ಏರ್ ಇಂಡಿಯಾ ಬಿಡ್ ಟಾಟಾ ಸಂಸ್ಥೆ ಗೆದ್ದಿಲ್ಲ, ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ಟಾಟಾ ಸನ್ಸ್ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾಕ್ಕೆ ಬಿಡ್ ಗೆದ್ದಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಿಗೇ ಕೇಂದ್ರ ಸರ್ಕಾರವು ಈ ವರದಿಗಳನ್ನು ನಿರಾಕರಣೆ ಮಾಡಿದೆ. ಎಐ ಡಿಇನ್‌ವೆಸ್ಟ್‌ಮೆಂಟ್ ಪ್ರಕರಣದಲ್ಲಿ ಭಾರತ ಸರ್ಕಾರವು ಹಣಕಾಸು ಬಿಡ್‌ಗಳ ಅನುಮೋದನೆಯನ್ನು ಸೂಚಿಸುವ ಮಾಧ್ಯಮ ವರದಿಗಳು ತಪ್ಪಾಗಿವೆ. ಸರ್ಕಾರದ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು … Continued

ದೂರ ಸಂಪರ್ಕ ಇಲಾಖೆಯಿಂದ ಏರ್​ಟೆಲ್​, ವಿಐಎಲ್‌ಗೆ 3050 ಕೋಟಿ ರೂದಂಡ; ಕೋರ್ಟಿಗೆ ಹೋಗುತ್ತೇವೆ ಎಂದ ಏರ್‌ಟೆಲ್‌

ನವದೆಹಲಿ: ಐದು ವರ್ಷಗಳ ಹಿಂದೆ ಸೆಕ್ಟರ್ ರೆಗ್ಯುಲೇಟರ್ ಟ್ರಾಯ್ (Trai) ಶಿಫಾರಸಿನ ಆಧಾರದ ಮೇಲೆ ದೂರಸಂಪರ್ಕ ಇಲಾಖೆ (DoT) ವೊಡಾಫೋನ್ ಐಡಿಯಾ ಮೇಲೆ 2,000 ಕೋಟಿ ರೂ. ಮತ್ತು ಭಾರ್ತಿ ಏರ್ಟೆಲ್ ಮೇಲೆ 1,050 ಕೋಟಿ ರೂ.ಗಳ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ. ಟೆಲಿಕಾಂ ಆಪರೇಟರ್‌ಗಳಿಗೆ ಪೆನಾಲ್ಟಿ ಪಾವತಿಸಲು ಡಿಒಟಿ ((DoT) ಮೂರು ವಾರಗಳ … Continued

ಭ್ರಷ್ಟಾಚಾರ ಪ್ರಕರಣ; ಮುಂಬೈ ಮಾಜಿ ಪೊಲೀಸ್ ಕಮಿಷನರ್ ವಿರುದ್ಧ ಲುಕ್‌ಔಟ್ ನೋಟಿಸ್..!

ಮುಂಬೈ; ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ದೇಶವನ್ನು ತೊರೆದಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ. ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಪರಮ್‌ ಬೀರ್‌ ಸಿಂಗ್ ದೇಶವನ್ನು ತೊರೆದಿರುವ ಬಗ್ಗೆ ಮಾಹಿತಿ … Continued

ದೆಹಲಿಯಲ್ಲಿ ಜಾರಿ ನಿರ್ದೇಶನಲಾಯಕ್ಕೆ ದಾಖಲೆ ಸಲ್ಲಿಸಿದ ಮಾಜಿ ಸಚಿವ ಜಮೀರ್ ಅಹಮ್ಮದ್‌

posted in: ರಾಜ್ಯ | 0

ಬೆಂಗಳೂರು: ಕಾಂಗ್ರೆಸ್‍ನ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ದೆಹಲಿಗೆ ತೆರಳಿ ಜಾರಿ ನಿರ್ದೇಶನಾಯಲಯ ಕಚೇರಿಯಲ್ಲಿ ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿದ್ದರು. ಹಾಗೂ ಜಮೀರ್ ಅವರ ಆದಾಯದ ಮೂಲದ ಬಗ್ಗೆ ತನಿಖೆ ನಡೆಸಿದ್ದರು. ಹೊಸ … Continued

ಎಂಥಾ ಲೋಕವಯ್ಯಾ…ಕುಕ್ಕರ್ ಜೊತೆ ಇಂಡೋನೇಷ್ಯಾ ಯುವಕನ ಮದುವೆ..!

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಇಂಡೋನೇಷ್ಯಾದ ಯುವಕನೊಬ್ಬತಾನು ದಿನನಿತ್ಯ ಅನ್ನ ಬೇಯಸಿಕೊಳ್ಳುವ ಮಾಡುವ ಕುಕ್ಕರ್ ಜೊತೆಯೇ ಮದುವೆಯಾಗಿದ್ದಾನೆ..! ಇದು ವಿಚಿತ್ರವಾದರೂ ಸತ್ಯ.. ಇಂಡೋನೇಷ್ಯಾದ ಯುವಕ ಉದ್ಯೋಗದ ನಿಮಿತ್ತ ಮನೆಯಿಂದ ದೂರವಾಗಿ ಬೇರೆ ಊರಿನಲ್ಲಿ ಇದ್ದ. ಆಗ ತಾನೇ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು ಹೀಗಾಗಿ, ಆತ ಅಡುಗೆ ಸಾಮಾನುಗಳನ್ನು ಖರೀದಿಸಿದ್ದ. ಅದರಲ್ಲಿ ಕುಕ್ಕರ್ … Continued

ಕೃಷಿ ಕಾಯ್ದೆಗಳ ನ್ಯಾಯಾಲಯದಲ್ಲಿ ಪ್ರಶ್ನಿಸಿರುವಾಗ ಧರಣಿ ಮುಂದುವರಿಕೆ ಏಕೆ: ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ವಿವಾದಿತ ಮೂರು ಕೃಷಿ ಕಾಯಿದೆಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದ್ದು, ಇದರ ನಡುವೆ ಅವುಗಳ ವಿರುದ್ಧ ಪ್ರತಿಭಟನೆ ಮುಂದುವರಿಸಿರುವ ರೈತರ ನಡೆಗೆ ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ಆಕ್ಷೇಪಿಸಿದೆ. ದೆಹಲಿಯ ಜಂತರ್‌ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿಸುವಂತೆ ಕೋರಿ ಕಿಸಾನ್‌ ಮಹಾಪಂಚಾಯತ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ … Continued

ಭೂಕುಸಿತ: ಶಿಮ್ಲಾದಲ್ಲಿ ಕುಸಿದುಬಿದ್ದ ಎಂಟು ಮಹಡಿ ಕಟ್ಟಡ.. ವಿಡಿಯೊ ವೈರಲ್

ಶಿಮ್ಲಾ: ಶಿಮ್ಲಾದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಬಹುಮಹಡಿ ಕಟ್ಟಡವೊಂದು ಕುಸಿದಿದೆ. ಗುರುವಾರ ಸಂಜೆ 5.45 ಕ್ಕೆ ಶಿಮ್ಲಾದ ಹಾಲಿ ಪ್ಯಾಲೇಸ್ ಬಳಿಯ ಘೋಡಾ ಚೌಕಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡ ಕುಸಿತದ ವಿಡಿಯೊ ಸಾಮಾಜಿಕ … Continued

ಸರ್ಕಾರಿ ತೈಲ ಕಂಪನಿಗಳಿಂದ ವಾಣಿಜ್ಯ ಗ್ಯಾಸ್​ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

ನವದೆಹಲಿ: ಅಕ್ಟೋಬರ್ ಮೊದಲ ದಿನವೇ ಸರ್ಕಾರಿ ತೈಲ ಮಾರುಕಟ್ಟೆ ಕಂಪೆನಿಗಳು ಅಕ್ಟೋಬರ್ 1ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 19 ಕೇಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 43.5 ರೂಪಾಯಿ ಏರಿಕೆ ಮಾಡಿದೆ. ದೆಹಲಿಯಲ್ಲಿ 19 ಕೇಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1693 … Continued

ಮತ್ತೆ ತೈಲೋತ್ಪನ್ನಗಳ ದರ ಏರಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಪೆಟ್ರೋಲಿಯಂ, ಡೀಸೆಲ್‌ ದರಗಳು..!

ಮುಂಬೈ: ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದೆ. ಶುಕ್ರವಾರ ಪೆಟ್ರೋಲಿಯಂ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ಶುಕ್ರವಾರ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ ಸರಾಸರಿ 25 ರಿಂದ 30 ಪೈಸೆ ಹೆಚ್ಚಳವಾಗಿದೆ. ಕಳೆದ ಸೆ.5ರಂದು ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆಯಾಗಿತ್ತು. ಸರ್ಕಾರಿ ತೈಲ … Continued

ಸರ್ಕಾರದಿಂದ 40,000 ಕೋಟಿ ರೂ.ಗಳ ಬೆಂಬಲ ಕೋರಿದ ಬಿಎಸ್​ಎನ್​ಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅಲ್ಪಾವಧಿ ಸಾಲ ಮರುಪಾವತಿಸುವುದಕ್ಕೆ 40 ಸಾವಿರ ಕೋಟಿ ರೂ.ಗಳ ಹಣಕಾಸು ನೆರವನ್ನು ಕೇಂದ್ರ ಸರ್ಕಾರದ ಬಳಿ ಕೇಳಿದೆ. ಇದರಲ್ಲಿ ಅರ್ಧದಷ್ಟನ್ನು ಸಾವರಿನ್ ಗ್ಯಾರೆಂಟಿ ರೂಪದಲ್ಲಿ ನೀಡುವಂತೆ ವಿನಂತಿಸಲಾಗಿದೆ ಎಂದು ಕಂಪನಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಕೆ. ಪುರ್ವಾರ್ ತಿಳಿಸಿದ್ದಾರೆ. ಈಗಿರುವ … Continued