ಇರಾನಿನ ನತಾಂಜ್ ಪರಮಾಣು ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ

ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶನಿವಾರ ಇರಾನ್‌ನ ಅತ್ಯಂತ ಪ್ರಮುಖ ಯುರೇನಿಯಂ ಪುಷ್ಟೀಕರಣ ಕೇಂದ್ರವಾದ ನತಾಂಜ್ (Natanz) ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸಿವೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ‘ಮಿಜಾನ್’ ವರದಿ ಮಾಡಿದೆ. ಪಶ್ಚಿಮ ಏಷ್ಯಾದ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಈ … Continued

ನೆಮ್ಮದಿ ಸುದ್ದಿ : ‘ಹಾರ್ಮುಜ್’ ಮೂಲಕ ಭಾರತದ 2 ಎಲ್‌ಪಿಜಿ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ, ಒಂದು ಹಡಗು ಭಾರತಕ್ಕೆ ಪ್ರಯಾಣ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿರುವ ಬೆನ್ನಲ್ಲೇ, ಭಾರತ ಮತ್ತು ಇರಾನ್ ನಡುವೆ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ರಾಜತಾಂತ್ರಿಕ ಒಪ್ಪಂದ ಏರ್ಪಟ್ಟಿದೆ. ಇದರ ಫಲವಾಗಿ, ಸುಮಾರು 40,000 ಮೆಟ್ರಿಕ್ ಟನ್ ಅಡುಗೆ ಅನಿಲ (LPG) ಹೊತ್ತ ‘ಶಿವಾಲಿಕ’ ಹೆಸರಿನ ಬೃಹತ್ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಮುಂದಿನ 7 ದಿನಗಳಲ್ಲಿ ಭಾರತದ ಕರಾವಳಿಯನ್ನು ತಲುಪಲಿದೆ … Continued

ವೀಡಿಯೊ..| ಇರಾನಿನ 16 ನೌಕೆಗಳನ್ನು ಹೊಡೆದುರುಳಿಸಿದ ಅಮೆರಿಕ ; ತೈಲ ರಫ್ತು ತಡೆಯುವ ಎಚ್ಚರಿಕೆ ನೀಡಿದ ಇರಾನ್

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಂಗಳವಾರ ಇರಾನ್‌ನ ಸ್ಫೋಟಕಗಳನ್ನು ಇರಿಸುವ (mine-laying) 16 ನೌಕೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕ ಮಿಲಿಟರಿ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ, ಈ ಭಾಗದಿಂದ ಶತ್ರು ರಾಷ್ಟ್ರಗಳಿಗೆ “ಒಂದು ಲೀಟರ್ ತೈಲವನ್ನೂ” ರಫ್ತು ಮಾಡಲು ಬಿಡುವುದಿಲ್ಲ ಎಂದು ಇರಾನ್ ಪ್ರತಿಜ್ಞೆ ಮಾಡಿದೆ. … Continued