ಲೈವ್ ಕಾರ್ಯಕ್ರಮದ ವೇಳೆ ಡ್ರೋನ್‌ ಬಡಿದು ಗಾಯಗೊಂಡ ಬಾಲಿವುಡ್‌ ಗಾಯಕ ಬೆನ್ನಿ ದಯಾಳ : ವೀಕ್ಷಿಸಿ

ಶುಕ್ರವಾರ ಚೆನ್ನೈನಲ್ಲಿ ನಡೆದ ಲೈವ್ ಕನ್ಸರ್ಟ್ ವೇಳೆ ಬಾಲಿವುಡ್ ಗಾಯಕ ಬೆನ್ನಿ ದಯಾಳ ಅವರ ತಲೆಯ ಹಿಂಭಾಗಕ್ಕೆ ಡ್ರೋನ್ ಬಡಿದು ಗಾಯಗೊಂಡ ಘಟನೆ ನಡೆದಿದೆ. ಘಟನೆ ನಡೆದಾಗ ಗಾಯಕ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ, ಗಾಯಕ “ಊರ್ವಶಿ ಊರ್ವಶಿ” ಹಾಡನ್ನು ಹಾಡುತ್ತಿರುವುದನ್ನು ಕೇಳಬಹುದು. ಕೆಲವೇ ಸೆಕೆಂಡುಗಳಲ್ಲಿ, … Continued

ಗುಟ್ಖಾ ನಿಷೇಧ: ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದ ಮನವಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಗುಟ್ಕಾ ಮತ್ತು ಇತರ ತಂಬಾಕು ಆಧಾರಿತ ಉತ್ಪನ್ನಗಳ ಮಾರಾಟ, ತಯಾರಿಕೆ ಮತ್ತು ಸಾಗಣೆಯನ್ನು ನಿಷೇಧಿಸುವ ಮೇ 2018 ರ ಅಧಿಸೂಚನೆಯನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ ತಮಿಳುನಾಡು ಸರ್ಕಾರದ ಮನವಿಗೆ ಆಹಾರ ಸುರಕ್ಷತಾ ಆಯುಕ್ತರು ಹಾಗೂ ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರಿದ್ದ … Continued

8 ಕೋಟಿ ಅಕ್ರಮ ಹಣ ಸಿಕ್ಕರೂ ಶಾಸಕ ವಿರೂಪಾಕ್ಷಪ್ಪ ಅವರನ್ನು ಯಾಕೆ ಬಂಧಿಸಿಲ್ಲ : ಬಿಜೆಪಿಗೆ ಕೇಜ್ರಿವಾಲ್‌ ಪ್ರಶ್ನೆ

posted in: ರಾಜ್ಯ | 0

 ದಾವಣಗೆರೆ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ನಿವಾಸದಿಂದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ವಶ ಪಡಿಸಿಕೊಂಡ ನಂತರವೂ … Continued

ದೇಶಾದ್ಯಂತ ತೀವ್ರ ತರಹದ ಜ್ವರ-ಕೆಮ್ಮಿನ ಪ್ರಕರಣಗಳು ಏರಿಕೆ: ಆರೋಗ್ಯ ಸಲಹೆ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ : ಭಾರತದ ಹಲವು ಭಾಗಗಳಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ದೀರ್ಘಕಾಲದ ಅನಾರೋಗ್ಯ ಮತ್ತು ದೀರ್ಘಕಾಲದ ಕೆಮ್ಮಿನಿಂದ ಕೂಡಿದ ಹೆಚ್ಚಿನ ಸಂಖ್ಯೆಯ ಜ್ವರದ ಪ್ರಕರಣಗಳು ವರದಿಯಾಗುತ್ತಿವೆ. ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕ ರೋಗದ ನಂತರ, ಜ್ವರ ಪ್ರಕರಣಗಳ ಹೆಚ್ಚಳವು ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಿದೆ. ಭಾರತದ ಹಲವಾರು ರಾಜ್ಯಗಳಲ್ಲಿ ನಿರಂತರ ಕೆಮ್ಮು, ಜ್ವರ ಬಾಧಿಸುತ್ತಿದ್ದು, ಈ ಬಗ್ಗೆ … Continued

ಎಸ್​.ಎಂ. ಕೃಷ್ಣ ಭೇಟಿ ಮಾಡಿದ ಸಂಸದೆ ಸುಮಲತಾ ಅಂಬರೀಶ: ಕುತೂಹಲ ಮೂಡಿಸಿದ ಭೇಟಿ

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಷ ಅವರು ಇಂದು, ಶನಿವಾರ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪಕ್ಷೇತರ ಸಂಸದೆ ಸುಮಲತಾ ಅಂಬರೀಷ ಅವರು ಬಿಜೆಪಿ ಸೇರುತ್ತಾರೆ ಊಹಾಪೋಹ ಜೋರಾಗಿರುವಾಗಲೇ ಈ ಭೇಟಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ … Continued

ಮುಂಡಗೋಡ : ಶಿಬಿರದ ಮೇಲೆ ಹೆಜ್ಜೇನು ದಾಳಿ, 50ಕ್ಕೂ ಹೆಚ್ಚು ಜನರಿಗೆ ಗಾಯ

posted in: ರಾಜ್ಯ | 0

ಕಾರವಾರ : ಹೆಜ್ಜೇನು ದಾಳಿಗೆ ಐವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡಿನಲ್ಲಿ ಟಿಬೆಟಿಯನ್‌ ಕ್ಯಾಂಪ್‌ ಬಳಿ ನಡೆದಿದೆ. ಟಿಬೇಟಿಯನ್ ಕ್ಯಾಂಪ್‌ನ ಶಿಬಿರಕ್ಕೆ ಬಂದ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳು ಗಾಯಗೊಂಡಿದ್ದಾರೆ. ಟಿಬೇಟಿಯನ್ ಕ್ಯಾಂಪ್‌ನಲ್ಲಿ ದಲಿತ ಸಂಘರ್ಷ ಸಮಿತಿಯು ಮಾರ್ಚ್‌ 3 ಹಾಗೂ 4ರಂದು ಎರಡು ದಿನಗಳ ಶಿಬಿರ … Continued

ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ : ಶೇ.15ರಷ್ಟು ವೇತನ ಹೆಚ್ಚಿಸಿ ಸರ್ಕಾರದ ಆದೇಶ

posted in: ರಾಜ್ಯ | 0

ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ಸಂಭಾವನೆಯನ್ನು ಶೇ.15 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದ್ದು, ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ … Continued

ದೆಹಲಿ ಸಾರಾಯಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ 2 ದಿನ ವಿಸ್ತರಣೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿಯನ್ನು ಸಿಟಿ ಕೋರ್ಟ್ ಶನಿವಾರ ಎರಡು ದಿನಗಳ ಕಾಲ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಆಮ್ ಆದ್ಮಿ ಪಕ್ಷದ ನಾಯಕನನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಿಬಿಐಗೆ ಸೂಚಿಸಿದರು. ಈ … Continued

ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ.ಮರಿಗೌಡರ

(ಮಾರ್ಚ್‌  ೪ರಂದು ಶುಕ್ರವಾರ ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೆಳನ ಉಣಕಲ್ಲಿನ ಪಿ.ಬಿ. ರಸ್ತೆಯ ಸಿದ್ಧಪ್ಪಜ್ಜನ ಸಭಾಂಗಣದಲ್ಲಿ ನಡೆದಿದೆ) ಚನ್ನಪ್ಪಗೌಡ ಬಸನಗೌಡ ಮರಿಗೌಡರ ಎಲ್ಲರಿಗೂ ಸಿ.ಬಿ.ಮರಿಗೌಡರ ಸರ್ ಎಂದೇ ಚಿರಪರಿಚಿತರು. ೮೦ ವರ್ಷ ವಯಸ್ಸಿನ (ಜನನ:೦೧-೦೩-೧೯೪೩) ಇವರು ಪ್ರಾಥಮಿಕ ಶಿಕ್ಷಣವನ್ನು ಉಣಕಲ್ಲಿನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಗಂಗಾಧರ ಹೈಸ್ಕೂಲಿನಿಂದ ಪಡೆದಿದ್ದಾರೆ. ಎಸ್.ಎಸ್.ಎಲ್.ಸಿ ೧೯೬೦ ರಲ್ಲಿ, … Continued

ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾದ ವಿಜ್ಞಾನಿ ಶವವಾಗಿ ಪತ್ತೆ : ಬೆಲ್ಟ್‌ ಕುತ್ತಿಗೆಗೆ ಬಿಗಿದು ಕೊಲೆ-ವರದಿ

ಮಾಸ್ಕೋ: ರಷ್ಯಾದ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಸಹಾಯ ಮಾಡಿದ ರಷ್ಯಾದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರು ಗುರುವಾರ ಮಾಸ್ಕೋದ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿಗಳು ಶನಿವಾರ ತಿಳಿಸಿವೆ. ಬೊಟಿಕೋವ್ (47) ಅವರು ಗಮಾಲೆಯಾ ರಾಷ್ಟ್ರೀಯ ಪರಿಸರ ವಿಜ್ಞಾನ … Continued