ನನ್ನನ್ನು ಮೌನಗೊಳಿಸಬಹುದು..ಸೋಲಿಸಲಾಗದು : ರಾಘವ ಚಡ್ಡಾ ವೀಡಿಯೊ ಸಂದೇಶದಿಂದ ಎಎಪಿ ಆಂತರಿಕ ಕಲಹ ಸ್ಫೋಟ

ನವದೆಹಲಿ: ಆಮ್ ಆದ್ಮಿ ಪಕ್ಷವು (AAP) ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ರಾಘವ ಚಡ್ಡಾ ಅವರನ್ನು ದಿಢೀರ್ ಕೆಳಗಿಳಿಸಿದ ಬೆನ್ನಲ್ಲೇ, ಪಕ್ಷದ ಆಂತರಿಕ ಕಲಹ ಸ್ಫೋಟಗೊಂಡಿದೆ. ಈ ಬೆಳವಣಿಗೆಯ ಕುರಿತು ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಘವ ಚಡ್ಡಾ, “ನನ್ನನ್ನು ಮೌನಗೊಳಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ” ಎಂದು ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದಾರೆ. ವಿಡಿಯೋ ಸಂದೇಶವೊಂದನ್ನು ಬಿಡುಗಡೆ … Continued

ಎಎಪಿ ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಪ್ರಮುಖ ನಾಯಕ ರಾಘವ ಚಡ್ಡಾ ವಜಾ…! ದಿಢೀರ್‌ ಬದಲಾವಣೆಗೆ ಕಾರಣ ?

 ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (AAP) ತನ್ನ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿದ್ದು, ಅವರ ಜಾಗಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿದೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಚಾನ್ಸಲರ್ ಆಗಿರುವ ಅಶೋಕ ಮಿತ್ತಲ್ ಈಗ ಮೇಲ್ಮನೆಯಲ್ಲಿ … Continued

ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆ : ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಸಿಎಂ ನಿತೀಶಕುಮಾರ…!

ಪಾಟ್ನಾ: ಬಿಹಾರದಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿರುವ ಜೆಡಿಯು (JD-U) ಅಧ್ಯಕ್ಷ ನಿತೀಶಕುಮಾರ ಅವರು ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಮಾರು ಎರಡು ದಶಕಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ, ಅವರು ಇಂದು, ಗುರುವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಸಕ್ರಿಯ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಅವರು ರಾಜ್ಯಸಭೆಗೆ … Continued

ರಾಜ್ಯಸಭೆ 37 ಸ್ಥಾನಗಳಿಗೆ ಚುನಾವಣೆ : ಎನ್‌ ಡಿಎಗೆ ಹೆಚ್ಚಿನ ಸ್ಥಾನಗಳ ನಿರೀಕ್ಷೆ; ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯ ಭೀತಿ

ನವದೆಹಲಿ: ಮಾರ್ಚ್ 16 ರಂದು 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಸೂಚನೆಗಳಿವೆ. ಮಹಾರಾಷ್ಟ್ರ, ಬಿಹಾರ ಮೊದಲಾದ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ಆಂತರಿಕ ಹಿತಾಸಕ್ತಿಗಳು ಭಿನ್ನವಾಗಿರುವುದರಿಂದ, ಇಂಡಿಯಾ (INDIA) ಮೈತ್ರಿಕೂಟವು ಒಗ್ಗಟ್ಟಾಗಿ ಉಳಿಯುವುದೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. … Continued

10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ: ನಿವೃತ್ತರಾಗುವ ಪ್ರಮುಖರ ವಿವರ

ನವದೆಹಲಿ:ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಏಪ್ರಿಲ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಈ ಸ್ಥಾನಗಳು ಖಾಲಿಯಾಗುತ್ತಿವೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ಸೇರಿದಂತೆ 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ವರ್ಷ … Continued

ಉಗ್ರ ಕಸಬ್ ಪ್ರಕರಣದ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಮಾಜಿ ರಾಜತಾಂತ್ರಿಕ ಹರ್ಷವರ್ಧನ ಶೃಂಗ್ಲಾ ರಾಜ್ಯಸಭೆಗೆ ನಾಮನಿರ್ದೇಶನ

ನವದೆಹಲಿ : ಮಾಜಿ ರಾಜತಾಂತ್ರಿಕ ಹರ್ಷ ಶ್ರಿಂಗ್ಲಾ ಮತ್ತು 26/11 ದಾಳಿ ಭಯೋತ್ಪಾದಕ ಅಜ್ಮಲ್ ಕಸಬ್ ವಿರುದ್ಧ ವಿಚಾರಣೆಗೆ ಸಹಾಯ ಮಾಡಿದ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡಿದ್ದಾರೆ. ಗೃಹ ಸಚಿವಾಲಯ ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, ಸಂಸತ್ತಿನ ಮೇಲ್ಮನೆಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ, ಇದರಲ್ಲಿ ರಾಜತಾಂತ್ರಿಕತೆ, ಕಾನೂನು … Continued

ರಾಜ್ಯಸಭೆ ಪ್ರವೇಶಿಸಲು ಸಿದ್ಧರಾದ ನಟ ಕಮಲ ಹಾಸನ್‌

ಚೆನ್ನೈ: ಅಭಿಜಾತ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ)ಪಕ್ಕಕ್ಕೆ ಡಿಎಂಕೆ ಕೋಟಾದ ಒಂದು ಸ್ಥಾನವನ್ನು ಮೀಸಲಿಡಲಾಗಿದೆ. ಡಿಎಂಕೆಯು ಪಿ ವಿಲ್ಸನ್ ಅವರನ್ನು ಎರಡನೇ ಅವಧಿಗೆ … Continued

ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ -2025

ನವದೆಹಲಿ: ಸುದೀರ್ಘ 13 ತಾಸುಗಳ ಚರ್ಚೆಯ ನಂತರ ವಕ್ಫ್ ತಿದ್ದುಪಡಿ ಮಸೂದೆ -2025 ಶುಕ್ರವಾರ ಬೆಳಗಿನ ಜಾವ 2: 30ರ ಸುಮಾರಿಗೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಇದು ರಾಜ್ಯಸಭೆಯಲ್ಲಿ 128-95 ಮತಗಳಿಂದ ಅಂಗೀಕಾರಗೊಂಡಿದೆ. ಸುದೀರ್ಘ ಚರ್ಚೆಯ ನಂತರ ಇಇದು ಗುರುವಾರ ಮುಂಜಾನೆ (ಏಪ್ರಿಲ್ 3) ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು … Continued

ಸಂಸದರಿಗೆ ಸಂಬಳ, ಪಿಂಚಣಿ-ಭತ್ಯೆ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೋಮವಾರ ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಸಂಸದರ (ಲೋಕಸಭೆ ಮತ್ತು ರಾಜ್ಯಸಭೆ) ಸಂಬಳವನ್ನು 24% ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಅಧಿಸೂಚನೆಯು ಹಾಲಿ ಸದಸ್ಯರಿಗೆ ದೈನಂದಿನ ಭತ್ಯೆಗಳನ್ನು ಮತ್ತು ವೆಚ್ಚದ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಮಾಜಿ ಸದಸ್ಯರಿಗೆ ಐದು … Continued

ಟಿಎಂಸಿಗೆ ಆಘಾತ | ಮಮತಾ ಸರ್ಕಾರ ಕೋಲ್ಕತ್ತಾ ಪ್ರತಿಭಟನೆ ನಿಭಾಯಿಸಿದ ರೀತಿಗೆ ಅಸಮಾಧಾನ ; ಟಿಎಂಸಿ ಸಂಸದ ರಾಜೀನಾಮೆ

ಕೋಲ್ಕತ್ತಾ : ಟಿಎಂಸಿ ರಾಜ್ಯಸಭಾ ಸಂಸದ ಜವಾಹರ ಸರ್ಕಾರ್ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಮಮತಾ ಸರ್ಕಾರವು ಪ್ರತಿಭಟನೆಗಳನ್ನು ನಿಭಾಯಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿರುವ ರಾಜೀನಾಮೆ … Continued