ವೀಡಿಯೊ : ಇರಾನಿನಲ್ಲಿ ಹಿಜಾಬ್‌ ಧರಿಸದೇ ಅಂಗಡಿಗೆ ಬಂದಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಮೊಸರು ಸುರಿದ ವ್ಯಕ್ತಿ

ಇರಾನ್‌ನಲ್ಲಿ ಸಾರ್ವಜನಿಕವಾಗಿ ತಮ್ಮ ಕೂದಲನ್ನು ವಸ್ತ್ರದಿಂದ ಮುಚ್ಚದೇ ಇರುವುದಕ್ಕಾಗಿ ತಲೆಯ ಮೇಲೆ ಮೊಸರು ಸುರಿದು ಹಲ್ಲೆ ಮಾಡಿದ ನಂತರ ವ್ಸತ್ರದಿಂದ ಕೂದಲು ಮುಚ್ಚದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಘಟನೆ ಗುರುವಾರ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಅಂಗಡಿಯೊಂದರಲ್ಲಿ ಇಬ್ಬರು ಮಹಿಳಾ ಗ್ರಾಹಕರ ಜೊತೆ ವ್ಯಕ್ತಿಯೊಬ್ಬ ಸಂಭಾಷಣೆಯಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತದೆ. ನಂತರ ಆ ವ್ಯಕ್ತಿ … Continued

ʼಕಾಂಗ್ರೆಸ್ ಫೈಲ್ಸ್ʼ : ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ ವಿರುದ್ಧ ವೀಡಿಯೊ ಸರಣಿ ಅಭಿಯಾನ ಆರಂಭಿಸಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಕ್ಷವು 70 ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರಗಳನ್ನು ಆರೋಪಿಸುವ ವೀಡಿಯೊ ಸರಣಿಯ ‘ಕಾಂಗ್ರೆಸ್ ಫೈಲ್ಸ್’ ನ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಮೂರು ನಿಮಿಷಗಳ ವೀಡಿಯೊದಲ್ಲಿ ಎರಡು ಅವಧಿಗೆ ಯುಪಿಎ ಸರ್ಕಾರ ಮುನ್ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ … Continued

ಮದುವೆಯಲ್ಲಿ ಬಂದೂಕು ಹಿಡಿದು ಸಾಹಸಕ್ಕೆ ಮುಂದಾದ ವಧು-ವರರು: ಆದರೆ ಮುಂದಾಗಿದ್ದು ಮಾತ್ರ ಅನಾಹುತ | ವೀಕ್ಷಿಸಿ

ಭಾರತದಲ್ಲಿ ಮದುವೆಗಳು ಸರಳ ಹಾಗೂ ಸಂಪ್ರದಾಯಬದ್ಧ ಆಚರಣೆಗಳಿಗಿಂತ ಹೆಚ್ಚಾಗಿ ಚಿತ್ರವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿವೆ. ಅದರಲ್ಲಿಯೂ ಸೋಶಿಯಲ್‌ ಮೀಡಿಯಾಗಳು ಜನಪ್ರಿಯವಾದ ನಂತರ ಮದುವೆಗಳಲ್ಲಿ ಇಂಥ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿವೆ. ಹಿಂದೆಂದಿಗಿಂತಲೂ ಹೆಚ್ಚು ವಿಭಿನ್ನವಾಗಿ ಆಚರಿಸಿ ಗಮನ ಸೆಳೆಯಲು ಬಯಸುತ್ತಾರೆ. ನೃತ್ಯ ಪ್ರದರ್ಶನಗಳನ್ನು ನೀಡುವುದರಿಂದ ಹಿಡಿದು ತಮ್ಮ ಸಾಕುಪ್ರಾಣಿಗಳನ್ನು ಕರೆತರುವವರೆಗೆ, ನಿಮಗೆ ಮದುವೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ಇವು … Continued

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಜೆಡಿಎಸ್‌ನ ಶಿವಲಿಂಗೇಗೌಡ

ಶಿರಸಿ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹೊತ್ತಲ್ಲೇ ಜೆಡಿಎಸ್‌ (JDS) ಅರಸೀಕೆರೆ ಶಾಸಕ ಶಿವಲಿಂಗೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಶಿವಲಿಂಗೇಗೌಡ ಅವರು ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ನಾಯಕರೊಂದಿಗಿನ ಸಣ್ಣಪುಟ್ಟ … Continued

ಗೂಗಲ್‌ ಮ್ಯಾಪ್‌ ಯಡವಟ್ಟು..: ಪತ್ನಿ ಕಾಟದಿಂದ ತಪ್ಪಿಸಿಕೊಳ್ಳಲು ₹26 ಲಕ್ಷದೊಂದಿಗೆ ಗೋವಾಕ್ಕೆ ಹೊರಟ ವ್ಯಕ್ತಿ ಬೆಳಗಾವಿಯಲ್ಲಿ ಸಿಕ್ಕಿಬಿದ್ದ..!

ಬೆಳಗಾವಿ : ಇದೊಂದು ವಿಚಿತ್ರ ವಿದ್ಯಮಾನ. ಬರೋಬ್ಬರಿ  26 ಲಕ್ಷ ರೂ.ಗಳನ್ನು ನಗದು ತೆಗೆದುಕೊಂಡು ಮುಂಬೈನಿಂದ ಗೋವಾಕ್ಕೆ ಕಾರಲ್ಲಿ ಹೊರಟಿದ್ದ ಮುಂಬೈ ಮೂಲದ ಗುತ್ತಿಗೆದಾರನೊಬ್ಬ ಬೆಳಗಾವಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ತಾನು ಹೆಂಡತಿಯ ಕಾಟದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಗಿ ಹೇಳಿಕೊಂಡಿದ್ದಾನೆ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಸಂಬಂಧ ಬೆಳಗಾವಿಯ ಕರ್ನಾಟಕ ಚೌಕ್ ಬಳಿ ಸ್ಥಾಪಿಸಲಾದ ಚೆಕ್ ಪೋಸ್ಟ್ … Continued

‘ಮೋದಿ ಉಪನಾಮ’ದ ಮಾನನಷ್ಟ ಪ್ರಕರಣ: ಸೂರತ್ ಕೋರ್ಟ್‌ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ನಾಳೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ (ಏಪ್ರಿಲ್ 3) ಗುಜರಾತ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಹಾಗೂ ‘ಮೋದಿ ಉಪನಾಮ’ದ ಹೇಳಿಕೆ ಕುರಿತ ಮಾನನಷ್ಟ ಪ್ರಕರಣದಲ್ಲಿ ತಮ್ಮ ವಿರುದ್ಧದ ಅಪರಾಧ ಮತ್ತು ಎರಡು ವರ್ಷಗಳ ಶಿಕ್ಷೆಯ ವಿರುದ್ಧ ಅಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ಕಾನೂನು ತಂಡವು ಸೂರತ್‌ನ … Continued

ಚಿತ್ರದುರ್ಗದಲ್ಲಿ ನಡೆದ ಇಸ್ರೋದ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ | ವೀಕ್ಷಿಸಿ

ಬೆಂಗಳೂರು: ಭಾನುವಾರ, ಏಪ್ರಿಲ್ 2 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮೂಲ ಮಾದರಿಯ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ವಾಯುಪಡೆಯ (ಐಎಎಫ್) ಸಹಕಾರದೊಂದಿಗೆ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಲ್ಲಿ ಭಾನುವಾರ ಮುಂಜಾನೆ … Continued

24 ಗಂಟೆಗಳಲ್ಲಿ 3,823 ಹೊಸ ಕೋವಿಡ್ ಪ್ರಕರಣ ವರದಿ ಮಾಡಿದ ಭಾರತ : ನಿನ್ನೆಗಿಂತ 27%ರಷ್ಟು ಜಿಗಿತ

ನವದೆಹಲಿ: ತುಸು ಇಳಿಕೆ ಕಂಡ ನಂತರದಲ್ಲಿ ಕಳೆದ 24-ಗಂಟೆಗಳಲ್ಲಿ ದೇಶವು 3,800 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಿಸುವುದರ ಮೂಲಕ ಮತ್ತೆ ಜಿಗಿತವನ್ನು ವರದಿ ಮಾಡಿದೆ. ಭಾರತದಲ್ಲಿ 2,994 ಹೊಸ ಕೋವಿಡ್ ಸೋಂಕುಗಳು ದಾಖಲಾದ ಒಂದು ದಿನದ ನಂತರ 3,823 ಹೊಸ ಕೋವಿಡ್ ಪ್ರಕರಣಗಳ ಜಿಗಿತವು ಬಂದಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ … Continued

ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ, ಶನಿವಾರ ರಾತ್ರಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾಜು ಝಾ ಮತ್ತು ಅವರ ಸ್ನೇಹಿತ ಕೋಲ್ಕತ್ತಾಗೆ ಹೋಗುತ್ತಿದ್ದಾಗ ಅವರು ದಾರಿಯಲ್ಲಿ ಜನಪ್ರಿಯ ಪಿಟ್ ಸ್ಟಾಪ್ ಶಕ್ತಿಗಢದಲ್ಲಿ ನಿಂತರು, ಅವರ ಕಾರನ್ನು ಹೆದ್ದಾರಿಯಲ್ಲಿ ನಿಲ್ಲಿಸಿದಾಗ, ಮತ್ತೊಂದು ಕಾರು ಅದರ ಪಕ್ಕದಲ್ಲಿ ನಿಂತಿತು ಮತ್ತು … Continued

ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ತ್ಯಾಗವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಆದರೆ …: ಶರದ್ ಪವಾರ್

ನಾಗ್ಪುರ: ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ದಿವಂಗತ ವಿ.ಡಿ. ಸಾವರ್ಕರ್ ಅವರ ತ್ಯಾಗವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗೂ ಅವರ ಮೇಲಿನ ಭಿನ್ನಾಭಿಪ್ರಾಯಗಳನ್ನು ಇಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ಅನೇಕ ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಬೇಕಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ. ಇದೇ ವೇಳೆ ವಿದೇಶಿ … Continued