ಮಂಗಳೂರು | ಮಾರಕಾಸ್ತ್ರಗಳಿಂದ ಕೊಚ್ಚಿ ಹಿಂದೂ ಕಾರ್ಯಕರ್ತ -ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆ

ಮಂಗಳೂರು: ನಗರದಲ್ಲಿ ಗುರುವಾರ ರಾತ್ರಿ ರೌಡಿಶೀಟರ್‌ ಬರ್ಬರ ಹತ್ಯೆ ನಡೆದಿದೆ. ಫಾಜಿಲ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ ಶೆಟ್ಟಿ (Suhas Shetty) ಕೊಲೆಯಾದ ವ್ಯಕ್ತಿ. ಮಂಗಳೂರಿನ ಬಜಪೆ ಕಿನ್ನಿಪದವು ಬಳಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ತಲ್ವಾರ್‌ಗಳಿಂದ ಹಲ್ಲೆ ನಡೆಸಿದ್ದರಿಂದ ಸುಹಾಸ್ ಶೆಟ್ಟಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸುಹಾಸ್ ಶೆಟ್ಟಿ ಈ ಹಿಂದೆ … Continued

ಆರತಿ ವೇಳೆ ಬೆಂಕಿ ತಗುಲಿ ಗಾಯ ; ಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್‌ ನಿಧನ

ಉದಯಪುರ: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ (79) ಸುಟ್ಟ ಗಾಯಗಳಿಂದಾಗಿ ಗುರುವಾರ (ಮೇ 1) ರಾಜಸ್ಥಾನದ ಉದಯಪುರದಲ್ಲಿ ನಿಧನರಾದರು. ಮಾರ್ಚ್ 31ರಂದು ಉದಯಪುರದ ತಮ್ಮ ಮನೆಯಲ್ಲಿ ‘ಆರತಿ’ ಮಾಡುತ್ತಿದ್ದಾಗ ಬೆಂಕಿ ತಗುಲಿ ಅವರಿಗೆ ಸುಟ್ಟ ಗಾಯಗಳಾಗಿದ್ದವು. ವ್ಯಾಸ್ ಅವರನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಪ್ರಾಥಮಿಕ … Continued

ಗಡ್ಡ ತೆಗೆಯಲು ಒಪ್ಪದ ಗಂಡ ; ‘ಕ್ಲೀನ್ ಶೇವ್’ ಮಾಡುತ್ತಿದ್ದ ಗಂಡನ ತಮ್ಮನ ಜೊತೆ ಓಡಿಹೋದ ಮಹಿಳೆ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿಚಿತ್ರ ಅಸಾಮಾನ್ಯ ಪ್ರಕರಣವೊಂದರಲ್ಲಿ, ಎಷ್ಟೇ ಹೇಳಿದರೂ ಗಡ್ಡ ತೆಗೆಯಲು ನಿರಾಕರಿಸಿದ ಗಂಡನನ್ನು ಬಿಟ್ಟು ಮಹಿಳೆಯೊಬ್ಬಳು ತನ್ನ ಗಂಡನ ಸಹೋದರ ಜೊತೆ ಓಡಿಹೋಗಿದ್ದಾಳೆ…! ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಏಳು ತಿಂಗಳ ಹಿಂದೆಯಷ್ಟೇ 25 ವರ್ಷದ ಅರ್ಷಿ ಎಂಬ ಮಹಿಳೆಯನ್ನು … Continued

ಬಸ್‌ನಲ್ಲಿ ನಮಾಜ್‌ ಮಾಡಿದ ಚಾಲಕ ಅಮಾನತು ; ಕಾರ್ಮಿಕ ದಿನಾಚರಣೆಯಂದೇ ಸಸ್ಪೆಂಡ್‌

ಹುಬ್ಬಳ್ಳಿ : ಮಾರ್ಗ ಮಧ್ಯೆಯೇ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. (ಮೇ 1), ಕಾರ್ಮಿಕರ ದಿನಾಚರಣೆಯಂದೇ ಚಾಲಕ ಅಮಾನತುಗೊಂಡಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಹಾನಗಲ್ (Hangal) … Continued

ಗ್ಯಾಸ್ ಸಿಲಿಂಡರ್‌ ಸೋರಿಕೆಯಿಂದ ಹೊತ್ತಿ ಉರಿದ ಮನೆ ; ಇಬ್ಬರು ಸಜೀವ ದಹನ, ನಾಲ್ವರಿಗೆ ಗಾಯ

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ನೆಲಮಂಗಲ ಸಮೀಪದ ಅಡಕಮಾರಹಳ್ಳಿಯಲ್ಲಿ ಗುರುವಾರ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಿಂದ ಮೃತರನ್ನು 50 ವರ್ಷದ ನಾಗರಾಜು ಮತ್ತು 50 ವರ್ಷದ ಶ್ರೀನಿವಾಸ ಎಂದು ಗುರುತಿಸಲಾಗಿದೆ. ಗಾಯಗೊಂಡ ಅಭಿಷೇಕ ಗೌಡ, ಶಿವಶಂಕರ್, ಲಕ್ಷ್ಮಿದೇವಿ ಮತ್ತು ಬಸನಗೌಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮನೆಯೊಳಗಿನ ಎಲ್‌ಪಿಜಿ ಗ್ಯಾಸ್ ಸೋರಿಕೆಯಿಂದ ಬೆಂಕಿ … Continued

ನಾಳೆ (ಮೇ 2) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ…; ನೋಡುವುದು ಹೇಗೆ…?

ಬೆಂಗಳೂರು : ಮೇ 2ರಂದು (ಶುಕ್ರವಾರ) ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (SSLC result 2025) ಪ್ರಕಟವಾಗಲಿದೆ. ಪರೀಕ್ಷೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿರುವ ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೇ 2ರಂದು ಫಲಿತಾಂಶ ಪ್ರಕಟಿಸಲಿದೆ. ಶುಕ್ರವಾರ (ಮೇ 2)ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದು, ಮಧ್ಯಾಹ್ನ … Continued

ಕೋಲಾರ | ಬೆಟ್ಟಿಂಗ್‌ ಕಟ್ಟಿ ನೀರು ಬೆರೆಸದೆ 5 ಬಾಟಲಿ ಮದ್ಯ ಕುಡಿದ ಯುವಕ ಸಾವು

 ಬೆಂಗಳೂರು:  21 ವರ್ಷದ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ 10,000 ರೂ. ಬೆಟ್ಟಿಂಗ್‌ ಕಟ್ಟಿದ ನಂತರ ಐದು ಬಾಟಲಿ ಮದ್ಯ ಕುಡಿದು ಸಾವಿಗೀಡಾದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದೆ ಎಂದು ವರದಿಯಾಗಿದೆ. ಕಾರ್ತಿಕ ಎಂಬ ವ್ಯಕ್ತಿ ತನ್ನ ಸ್ನೇಹಿತರಾದ ವೆಂಕಟ ರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರಿಗೆ … Continued

ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಗೆ ರಾ ಮಾಜಿ ಮುಖ್ಯಸ್ಥ ಅಲೋಕ ಜೋಶಿ ನೂತನ ಮುಖ್ಯಸ್ಥ

ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನು (ಎನ್‌ಎಸ್‌ಎಬಿ) ಪರಿಷ್ಕರಿಸಿದ್ದು, ಮಾಜಿ ರಾ ಮುಖ್ಯಸ್ಥ ಅಲೋಕ ಜೋಶಿ ಅವರನ್ನು ಅದರ ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ ಮತ್ತು ಮಂಡಳಿಗೆ ಇತರ ಆರು ಸದಸ್ಯರನ್ನು ನೇಮಕ ಮಾಡಿದೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ … Continued

ಪಹಲ್ಗಾಮ್ ದಾಳಿಗೆ ʼಭಾರತʼದ ಜಲ ʼಅಸ್ತ್ರʼಕ್ಕೆ ಪಾಕ್‌ ತತ್ತರ ; ಸಿಂಧೂ ಜಲ ಒಪ್ಪಂದ ರದ್ದಾದ ನಂತರ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದ ಬತ್ತಿದ ʼಪಾಕಿಸ್ತಾನʼದ ಕಾಲುವೆಗಳು..!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಘೋಷಿಸಲಾದ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಭಾರತ ಅಮಾನತುಗೊಳಿಸಿದ ನಂತರದ ಮೊದಲ ಪರಿಣಾಮ ಗೋಚರವಾಗಿದೆ. ಭಾರತೀಯ ಸೇನೆಯ ಮಿಲಿಟರಿ ಗುಪ್ತಚರ ಅನುಭವಿ ಕರ್ನಲ್ ವಿನಾಯಕ್ ಭಟ್ (ನಿವೃತ್ತ) ಹಂಚಿಕೊಂಡ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಚೆನಾಬ್ ನದಿಯ ಮರಾಲಾ ಹೆಡ್‌ವರ್ಕ್ಸ್‌ನಲ್ಲಿ ನೀರಿನ ಹರಿವಿನಲ್ಲಿ ತೀವ್ರ ಕುಸಿತವಾಗಿದ್ದನ್ನು ಬಹಿರಂಗಪಡಿಸಿವೆ. ಏಪ್ರಿಲ್ 21 … Continued

ಪಹಲ್ಗಾಮ್‌ ದಾಳಿ | ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಬಂದ್

ನವದೆಹಲಿ : ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಹತ್ಯೆಯಾದ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದೆ. ಅದಿ ಪ್ರತಿಯಾಗಿ ಪಾಕಿಸ್ತಾನವು ಕ್ರಮ ಕೈಗೊಂಡಿದೆ. ಪಾಕಿಸ್ತಾನವು ತನ್ನ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳ ಸಂಚಾರವನ್ನು ಮುಚ್ಚಿದ್ದು, ಈಗ ಭಾರತವು ಪಾಕಿಸ್ತಾನದಿಂದ ಬರುವ ಎಲ್ಲ ವಿಮಾನಗಳಿಗೆ … Continued