ಕುಮಟಾ : ಖ್ಯಾತ ವೈದ್ಯ ಡಾ.ಅನಿಲ ಹೆಗಡೆ ನಿಧನ ; ಕಣ್ಣುಗಳ ದಾನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯವರಾಗಿದ್ದ ಖ್ಯಾತ ವೈದ್ಯ ಡಾ.ಅನಿಲ ಹೆಗಡೆ (76) ಶನಿವಾರ ನಿಧನರಾಗಿದ್ದಾರೆ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರು ಪತ್ನಿ, ಭವಾನಿ, ಪುತ್ರರಾದ ಇಂಜಿಯರ್ ಆದ ವಿಜಯ  ಹಾಗೂ  ವೈದ್ಯರಾದ ಡಾ.ವಿಕ್ರಮ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅತ್ಯಂತ ಪ್ರತಿಭಾನ್ವಿತರಾಗಿದ್ದ ಡಾ. ಅನಿಲ ಹೆಗಡೆಯವರು … Continued

ಅಂಕೋಲಾ | ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ರೂ. ಪತ್ತೆ…!

ಅಂಕೊಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ (Ankola) ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 66ರ ಪಕ್ಕದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ (Car) 1.15 ಕೋಟಿ ರೂ. ಪತ್ತೆಯಾಗಿದ್ದು, ಇದರ ಮೂಲ ಇನ್ನೂ ನಿಗೂಢವಾಗಿದೆ. ಮಂಗಳವಾರ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಅಂಕೋಲಾ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ … Continued

ವೀಡಿಯೊ…| ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯ ಅಂಗಳಕ್ಕೆ ನುಗ್ಗಿದ ಚಿರತೆ….!

ಶಿರಸಿ : ಉತ್ತರ ಕನ್ನಡದ ಬಿಜೆಪಿ ಸಂಸದ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಂಸದರ ಮನೆ ಅಂಗಳಕ್ಕೆ ಚಿರತೆ ನುಗ್ಗಿದ್ದು, ನಿವಾಸಕ್ಕೆ ಸೋಮವಾರ (ಜ 13) ತಡರಾತ್ರಿ ಚಿರತೆ ನುಗ್ಗಿದೆ. ಸಂಸದ ಹೆಗಡೆ ನಿವಾಸದಲ್ಲಿ ಇರುವಾಗಲೇ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಸಿಸಿಟಿವಿ ದೃಶ್ಯದಲ್ಲಿಚಿರತೆ ಬಂದಿದ್ದು ಸೆರೆಯಾಗಿದೆ. ಸೋಮವಾರ ರಾತ್ರಿ … Continued

ಶಿರಸಿ ಹೈಟೆಕ್‌ ಆಸ್ಪತ್ರೆ | ಅನಂತಮೂರ್ತಿ ಹೆಗಡೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ; ಸತ್ಯಾಗ್ರಹ ಸ್ಥಳದಲ್ಲಿ ಸಂಸದ ಕಾಗೇರಿ ಘೋಷಣೆ

ಶಿರಸಿ : ನಗರದ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿದಂತೆ ಹೋರಾಟಗಾರ ಅನಂತಮೂರ್ತಿ ಹೆಗಡೆ ನಡೆಸುತ್ತಿರುವ ಎಲ್ಲ ಹೋರಾಟಕ್ಕೆ, ಉಪವಾಸ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಅವರು ಸಮಾಜಕ್ಕೆ ಒಳ್ಳೆಯದಾಗುವ ಯಾವುದೇ ನಿರ್ಣಯ ಕೈಗೊಂಡರೂ ಅದನ್ನು ನಾನು ಬೆಂಬಲಿಸುತ್ತೇನೆ. ಜಿಲ್ಲಾ ಬಿಜೆಪಿ ಸಹ ಈ ನಿಟ್ಟಿನಲ್ಲಿ ಸದಾ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ … Continued

ಶಿರಸಿ | ಮನೆಯ ಅಂಗಳಕ್ಕೇ ಬಂದ ಚಿರತೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತಾಲೂಕಿನ ನೀರ್ನಳ್ಳಿಯ ಮನೆಯೊಂದರ ಅಂಗಳಕ್ಕೇ ರಾತ್ರಿ ಸಮಯದಲ್ಲಿ ಚಿರತೆ ಬಂದಿದೆ ಎಂದು ವರದಿಯಾಗಿದೆ. ಚಿರತೆಯ ಮನೆ ಅಂಗಳಿಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸುಮಾರು 12:30ರ ಸುಮಾರಿಗೆ ನೀರ್ನಳ್ಳಿಯ ರಾಮಚಂದ್ರ ಹೆಗಡೆ ಎಂಬವರ ಮನೆಯ ಅಂಗಳಕ್ಕೆ ಚಿರತೆ ಬಂದಿದೆ ಎಂದು ವರದಿಯಾಗಿದೆ.  ಆಕಡೆ ಈಕಡೆ ನೋಡುತ್ತ … Continued

ಉತ್ತರ ಕನ್ನಡ ಜಿಲ್ಲೆಗೆ ವೈದ್ಯಕೀಯ ಕಾಲೇಜು-ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ; ಸೂಕ್ತ ಕ್ರಮಕ್ಕೆ ಸರ್ಕಾರದ ಸೂಚನೆ-ಅನಂತಮೂರ್ತಿ ಹೆಗಡೆ

 ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಆಗ್ರಹಿಸಿ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಕೈಗೊಂಡ ಏಳು ದಿನಗಳ ಪಾಯಾತ್ರೆಯ ಪರಿಣಾಮ, ಒಂದು ವರ್ಷದ ನಂತರ ಎಚ್ಚೆತ್ತ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸೂಚನೆ ನೀಡಿದೆ ಎಂದು ಅನಂತಮೂರ್ತಿ ಹೆಗಡೆ … Continued

ಹೊನ್ನಾವರ | ಗೇರುಸೊಪ್ಪ ಬಳಿ ಲಾರಿ ಪಲ್ಟಿ ; ಇಬ್ಬರು ಸಾವು

ಹೊನ್ನಾವರ: ಲಾರಿಯೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಹೊನ್ನಾವರ – ಸಾಗರ ರಸ್ತೆಯ ಸುಳಿಮುರ್ಖಿ ತಿರುವಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಸಾಗರ ಕಡೆಯಿಂದ ಹೊನ್ನಾವರದತ್ತ ಬರುತ್ತಿದ್ದ ಲಾರಿ ಸೋಮವಾರ (ಜ.6) ನಸುಕಿನ ವೇಳೆ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ … Continued

ಶಿರಸಿ : ಯಕ್ಷಗಾನ ಭಾಗವತ ತ್ರ್ಯಂಬಕ ಹೆಗಡೆ ಇಡವಾಣಿಗೆ ಎಂ. ರಮೇಶ ಪ್ರಶಸ್ತಿ ಪ್ರದಾನ

ಶಿರಸಿ :  ಸರ್ಕಾರಗಳು ಯಾವುದೇ ಬರಲಿ ಅದು ಅದರ ನೆಲೆಯಲ್ಲಿ ಕೆಲಸ ಮಾಡಲಿ. ಆದರೆ ಸಮಾಜ ಕಲಾವಿದರನ್ನ ಯಾವತ್ತಿಗೂ ಕೈ ಬಿಡಬಾರದು. ಇದೇವೇಳೆ ಪ್ರೇಕ್ಷಕರ ಅಭಿರುಚಿಯನ್ನು ಉಳಿಸುವ ಹಾಗೂ ಅವರಲ್ಲಿ ಉತ್ತಮ ಅಭಿರುಚಿ ಬೆಳೆಸುವ ಜವಾಬ್ದಾರಿ ಕಲಾವಿದರಾದ ನಮ್ಮ ಮೇಲಿದೆ ಎಂಬುದನ್ನೂ ಅರಿಯಬೇಕು ಎಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ಶಿವಾನಂದ ಕೆರೆಮನೆ … Continued

ಹೊನ್ನಾವರ | ಶರಾವತಿ ಸೇತುವೆ ಮೇಲೆ ಬಸ್‌-ಬೈಕ್‌ ಡಿಕ್ಕಿ ; ಮೂವರು ಸಾವು

ಹೊನ್ನಾವರ : ಇಂದು ಬೆಳಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ಪಟ್ಟಣದ ಶರಾವತಿ ಸೇತುವೆ ಮೇಲೆ ಭೀಕರ  ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವಿಜಯಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್‌ನಲ್ಲಿದ್ದವರು ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಹೊರಟಿದ್ದ ಬೈಕ್ … Continued

ಕೂಜಳ್ಳಿ : ಖ್ಯಾತ ಗಾಯಕ ಪಂ.ವಿನಾಯಕ ತೊರವಿಗೆ ‘ಷಡಕ್ಷರಿ’ ರಾಷ್ಟ್ರೀಯ ಪುರಸ್ಕಾರ ಪ್ರದಾನ

ಕುಮಟಾ: ಕೂಜಳ್ಳಿಯಲ್ಲಿ ನಡೆದ ಪಂಡಿತ ಷಡಕ್ಷರಿ ಗವಾಯಿ ಪುಣ್ಯ ಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಂ.ವಿನಾಯಕ ತೊರವಿ ಅವರಿಗೆ ಷಡಕ್ಷರಿ ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರದಾನ ಮಾಡಲಾಯಿತು. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ಭಾನುವಾರ ಇಡೀದಿನ ಪುಣ್ಯಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ ವಿನಾಯಕ … Continued