ಸಚಿವರ ಮನೆಗಳ ಮೇಲೆ ದಾಳಿಯ ನಂತರ ಮಣಿಪುರ ಸಿಎಂ ಮನೆಗೆ ನುಗ್ಗಲು ಯತ್ನಿಸಿದ ಉದ್ರಿಕ್ತ ಗುಂಪು

ಇಂಫಾಲ: ಶನಿವಾರ ಜನರ ಗುಂಪು ಇಂಫಾಲದಲ್ಲಿರುವ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಖಾಸಗಿ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದೆ. ನಂತರ ಗುಂಪನ್ನು ಚದುರಿಸಲು ಭದ್ರತಾ ಅಧಿಕಾರಿಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಮ್ಮ ನಿವಾಸದಲ್ಲಿ ಇರಲಿಲ್ಲ. ಸೋಮವಾರ ಜಿರಿಬಾಮ್‌ನಿಂದ ನಾಪತ್ತೆಯಾದ ಆರು ಮಂದಿಯಲ್ಲಿ … Continued

ಮಣಿಪುರದ ಜಿರಿಬಾಂನಲ್ಲಿ ಗುಂಡಿನ ಚಕಮಕಿ; 10 ಶಂಕಿತ ಕುಕಿ ಬಂಡುಕೋರರ ಸಾವು

ನವದೆಹಲಿ/ಇಂಫಾಲ್ : ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 10 ಶಂಕಿತ ಕುಕಿ ಬಂಡುಕೋರರನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ ಗಡಿ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯೋಧನನ್ನು ಅಸ್ಸಾಂನ ಸಿಲ್ಚಾರ್ … Continued

ಮ್ಯಾನ್ಮಾರ್‌ನಿಂದ ಮಣಿಪುರ ಪ್ರವೇಶಿಸಿದ ಶಸ್ತ್ರಸಜ್ಜಿತ 900 ಕುಕಿ ಉಗ್ರಗಾಮಿಗಳು ; ಮಣಿಪುರ ಸರ್ಕಾರದ ಎಚ್ಚರಿಕೆ

ಇಂಫಾಲ್ : ಮ್ಯಾನ್ಮಾರ್‌ನಿಂದ ತರಬೇತಿ ಪಡೆದ 900 ಶಸ್ತ್ರಸಜ್ಜಿತ ಉಗ್ರಗಾಮಿಗಳು ಮಣಿಪುರದಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ವರದಿಯನ್ನು ಭದ್ರತಾ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಹೇಳಿದ್ದಾರೆ. ಗಡಿ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಭದ್ರತಾ ಏಜೆನ್ಸಿಗಳ ಸಂಯೋಜಿತ ಪಡೆಗಳನ್ನು ಎಚ್ಚರಿಸಲಾಗಿದೆ ಎಂದು … Continued

ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಇಂಫಾಲ್ : 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮಣಿಪುರದ ಮತಗಟ್ಟೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಗುಂಡಿನ ಸದ್ದು ಕೇಳುತ್ತಿದ್ದಂತೆ ಮತಗಟ್ಟೆಯಲ್ಲಿದ್ದ ಮತದಾರರು ದಿಕ್ಕಾ ಪಾಲಾಗಿ ಓಡಿದ್ದಾರೆ. ಬಿಷ್ಣುಪುರ ಜಿಲ್ಲೆಯ ಥಮನ್‌ಪೋಕ್ಪಿ ಮತದಾನ ಕೇಂದ್ರದಲ್ಲಿ ಕೇಂದ್ರದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದ ವೇಳೆ ಮತಗಟ್ಟೆಯೊಂದರ ಮೇಲೆ ಗುಂಡಿನ ದಾಳಿ ನಡೆದಿದೆ. … Continued

ಜನವರಿ 14ರಿಂದ ಮಣಿಪುರದಿಂದ ಮುಂಬೈ ವರೆಗೆ ‘ಭಾರತ ನ್ಯಾಯ ಯಾತ್ರೆ’ ನಡೆಸಲಿರುವ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆಯ ಎರಡನೇ ಆವೃತ್ತಿಯನ್ನು ಜನವರಿ 14 ರಿಂದ ಪ್ರಾರಂಭಿಸಲಿದ್ದಾರೆ. ಇದಕ್ಕೆ ‘ಭಾರತ ನ್ಯಾಯ ಯಾತ್ರೆ’ ಎಂದು ಮರುನಾಮಕರಣ ಮಾಡಲಾಗಿದ್ದು, ಈ ಜಾಥಾವು ಈಶಾನ್ಯದಲ್ಲಿ ಮಣಿಪುರದಿಂದ ಆರಂಭಗೊಂಡು ದೇಶದ ಪೂರ್ವದಿಂದ ಪಶ್ಚಿಮದೆಡೆಗೆ ಸಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿಯವರ ಭಾರತ ನ್ಯಾಯ … Continued

ಐತಿಹಾಸಿಕ ಮೈಲಿಗಲ್ಲು…: ಕೇಂದ್ರದ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಅತ್ಯಂತ ಹಳೆಯ ಸಶಸ್ತ್ರ ಗುಂಪು ಯು ಎನ್‌ ಎಲ್‌ ಎಫ್‌

ನವದೆಹಲಿ: ಐತಿಹಾಸಿಕ ಬೆಳವಣಿಗೆಯಲ್ಲಿ, ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರವು ಬುಧವಾರ ನವದೆಹಲಿಯಲ್ಲಿ ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF) ಜೊತೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಶಾಂತಿ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು … Continued

ಇಂಫಾಲ್ ವಿಮಾನ ನಿಲ್ದಾಣದ ಬಳಿ ‘ಯುಎಫ್‌ಒ’ ಕಂಡುಬಂದ ನಂತರ ನಂತರ ಎರಡು ರಫೇಲ್‌ ಯುದ್ಧ ವಿಮಾನ ಕಳುಹಿಸಿದ ವಾಯುಪಡೆ

ಇಂಫಾಲ್ (ಮಣಿಪುರ): ಭಾರತೀಯ ವಾಯು ಪಡೆಯ ಎರಡು ರಫೇಲ್ ಯುದ್ಧ ವಿಮಾನಗಳು ಮಣಿಪುರ ರಾಜಧಾನಿ ಇಂಫಾಲ್‌ಗೆ ರವಾನೆ ಆಗಿವೆ. ಇಂಫಾಲ್ ವಿಮಾನ ನಿಲ್ದಾಣದ ಬಳಿ ಗುರುತಿಸಲಾಗದ ಹಾರುವ ವಸ್ತು (UFO) ಹಾರಾಡುತ್ತಿವೆ ಎಂಬ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆ ತನ್ನ ಎರಡು ರಫೇಲ್ ಯುದ್ಧ ವಿಮಾನಗಳನ್ನ ಇಂಫಾಲ್‌ಗೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. … Continued

‘ನಮ್ಮ ಮಕ್ಕಳೊಂದಿಗೆ ನಾವು ವೇಗವಾಗಿ ಓಡಿದೆವು, ಆದರೆ…ʼ : ಮಣಿಪುರದ ಮತ್ತೊಂದು ಸಾಮೂಹಿಕ ಅತ್ಯಾಚಾರ ಭಯಾನಕ ಘಟನೆ ಬೆಳಕಿಗೆ

ಇಂಫಾಲ : ಬುಧವಾರ ಎಫ್‌ಐಆರ್ ದಾಖಲಾದ ನಂತರ ಮಣಿಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಮೇ 3 ರಂದು ಜನಾಂಗೀಯ ಘರ್ಷಣೆಗಳು ನಡೆದಾಗ ಚುರಾಚಂದಪುರದ ತನ್ನ ಮನೆಯಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಕುಕಿ ಪುರುಷರು ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು 37 ವರ್ಷದ ಮಹಿಳೆ ದೂರಿದ್ದಾರೆ. ಗುಂಪಿನಿಂದ ತಪ್ಪಿಸಿಕೊಳ್ಳಲು ನಾವು … Continued

ಮಣಿಪುರದಲ್ಲಿ ಸಾಂವಿಧಾನಿಕ ಯಂತ್ರಗಳ ಸಂಪೂರ್ಣ ಸ್ಥಗಿತ: ಸುಪ್ರೀಂ ಕೋರ್ಟ್

ನವದೆಹಲಿ: ಮಣಿಪುರದಲ್ಲಿ ತನಿಖೆಯ “ಆಲಸ್ಯ”ದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ ಮತ್ತು ರಾಜ್ಯದಲ್ಲಿ “ಕಾನೂನು ಮತ್ತು ಸುವ್ಯವಸ್ಥೆ ಯಂತ್ರದ ಸಂಪೂರ್ಣ ಸ್ಥಗಿತವಾಗಿದೆ ಎಂದು ಹೇಳಿದೆ. ಗಮನಾರ್ಹ ಸಮಯ ಕಳೆದರೂ ಯಾವುದೇ ಬಂಧನಗಳಿಲ್ಲ. ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಸಾಂವಿಧಾನಿಕ ಯಂತ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಗಮನಿಸಿದ … Continued

ಮಣಿಪುರ ಬೆತ್ತಲೆ ಮೆರವಣಿಗೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

ಇಂಫಾಲ : ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಹೇಯ ಕೃತ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಯುಮ್ಲೆಂಬಮ್ ನುಂಗ್ಸಿತೋಯ್ ಮೈತೆ (19) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಐವರನ್ನು ಬಂಧಿಸಿದ್ದು, ವೈರಲ್ ವೀಡಿಯೊದಲ್ಲಿ … Continued