ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಿಸಿಕೊಂಡ ಸಂಸದ ಪ್ರತಾಪ ಸಿಂಹ

ಮೈಸೂರು : ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಇಂಗ್ಲಿಷ್‌ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ Prathap simha ಎಂಬ ಹೆಸರನ್ನು ಅವರು Pratap Simmha ಎಂದು ಬದಲಾವಣೆ ಮಾಡಿಕೊಂಡಿರುವದಾಗಿ ಅಫಿಡೆವಿಟ್‌ ಮೂಲಕ ಘೋಷಿಸಿಕೊಂಡಿದ್ದಾರೆ. ಕೆಲವು ರಾಜಕಾರಣಿಗಳು ಸಂಖ್ಯಾ ಶಾಸ್ತ್ರದ ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ಮೊದಲು … Continued

ಕೆ ಆರ್‌ ಎಸ್ ಜಲಾಶಯದ ಹಿನ್ನೀರಿನಲ್ಲಿ ಮೂವರು ನೀರು ಪಾಲು

ಮಂಡ್ಯ: ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ವೇಣುಗೋಪಾಲ ಸ್ವಾಮಿ ದೇವಾಲಯ ಬಳಿ ನಡೆದಿದೆ. ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ 20 ಜನರ ತಂಡ ಪ್ರವಾಸಕ್ಕೆ ಆಗಮಿಸತ್ತು, ಈ ವೇಳೆ ಈಜಲು ಹೋಗಿದ್ದ ಹರೀಶ (32), ನಂಜುಂಡ ಹಾಗೂ ಜ್ಯೋತಿ … Continued

ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರೊ. ಭಗವಾನ್ ವಿರುದ್ಧ ಎಫ್​ಐಆರ್​ ದಾಖಲು

ಮೈಸೂರು: ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರೊ. ಕೆ.ಎಸ್​. ಭಗವಾನ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಗಂಗಾಧರ ಅವರು ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಮೈಸೂರಿನ ಗಂಗಾಧರ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 153 ಹಾಗೂ 153A ಅಡಿಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಪ್ರೊ. … Continued

ಮೈಸೂರಿನಲ್ಲಿಯೂ ಮೆಟ್ರೋ ರೈಲುಗಳು ಓಡಾಡಲಿವೆ : ಪಿಎಂ ಮೋದಿ

ನವದೆಹಲಿ : ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳ ಸಂಚಾರ ನಡೆಸುತ್ತಿವೆ. ಅದರಂತೆ ಮೈಸೂರಿನಲ್ಲಿಯೂ ಮೆಟ್ರೋ ರೈಲುಗಳು ಸಂಚರಿಸುವ ದಿನಗಳೂ ದೂರವಿಲ್ಲ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೈಸೂರು ಜನರಿಗೆ ಸಂತಸದ ಸುದ್ದಿ ತಿಳಿಸಿದ್ದಾರೆ. ಶುಕ್ರವಾರ ದೆಹಲಿಯಿಂದ ವರ್ಚುವಲ್ ಮೂಲಕ ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟ ಮತ್ತು … Continued

ಒಕ್ಕಲಿಗರ ಬಗ್ಗೆ ಪ್ರೊ. ಭಗವಾನ್ ವಿವಾದಾತ್ಮಕ ಹೇಳಿಕೆ : ಭುಗಿಲೆದ್ದ ಪ್ರತಿಭಟನೆ

ಮೈಸೂರು: ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ಪ್ರೊ. ಕೆ.ಎಸ್. ಭಗವಾನ್ ಈಗ ಒಕ್ಕಲಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ತೀವ್ರ ಪ್ರತಿಭಟನೆ ಎದುರಿಸುತ್ತಿದ್ದಾರೆ. ಮೈಸೂರಿನ ಟೌನ್ ಹಾಲ್ ನಲ್ಲಿ ಶುಕ್ರವಾರ (ಅಕ್ಟೋಬರ್‌ 13) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಸಂಸ್ಕೃತಿ ಹೀನರು ಅಥವಾ ಅವರು ಹೀನ ಸಂಸ್ಕೃತಿಯವರು ಎಂದು ಹೇಳಿರುವುದು ಈಗ ಭಾರೀ … Continued

ಸಿಎಂ ಸಿದ್ದರಾಮಯ್ಯ ಮನೆ ಮೇಲೆ ಕಲ್ಲು ತೂರಾಟ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳವಾರ (ಅಕ್ಟೋಬರ್‌ ೧೦) ಬೆಳಿಗ್ಗೆ 8 ಗಂಟೆ ಸುಮಾರಿಗೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಸತ್ಯಮೂರ್ತಿ ಎಂಬಾತ ಕಲ್ಲು ಎಸೆದಿದ್ದ. ಈ ಸಂಬಂಧ ಸರಸ್ವತಿಪುರ … Continued

ವೀಡಿಯೊ..| ಔಷಧಿ ಖರೀದಿಗೆಂದು ಔಷಧದ ಅಂಗಡಿಗೆ ಬಂದಾಗಲೇ ಹೃದಯಘಾತದಿಂದ ಸಾವು

ಮೈಸೂರು: ಈ ಹೃದಯ ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕುಳಿತಲ್ಲೇ ಕುಸಿಯುವುದು, ಮಾತನಾಡುತ್ತಿರುವಾಗಲೇ ಸ್ತಬ್ದವಾಗುವುದು, ನೃತ್ಯ ಮಾಡುತ್ತಲೇ ಬೀಳುವುದು.. ಹೀಗೆ ಸಾವಿನ ಹತ್ತಾರು ಸನ್ನಿವೇಶಗಳು ಕಂಡುಬರುತ್ತಿವೆ. ಮೈಸೂರಿನಲ್ಲಿ ಔಷಧದ ಅಂಗಡಿಯೊಂದಕ್ಕೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆಯೊಂದು ವರದಿಯಾಗಿದೆ. ಘಟನೆಯ ದೃಶ್ಯಗಳು … Continued

ಮೈಸೂರು : ಆನೆ ಚಿಕಿತ್ಸೆಗೆ ವಿಶಿಷ್ಟ ಪಾದರಕ್ಷೆ ; ಪ್ರಯತ್ನ ಯಶಸ್ವಿ

ಮೈಸೂರು : ಆನೆಯ ಕಾಲಿನ ಚಿಕಿತ್ಸೆಗಾಗಿ ಪಶು ವೈದ್ಯರೊಬ್ಬರು ಅಳವಡಿಸಿಕೊಂಡಿರುವ ವಿಭಿನ್ನವಾದ ಕ್ರಮವು ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲೆಂದು ಅವರು ಪಾದರಕ್ಷೆ ತಯಾರಿಸಿದ್ದಾರೆ. ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್‌ನಲ್ಲಿರುವ 60 ವರ್ಷದ ಕುಮಾರಿ ಆನೆಯ ಕಾಲಿಗೆ ಗಾಯವಾಗಿತ್ತು. ಕುಮಾರಿ ಆನೆಯನ್ನು 2015ರಲ್ಲಿ ಕೇರಳ ಮೂಲದ ಸರ್ಕಸ್ ಕಂಪನಿಯಿಂದ ರಕ್ಷಣೆ ಮಾಡಿ … Continued

ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ನಿಧನ

ಮೈಸೂರು: ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ (68) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. “ಅವರು ಇಂದು, ಶುಕ್ರವಾರ ಬೆಳಿಗ್ಗೆ ತಮ್ಮ ಅಪಾರ್ಟ್ಮೆಂಟಿನಲ್ಲಿ ನಿಧನರಾದರು. ದೆಹಲಿಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆ ಮೈಸೂರಿನ ಕೆಆರ್ ಎಸ್ ರಸ್ತೆಯ ಅಪಾರ್ಟ್ ಮೆಂಟ್ ವೊಂದರ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಅಜಿತ್ ನಿನನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಹೈದರಾಬಾದಿನಲ್ಲಿ … Continued

ಮೈಸೂರು: ಗೃಹಲಕ್ಷ್ಮೀ ಯೋಜನೆ ಚಾಲನೆ, ಮನೆ ಯಜಮಾನಿಗೆ ಖಾತೆಗೆ 2 ಸಾವಿರ ರೂ. ಜಮೆ

ಮೈಸೂರು: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ಅದ್ದೂರಿ ಚಾಲನೆ ನೀಡಲಾಯಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದರು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ಮನೆ ಯಜಮಾನಿ ಖಾತೆಗೆ 2000 ರೂಪಾಯಿ ಹಣ ಜಮೆಯಾಗಿದೆ. ಬಳಿಕ ಮಾತನಾಡಿದ ರಾಹುಲ್‌ … Continued