ಕುಮಟಾ: ಹೆಂಡತಿ, ಮಗನನ್ನು ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಗಂಡ

ಕುಮಟಾ:  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣೆಯಲ್ಲಿ ಗುರುವಾರ ತಡರಾತ್ರಿ, ಹೆಂಡತಿ ಮತ್ತು ಮಗನನ್ನು ಕೊಂದ ನಂತರ ಗಂಡ ಆತ್ಮಹತ್ಯೆ ಮಾಡಿಕೊಂಡ ನಡೆದ ವರದಿಯಾಗಿದೆ. ಕೊಲೆಯಾದವರನ್ನು ತಾಕಿ ಮರಾಠಿ (35) ಹಾಗೂ ಲಕ್ಷ್ಮಣ ಮರಾಠಿ (12) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ರಾಮ ಮರಾಠಿ (40) ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. … Continued

ಗೋಕರ್ಣ: ಜುಲೈ 13ರಿಂದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುಮಾರ್ಸ್ಯ ಆರಂಭ

ಕುಮಟಾ: ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುರ್ಮಾಸ್ಯ ಜುಲೈ 13ರಿಂದ ಸೆಪ್ಟೆಂಬರ್‌ 10ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಅಶೋಕೆಯಲ್ಲಿ ನಡೆಯಲಿದ್ದು, ಇದನ್ನು ಗುರುಕುಲ ಚಾತುರ್ಮಾಸ್ಯ ಎಂದು ಸಂಕಲ್ಪಿಸಲಾಗಿದೆ ಈ ವರ್ಷದ ಚಾತುಮಾಸ್ಯ ಕುಮಟಾ ತಾಲೂಕಿನ ಗೋಕರ್ಣದ ಅಶೋಕೆಯಲ್ಲಿ ಶುಭಕೃತ ಸಂವತ್ಸರದ ಆಶಾಢ ಪೂರ್ಣಿಮೆಯಿಂದ … Continued

ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ ರೆಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು: ಎಸ್‌ಪಿ ಖಡಕ್‌ ಸೂಚನೆ

ಕುಮಟಾ: ಕುಮಟಾ: ಉತ್ತರಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಪ್ರವಾಸಿಗರು ಸುಮುದ್ರದ ಅಲೆಗೆ ಸಿಲುಕಿ ಅಪಾಯಕ್ಕೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ಗೆ ಹೊಂದಿಕೊಂಡಿರುವ ರೇಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದರ ಬಗ್ಗೆ ರೆಸಾರ್ಟ್‌ ಮಾಲೀಕರೊಂದಿಗೆ ಸಭೆ ನಡೆಸಿದ್ದೇವೆ. … Continued

ಕುಮಟಾ: ಮೂರು ದಿನಗಳ ಕಾರ್ಯಾಚರಣೆ ನಂತರ ಸಮುದ್ರ ಪಾಲಾದ ಮತ್ತಿಬ್ಬರ ಶವ ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಬಾಡದಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರು ಪ್ರವಾಸಿಗರ ಶವ ಮೂರನೇ ದಿನ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ನಾಲ್ವರಲ್ಲಿ ಇಬ್ಬರ ಶವ ಮೂರು ದಿನಗಳ ಹಿಂದೆಯೇ ಪತ್ತೆಯಾಗಿತ್ತು. ಈಗ ಮತ್ತಿಬ್ಬರ ಶವವೂ ಸಮುದ್ರದ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಸಿಎ ವಿದ್ಯಾರ್ಥಿ ಬೆಂಗಳೂರಿನ ರಾಜಾಜಿನಗರದ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ … Continued

ಡಾ.ಬಾಳಿಗಾ ಕಾಮರ್ಸ್‌ ಕಾಲೇಜಿನಲ್ಲಿ ʼಕಾಮರ್ಸ್‌ ಫೆಸ್ಟ್’ ಕಾರ್ಯಕ್ರಮ, ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ತೆರೆದ ಬಾಗಿಲು ಎಂದ ಉದ್ಯಮಿ ಮದನ ನಾಯಕ

ಕುಮಟಾ;ಭಾರತ ಬದಲಾಗುತ್ತಿದೆ. ಇಂದು ವಾಣಿಜ್ಯ ವ್ಯವಹಾರದಲ್ಲಿ ಭಾರತವು ಗುರುತಿಸಿಕೊಂಡಿದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತುದಾರ ಉದ್ಯೋಗಿಗಳನ್ನು ಭಾರತ ನೀಡುತ್ತಿದೆ ಎಂದು ಉದ್ಯಮಿ ಮದನ ನಾಯಕ ಹೇಳಿದರು. ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ‘ ಫೆಸ್ಟ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯವು ಸಮರ್ಥ ಮಾನವ ಸಂಪನ್ಮೂಲ ಬೆಳೆಸುವಲ್ಲಿ ತನ್ನ ಪ್ರಯತ್ನವನ್ನು ಹೆಚ್ಚಿಸಬೇಕಾಗಿದೆ. ಆರ್ಥಿಕ ವಲಯದಲ್ಲಿ ಬದಲಾವಣೆಯಾಗುತ್ತಿದೆ. … Continued

ಕುಮಟಾ: ಪ್ರವಾಸಕ್ಕೆ ಬಂದು ಈಜಲು ತೆರಳಿದ ನಾಲ್ವರು ಸಮುದ್ರ ಪಾಲು; ಇಬ್ಬರ ಶವ ಪತ್ತೆ

ಕುಮಟಾ; ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ಜಲ ಸಮಾಧಿಯಾಗಿ, ಮತ್ತಿಬ್ಬರು ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ್ ನಲ್ಲಿ ನಡೆದಿದೆ. ವಿದ್ಯಾರ್ಥಿಗಳ ತಂಡ ಶನಿವಾರ ರೆಸಾರ್ಟಿಗೆ ಬಂದಿದ್ದರು. ಬೆಂಗಳೂರಿನ ಸುರೇಶ ಸಿ.ಎ ಫೌಂಡೇಶನ್‌ ಸಂಸ್ಥೆಯಿಂದ ೮೭ ಜನರು ಉತ್ತರಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಜಿಲ್ಲೆಯ ಕುಮಟಾದ ಬಾಡದ ಅರಬ್ಬಿ … Continued

ದ್ವಿತೀಯ ಪಿಯು ಫಲಿತಾಂಶ: ಕುಮಟಾ ಬಾಳಿಗಾ ಕಲಾ-ವಿಜ್ಞಾನ ಪಿಯು ಕಾಲೇಜ್‌-ವಿಜ್ಞಾನದಲ್ಲಿ ಶುಭಾ ಭಟ್ಟ, ಕಲಾ ವಿಭಾಗದಲ್ಲಿ ಶಾಂಭವಿ ಶೆಟ್ಟಿ ಪ್ರಥಮ

ಕುಮಟಾ: ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೩ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶುಭಾ ಪರಮೇಶ್ವರ ಭಟ್ಟ ೬೦೦ಕ್ಕೆ ೫೯೦ (೯೮.೩೩%)ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂಜಾ ವಿನಾಯಕ ಭಟ್ಟ ೬೦೦ಕ್ಕೆ ೫೮೧(೯೬.೮೩%) … Continued

ಕುಮಟಾ : ದ್ವಿತೀಯ ಪಿಯು ವಿಜ್ಞಾನ, ಸರಸ್ವತಿ ಪಿಯು ಕಾಲೇಜು ರಾಜ್ಯಮಟ್ಟದ ರ‍್ಯಾಂಕ್‌ನೊಂದಿಗೆ ನೂರಕ್ಕೆ ನೂರು ಫಲಿತಾಂಶ

ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟಿನ ವಿಧಾತ್ರಿ ಅಕಾಡೆಮಿ ಸಂಯೋಗದ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ. ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್‌ನೊಂದಿಗೆ ಶೇಕಡಾ ೧೦೦ಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿದ್ಯಾರ್ಥಿಗಳಾದ ರುಚಿತಾ ಮಂಜುನಾಥ ನಾಯಕ ೯೮.೩೩% … Continued

ಕುಮಟಾ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಕಡ್ಲೆಯ ವಿದ್ಯಾರ್ಥಿ ಪ್ರಣವ ಈಶ್ವರ ನಾಯಕ (೧೮) ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಡಾ.ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ವ್ಯಾಸಂಗ ಮಾಡಿದ್ದ … Continued

ಕುಮಟಾ; ಕುಡಿಯುವ ನೀರಿನ ಯೋಜನೆಗೆ 120 ಕೋಟಿ ರೂ ಮಂಜೂರು: .ಶಾಸಕ  ದಿನಕರ ಶೆಟ್ಟಿ

ಕುಮಟಾ; ತಾಲೂಕಿನ ಹೆಗಡೆ ಜಿಲ್ಲಾ ಪಂಚಾಯತವ್ಯಾಪ್ತಿಯ ೯ ಗ್ರಾ.ಪಂ ಸಂಬಂಧಿಸಿದಂತೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ 120 ಕೋಟಿ ಮಂಜೂರಾಗಿದ್ದು ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು. ಅವರು ಹಾಳಾಗಿರುವ ಬರ್ಸಗುಣಿ ರಸ್ತೆಯನ್ನು ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾಳಾಗಿರುವ ರಸ್ತೆಯ ೧೨೦ ಮೀಟರ್‌ ಉದ್ದದ … Continued