ವಯನಾಡು ಭೂ ಕುಸಿತ ಸ್ಥಳಕ್ಕೆ ತೆರಳುತ್ತಿದ್ದ ಕೇರಳ ಆರೋಗ್ಯ ಸಚಿವರ ಕಾರು ಅಪಘಾತ

ವಯನಾಡು : ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ವಾಹನ ಮಲಪ್ಪುರಂ ಜಿಲ್ಲೆಯ ಮಂಜೇರಿ ಬಳಿ ಅಪಘಾತಕ್ಕೀಡಾಗಿದೆ. ಸಚಿವರು ಭೂಕುಸಿತದಿಂದ ತತ್ತರಿಸಿರುವ ವಯನಾಡ್‌ಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಸಚಿವ ವೀನಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮತ್ತು … Continued

ವಯನಾಡು ಭೂಕುಸಿತ ದುರಂತ : ಸಾವಿನ ಸಂಖ್ಯೆ 123 ಕ್ಕೆ ಏರಿಕೆ

ವಯನಾಡು : ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ವಿಕೋಪಗಳಲ್ಲಿ ಸಾವಿನ ಸಂಖ್ಯೆ 123 ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಯನಾಡಿನಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭಾರೀ ಭೂಕುಸಿತದಲ್ಲಿ 128 ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಇದುವರೆಗೆ 123 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. … Continued

ಕೇರಳ | ವಯನಾಡ್ ಭೂ ಕುಸಿತ ದುರಂತ : ಸಾವಿನ ಸಂಖ್ಯೆ 93ಕ್ಕೆ ಏರಿಕೆ, ನೂರಾರು ಮಂದಿ ಸಿಲುಕಿರುವ ಶಂಕೆ ; ಎಂಟು ಜಿಲ್ಲೆಗಳಿಗೆ ರೆಡ್ ಅಲರ್ಟ್

ವಯನಾಡು : ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 93ಕ್ಕೆ ಏರಿದೆ. 116 ಮಂದಿ ಗಾಯಗೊಂಡಿದ್ದಾರೆ ಮತ್ತು ಇನ್ನೂ ನೂರಾರು ಜನರು ಸಿಲುಕಿಕೊಂಡಿದ್ದಾರೆ ಎಂಬ ಆತಂಕವಿದೆ. ಜುಲೈ 30 ಮತ್ತು 31 ರಂದು ರಾಜ್ಯಾದ್ಯಂತ  ಎರಡು ದಿನಗಳ ಶೋಕಾಚರಣೆಯನ್ನು … Continued

ಕೇರಳದಲ್ಲಿ ನಿಫಾ ಸೋಂಕಿತ ಪ್ರಕರಣ ಪತ್ತೆ

ತಿರುವನಂತಪುರಂ: ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ನಿಫಾ ವೈರಸ್ ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಚಾರ್ಜ್ ಪ್ರತಿಕ್ರಿಯೆ ನೀಡಿದ್ದು, 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ … Continued

ಕೇರಳದಲ್ಲಿ ಅಪರೂಪದ ‘ಮಿದುಳು ತಿನ್ನುವ ಅಮೀಬಾ’ ಸೋಂಕಿನ 4ನೇ ಪ್ರಕರಣ ಪತ್ತೆ

ಕೋಯಿಕ್ಕೋಡ್: ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ (ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್) ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ 14 ವರ್ಷದ ಬಾಲಕ ಅಮೀಬಾ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜುಲೈ 1ರಂದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಸೋಂಕನ್ನು ಬೇಗನೇ ಪತ್ತೆಹಚ್ಚಿದ ನಂತರ ವಿದೇಶದಿಂದ ತುರ್ತಾಗಿ … Continued

ಕಾಸರಗೋಡು: ಸಂಪೂರ್ಣ ದರ್ಶನ ನೀಡಿದ ಅನಂತಪುರ ದೇವಸ್ಥಾನದ ಮೊಸಳೆ ಮರಿ ಬಬಿಯಾ

ಕಾಸರಗೋಡು : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಬಿಯಾ ಹೆಸರಿನ ಮೊಸಳೆ ಮರಿ ಜೂನ್ 14ರ ಸಂಜೆ ಪ್ರಾಂಗಣದ ಎತ್ತರದ ಜಾಗದಲ್ಲಿ ಭಕ್ತರಿಗೆ ಮೊದಲ ಸಲ ಸಂಪೂರ್ಣ ದರ್ಶನ ನೀಡಿದೆ ಎಂದು ವರದಿಯಾಗಿದೆ. ಈ ದೇವಾಲಯದ ಕೊಳದಲ್ಲಿ ಸುಮಾರು 80 ವರ್ಷಗಳ … Continued

ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’, ಮಾರ್ಕ್ಸ್‌ವಾದಿ ನಾಯಕನನ್ನು ತಮ್ಮ ʼರಾಜಕೀಯ ಗುರುʼ ಎಂದು ಬಣ್ಣಿಸಿದ ಕೇಂದ್ರದ ಬಿಜೆಪಿ ಸಚಿವ..!

ತ್ರಿಶೂರ್ : ಕೇಂದ್ರ ಸಚಿವ ಮತ್ತು ತ್ರಿಶೂರ್ ಸಂಸದ ಹಾಗೂ ನಟ ಸುರೇಶ ಗೋಪಿ ಅವರು ಶನಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ “ಭಾರತದ ಮಾತೆ”‌ ಇದ್ದಂತೆ ಮತ್ತು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ “ಧೈರ್ಯಶಾಲಿ ಆಡಳಿತಗಾರ” ಎಂದು ಬಣ್ಣಿಸಿದ್ದಾರೆ. ಕೇರಳದ  ಮಾರ್ಕ್ಸ್‌ವಾದಿ ಹಿರಿಯ ಇ.ಕೆ. ನಾಯನಾರ್ ತಮ್ಮ “ರಾಜಕೀಯ ಗುರುಗಳು” ಎಂದು … Continued

ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಪಾರ್ಥಿವ ಶರೀರವನ್ನು ಕೊಚ್ಚಿಗೆ ಹೊತ್ತು ತಂದ ವಿಶೇಷ ಐಎಎಫ್ ವಿಮಾನ

ಕೊಚ್ಚಿ : ಕುವೈತ್‌ನಲ್ಲಿ ಬುಧವಾರ (ಜೂನ್ 12) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವಿಗೀಡಾದ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ಐಎಎಫ್ ವಿಮಾನ ಇಂದುಮಶುಕ್ರವಾರ (ಜೂನ್‌ 14) ಕೊಚ್ಚಿಗೆ ಬಂದಿಳಿಯಿತು. ಕುವೈತ್‌ನ ಮಂಗಾಫ್ ಪ್ರದೇಶದ ಕಾರ್ಮಿಕ ವಸತಿ ಸೌಲಭ್ಯದಿಂದ ಮೃತರ ಅವಶೇಷಗಳನ್ನು ತಕ್ಷಣವೇ ಸ್ವದೇಶಕ್ಕೆ ತರಲು ಭಾರತ ಸರ್ಕಾರ ಆಯೋಜಿಸಿದ್ದ ಭಾರತದ ವಾಯು … Continued

ಪ್ರಧಾನಿ ಮೋದಿ ಸಂಪುಟಕ್ಕೆ ಸುರೇಶ ಗೋಪಿ ರಾಜೀನಾಮೆ? ಕೇರಳ ಸಂಸದ ಹೇಳಿದ್ದೇನು..?

ನವದೆಹಲಿ: ಕೇಂದ್ರ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ ಗೋಪಿ ಅವರು ತಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಧ್ಯಮ ವರದಿಯಾಗಿದ್ದನ್ನು ತಳ್ಳಿಹಾಕಿದ್ದಾರೆ ಹಾಗೂ ಅದು ತಪ್ಪು ಸುದ್ದಿ ಎಂದು ಹೇಳಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ತಳ್ಳಿಹಾಕಿರುವ ಸುರೇಶ ಗೋಪಿ, ಸೋಮವಾರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, … Continued

ಬಿಜೆಪಿಯ ಅಚ್ಚರಿಯ ಆಯ್ಕೆ ; ಮೋದಿ 3.0 ಸರ್ಕಾರದಲ್ಲಿ ಮಂತ್ರಿಯಾದ ಬಿಜೆಪಿಯ ಅಲ್ಪಸಂಖ್ಯಾತ ಮುಖ ಈ ಜಾರ್ಜ್ ಕುರಿಯನ್ ಯಾರು..?

ವಕೀಲ ಮತ್ತು ಕೇರಳ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಧಾನ ಕಾರ್ಯದರ್ಶಿಯಾಗಿರುವ ಜಾರ್ಜ್ ಕುರಿಯನ್ ಅವರು, ಅಚ್ಚರಿಯ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ತ್ರಿಶೂರ್ ಸಂಸದ ಸುರೇಶ ಗೋಪಿ ಅವರನ್ನು ಹೊರತುಪಡಿಸಿ ಕೇರಳದಿಂದ ಎರಡನೇ ಸಚಿವರಾಗಿ ಸಚಿವ ಸಂಪುಟ ಸೇರಿದ್ದಾರೆ. ಸಮಾಜವಾದಿಗಳ ಒಂದು ಬಣವು 1980 … Continued