ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ ಕತ್ತಿ ಅಂತ್ಯಕ್ರಿಯೆ

posted in: ರಾಜ್ಯ | 0

ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ತೋಟದ ಮನೆಯಲ್ಲಿ ಬುಧವಾರ ಸಂಜೆ ನೆರವೇರಿತು. ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಧಾರ್ಮಿಕ ಪದ್ಧತಿಯಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಅಂತಿಮ ವಿಧಿವಿಧಾನ ಬೆಲ್ಲದ ಬಾಗೇವಾಡಿ ಗ್ರಾಮದ ಮಹಾಂತ ವಿರಕ್ತ ಮಠದ ಶಿವಾನಂದ ಸ್ವಾಮೀಜಿ … Continued

ಮೊದಲು ಒಗ್ಗೂಡುವುದು ಮುಖ್ಯ, ನಾಯಕ ಯಾರೆಂದು ನಂತರ ನಿರ್ಧರಿಸಬಹುದು: ಪವಾರ್ ಭೇಟಿ ಬಳಿಕ ಪ್ರತಿಪಕ್ಷಗಳ ಮೈತ್ರಿ ಬಗ್ಗೆ ನಿತೀಶಕುಮಾರ್ ಹೇಳಿಕೆ

ನವದೆಹಲಿ: ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳನ್ನು ಸಾಮಾನ್ಯ ವೇದಿಕೆಗೆ ತರುವ ಪ್ರಯತ್ನಗಳ ಭಾಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದರು. ಮತ್ತು 2024 ರ ಚುನಾವಣೆಗೆ virOD ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟದ ನಾಯಕನನ್ನು ನಂತರ ನಿರ್ಧರಿಸಬಹುದು ಎಂದು ಹೇಳಿದರು. ಮೊದಲು ಒಗ್ಗೂಡುವುದು ಮುಖ್ಯ ಎಂದು … Continued

ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ಚಾಲನೆ ನೀಡಿದ ರಾಹುಲ್‌ ಗಾಂಧಿ

ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೂ ಐದು ತಿಂಗಳ ಕಾಲ ೩,೫೭೦ ಕಿ.ಲೋ ದೂರ ಕ್ರಮಿಸುವ “ ಭಾರತ್ ಜೋಡೋ ಯಾತ್ರೆಗೆ” ಇಂದು, ಬುಧವಾರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಪೆರಂಬದೂರಿನಲ್ಲಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮಾರಕದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಪ್ಪನ ಆಶೀರ್ವಾದ ಪಡೆದು ಅಧಿಕೃತ ಯಾತ್ರೆ ಆರಂಭಿಸಿದ್ದು … Continued

ಪಾರ್ಶ್ವವಾಯು ಹೊಡೆತದ ಆರಂಭಕ ಲಕ್ಷಣ ಅನುಭವಿಸಿದ ನಂತರ ಲೈವ್‌ನಲ್ಲೇ ತೊದಲಿದ ಟಿವಿ ಆಂಕರ್ : ವೀಡಿಯೊ ವೈರಲ್

ಟಿವಿ ಆ್ಯಂಕರ್ ಸುದ್ದಿಯನ್ನು ಪ್ರಸ್ತುತಪಡಿಸುತ್ತಿರುವಾಗ ಮಧ್ಯದಲ್ಲಿ ಎಡವುತ್ತಿರುವುದನ್ನು ತೋರಿಸುವ ವೀಡಿಯೊವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ಎನ್‌ಬಿಸಿ ಯೂನಿವರ್ಸಲ್‌ನ ಪತ್ರಕರ್ತೆ ಜೂಲಿ ಚಿನ್ ಕಾಣಿಸಿಕೊಂಡಿದ್ದಾರೆ. ಈ ಘಟನೆಯು ತುಲ್ಸಾದ NBC ಸ್ಟುಡಿಯೋದಲ್ಲಿ ನಡೆದಿದ್ದು, ಜೂಲಿಗೆ ಟೆಲಿಪ್ರಾಂಪ್ಟರ್‌ನಿಂದ ಓದಲು ಕಷ್ಟವಾಗಿದೆ. ಎನ್‌ಬಿಸಿಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಹಂಚಿಕೊಂಡ ವೀಡಿಯೊದಲ್ಲಿ, ಜೂಲಿ ನಾಸಾದ ಇತ್ತೀಚಿನ ಉಡಾವಣೆಯ ಸುದ್ದಿಯನ್ನು … Continued

ಹಿಜಾಬ್ ಪ್ರಕರಣ: ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ ತೆಗೆಯುವುದೂ ಮೂಲಭೂತ ಹಕ್ಕಾಗುತ್ತದೆಯಲ್ಲವೇ-ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ಹೈಕೋರ್ಟ್‌ ಆದೇಶದ ವಿರುದ್ಧದ ಮೇಲ್ಮನವಿ ವಿಚಾರಣೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂವಿಧಾನದ 19ನೇ ವಿಧಿಯಡಿ ಉಡುಗೆ- ತೊಡುಗೆಯನ್ನು ಸಂಪೂರ್ಣ ಮೂಲಭೂತ ಹಕ್ಕು ಎಂದು ಹೇಳಿದರೆ, ಬಟ್ಟೆ ತೆಗೆಯುವುದು ಕೂಡ ಹಕ್ಕಾಗುವ ಅರ್ಹತೆ ಪಡೆಯುತ್ತದೆಯಲ್ಲವೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಅರ್ಜಿದಾರರನ್ನು ಪ್ರಶ್ನಿಸಿದೆ. ನ್ಯಾ. ಹೇಮಂತ್ … Continued

ಕೃಷಿ, ವಿಜ್ಞಾನ, ತಂತ್ರಜ್ಞಾನ,ವೈದ್ಯಕೀಯ ವಿಷಯಗಳಲ್ಲಿ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಕನ್ನಡ ಲೇಖಕರಿಂದ ಅರ್ಜಿ ಆಹ್ವಾನ

posted in: ರಾಜ್ಯ | 0

ಹುಬ್ಬಳ್ಳಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಪ್ರತಿ‌ 2 ವರ್ಷಗಳಿಗೊಮ್ಮೆ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಲಾಗುತ್ತಿದೆ. ಅದರಂತೆ ಜನವರಿ 2021 ರಿಂದ ಡಿಸೆಂಬರ್ 2022 ರಲ್ಲಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಲೇಖಕರು ನಿಗದಿತ ಅರ್ಜಿ ನಮೂನೆಯೊಂದಿಗೆ ಪುಸ್ತಕದ 4 ಪ್ರತಿಗಳನ್ನು 2023 … Continued

ವಿಶ್ವಾಸ ಕೊಟ್ಟು ವಿಶ್ವಾಸ ಗಳಿಸಿದವರು ಡಾ.ನ.ವಜ್ರಕುಮಾರ: ಧಾರವಾಡದ ನುಡಿ-ನಮನ ಕಾರ್ಯಕ್ರಮದಲ್ಲಿ ಡಾ.ವೀರೇಂದ್ರ ಹೆಗ್ಗಡೆ

posted in: ರಾಜ್ಯ | 0

ಧಾರವಾಡ: ಜನತಾ ಶಿಕ್ಷಣ ಸಂಸ್ಥೆಯನ್ನು ಕಟ್ಟುವಲ್ಲಿ ಡಾ. ನ.ವಜ್ರಕುಮಾರ ಅವರ ಕಾರ್ಯ ಅದ್ಭುತವಾದದ್ದು ಮತ್ತು ಪ್ರಮುಖವಾದದ್ದು. ಇವತ್ತು ಅವರ ದೇಹ ನಮ್ಮ ಜೊತೆಗೆ ಇರದಿದ್ದರೂ, ಅವರ ಅಸ್ತಿತ್ವ, ವ್ಯಕ್ತಿತ್ವವನ್ನು ಈ ಸಂಸ್ಥೆಯ ಮೂಲಕ ಉಳಿಸಿ ಹೋಗಿದ್ದಾರೆ. ಅವರು ತಮ್ಮ ಕಾರ್ಯದಿಂದ ಜನಮನದಲ್ಲಿ ಅಜರಾಮರರಾಗಿದ್ದಾ ಎಂದು ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು. ಇಲ್ಲಿಯ ಜನತಾ … Continued

ತೆರಿಗೆ ವಂಚನೆ: ನೋಂದಾಯಿತ, ಮಾನ್ಯತೆ ರಾಜಕೀಯ ಪಕ್ಷಗಳ ವಿರುದ್ಧ ತನಿಖೆ, ದೇಶಾದ್ಯಂತ ಐಟಿ ದಾಳಿ

ನವದೆಹಲಿ: ದೇಶಾದ್ಯಂತ ಹಲವಾರು ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳು (RUPP) ರಾಷ್ಟ್ರೀಯ ಖಜಾನೆಗೆ ಕೋಟಿಗಟ್ಟಲೆ ತೆರಿಗೆ ಹಣವನ್ನು ವಂಚಿಸಿದ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಕೆಲವು ಆರ್‌ಯುಪಿಪಿಗಳು, ಅವರ ಪ್ರವರ್ತಕರು ಮತ್ತು ಸಂಬಂಧಿತ ಘಟಕಗಳ ವಿರುದ್ಧ ಅವರ ಆದಾಯ ಮತ್ತು ವೆಚ್ಚದ ಮೂಲವನ್ನು ತನಿಖೆ ಮಾಡಲು ಇಲಾಖೆಯು ಸಂಘಟಿತ ಕ್ರಮವನ್ನು ಪ್ರಾರಂಭಿಸಿದೆ … Continued

ಇದು ಪರಿವಾರ ಜೋಡೋ: ಭಾರತ್ ಜೋಡೋ ಯಾತ್ರೆಯಲ್ಲಿ ಪೋಸ್ಟರಿನಲ್ಲಿದ್ದ ರಾಬರ್ಟ್ ವಾದ್ರಾ ಫೋಟೋ ಹಂಚಿಕೊಂಡು ಲೇವಡಿ ಮಾಡಿದ ಬಿಜೆಪಿ

ನವದೆಹಲಿ: ಕಾಂಗ್ರೆಸ್ ಪುನಶ್ಚೇತನದ ಉದ್ದೇಶದಿಂದ ಬುಧವಾರದಿಂದ ಆರಂಭಿಸಿರುವ ‘ಭಾರತ್ ಜೋಡೋ ಯಾತ್ರೆ’ಯಲ್ಲಿಯೂ ಪರಿವಾರ ರಾಜಕಾರಣ ನಡೆಸಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಗಾಂಧಿ ಕುಟುಂಬದ ಜತೆಗೆ ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಫೋಟೋ ಇರುವ ಪೋಸ್ಟರ್‌ಗಳ ಚಿತ್ರಗಳನ್ನು ಬಿಜೆಪಿ ಅಸ್ತ್ರವಾಗಿ ತೆಗೆದುಕೊಂಡಿದೆ. ಇದು ಭಾರತ್ ಜೋಡೋ ಅಲ್ಲ, ವಾಸ್ತವವಾಗಿ … Continued

ಉಮೇಶ ಕತ್ತಿ ನಿಧನ ಹಿನ್ನೆಲೆ: ರಾಜ್ಯದಲ್ಲಿ 3 ದಿನ ಶೋಕಾಚರಣೆ, ಬಿಜೆಪಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ

posted in: ರಾಜ್ಯ | 0

ಬೆಳಗಾವಿ: ದೊಡ್ಡಬಳ್ಳಾಪುರದಲ್ಲಿ ನಾಳೆ, ಸೆಪ್ಟೆಂಬರ್‌ 8ರಂದು (ಗುರುವಾರ) ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 11ಕ್ಕೆ ‌ಮುಂದೂಡಲಾಗಿದೆ. ಸಚಿವ ಉಮೇಶ್​ ಕತ್ತಿ ಅವರ ನಿಧನದ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಇರಲಿದ್ದು, ಈ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮ‌ಗಳು ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ … Continued