರಾಯಭಾರ ಕಚೇರಿ ಮತ್ತು ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್‌ ಅವರಿಂದ ಅನುದಾನ ಪಡೆದಿದೆ ಮತ್ತು ಆದ್ದರಿಂದ ಅದರ ನೋಂದಣಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ. ಆರ್‌ಜಿಎಫ್‌ನ ಎಫ್‌ಸಿಆರ್‌ಎ (ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ) ರದ್ದತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ತಪ್ಪಿಸಲು ಕಾಂಗ್ರೆಸ್ … Continued

ಐಪಿಎಲ್‌ 2023 ಹರಾಜಿಗೆ 405 ಆಟಗಾರರ ಪಟ್ಟಿ ಪ್ರಕಟ: ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಐಪಿಎಲ್ 2023 ಹರಾಜಿಗೆ ಲಭ್ಯ ಇರುವ 405 ಆಟಗಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಆರಂಭದಲ್ಲಿ 991 ಆಟಗಾರರ ಆರಂಭಿಕ ಪಟ್ಟಿ ಸಿದ್ಧವಾಗಿತ್ತು. ಅದನ್ನು ಈಗ ಅಂತಿಮವಾಗಿ 405 ಆಟಗಾರರಿಗೆ ಇಳಿಸಲಾಗಿದೆ. ಆರಂಭದಲ್ಲಿ, ಒಟ್ಟು 369 ಆಟಗಾರರನ್ನು 10 ತಂಡಗಳು ಶಾರ್ಟ್‌ಲಿಸ್ಟ್ ಮಾಡಿದವು. ನಂತರ ಮೂವತ್ತಾರು ಹೆಚ್ಚುವರಿ ಆಟಗಾರರನ್ನುಸೇರಿಸಲು … Continued

ಅರುಣಾಚಲದಲ್ಲಿ ಭಾರತ-ಚೀನಾ ಘರ್ಷಣೆ: ‘ವಿವಾದಿತ’ ಗಡಿ ದಾಟಿದ ಭಾರತದ ಪಡೆಗಳು, ಚೀನಾ ಸೇನೆಯ ಆರೋಪ

ನವದೆಹಲಿ: ಡಿಸೆಂಬರ್ 9ರಂದು ಭಾರತೀಯ ಪಡೆಗಳು ‘ವಿವಾದಿತ’ ಗಡಿಯನ್ನು ‘ಕಾನೂನುಬಾಹಿರವಾಗಿ’ ದಾಟಿದೆ ಎಂದು ಚೀನಾ ಸೇನೆ ಮಂಗಳವಾರ ಹೇಳಿಕೊಂಡಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಭಾರತದೊಂದಿಗಿನ ಗಡಿಯುದ್ದಕ್ಕೂ ಪರಿಸ್ಥಿತಿ “ಒಟ್ಟಾರೆಯಾಗಿ ಸ್ಥಿರವಾಗಿದೆ” ಎಂದು ಪ್ರತಿಪಾದಿಸಿದ ದಿನದ ನಂತರ ಈ ಹೇಳಿಕೆ ಬಂದಿದೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ವೆಸ್ಟರ್ನ್ ಥಿಯೇಟರ್‌ನ ವಕ್ತಾರ … Continued