ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಬೆಂಗಳೂರು: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಗುರುವಾರ ಬಿರುಗಾಳಿ ಸಹಿತ ಮಳೆಯಾಗಿದ್ದು, ಸಿಡಲಿಗೆ ಓರ್ವ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಲವೆಡೆ ಜಾನುವಾರುಗಳು ಪ್ರಾಣಕಳೆದುಕೊಂಡಿದೆ. ಅಲ್ಲದೆ, ಗಾಳಿಮಳೆಯಿಂದಾಗಿ ವಿಜಯಪುರ ನಗರದಲ್ಲಿರುವ ಐತಿಹಾಸಿಕ ಮೆಹತರ್ ಮಹಲ್ ಸ್ಮಾರಕಕ್ಕೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಸಂಜೆ ಗುಡುಗು-ಸಿಡಿಲ ಅಬ್ಬರದೊಂದಿಗೆ ಭಾರೀ ಗಾಳಿ ಮಳೆ ಸುರಿದಿದೆ. ವಿಜಯಪುರ ನಗರದಲ್ಲಿರುವ ಐತಿಹಾಸಿಕ ಮೆಹತರ್ ಮಹಲ್ … Continued

ಚುನಾವಣೆ ವೇಳೆಯೇ ಬಿಜೆಪಿಗೆ ಗುಡ್‌ಬೈ ಹೇಳಿದ ಸಂಸದ ಕರಡಿ ಸಂಗಣ್ಣ : ಕಾಂಗ್ರೆಸ್‌ ಸೇರ್ಪಡೆ

ಬೆಂಗಳೂರು : ಕೊಪ್ಪಳದ ಬಿಜೆಪಿ ಸಂಸದರಾಗಿದ್ದ ಕರಡಿ ಸಂಗಣ್ಣ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‌ ನಿರಾಕರಣೆ ಮಾಡಿ ಬಿಜೆಪಿ ಹೊಸಮುಖ ಡಾ. ಬಸವರಾಜ್‌ ಕ್ಯಾವಟರ್‌ ಅವರಿಗೆ ಕೊಪ್ಪಳ ಕ್ಷೇತ್ರದ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಕರಡಿ ಸಂಗಣ್ಣ ಮಂಗಳವಾರ ಬಿಜೆಪಿ ಪ್ರಾಥಮಿ ಸದಸ್ಯತ್ವಕ್ಕೆ ಮತ್ತು ಸಂಸತ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. … Continued

ನಮ್ಮ ಹಿಂದೆ ಓಡಾಡಿದವರೆಲ್ಲ ಈಗ ಮಂತ್ರಿಯಾಗಿ ಧಿಮಾಕಿನಿಂದ ಓಡಾಡುತ್ತಿದ್ದಾರೆ : ಶಾಸಕ ಬಸವರಾಜ ರಾಯರೆಡ್ಡಿ

ಕೊಪ್ಪಳ: ನಮ್ಮ ಹಿಂದೆ ಓಡಾಡಿದವರೆಲ್ಲ ಈಗ ಮಂತ್ರಿಯಾಗಿದ್ದಾರೆ. ಅವರ ಅಪ್ಪಂದಿರ ಜೊತೆ ನಾನು ಕೆಲಸ‌ ಮಾಡಿದವ. ಈಗ ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಜನಸಂರ್ಪಕ ಸಭೆಯಲ್ಲಿ ಮಾತನಾಡಿದ ಅವರು, “ನೀವು ಚಿಂತೆ ಮಾಡುವುದು ಬೇಡ. ಒಮ್ಮೊಮ್ಮೆ ಮಂತ್ರಿ ಆಗಲು … Continued

2 ಬಲ್ಬ್‌‌ ಇರುವ ವೃದ್ಧೆ ಮನೆಗೆ ಬರೋಬ್ಬರಿ 1 ಲಕ್ಷ ರೂ. ಕರೆಂಟ್ ಬಿಲ್ ..!

ಕೊಪ್ಪಳ : ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಗ್ರಾಹರಕಿಗೆ ಹೆಚ್ಚಿನ ವಿದ್ಯುತ್‌ ಬಿಲ್‌ ಬರುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಈಗ ಕೊಪ್ಪಳದಲ್ಲಿ ಶೆಡ್‌ನಲ್ಲಿ ವಾಸವಾಗಿರುವ ವೃದ್ಧೆಗೆ ಬರೋಬ್ಬರಿ 1ಲಕ್ಷ ರೂಪಾಯಿ ಬಿಲ್‌ ಬಂದಿದೆ…! ಬಿಲ್‌ ಕಂಡು ವೃದ್ಧೆ ಕಂಗಾಲಾಗಿದ್ದಾರೆ. ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ … Continued

ಹಳ್ಳದಲ್ಲಿ ಕೊಚ್ಚಿಹೋಗಿದ್ದ‌ ಮೂವರು ಮಹಿಳೆಯರ ಮೃತದೇಹ ಪತ್ತೆ, ಮತ್ತೊಬ್ಬರಿಗೆ ಮುಂದುವರಿದ ಶೋಧ

ಕೊಪ್ಪಳ: ಶನಿವಾರ ರಾತ್ರಿ ಯಲಬುರ್ಗಾ ತಾಲೂಕಿನ ಸಂಕನೂರು ಬಳಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಮಹಿಳೆಯರ ಪೈಕಿ ಮೂವರ ಮೃತದೇಹಗಳು ಭಾನುವಾರ ಬೆಳಿಗ್ಗೆ ಪತ್ತೆಯಾಗಿವೆ. ಅವರು ಹತ್ತಿ ಜೀನ್‌ನಿಂದ ಕೆಲಸ ಮುಗಿಸಿಕೊಂಡು ಶನಿವಾರ ಸಂಜೆ ಗ್ರಾಮಕ್ಕೆ ಮರಳಿ ಬರುವಾಗ ಸಂಕನೂರು ಹಳ್ಳದಲ್ಲಿ ಕೊಚ್ಚಿಹೋಗಿದ್ದರು. ಗ್ರಾಮದ ಗಿರಿಜಾ ಪೊಲೀಸ್‌ ಪಾಟೀಲ (28), ಭುವನೇಶ್ವರಿ ಪೊಲೀಸ್‌ ಪಾಟೀಲ (32) … Continued

ಗಂಗಾವತಿಯ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿಯ ಮೈಬೂಬ್‌ ನಗರದ ನಿವಾಸಿ ಹಾಗೂ ಬಾಳೆಹಣ್ಣಿನ ವ್ಯಾಪಾರಿ ಶಬ್ಬೀರ್‌ ಎಂಬಾತನನ್ನು ಶಿವಮೊಗ್ಗ ಪೊಲೀಸರು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ನಿಷೇಧಿತ ಐಎಸ್‌ ಸಂಘಟನೆ ಜೊತೆ ನಂಟು ಹೊಂದಿದ ಆರೋಪದಲ್ಲಿ ಶಬ್ಬೀರ್‌ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದು, ಶಿವಮೊಗ್ಗದಲ್ಲಿ ಬಂಧನಕ್ಕೆ ಒಳಗಾಗಿರುವ ಯುವಕರ ಜೊತೆ ಈತ ನಂಟು … Continued

ಕೊಪ್ಪಳ ಜಿಲ್ಲೆಯಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ: ಇಬ್ಬರ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗುರುವಾರ ಬೆಳಗ್ಗೆ ಮಾರಾಮಾರಿ ನಡೆದು ಇಬ್ಬರು ಸಾವಿಗೀಡಾದ ಘಟನೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತರನ್ನು ಯಕಪ್ಪ ತಳವಾರ (60) ಮತ್ತು ಬಾಷಾಸಾಬ(22) ಎಂದು ಗುರುತಿಸಲಾಗಿದೆ. ಧರ್ಮಣ್ಣ ಎಂಬವರಿನಿಗೆ ಗಂಭೀರ ಗಾಯವಾಗಿದ್ದು, … Continued

ಮಲಗಿದ್ದವರ ಮೇಲೆ ಗೂಡ್ಸ್‌ ಟೆಂಪೋ ಹರಿಸಿದ ಚಾಲಕ: ಓರ್ವ ಸಾವು

ಕೊಪ್ಪಳ: ತಾಲೂಕಿನ‌ ಐತಿಹಾಸಿಕ ಹುಲಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದವರ ಮೇಲೆ ವಾಹನ ಹರಿದು ಓರ್ವ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬಳ್ಳಾರಿಯ ಸಿರಗುಪ್ಪದ ತಿಪ್ಪಣ್ಣ (75) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕುಕನೂರಿನ ಗಾವರಾಳದ ಹನುಮವ್ವ, ಶಿರಗುಪ್ಪಾದ ಮಲ್ಲವ್ವ ಹಾಗೂ ತುಕಾರಾಂ ಗಾಯಗೊಂಡಿದ್ದಾರೆ. ಇವರು ದೇವಿಯ ದರ್ಶನಕ್ಕೆ ಬಂದಿದ್ದರು ಎಂದು ಹೇಳಲಾಗಿದ್ದು, ದೇವಸ್ಥಾನದ ಆವರಣದಲ್ಲಿದ್ದ ಬಳೆ ಅಂಗಡಿ ಮುಂದೆ … Continued

ಕುಕನೂರು ಸಮೀಪ ಭೀಕರ ಅಪಘಾತ: ಸ್ಥಳದಲ್ಲೇ ಐವರ ಸಾವು

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ರಾತ್ರಿ ಲಾರಿ ಹಾಗೂ ಸ್ಕಾರ್ಪಿಯೋ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶನಿವಾರ ರಾತ್ರಿ 10:30ರ ಸುಮಾರಿಗೆ ಲಾರಿಯೊಂದು ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಕಾರ್ಪಿಯೊ ವಾಹನದಲ್ಲಿ ಒಟ್ಟು ಒಂಬತ್ತು ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಕೊಪ್ಪಳದಲ್ಲಿ … Continued

ವಿಚಿತ್ರ…ತನಗೆ ಹೊಡೆದವರನ್ನು ಮಾತ್ರ ಬೆನ್ನು ಬಿಡದೆ ಅಟ್ಟಾಡಿಸಿಕೊಂಡು ಹೋಗುವ ದೇವಿಯ ಹರಕೆಯ ಕೋಣ…!

ಕೊಪ್ಪಳ: ವಿಚಿತ್ರ ಘಟನೆಯೊಂದರಲ್ಲಿ ಕೊಪ್ಪಳ ಜಿಲ್ಲೆಯ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣವೆಂದರೆ ಎಲ್ಲರೂ ಹೆದರುತ್ತಾರೆ…! ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದ ಈ ಹರಕೆಯ ಕೋಣ, ತನಗೆ ಬೈದು ಹೊಡೆದವರನ್ನು ಹಿಡಿದು ಬಿಡದೆ ಕಾಡುತ್ತದೆಯಂತೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿದೆ.. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ … Continued