ಕರ್ನಾಟಕದಲ್ಲಿ ಕೊರೊನಾ ಏರಿಕೆ: ಬೆಂಗಳೂರಲ್ಲಿ 565 ಸೇರಿ ಹೊಸದಾಗಿ ರಾಜ್ಯದಲ್ಲಿ 707 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಎರಡನೇ ದಿನವೂ ಏರಿಕೆ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 707 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30,065,05ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾದಿಂದ ಇಂದು, ಗುರುವಾರ ಮೂವರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 38,327ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ … Continued

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಬೀಗಿದ ಕಾಂಗ್ರೆಸ್ , ಮಂಕಾದ ಬಿಜೆಪಿ, ಎರಡಂಕಿಗೆ ಕುಸಿದ ಜೆಡಿಎಸ್

ಪಟ್ಟಣ ಪಂಚಾಯತಿ: ಒಟ್ಟು ಸ್ಥಾನಗಳು- 577; ಬಿಜೆಪಿ 194, ಕಾಂಗ್ರೆಸ್ 236, ಜೆಡಿಎಸ್​ 12, ಸ್ವತಂತ್ರ 135. ಪುರಸಭೆ: ಒಟ್ಟು ಸ್ಥಾನಗಳು- 441; ಬಿಜೆಪಿ 176, ಕಾಂಗ್ರೆಸ್​ 201, ಜೆಡಿಎಸ್​ 21, ಸ್ವತಂತ್ರ 43. ನಗರಸಭೆ: ಒಟ್ಟು ಸ್ಥಾನಗಳು- 166: ಬಿಜೆಪಿ-67: ಕಾಂಗ್ರೆಸ್​-61; ಜೆಡಿಎಸ್​-12; ಸ್ವತಂತ್ರ-26 ಬೆಂಗಳೂರು: ರಾಜ್ಯದ 58 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ … Continued

ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ: ನಾಳೆ ಕರ್ನಾಟಕ ಬಂದ್‌ ಇಲ್ಲ

ಬೆಂಗಳೂರು: ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈಗ ಬಂದ್ ಕರೆಯನ್ನು ಹಿಂಪಡೆದಿದ್ದಾರೆ. ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಒತ್ತಾಯಿಸಿ ನಾಳೆ, ಡಿಸೆಂಬರ್ 31ರಂದು ಅವರು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದಾರೆ. … Continued

ರಾಯಚೂರು ಜಿಲ್ಲೆ ಪಟ್ಟಣ ಪಂಚಾಯತ ಫಲಿತಾಂಶ: ಬಿಜೆಪಿಗಿಂತ ಕಾಂಗ್ರೆಸ್‌ ಮುಂದೆ…ಕೇವಲ ಒಂದೇ ಮತದಿಂದ ಗೆದ್ದ ಬಿಜೆಪಿ ಅಭ್ಯರ್ಥಿ

ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತದ​ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಸಿರವಾರ ಪಟ್ಟಣದ 5ನೇ ವಾರ್ಡ್ ಮಹಿಳಾ ಅಭ್ಯರ್ಥಿ ಲಕ್ಷ್ಮಿ ಆದೆಪ್ಪ ಅವರೇ ಕೇವಲ ಒಂದೇ ಮತದಿಂದ ಗೆಲುವು ಸಾಧಿಸಿದವರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶೈಲಜಾ ಉಮಾಶಂಕರ ಕುಲಕರ್ಣಿ ಒಂದೇ ಒಂದು ಮತದಿಂದ … Continued

ಮುಂಬೈ ಬ್ಯಾಂಕ್​ ದರೋಡೆ ವೇಳೆ ಸಿಬ್ಬಂದಿ ಸಾವು, 8 ತಾಸಿನಲ್ಲಿ ಇಬ್ಬರ ಬಂಧಿಸಿದ ಪೊಲೀಸರು: ದರೋಡೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಶಾಖೆಯಲ್ಲಿ ದರೋಡೆ ಮಾಡಲು ನುಗ್ಗಿದ್ದ ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸಿ, ಓರ್ವ ಉದ್ಯೋಗಿಯನ್ನ ಕೊಲೆ ಮಾಡಿ, ಎರಡೂವರೆ ಲಕ್ಷ ರೂ. ದೋಚಿ ಪರಾರಿಯಾದ ಘಟನೆ ನಡೆದಿದ್ದು, ಕೇವಲ ಎಂಟು ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನ ದಹಿಸರ್​ನ ಎಸ್​​ಬಿಐ ಬ್ಯಾಂಕ್​​​ನಲ್ಲಿ ದರೋಡೆ … Continued

ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಪಕ್ಷೇತರರ ಮುಂದೆ ಮಂಕಾದ ಬಿಜೆಪಿ-ಕಾಂಗ್ರೆಸ್‌

ಬೆಳಗಾವಿ: ರಾಜ್ಯದಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಅದರಲ್ಲಿ ಬೆಳಗಾವಿಯ 5 ಪುರಸಭೆ ಹಾಗೂ 11 ಪಟ್ಚಣ ಪಂಚಾಯತಗಳ ಚುನಾವಣೆಗಳ ಫಲಿತಾಂಶದ ಬಂದಿದೆ. ಜಿಲ್ಲೆಯ ಮೂರು ಪುರಸಭೆಗಳಲ್ಲಿ ಬಿಜೆಪಿ ಎರಡು ಹಾಗೂ ಕಾಂಗ್ರೆಸ್‌ ಒಂದರಲ್ಲಿ ಜಯಗಳಿಸಿದೆ. ಎರಡರಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಒಟ್ಟು 11 ಪಟ್ಟಣ … Continued

ವಿಜಯಪುರದ ಆರು ಪಟ್ಟಣ ಪಂಚಾಯತ: ಕಾಂಗ್ರೆಸ್ ಮೇಲುಗೈ, ಬಿಜೆಪಿ ಕಳಪೆ ಪ್ರದರ್ಶನ

ವಿಜಯಪುರ : ವಿಜಯಪುರ ಜಿಲ್ಲೆಯ 6 ಪಟ್ಟಣ ಪಂಚಾಯತಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮೂರು ಕಡೆಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದರೆ, ಒಂದು ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಹಾಗೂ ಎರಡು ಕಡೆ ಅತಂತ್ರ ಸ್ಥಿತಿಯ ಫಲಿತಾಂಶ ಬಂದಿದೆ. 99 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ರಾಜ್ಯದಲ್ಲಿ ಆಡಳಿತಾರೂಢ … Continued

ಭಟ್ಕಳ: ಜಾಲಿ ಪಟ್ಟಣ ಪಂಚಾಯತದಲ್ಲಿ ಪಕ್ಷೇತರರದ್ದೇ ಮೇಲುಗೈ…

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಜಾಲಿ ಪಟ್ಟಣ ಪಂಚಾಯತದ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 20 ವಾರ್ಡುಗಳಲ್ಲಿ 13 ಪಕ್ಷೇತರರೇ ಆಯ್ಕೆಯಾಗಿದ್ದಾರೆ. 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿಜೆಪಿ ಗೆಲುವು ಸಾಧಿಸಿದ್ದು 13 ಪಕ್ಷೇತರರು ಆಯಕೆಯಾಗಿದ್ದಾರೆ. 12 ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ. ವಾರ್ಡ್‌ವಾರು  ಆಯ್ಕೆಯಾದವರ ವಿವರ … Continued

ಗದಗ- ಬೆಟಗೇರಿ ನಗರಸಭೆ:‌  ಇದೇ ಮೊದಲ ಬಾರಿಗೆ ಬಿಜೆಪಿಗೆ ಬಹುಮತ

ಗದಗ: ಗದಗ-ಬೆಟಗೇರಿ ನಗರ ಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ 18 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 35 ವಾರ್ಡುಗಳಲ್ಲಿ ಬಿಜೆಪಿ-18 , ಕಾಂಗ್ರೆಸ್‌-15 ಹಾಗೂ ಪಕ್ಷೇತರರು-2 ರಲ್ಲಿ ಜಯ ಸಾಧಿಸಿದ್ದಾರೆ ವಾರ್ಡ್‌ವಾರು ವಿವರ: 1- ಕಾಂಗ್ರೆಸ್‌- ಲಕ್ಷ್ಮಿ ಅನಿಲಕುಮಾರ್ ಸಿದ್ಧಮ್ಮನಹಳ್ಳಿ 2- ಕಾಂಗ್ರೆಸ್‌- ಸುರೇಶ … Continued

ಸರ್ಕಾರದ ಹಿಡಿತದಿಂದ ದೇಗುಲಗಳನ್ನು ಮುಕ್ತ ಮಾಡುವ ಸರ್ಕಾರದ ನಡೆಗೆ ನಟಿ ಖುಷ್ಬೂ ಸ್ವಾಗತ

ಬೆಂಗಳೂರು: ಸರ್ಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆ ತರಲು ಮುಂದಾಗಿರುವುದನ್ನು ಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರರಾದ ಖುಷ್ಬೂ ಸ್ವಾಗತಿಸಿದ್ದಾರೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ನಟಿ ಖುಷ್ಬೂ, ದೇವಸ್ಥಾನಗಳು ಮುಕ್ತವಾಗಬೇಕು. ಈಗ ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ ಎಂದು ಹೇಳಿದರು. … Continued