ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

ಹೈದರಾಬಾದ್: ತೆಲಂಗಾಣ ಪೊಲೀಸರು ರೋಹಿತ್ ವೇಮುಲ (Rohith Vemula) ಸಾವಿನ ಪ್ರಕರಣವನ್ನು ಶುಕ್ರವಾರ ಮುಕ್ತಾಯಗೊಳಿಸಿದ್ದಾರೆ. ಪ್ರಕರಣದಲ್ಲಿನ ಎಲ್ಲಾ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಪೊಲೀಸರು ಸಲ್ಲಿಸಿದ ಅಂತಿಮ ವರದಿಯಲ್ಲಿ ರೋಹಿತ್ ವೇಮುಲ ದಲಿತನೇ ಅಲ್ಲ. ಆತ ತನ್ನ ನಿಜವಾದ ಜಾತಿಯ ಗುರುತು ಪತ್ತೆಯಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯನ್ನು … Continued

ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಾಜಿ ಜಿಪಂ ಸದಸ್ಯೆಯೊಬ್ಬರು ತಮ್ಮ ಮೇಲೆ ಪ್ರಜ್ವಲ್ ರೇವಣ್ಣ ನಿರಂತರವಾಗಿ ಅತ್ಯಾಚಾರ ವೆಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಲೈಂಗಿಕ ದೌರ್ಜನ್ಯದ ವೀಡಿಯೊ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿರುದ್ಧ ಶುಕ್ರವಾರ ಮತ್ತೊಂದು ಎಫ್ ಐಆರ್ ದಾಖಲಾಗಿದ್ದು, … Continued

ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಬೆಂಗಳೂರು: ಬರೋಬ್ಬರಿ ಐದು ತಿಂಗಳ ಬಳಿಕ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ನಗರದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣ ತಂಪೆರೆದಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು 40 ಡಿಗ್ರಿಗೆ ಏರಿದ್ದ ತಾಪಮಾನ ಮಳೆಯಾದ ಬಳಿಕ 24 ಡಿಗ್ರಿಗೆ ಕುಸಿದಿದೆ ಎಂದು ಹೇಳಲಾಗಿದೆ. … Continued

ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ…!

ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಭಾಗವತ ಕಥಾ ನಾಟಕದ ಪ್ರದರ್ಶನದ ವೇಳೆ ಕಾಳಿ ದೇವಿ ಪಾತ್ರ ಮಾಡಿದ್ದ 14 ವರ್ಷದ ಬಾಲಕ ಮತ್ತೊಬ್ಬ 11 ವರ್ಷದ ಬಾಲಕನ ಕತ್ತು ಸೀಳಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. . ಬುಧವಾರ ಬಂಭಿಯಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಭಾಷ್ ಸೈನಿ ಎಂಬವರ ಮನೆಯವರು … Continued

ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಚೀನಾದ ವ್ಯಕ್ತಿಯೊಬ್ಬ ಆಫ್ರಿಕನ್ ಕಾರ್ಮಿಕರಿಗೆ ಚಾವಟಿಯಿಂದ ಹೊಡೆಯುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. X ನಲ್ಲಿ ವೀಡಿಯೊವನ್ನು ಹಂಚಿಕೊಂಡ ಪತ್ರಕರ್ತ ಡೊಮ್ ಲುಕ್ರೆ ಅವರು, ಉದ್ಯೋಗಿಗಳನ್ನು “ಟ್ರಾನ್ಸ್-ಅಟ್ಲಾಂಟಿಕ್ ಗುಲಾಮರಂತೆ” ಪರಿಗಣಿಸಲಾಗುತ್ತಿದೆ ಎಂದು ಬರೆದಿದ್ದಾರೆ. ಕ್ಲಿಪ್‌ನಲ್ಲಿ, ಉದ್ಯೋಗಿಗಳು ಕಂಟೇನರ್‌ನಂತೆ ಕಾಣುವ ಸ್ಥಳದಲ್ಲಿ ಕುಳಿತಿದ್ದಾರೆ ಮತ್ತು ಚೀನಾದ ವ್ಯಕ್ತಿ ಅವರನ್ನು ಕೂಗುತ್ತಿದ್ದಾನೆ. ನಂತರ ಆತ … Continued

ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಮೈಸೂರು: ಮೈಸೂರು: ಪ್ರಜ್ವಲ್ ರೇವಣ್ಣ ಅವರ ಆರೋಪಿತ ಲೈಂಗಿಕ ದೌರ್ಜ್ಯನದ ಪ್ರಕರಣಲ್ಲಿ ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ (H.D Revanna) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತನ್ನ ತಾಯಿ ನಾಪತ್ತೆಯಾಗಿದ್ದಾರೆ, ಹಾಗೂ ಅವರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ರೇವಣ್ಣ ವಿರುದ್ದ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಪೆನ್‍ಡ್ರೈವ್ ಪ್ರಕರಣದಲ್ಲಿ ಎ1 … Continued

ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

ಮುಂಬೈ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವಿದ್ಯುತ್‌ ಕೈಕೊಟ್ಟ ನಂತರ ವೈದ್ಯರು ಮೊಬೈಲ್‌ ಟಾರ್ಚ್‌ ಲೈಟ್‌ ಬಳಸಿ ಗರ್ಭಿಣಿಗೆ ಹೆರಿಗೆ ಮಾಡಲು ಮುಂದಾದಾದ ನಂತರ ತಾಯಿ ಹಾಗೂ ಮಗು ಮೃತಪಟ್ಟ ಘಟನೆ ಮುಂಬೈ ಮಹಾನಗರ ಪಾಲಿಕೆ ನಡೆಸುತ್ತಿರುವ ಸುಷ್ಮಾ ಸ್ವರಾಜ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಮಹಿಳೆಯ ಪತಿ ಖುಸ್ರುದ್ದೀನ್ ಅನ್ಸಾರಿ ಸ್ವತಃ ಅಂಗವಿಕಲರಾಗಿದ್ದಾರೆ, ಅವರ … Continued

ವೀಡಿಯೊ…| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ರಾಯಗಢ: ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆಯನ್ನು ಕರೆದುಕೊಂಡು ಬರಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹಠಾತ್ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಂಧಾರೆ ಹಂಚಿಕೊಂಡ ವೀಡಿಯೊ ದೃಶ್ಯಾವಳಿ ಪ್ರಕಾರ, ಹೆಲಿಕಾಪ್ಟರ್ ಅಪರಿಚಿತ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಇದ್ದಕ್ಕಿದ್ದಂತೆ ಅದು ತಿರುಗಲು ಪ್ರಾರಂಭಿಸಿದೆ. ನಂತರ ಸಮತೋಲನವನ್ನು ಕಳೆದುಕೊಂಡು ತೆರೆದ ಮೈದಾನದಲ್ಲಿ ಧೂಳಿನ … Continued

ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

ಶಿರಸಿ: ಉದ್ಯಮಿ ಹಾಗೂ ಕೆಪಿಸಿಸಿ ಸದಸ್ಯ ಶಿರಸಿಯ ದೀಪಕ ದೊಡ್ಡೂರು ಹಾಗೂ ಇವರ ಪಾಲುದಾರರ ನಿವಾಸದ ಮೇಲೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಮೂರು ಕಾರುಗಳಲ್ಲಿ ಬಂದ ಆದಾಯ ತೆರಿಗೆ ಅಧಿಕಾರಿಗಳ ತಂಡ ದೀಪಕ ಅವರ ನಗರದ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 10 ಜನ ಅಧಿಕಾರಿಗಳ ತಂಡ … Continued

ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ನವದೆಹಲಿ : ರಾಹುಲ್‌ ಗಾಂಧಿ ಅಮೇಥಿಯನ್ನು ಮರಳಿ ಗೆಲ್ಲಲು ಸಂಪೂರ್ಣ ಪ್ರಯತ್ನ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷವು ರಾಹುಲ್ ಗಾಂಧಿ ಅವರನ್ನು ರಾಯ್ಬರೇಲಿಯಿಂದ ಕಣಕ್ಕಿಳಿಸುವುದಾಗಿ ಪ್ರಕಟಿಸಿದೆ. ಕಾಂಗ್ರೆಸ್ ಶುಕ್ರವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಯ್ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಉತ್ತರ ಪ್ರದೇಶದ … Continued