ಭಾರತದ ದಾಳಿಯಲ್ಲಿ ಉಗ್ರ ಸಂಘಟನೆ ಜೈಷ್ ಮುಖ್ಯಸ್ಥ-ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಮಸೂದ್ ಅಜರ್ 10 ಸಂಬಂಧಿಗಳ ಸಾವು

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ವಾಯುದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಸಾವಿಗೀಡಾಗಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಹಾಗೂ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರರ ಮೈಂಡ್‌ ಮೌಲಾನಾ ಮಸೂದ್ ಅಜರ್ ಹೇಳಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ … Continued

ಭಾರತ-ಪಾಕ್‌ ಮಧ್ಯೆ ಉದ್ವಿಗ್ನತೆ ; ಮೇ 7ರಂದು ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನಕ್ಕೆ ರಾಜ್ಯಗಳಿಗೆ ಕೇಂದ್ರದ ಸೂಚನೆ..! 1971ರಲ್ಲೂ ನಡೆದಿತ್ತು…!

ನವದೆಹಲಿ: ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಂಟಾಗಿದ್ದು, “ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಪರಿಣಾಮಕಾರಿ ನಾಗರಿಕ ರಕ್ಷಣೆ”ಗಾಗಿ ಮೇ 7 ರಂದು ರಾಜ್ಯಗಳಿಗೆ ಭದ್ರತಾ ಅಣಕು ಕಸರತ್ತುಗಳನ್ನು ನಡೆಸುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ. ಕೇಂದ್ರದ ಆದೇಶದ ಸಮಯವು ನಿರ್ಣಾಯಕವಾಗಿದೆ. ಕೊನೆಯ ಬಾರಿಗೆ ಇಂತಹ ಸಮರಾಭ್ಯಾಸವನ್ನು … Continued

ವೀಸಾ ಅವಧಿ ಮುಗಿದದ್ದು ಗೊತ್ತಿದ್ರೂ ಆಶ್ರಯ ; ಪಾಕ್ ಮಹಿಳೆ ಜೊತೆ ಮದುವೆಯಾಗಿದ್ದನ್ನು ಮುಚ್ಚಿಟ್ಟ ಸಿಆರ್‌ಪಿಎಫ್ ಜವಾನ ಕೆಲಸದಿಂದ ವಜಾ

ನವದೆಹಲಿ: ಪಾಕಿಸ್ತಾನಿ ಮಹಿಳೆಯೊಂದಿಗಿನ ತಾನು ಮದುವೆಯಾಗಿದ್ದನ್ನು “ಮುಚ್ಚಿಟ್ಟಿದ್ದಕ್ಕಾಗಿ” ಕೇಂದ್ರ ಮೀಸಲು ಪೊಲೀಸ್ ಪಡೆಯು ತನ್ನ ಜವಾನ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಅವರ ಕೃತ್ಯವು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಈ ಜವಾನನ್ನು ಕೊನೆಯದಾಗಿ ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆ ಪ್ಯಾರಾಮಿಲಿಟರಿ ಸಿಆರ್‌ಪಿಎಫ್‌ (CRPF)ನ … Continued

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಪ್ರಮುಖ ಪಾತ್ರ ಬಹಿರಂಗ

ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಪ್ರಾಥಮಿಕ ವರದಿಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (LeT ನಡುವಿನ ಕಾರ್ಯಾಚರಣೆಯ ಸಂಬಂಧವನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಎನ್‌ಐಎ ಮೂಲಗಳ … Continued

ಭಾರತದ ಸೇನಾ ದಾಳಿಯ ಭೀತಿ ; ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಎಲ್ಲ ವಿಮಾನ ರದ್ದುಗೊಳಿಸಿದ ಪಾಕಿಸ್ತಾನ : ವರದಿ

ನವದೆಹಲಿ: ಭಾರತೀಯ ಒಡೆತನದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಎಲ್ಲಾ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಸ್ಥಗಿತಗೊಳಿಸಿದ ಕೆಲವು ದಿನಗಳ ನಂತರ, ಪಾಕಿಸ್ತಾನ ಬುಧವಾರ (ಏಪ್ರಿಲ್‌ 30) ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಲ್ತಿಸ್ತಾನ್ ಪ್ರದೇಶಕ್ಕೆ ಹೋಗಲು ತನ್ನ ಸ್ವಂತ ವಿಮಾನಗಳನ್ನು ರದ್ದುಗೊಳಿಸಿದೆ…! ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ನಂತರ … Continued

ಪಹಲ್ಗಾಮ್‌ ದಾಳಿ; ಸೇನೆಯ ಸಿಡಿಎಸ್‌ ಜೊತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಭಾನುವಾರ (ಏ. 27) ಭಾರತೀಯ ಸೇನೆಯ ಚೀಫ್‌ ಆಫ್‌ ಜನರಲ್ ಸ್ಟಾಫ್ (CDS) ಜನರಲ್ ಅನಿಲ್ ಚೌಹಾಣ ಅವರೊಂದಿಗೆ ಸಭೆ ನಡೆಸಿದರು. ಏ. 22ರಂದು ಪಾಕಿಸ್ತಾನದ ಉಗ್ರರು … Continued

ಪಹಲ್ಗಾಮ್ ದಾಳಿ | ಪಾಕ್‌ ಹುಡುಗಿ ಜತೆ ನಡೆಯಬೇಕಿದ್ದ ವಿವಾಹಕ್ಕೆ ಭಾರತದ ವರನಿಗೆ ಗಡಿಯಲ್ಲಿ ನೋ ಎಂಟ್ರಿ ; ದಿಬ್ಬಣ ವಾಪಸ್‌..

ನವದೆಹಲಿ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನ ಸಂಬಂಧಗಳನ್ನು ಹದಗೆಟ್ಟ ನಂತರ, ಭಾರತ- ಪಾಕಿಸ್ತಾನದ ವಧು-ವರರ ನಡುವೆ ನಡೆಯಬೇಕಿದ್ದ ಮದುವೆಯೊಂದು ಸ್ಥಗಿತಗೊಂಡಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕುಟುಂಬವೊಂದರ ವರ ಪಾಕಿಸ್ತಾನದ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್ 30 ರಂದು ನಿಗದಿಯಾಗಿದ್ದ ವಿವಾಹದ ಕಾರ್ಯಕ್ರಮಕ್ಕೆ ದಿಬ್ಬಣದೊಂದಿಗೆ ಗುರುವಾರ ವಾಘಾ-ಅಟ್ಟಾರಿ ಗಡಿಯನ್ನು … Continued