ಆನ್‌ಲೈನ್‌ ಗೇಮ್‌ ನಿಷೇಧ ಕಾನೂನು ರದ್ದು: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಮೇಲ್ಮನವಿ

ನವದೆಹಲಿ: ಆನ್‌ಲೈನ್ ಗೇಮ್‌ ಸೇರಿದಂತೆ ಸ್ಕಿಲ್‌ ಗೇಮ್‌ಗಳನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಕಾನೂನನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಆನ್‌ಲೈನ್ ಗೇಮಿಂಗ್ ನಿಷೇಧಿಸಿದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ- 2021ರ ಕೆಲವು ನಿಯಮಾವಳಿಗಳನ್ನು ಹೈಕೋರ್ಟ್ ಕಳೆದ ಫೆಬ್ರವರಿ … Continued

ಬೆಂಗಳೂರಿಂದ ಮೈಸೂರಿಗೆ ಹೋಗಲು ಇನ್ಮುಂದೆ 75 ನಿಮಿಷ ಸಾಕು: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ

ಬೆಂಗಳೂರು: ಬೆಂಗಳೂರು-ನಿಡಘಟ್ಟ-ಮೈಸೂರು ಎಕ್ಸ್‌ಪ್ರೆಸ್‌ ವೇ ಪೂರ್ಣಗೊಂಡರೆ, ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಈಗಿರುವ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆಯಾಗಲಿದೆ…! ಒಟ್ಟು 117 ಕಿಮೀ ಉದ್ದ ಹಾಗೂ 10 ಪಥಗಳ ಈ ಹೆದ್ದಾರಿ ಅಕ್ಟೋಬರ್‌ ಹೊತ್ತಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾಹಿತಿ ಹಂಚಿಕೊಂಡಿದ್ದಾರೆ. … Continued

ಭಾರತೀಯ ಮೂಲದ ರಾಜ್ ಸುಬ್ರಮಣ್ಯಂ 6 ಲಕ್ಷ ನೌಕರರನ್ನು ಹೊಂದಿರುವ ಜಾಗತಿಕ ಕೊರಿಯರ್ ಡೆಲಿವರಿ ದೈತ್ಯ ಫೆಡ್‌ಎಕ್ಸ್ (FedEx )ಕಂಪನಿ ಹೊಸ ಸಿಇಒ

ವಾಷಿಂಗ್ಟನ್: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಕಂಪನಿ ಸೋಮವಾರ ಮಾಡಿದ ಪ್ರಕಟಣೆಯ ಪ್ರಕಾರ ಭಾರತೀಯ ಅಮೆರಿಕನ್ ರಾಜ್ ಸುಬ್ರಮಣ್ಯಂ ಅವರು ಫೆಡೆಕ್ಸ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ರಾಜ್ ಸುಬ್ರಮಣ್ಯಂ ಅವರು ಜೂನ್ 1 ರಂದು ಈ ಸ್ಥಾನದಿಂದ ಕೆಳಗಿಳಿಯುವ ಅಧ್ಯಕ್ಷ ಮತ್ತು ಸಿಇಒ (CEO) ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರನ್ನು ಬದಲಾಯಿಸಲಿದ್ದಾರೆ. ಅವರು ಈಗ … Continued

ಪಾಕಿಸ್ತಾನ: ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು, ಸೋಮವಾರ ಪಾಕ್ ಸಂಸತ್‍ನಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಅವಿಶ್ವಾಸ ನಿರ್ಣಯಕ್ಕೆ 161 ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಎರಡೂ ಡಜನ್‍ಗೂ ಹೆಚ್ಚು ಸಂಸದರ ಬಂಡಾಯ ಎದ್ದು ವಿಪಕ್ಷಗಳ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. … Continued

ಫೋನ್‌ ಕರೆ ಮಾಡಿದಾಗ ಕೇಳುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಸ್ಥಗಿತಕ್ಕೆ ಸರ್ಕಾರದ ಚಿಂತನೆ: ವರದಿ

ನವದೆಹಲಿ: ಯಾರಿಗಾದರೂ ಫೋನ್‌ ಕರೆ ಮಾಡಿದಾಗ ಕೇಳಿಬರುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಶೀಘ್ರದಲ್ಲೆ ಸ್ಥಗಿತಗೊಳ್ಳಲಿದೆ. ಸುಮಾರು ಎರಡು ವರ್ಷಗಳ ಕಾಲ ಮೊಬೈಲ್ʼನಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದ ಕಾಲರ್ ಟ್ಯೂನ್ ಅನ್ನು ತೆಗೆದು ಹಾಕಲು ಸರ್ಕಾರ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಫೋನ್‌ಗಳಲ್ಲಿ ಕೊರೊನಾ ಕಾಲರ್ ಟ್ಯೂನ್‌ಗಳನ್ನ … Continued

ಅಫ್ಘಾನಿಸ್ತಾನದಲ್ಲಿ ಮನೋರಂಜನಾ ಪಾರ್ಕ್‌ಗಳಿಗೆ ಮಹಿಳೆಯರು-ಪುರುಷರು ಒಂದೇ ದಿನ ಹೋಗುವಂತಿಲ್ಲ: ತಾಲಿಬಾನಿಗಳಿಂದ ಹೊಸ ಕಟ್ಟಳೆ..!

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತ ಮಹಿಳೆಯರಿಗೆ ಒಂದಾದ ಮೇಲೊಂದರಂತೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಈಗ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ತಾಲಿಬಾನ್‌ಗಳು ಲಿಂಗ ಪ್ರತ್ಯೇಕತೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಒಂದೇ ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪುರುಷರಿಗೆ ಬುಧವಾರದಿಂದ ಶನಿವಾರದ ವರೆಗೆ ಉದ್ಯಾನವನಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ. ವಾರದ ಉಳಿದ … Continued

ಸರ್ಕಾರಿ ನೌಕರರಿಗೆ ಮುಷ್ಕರದಲ್ಲಿ ಭಾಗವಹಿಸುವ ಹಕ್ಕಿಲ್ಲ: ಕೇರಳ ಹೈಕೋರ್ಟ್

ತಿರುವನಂತಪುರಂ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್‌ನಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರ್ಬಂಧ ವಿಧಿಸಿದೆ. ಈ ಬಗ್ಗೆ ಕೂಡಲೇ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರಿ ನೌಕರರು ಕಾರ್ಮಿಕರ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅವರು ಮುಷ್ಕರದಲ್ಲಿ ಭಾಗವಹಿಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕಾರ್ಯಕರ್ತ … Continued

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್..!

ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಮಾಹಿತಿ ಹೇಳಿದ್ದಾರೆ. ಹಾಸನದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್​.ಡಿ.ರೇವಣ್ಣ, ನಮ್ಮ ತಾಯಿಗೆ ಐಟಿ ಅಧಿಕಾರಿಗಳಿಂದ ನೋಟಿಸ್​ ಬಂದಿದೆ. . ಆಸ್ತಿ ವಿವರದ ಮಾಹಿತಿ ಕೋರಿದ್ದಾರೆ ಎಂದು ತಿಳಿಸಿದ್ದಾರೆ. ಒಬ್ಬ ಮಾಜಿ … Continued

ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ನವದೆಹಲಿ: ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಮತ್ತು ಕಾಲೇಜಿನಲ್ಲಿ ಹಿಜಾಬ್‌ಗೆ ಅನುಮತಿ ನೀಡುವ ಅಧಿಕಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ಒದಗಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಭೂತ ಹಕ್ಕುಗಳನ್ನು ಪ್ರತಿಪಾದಿಸಿರುವ ಅಗತ್ಯ … Continued

ಕೇವಲ 1 ರೂ. ನಾಣ್ಯಗಳಲ್ಲೇ 2.6 ಲಕ್ಷ ರೂ. ಪಾವತಿಸಿ ಬೈಕ್​ ಖರೀದಿಸಿದ ಯುವಕ..! ಹಣ ಎಣಿಸಿ ಎಣಿಸಿ ಶೋರೂಂ ಸಿಬ್ಬಂದಿ ಸುಸ್ತು-ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ ಕೇವಲ ರೂಪಾಯಿ ನಾಣ್ಯಗಳನ್ನೇ ನೀಡಿ ಒಟ್ಟು ಹಣ ಪಾವತಿಸಿ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್​ ಖರೀದಿ ಮಾಡಿದ್ದಾನೆ…! ಅಚ್ಚರಿಯೆಂದರೆ, ಶೋರೂಮಿನವರಿಗೆ ಎಲ್ಲ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ತಾಸು ಸಮಯ ಹಿಡಿದಿದೆ. ಬೈಕ್​ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಮೂರು ವರ್ಷಗಳಿಂದಲೂ ಭೂಪತಿ … Continued