ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಒಗ್ಗಟ್ಟಿಲ್ಲ. ಜಡತ್ವ ಕಾಡುತ್ತಿದೆ. ಜಡತ್ವ ತೊರೆದು ಜಿಲ್ಲೆಯ ಹಿತಕ್ಕಾಗಿ ಸುಸಜ್ಜಿತ ಆಸ್ಪತ್ರೆ ಬೇಕೆಂದು ಹೋರಾಟಕ್ಕಿಳಿದ ಜಿಲ್ಲೆಯ ಯುವಕರ ಬೆನ್ನು ತಟ್ಟಿ ಬೆಂಬಲಿಸಿ ಎಂದು ಸಾಹಿತಿ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.| ಎನ್ ಆರ್ ನಾಯಕ್ ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಕ್ತ ಸ್ಥಳದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ … Continued

ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಜನರ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀಗಳ ಬೆಂಬಲ, ಕ್ರಮ ಕೈಗೊಳ್ಳಲು ಸಿಎಂಗೆ ಆಗ್ರಹ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ಉತ್ತರ ಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಜುಲೈ 30ರಂದು ಆಯೋಜಿಸಿರುವ ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ … Continued

ಅಂಕೋಲಾ: ಲಾರಿ-ಬೈಕ್‌ ಡಿಕ್ಕಿ : ಇಬ್ಬರು ಬೈಕ್‌ ಸವಾರರು‌ ಸ್ಥಳದಲ್ಲೇ ಸಾವು

ಅಂಕೋಲಾ: ಬೈಕಿಗೆ ಲಾರಿ ಡಿಕ್ಕಿಯಾಗಿ ಬೈಕಿನಲ್ಲಿ ತೆರಳುತ್ತಿದ್ದ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲ ಬೊಗ್ರಿಬೈಲ್ ಸಮೀಪ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮೃತರನ್ನು ಅಗಸೂರಿನ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಎಂದು ಗುರುತಿಸಲಾಗಿದೆ. ಬೈಕ್‌ ಗೆ ಡಿಕ್ಕಿಯಾದ ಲಾರಿಯು ಬೈಕ್ ಸವಾರರನ್ನು ಸುಮಾರು ಕೆಲವು ಮೀಟರುಗಳಷ್ಟು ಎಳೆದುಕೊಂಡು … Continued

ಕುಮಟಾ: ನಾಳೆ ಲಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ ವಿಸ್ತೃತ ಕಟ್ಟಡ -ಆಧುನಿಕ ಸೌಲಭ್ಯಗಳ ಉದ್ಘಾಟನೆ, ಆರೋಗ್ಯ ಸಚಿವ ಡಾ.ಸುಧಾಕರ ಭಾಗಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಗ್ಗೋಣ ರಸ್ತೆ ವಿದ್ಯಾಗಿರಿಯಲ್ಲಿರುವ ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ ವಿಸ್ತ್ರತ ಕಟ್ಟಡದ ಉದ್ಘಾಟನಾ ಸಮಾರಂಭ ಏಪ್ರಿಲ್‌ ೧೦ರಂದು ಸಂಜೆ ೪:೩೦ ಘಂಟೆಗೆ ನಡೆಯಲಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಹಾಗೂ ಲಯನ್ಸ್ ಅಂತರಾಷ್ಟ್ರೀಯದ ಮಾಜಿ ನಿರ್ದೇಶಕರಾದ ಕೆ. ವಂಶೀಧರ ಬಾಬು ಉದ್ಘಾಟಿಸಲಿದ್ದಾರೆ. ಕುಮಟಾದ … Continued

ಯಲ್ಲಾಪುರ: ಬೇಟೆಗಾರರ ಗುಂಡಿಗೆ ಗರ್ಭಿಣಿ ಚಿರತೆ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸಗೋಡ ಗ್ರಾಮದ ಹೊರವಲಯದಲ್ಲಿ ಬೇಟೆಗಾರರ ಗುಂಡಿಗೆ ಗರ್ಭಿಣಿ ಚಿರತೆ ಸತ್ತಿರುವ ಘಟನೆ  ವರದಿಯಾಗಿದೆ. ಘಟನೆಯಲ್ಲಿ ಚಿರತೆಯ ಗರ್ಭದಲ್ಲಿದ್ದ ಎರಡು ಮರಿಗಳು ಕೂಡ ಸತ್ತಿವೆ. ಮಂಗಳವಾರ ಬೆಳಗ್ಗೆ ಚಿರತೆಯ ಮೃತದೇಹ ಸಾರ್ವಜನಿಕರಿಗೆ ಕಂಡಿದೆ. ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಮಂಗಳವಾರ ಬೆಳಗಿನ ಜಾವ ಮೂರು ಗಂಟೆಯ … Continued

ದಾಂಡೇಲಿ: ಕಾಳಿ ನದಿ ದಂಡೆಯಿಂದ ಬಾಲಕನ ಎಳೆದೊಯ್ದ ಮೊಸಳೆ

ದಾಂಡೇಲಿ: ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಎಳೆದೊಯ್ದು ಘಟನೆ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ನಿವಾಸಿಯಾಗಿರುವ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬವರ ಮಗನಾದ 15 ವರ್ಷದ ಬಾಲಕ ಮೊಹಿನ್ ಗುಲ್ಬರ್ಗ ಎಂಬತಾನನ್ನು … Continued