ವಿಡಿಯೊ | ವಿಶ್ವಕಪ್ ವಿಜಯೋತ್ಸವ ಪೋಡಿಯಂನಲ್ಲಿ ಟ್ರಂಪ್ ವರ್ತನೆ ಚರ್ಚೆಗೆ ಗ್ರಾಸ ; ಪರಿಸ್ಥಿತಿ ನಿಭಾಯಿಸಿದ ಫಿಫಾ ಮುಖ್ಯಸ್ಥ

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರ್ತನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್ ಅವರಿಗೆ ಸದಾ ಜನರ ಗಮನ ಸೆಳೆಯುವ ತವಕವಿದೆ ಎಂಬ ಮಾತುಗಳ ನಡುವೆ, ವಿಶ್ವಕಪ್ ವಿಜೇತ ಸ್ಪೇನ್ ತಂಡದ ಸಂಭ್ರಮಾಚರಣೆಯ ವೇಳೆ ಅವರು ಕ್ಯಾಮೆರಾ ಚೌಕಟ್ಟಿನಲ್ಲೇ ಉಳಿಯಲು ಪ್ರಯತ್ನಿಸಿದ ಘಟನೆ … Continued

ಅರ್ಜೆಂಟೀನಾ ಕನಸು ಭಗ್ನ; 107ನೇ ನಿಮಿಷದ ಗೋಲಿನಿಂದ 2026ರ ಫೀಫಾ ವಿಶ್ವಕಪ್ ಚಾಂಪಿಯನ್ ಆದ ಸ್ಪೇನ್‌

ನ್ಯೂಯಾರ್ಕ್: 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ದಾಖಲಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ 10 ಆಟಗಾರರೊಂದಿಗೆ ಹೋರಾಡಿದ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ, ಅಮೆರಿಕದ ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತನ್ನ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಿಕೊ ವಿಲಿಯಮ್ಸ್ ನೀಡಿದ ಕ್ರಾಸ್ ಪಾಸ್‌ ಅನ್ನು ಹೆಡರ್ ಮೂಲಕ ಗೋಲಿನ ಮುಂಭಾಗಕ್ಕೆ … Continued

19 ವರ್ಷದ ಹಿಂದೆ ಮಗುವಿಗೆ ಸ್ನಾನ ಮಾಡಿಸಿ ಮಡಿಲಲ್ಲಿ ಮಲಗಿಸಿಕೊಂಡಿದ್ದ ಮೆಸ್ಸಿ ; ಈಗ ಆ ಮಗುವೇ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಎದುರಾಳಿ !

19 ವರ್ಷಗಳ ಹಿಂದೆ ಲಿಯೊನೆಲ್ ಮೆಸ್ಸಿ ಅರಿವಿಲ್ಲದೆ ಒಂದು ಅಪರೂಪದ ಕಥೆಯ ಭಾಗವಾಗಿದ್ದರು. ಇಂದು ಅದೇ ಕಥೆ ವಿಶ್ವ ಫುಟ್ಬಾಲ್‌ನ ಅತ್ಯಂತ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿ ರೂಪುಗೊಂಡಿದೆ. 2026ರ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ತಂಡವು 2–1 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಅರ್ಜೆಂಟೀನಾ ತಂಡದ ನಾಯಕ 39 ವರ್ಷದ … Continued

3500 ವರ್ಷಗಳ ಹಿಂದೆಯೇ ಬೇರೆ ಗ್ರಹದ ಲೋಹಗಳಿಂದ ಆಭರಣ ತಯಾರಿಸಿದ್ದ ಮಾನವ…! ಸ್ಪೇನ್ ನಿಧಿ ಹಿಂದಿನ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು

ಸ್ಪೇನ್‌ನ ಐಬೇರಿಯನ್ ಪ್ರಸ್ಥಭೂಮಿಯಲ್ಲಿ ಸುಮಾರು 3,000 ವರ್ಷಗಳ ಹಿಂದೆ ಬದುಕಿದ್ದ ಮನುಷ್ಯರು ಭೂಮಿಯ ಮೇಲಿನ ಲೋಹಗಳಿಗಿಂತ ಹೆಚ್ಚಾಗಿ ಆಕಾಶದಿಂದ ಬಿದ್ದ ನಕ್ಷತ್ರಗಳ ಚೂರುಗಳನ್ನು (ಉಲ್ಕಾಶಿಲೆ) ಬಳಸಿ ಆಭರಣಗಳನ್ನು ತಯಾರಿಸುತ್ತಿದ್ದರು ಎಂಬ ಅಚ್ಚರಿಯ ವಿಷಯ ಈಗ ಬೆಳಕಿಗೆ ಬಂದಿದೆ. 1963ರಲ್ಲಿ ಸ್ಪೇನ್‌ನ ಅಲಿಕಾಂಟೆಯಲ್ಲಿ ‘ಟ್ರೆಷರ್ ಆಫ್ ವಿಲ್ಲೆನಾ’ ಎಂಬ ಹೆಸರಿನ 66 ಚಿನ್ನದ ವಸ್ತುಗಳ ರಾಶಿ ಪತ್ತೆಯಾಗಿತ್ತು. … Continued

ಸ್ಪೇನ್‌ನಲ್ಲಿ 2 ಹೈಸ್ಪೀಡ್‌ ರೈಲುಗಳು “ಅತ್ಯಂತ ವಿಚಿತ್ರ” ಅಪಘಾತ ; 21 ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ

ಮ್ಯಾಡ್ರಿಡ್: ದಕ್ಷಿಣ ಸ್ಪೇನ್‌ನ ಅಂಡಲೂಸಿಯಾ ಪ್ರಾಂತ್ಯದಲ್ಲಿ ಭಾನುವಾರ ಸಂಜೆ ಸಂಭವಿಸಿದ ಎರಡು ಅತಿವೇಗದ (High-speed) ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ 21 ಜನರು ಸಾವಿಗೀಡಾಗಿದ್ದಾರೆ ಮತ್ತು 73ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ “ತೀವ್ರ ವೇದನೆಯ ರಾತ್ರಿ” ಎಂದು ಬಣ್ಣಿಸಿದ್ದಾರೆ. ಸ್ಪೇನ್‌ನ ರೈಲ್ವೆ ಜಾಲದ ಆಪರೇಟರ್ ‘ಅಡಿಫ್’ … Continued

20 ವರ್ಷಗಳ ತನ್ನನ್ನು ತೊರೆದು ಹೋಗಿದ್ದ ಹೆತ್ತಮ್ಮನ ಹುಡುಕಿಕೊಂಡು ಭಾರತಕ್ಕೆ ಬಂದ ಸ್ಪೇನ್‌ ಮಹಿಳೆ…!

ಭುವನೇಶ್ವರ: 20 ವರ್ಷಗಳ ಹಿಂದೆ ತನ್ನ ಮತ್ತು ತನ್ನ ಸಹೋದರನನ್ನು ತೊರೆದಿದ್ದ ತನ್ನ ಹೆತ್ತ ತಾಯಿಯನ್ನು ಹುಡುಕಿಕೊಂಡು ಸ್ಪೇನ್ ಪ್ರಜೆ ಸ್ನೇಹಾ ಭಾರತಕ್ಕೆ ಬಂದಿದ್ದಾರೆ. ಆದಾಗ್ಯೂ, 21 ವರ್ಷದ ಸ್ನೇಹಾ ತನ್ನ ಶೈಕ್ಷಣಿಕ ಕಾರಣಕ್ಕಾಗಿ ಸೋಮವಾರ ಸ್ಪೇನ್‌ಗೆ ಹಿಂತಿರುಗಬೇಕಾಗಿರುವುದರಿಂದ ಅವರಿಗೆ ಈಗ ಸಮಯ ಮೀರುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ಅಧ್ಯಯನ ಮಾಡುತ್ತಿರುವ ಅವರು, ಭಾರತದಲ್ಲಿ ಬೇರುಗಳನ್ನು … Continued