ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್​ ಖಾನ್​ ಅಪಹರಿಸಿ, ನಂತರ ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್ ಆರೋಪ

ಮುಂಬೈ: ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರ ಡ್ರಗ್ಸ್​ ಪ್ರಕರಣದಲ್ಲಿ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಅವರ ಮೇಲೆ ಆರೋಪಗಳು ಮೇಲೆ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ ಮಹಾರಾಷ್ಟ್ರ ಸಚಿವ ನವಾಬ್‌ ಮಲ್ಲಿಕ್‌. ಆರೋಪಗಳ ನಂತರ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೇಡೆಗೆ ಈ ಪ್ರಕರಣದಿಂದ ಹೊರಗುಳಿಯುವಂತೆ ಆದೇಶಿಸಲಾಗಿದೆ. ಈಗ ಸಚಿವ ನವಾಬ್​ ಮಲಿಕ್​ … Continued

ವಿಶ್ವ ನಾಯಕರ ಅನುಮೋದನೆ ರೇಟಿಂಗ್ಸ್‌: ಪ್ರಧಾನಿ ಮೋದಿಗೆ ಮೊದಲ ಸ್ಥಾನ, 70%ರಷ್ಟು ಅನುಮೋದನೆ, ಮಾಹಿತಿ ಇಲ್ಲಿದೆ…

ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿರುವ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿ ಹೊರಹೊಮ್ಮಿದ್ದಾರೆ. 70 %ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ ಭಾರತದ ಪ್ರಧಾನಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ ಪ್ರಪಂಚದಾದ್ಯಂತದ ವಯಸ್ಕರಲ್ಲಿ ಗರಿಷ್ಠ ಅನುಮೋದನೆಯನ್ನು ಪಡೆದಿದ್ದಾರೆ ಮತ್ತು ಶೇಕಡಾ 70 ರಷ್ಟು ಅನುಮೋದನೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ 2019 ರಲ್ಲಿ ಡೇಟಾವನ್ನು … Continued

ರಮಣಶ್ರೀ ಆಸ್ಪತ್ರೆ ವಿರುದ್ಧ ಪುನೀತ’ ಅಭಿಮಾನಿಗಳ ಆರೋಪ : ವೈದ್ಯರಿಗೆ ರಕ್ಷಣೆ ಕೋರಿ ಸಿಎಂ ಬೊಮ್ಮಾಯಿಗೆ ಫನಾ ಪತ್ರ

ಬೆಂಗಳೂರು: ಖ್ಯಾತ ನಟ ನಟ ಪುನೀತ್ ರಾಜಕುಮಾರ್ ಸಾವಿನ ಕುರಿತು ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆ ರಾಜ್ಯ ಖಾಸಗಿ ಆಸ್ಪತ್ರೆಗಳ ಒಕ್ಕೂಟವು ( ಫನಾ) ಡಾ. ರಮಣರಾವ್ ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ. ರಮಣರಾವ್ ಅವರ ಕ್ಲಿನಿಕ್​ಗೆ ಪುನೀತರಾಜ್​ಕುಮಾರ್ … Continued

12 ಸೆಂಮೀ ಉದ್ದದ ಬಾಲವಿರುವ ಮಗು ಜನನ, ಬೆರಗಾದ ವೈದ್ಯರು..!

ಬ್ರೆಜಿಲ್‌ನಲ್ಲಿ ಜನಿಸಿದ ಗಂಡು ಮಗುವಿಗೆ 12 ಸೆಂಮೀ ಉದ್ದದ ಬಾಲದ ತರಹವಿದ್ದು ತುದಿಯಲ್ಲಿ ಚೆಂಡಿನ ಆಕಾರವಿದೆ. ಇದು ‘ನಿಜವಾದ ಮಾನವ ಬಾಲ’ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ನಾಲ್ಕರಿಂದ ಎಂಟು ವಾರಗಳ ಗರ್ಭಾವಸ್ಥೆಯ ಹಂತದಲ್ಲಿ, ಗರ್ಭದಲ್ಲಿರುವಾಗ ಮಾನವ ಶಿಶುಗಳು ಭ್ರೂಣದ ಬಾಲ ಬೆಳೆಯುತ್ತವೆ ಎಂಬುದು ಸತ್ಯ. ಆದರೆ ಬೆಳವಣಿಗೆಯು ಅಂತಿಮವಾಗಿ ಬಾಲ ಮೂಳೆಯ ರಚನೆಗೆ ಕಾರಣವಾಗುತ್ತದೆ. ಆದರೆ … Continued

ದೆಹಲಿಯ ಗಾಳಿ ಸೇವನೆ ಸಿಗರೇಟ್ ಸೇದುವುದಕ್ಕಿಂತ ಹೆಚ್ಚು ಹಾನಿಕಾರಕ; ಮಾಲಿನ್ಯದಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು: ಡಾ ರಣದೀಪ್ ಗುಲೇರಿಯಾ

ನವದೆಹಲಿ: ದೆಹಲಿಯ ಗಾಳಿಯು ಸಿಗರೇಟ್ ಹೊಗೆಗಿಂತ ಹೆಚ್ಚು ಹಾನಿಕಾರಕವಾಗಿದೆ ಮತ್ತು ಹೆಚ್ಚಿನ ಮಾಲಿನ್ಯದ ಮಟ್ಟದಿಂದ ದೆಹಲಿ ನಿವಾಸಿಗಳ ಜೀವಿತಾವಧಿಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ (All India Institute of Medical Sciences) ನಿರ್ದೇಶಕ ಹಾಗೂ ಶ್ವಾಸಕೋಶ ತಜ್ಞ ರಣದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿಯ ನಿವಾಸಿಗಳ ಜೀವಿತಾವಧಿ ಗಮನಾರ್ಹವಾಗಿ … Continued

ಸಿಯೆರಾ ಲಿಯೋನ್‌ನಲ್ಲಿ ತೈಲ ಟ್ಯಾಂಕರ್ ಸ್ಫೋಟ: ಕನಿಷ್ಠ 92 ಮಂದಿ ಸಾವು, ಹಲವರಿಗೆ ಗಾಯ

ಫ್ರೀಟೌನ್‌ (ಸಿಯೆರಾ ಲಿಯೋನ್‌): ಸಿಯೆರಾ ಲಿಯೋನ್‌ ರಾಜಧಾನಿ ಬಳಿ ತೈಲ ಟ್ಯಾಂಕರ್ ಸ್ಫೋಟಗೊಂಡಿದ್ದು, ಕನಿಷ್ಠ 92 ಜನರು ಮೃತಪಟ್ಟಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಫ್ರೀಟೌನ್‌ನ ಪೂರ್ವದ ಉಪನಗರವಾದ ವೆಲ್ಲಿಂಗ್‌ಟನ್‌ನಲ್ಲಿ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದ ನಂತರ ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿದೆ. ಕನ್ನಾಟ್ ಆಸ್ಪತ್ರೆಯ ಶವಾಗಾರವು ಶನಿವಾರ … Continued

ನ.30ರ ವರೆಗೆ ಮಾತ್ರ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಉಚಿತ ಪಡಿತರ

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ನವೆಂಬರ್ 30ರ ನಂತರ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ ನಂತರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. … Continued

ನಾನು ಕೇದಾರನಾಥದ​ ಆದಿ ಶಂಕರಾಚಾರ್ಯರ ಮೂರ್ತಿ ನೋಡಬೇಕು, ನಾನು ಶೃಂಗೇರಿ ಮಠದ ಭಕ್ತ ; ಪ್ರಶಂಸಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ನನಗೆ ನೀವು (ಪ್ರಧಾನ ಮಂತ್ರಿ ನರೇಂದ್ರ ಮೋದಿ) ಕೇದಾರನಾಥದಲ್ಲಿ ಉದ್ಘಾಟಿಸಿದ ಶ್ರೀ ಆದಿಶಂಕರಾಚಾರ್ಯರ ಕಪ್ಪು ಕಲ್ಲಿನ ಸುಂದರ ಮೂರ್ತಿಯನ್ನು ನೋಡಬೇಕು ಅನಿಸಿದೆ. ಈ ಪವಿತ್ರ ಕ್ಷೇತ್ರವನ್ನು ಪುನರ್​ನಿರ್ಮಾಣ ಮಾಡುವಲ್ಲಿ ನೀವು ಕೈಗೊಂಡ ಕಾರ್ಯಗಳಿಗಾಗಿ ನಾನು ನಿಮಗೆ ಶುಭಾಶಯ ಕೋರುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಪ್ರಶಂಸಿಸಿ ಪ್ರಧಾನಿ ಮೋದಿಗೆ … Continued

ಅಹ್ಮದ್‌ನಗರ ಆಸ್ಪತ್ರೆಯ ಐಸಿಯುನಲ್ಲಿ ಭಾರಿ ಬೆಂಕಿ: 10 ಕೋವಿಡ್ ರೋಗಿಗಳು ಸಾವು, ಹಲವರಿಗೆ ಗಾಯ

ಅಹ್ಮದ್​ನಗರ: ಮಹಾರಾಷ್ಟ್ರದ ಅಹ್ಮದ್‌ನಗರದ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 10 ಕೋವಿಡ್‌-19 ರೋಗಿಗಳು – ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದೀಗ ಬೆಂಕಿಯನ್ನು ನಂದಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ತಿಳಿಸಿದ್ದಾರೆ. 25 ಜನರನ್ನು ದಾಖಲಿಸಿದ … Continued

ಗೋವರ್ಧನ ಪೂಜೆ ವೇಳೆ ‘ಸೋತ್‌ ಪ್ರಹಾರ್ʼ ಭಾಗವಾಗಿ ಕೈಗೆ ಅನೇಕ ಸಲ ಚಾಟಿ ಏಟು ತಿಂದರೂ ನಗುತ್ತಲೇ ನಿಂತ ಛತ್ತೀಸ್‌ಗಢ ಸಿಎಂ…! ವೀಕ್ಷಿಸಿ

ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ದೀಪಾವಳಿಯ ಗೋವರ್ಧನ ಪೂಜೆಯ ಸಂದರ್ಭದಲ್ಲಿ ‘ಸೋತ ಪ್ರಹಾರ್’ ಎಂದು ಕರೆಯಲ್ಪಡುವ ಆಚರಣೆಯ ಭಾಗವಾಗಿ ದುರ್ಗ್‌ನಲ್ಲಿ ತನ್ನ ಕೈಗೆ ಛಾಟಿಯಿಂದ ಹೊಡೆಸಿಕೊಳ್ಳುತ್ತಿರುವ ವಿಡಿಯೀ ಈಗ ವೈರಲ್‌ ಆಗಿದೆ. ಮುಖ್ಯಮಂತ್ರಿ ಬಘೇಲ್‌ ಅವರು ತಮ್ಮ ಬಲಗೈ ಚಾಚಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮುಷ್ಟಿ ಬಿಗಿ ಹಿಡಿದ ಬಾಘೇಲ್‌ ಬಲಗೈಗೆ ವ್ಯಕ್ತಿಯೊಬ್ಬ … Continued