ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆ.ಡಿ. ವ್ಯಾನ್ಸ್ ಭಾರತದ ಅಳಿಯ…! ಅವರ ಪತ್ನಿ ಆಂಧ್ರ ಪ್ರದೇಶ ಮೂಲದವರು…!!

ಹೈದರಾಬಾದ್: ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಡಿ. ವ್ಯಾನ್ಸ್ ಅವರು ಭಾರತದ ಅಳಿಯ. ಅವರ ಪತ್ನಿ ಪತ್ನಿ ಉಷಾ ಚಿಲುಕುರಿ ಅವರು ಆಂಧ್ರಪ್ರದೇಶದ ಮೂಲದವರು. ಅವರ ತಂದೆ-ತಾಯಿ ಆಂಧ್ರಪ್ರದೇಶದವರು ಹಾಗೂ ಆಂಧ್ರಪ್ರದೇಶಕ್ಕೆ ವಲಸೆ ಹೋದವರು. ಅವರು 2014 ರಲ್ಲಿ ಜೆ.ಡಿ. ವ್ಯಾನ್ಸ್ ಜೊತೆ ಕೆಂಟುಕಿಯಲ್ಲಿ ವಿವಾಹವಾದರು ಮತ್ತು ಪ್ರತ್ಯೇಕ ಸಮಾರಂಭದಲ್ಲಿ ಹಿಂದೂ ಪದ್ಧತಿಯಂತೆ ಕಾರ್ಯಕ್ರಮ ನಡೆಯಿತು. ದಂಪತಿಗೆ … Continued

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ 1.73 ಲಕ್ಷ ಕೋಟಿ ರೂ. ಹಣ ಗಳಿಸಿದ ಎಲೋನ್ ಮಸ್ಕ್…!

ವಾಷಿಂಗ್ಟನ್‌ ; 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾರೀ ಶ್ರೀಮಂತರಾಗಿದ್ದಾರೆ…! ಅವರ ಸಂಪತ್ತು ಬುಧವಾರ $ 20.5 ಶತಕೋಟಿ (ಸುಮಾರು 1.73 ಲಕ್ಷ ಕೋಟಿ ರೂ.)ಅಥವಾ ಶೇಕಡಾ 7.73%ರಷ್ಟು ಏರಿಕೆ ಕಂಡಿದೆ….!! ಈಗ ಅವರ ಸಂಪತ್ತು $285.2 ಶತಕೋಟಿಗಳಷ್ಟಾಗಿದೆ ಎಂದು ಫೋರ್ಬ್ಸ್‌ನ … Continued

ಅದ್ಭುತ ಪುನರಾಗಮನ ; ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ, ಕಮಲಾ ಹ್ಯಾರಿಸ್‌ ಪರಾಭವ

ವಾಷಿಂಗ್ಟನ್‌ : 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ (US presidential elections 2024) ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಯಗಳಿಸಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ನ ಪ್ರೊಜೆಕ್ಷನ್ ಪ್ರಕಾರ, ಟ್ರಂಪ್ ಅವರು 277 ಎಲೆಕ್ಟೊರಲ್ ಮತಗಳನ್ನು  ಪಡೆದಿದ್ದಾರೆ. ಅವರು ಗೆಲ್ಲಲು ಅಗತ್ಯವಿರುವ 270-ಸಂಖ್ಯೆಯನ್ನು ದಾಟಿದ್ದಾರೆ. ಇದರೊಂದಿಗೆ, ಅವರು ತಮ್ಮ ಎದುರಾಳಿಯಾದ … Continued

ವಿವಿಧ ದೇಶಗಳಿಂದ 640 ಪುರಾತನ ಕಲಾಕೃತಿಗಳನ್ನು ಮರಳಿ ಭಾರತಕ್ಕೆ ತಂದ ಪುರಾತತ್ವ ಇಲಾಖೆ ; ಇವುಗಳಲ್ಲಿ ಅಮೆರಿಕದಿಂದಲೇ ಹೆಚ್ಚು

ನವದೆಹಲಿ: ವಿವಿಧ ಕಾರಣಗಳಿಂದ ವಿದೇಶಗಳಿಗೆ ಒಯ್ಯಲ್ಪಟ್ಟಿದ್ದ ಭಾರತದ 640 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತರಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಇಲಾಖೆ ಮಾಹಿತಿ ನೀಡಿದ್ದು, ವಿದೇಶಗಳಿಂದ ಮರಳಿ ತಂದಿರುವ ಕಲಾಕೃತಿಗಳ ಪೈಕಿ ಅತಿಹೆಚ್ಚು ಕಲಾಕೃತಿಗಳನ್ನು ಅಮೆರಿಕದಿಂದ ತರಲಾಗಿದೆ ಎಂದು ಅದು ತಿಳಿಸಿದೆ. ಕಳೆದ ಒಂದು … Continued

ಭಾರತದ ಸೇನೆಗೆ ಮತ್ತಷ್ಟು ಬಲ ; ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ ಖರೀದಿಗೆ 32,000 ಕೋಟಿ ರೂ. ಐತಿಹಾಸಿಕ ಒಪ್ಪಂದಕ್ಕೆ ಸಹಿ

ನವದೆಹಲಿ: ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ಬಲ ನೀಡಲಿರುವ 31 MQ-9B ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಭಾರತವು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಭಾರತ ಹಾಗೂ ಅಮೆರಿಕವು 32,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. … Continued

ಕೇವಲ 60 ನಿಮಿಷಗಳಲ್ಲಿ ನ್ಯೂಯಾರ್ಕ್‌ ನಿಂದ ಲಂಡನ್‌ ಗೆ …! 2025 ರಲ್ಲಿ ಪರೀಕ್ಷಾರ್ಥ ಹಾರಾಟಕ್ಕೆ ಸಿದ್ಧವಾದ ಹೈಪರ್ಸಾನಿಕ್ ಜೆಟ್

ಕೇವಲ ಒಂದು ಗಂಟೆಯಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ಹಾರಬಲ್ಲ ಕ್ರಾಂತಿಕಾರಿ ಹೈಪರ್‌ಸಾನಿಕ್ ಜೆಟ್, 2025 ರಲ್ಲಿ ತನ್ನ ಪರೀಕ್ಷಾರ್ಥ ಹಾರಾಟಕ್ಕೆ ಸಿದ್ಧವಾಗಿದೆ. ಸ್ಟಾರ್ಟ್‌ಅಪ್ ಎಂಜಿನಿಯರಿಂಗ್ ಕಂಪನಿ ವೀನಸ್ ಏರೋಸ್ಪೇಸ್ ಇದನ್ನು ಅಭಿವೃದ್ಧಿಪಡಿಸಿದೆ, ಈ ಭವಿಷ್ಯದ ವಿಮಾನವು ಬೆರಗುಗೊಳಿಸುವ ವೇಗದಲ್ಲಿ ಹಾರಾಟ ನಡೆಸಲಿದೆ. ಇಂಜಿನ್ ಅನ್ನು ಹೆಚ್ಚಿನ ಎತ್ತರದಲ್ಲಿ ದೀರ್ಘ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಮ್ಯಾಕ್ 6 ರ … Continued

ವೀಡಿಯೊಗಳು..| ಇಸ್ರೇಲಿನತ್ತ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಇರಾನ್ : ಕ್ಷಿಪಣಿ ಅಪ್ಪಳಿಸಿ ಮೊಸಾದ್ ಮುಖ್ಯ ಕಚೇರಿ ಬಳಿ ಬೃಹತ್‌ ಕುಳಿ ಸೃಷ್ಟಿ

ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ದೊಡ್ಡ ಪ್ರಮಾಣದ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ. ಕಳೆದ ಏಳು ತಿಂಗಳಲ್ಲಿ ಇದು ಇಸ್ರೇಲ್‌ ಮೇಲೆ ಇರಾನಿನ ಎರಡನೆಯ ದೊಡ್ಡ ಪ್ರಮಾಣದ ದಾಳಿಯಾಗಿದೆ. ಮಂಗಳವಾರ, ‘ಆಪರೇಷನ್ ಟ್ರೂ ಪ್ರಾಮಿಸ್ II’ ಎಂದು ಕರೆಯಲಾದ ದಾಳಿಯಲ್ಲಿ ಇಸ್ರೇಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ನೂರಾರು ಕ್ಷಿಪಣಿಗಳು ಉಡಾಯಿಸಲಾಗಿದೆ. ಕಳೆದ ವಾರ ಇರಾನ್‌ ಬೆಂಬಲಿತ ಲೆಬನಾನಿನ … Continued

ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ : ಅಪಾಯದಿಂದ ಪಾರು

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ ನಡೆ‌ದಿದೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಫ್ಲೋರಿಡಾ ಎಸ್ಟೇಟ್‌ನಲ್ಲಿ ಗಾಲ್ಫ್ ಆಡುತ್ತಿದ್ದಾಗ ಭಾನುವಾರ ಹತ್ಯೆ ಯತ್ನಕ್ಕೆ ಗುರಿಯಾಗಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಈ ಘಟನೆಯನ್ನು “ಹತ್ಯೆಯ ಯತ್ನ” ಎಂದು ದೃಢಪಡಿಸಿದೆ. ಇದು … Continued

ಅಮೆರಿಕವನ್ನು ಕಂಡುಹಿಡಿದದ್ದು ಕೊಲಂಬಸ್ ಅಲ್ಲ, ಭಾರತದವರು ; ಮಧ್ಯಪ್ರದೇಶ ಉನ್ನತ ಶಿಕ್ಷಣ ಸಚಿವ

ಭೋಪಾಲ್‌ : ಭಾರತದ ನಾವಿಕರೊಬ್ಬರು ಅಮೆರಿಕವನ್ನು ಕಂಡುಹಿಡಿದರು, ಬೀಜಿಂಗ್ ನಗರವನ್ನು ಭಾರತೀಯ ವಾಸ್ತುಶಿಲ್ಪಿ ಸಹಾಯದಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಋಗ್ವೇದವನ್ನು ಬರೆದವರು ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಊಹಿಸಿದ್ದರು ಎಂದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ. ಬರ್ಕತುಲ್ಲಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ. ಪಟೇಲ್ ಮತ್ತು … Continued

ವೀಡಿಯೊ..| ಅಮೆರಿಕದ ಟೆಕ್ಸಾಸ್‌ ನಲ್ಲಿ 90 ಅಡಿ ಎತ್ತರದ ಹನುಮಂತನ ಕಂಚಿನ ಪ್ರತಿಮೆ ಅನಾವರಣ

ಟೆಕ್ಸಾಸ್‌ : ಅಮೆರಿಕದ ಟೆಕ್ಸಾಸ್‌ನಲ್ಲಿ ಆಗಸ್ಟ್ 15 ರಿಂದ 18 ರವರೆಗೆ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಭಗವಾನ್ ಹನುಮಾನ್ 90 ಅಡಿ ಎತ್ತರದ ಕಂಚಿನ ದೈತ್ಯ ಪ್ರತಿಮೆ ಅನಾವರಣಗೊಳಿಸಲಾಗಿದೆ. ಸ್ಥಳೀಯ ಹಿಂದೂ ಸಮುದಾಯದಿಂದ ಇದನ್ನು ‘ಯೂನಿಯನ್ ಪ್ರತಿಮೆ’ ಎಂದು ಹೆಸರಿಸಲಾಗಿದೆ. 90 ಅಡಿ ಎತ್ತರದ ಭಗವಾನ್ ಹನುಮಾನ್ ಕಂಚಿನ ಪ್ರತಿಮೆಯು ಲಿಬರ್ಟಿ ಪ್ರತಿಮೆ, … Continued