ಟೈಗರ್ ಶ್ರಾಫ್ ಮೂಲ ಟಾರ್ಗೆಟ್‌ ಆಗಿರಲಿಲ್ಲ, ಶೂಟರ್‌ಗಳು ಬೇರೊಬ್ಬರನ್ನು ಕೊಲ್ಲಲು ಬಂದಿದ್ದರು : ವರದಿ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹತ್ಯೆಗೆ ಯತ್ನ ನಡೆದಿತ್ತು ಎನ್ನಲಾದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಗುಂಡಿನ ದಾಳಿ ನಡೆಸಿದ ಆರೋಪಿಗಳ ಮೂಲ ಗುರಿ ಟೈಗರ್ ಶ್ರಾಫ್ ಆಗಿರಲಿಲ್ಲ. ಬದಲಿಗೆ, ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಅವರು ಮುಂಬೈಗೆ ಬಂದಿದ್ದರು ಎಂಬ ಆಘಾತಕಾರಿ ಸಂಗತಿ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳನ್ನು … Continued

ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಟಿ ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಅಭಿಮಾನಿಯ ಹುಚ್ಚಾಟ

ತುಮಕೂರು: ತುಮಕೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ  ರಚಿತಾ ರಾಮ್ ಅವರ ಜೊತೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ನಟಿಯ ಪೂರ್ವಾನುಮತಿಯಿಲ್ಲದೆ ಅವರ ಹೆಗಲ ಮೇಲೆ ಕೈಹಾಕಿ, ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಆತ ಯತ್ನಿಸಿದ್ದಾನೆ. ಸೋಮವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಟಿ ರಚಿತಾ ರಾಮ್‌ ವೇದಿಕೆಗೆ ಆಗಮಿಸಿದ್ದರು. ಈ ವೇಳೆ … Continued

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ; ಇಬ್ಬರು ಪ್ರಯಾಣಿಕರ ಬಂಧನ

ಬೆಂಗಳೂರು: ಬ್ಯಾಂಕಾಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದು, ಒಟ್ಟು ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಇಬ್ಬರು ಆರೋಪಿಗಳನ್ನು ‘ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್’ (NDPS) ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬ್ಯಾಂಕಾಕ್‌ನಿಂದ ಬಂದ … Continued

ಹಿಂಗಾರು ಮಳೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

ಧಾರವಾಡ: ದಸರಾ ಹಬ್ಬದ ವಿಜಯದಶಮಿ ಹಾಗೂ ಆಯುಧಪೂಜೆಯ ಸಂದರ್ಭದಲ್ಲಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮಳೆ-ಬೆಳೆ, ಜನಜೀವನ, ಪ್ರಕೃತಿಯ ಆಗುಹೋಗುಗಳ ಕುರಿತು ಭವಿಷ್ಯ ನುಡಿದಿದ್ದಾರೆ ಯುಗಾದಿ ವೇಳೆ ಮುಂಗಾರು ಮಳೆಯ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಈಗ ದಸರಾ ವೇಳೆ ಹಿಂಗಾರು ಮಳೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಂಗಳವಾರ ಧಾರವಾಡದಲ್ಲಿ ನಡೆದ … Continued

ಅಮೆರಿಕದ ಮಧ್ಯಂತರ ಚುನಾವಣೆ ಸನಿಹದಲ್ಲೇ ಟ್ರಂಪ್ ಜನಪ್ರಿಯತೆ ಸಾರ್ವಕಾಲಿಕ ಕುಸಿತ : ರಿಪಬ್ಲಿಕನ್‌ಗಳಿಗೆ ಸೋಲಿನ ಭೀತಿ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜನಪ್ರಿಯತೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಮುಂದಿನ ತಿಂಗಳು ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಟ್ರಂಪ್‌ ಅವರ ಕಾರ್ಯವೈಖರಿಗೆ ಕೇವಲ ಶೇ. 31ರಷ್ಟು ಅಮೆರಿಕನ್ನರು ಮಾತ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್‌/ಇಪ್ಸೋಸ್‌ (Reuters/Ipsos) ಸಮೀಕ್ಷೆ ತಿಳಿಸಿದೆ. ಟ್ರಂಪ್‌ ಅವರ … Continued

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಮುಹೂರ್ತ ನಿಗದಿ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್‌ 1ರಂದು ಬೆಂಗಳೂರು–ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ ನೀಡುವ ಸಾಧ್ಯತೆಯಿದ್ದು, ನವೆಂಬರ್‌ 2ರಿಂದ ನಿಯಮಿತ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ರೈಲು, ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದೇಶದ ವಾಣಿಜ್ಯ ಮಹಾನಗರಿ ಮುಂಬೈ … Continued

ವಿಡಿಯೋ | ಮಾತನಾಡ್ಲಿಕ್ಕೇ ಆಗ್ತಿಲ್ಲ, ಇನ್ನು ಹಾಡೋದಾದ್ರೂ ಹೇಗೆ? ಗಾಯಕ ದಲೇರ್ ಮೆಹಂದಿಗೆ ವೇದಿಕೆಯಲ್ಲೇ ಸಚಿವರ ತರಾಟೆ

ಡೆಹ್ರಾಡೂನ್: “ನಿಮಗೆ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದಾದರೂ ಹೇಗೆ?” ಎಂದು ಬಾಲಿವುಡ್‌ನ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರನ್ನು ಉತ್ತರಾಖಂಡದ ಅರಣ್ಯ ಸಚಿವ ಸುಬೋಧ ಉನಿಯಾಲ್ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ತೇಹ್ರಿ ಜಿಲ್ಲೆಯ ನರೇಂದ್ರನಗರದಲ್ಲಿ ನಡೆದ ಕುಂಜಾಪುರಿ ಮೇಳದಲ್ಲಿ ನಡೆದಿದೆ. ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಲೇರ್ ಮೆಹಂದಿ ಹಾಡುತ್ತಿದ್ದ … Continued

“ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್”: ದೇವರಗುಡ್ಡದಲ್ಲಿ ಗೊರವಯ್ಯ ನುಡಿದ ಕಾರ್ಣಿಕದ ಅರ್ಥವೇನು?

ಹಾವೇರಿ: ನಾಡಿನ ಪ್ರಸಿದ್ಧ ಕಾರ್ಣಿಕೋತ್ಸವಗಳಲ್ಲಿ ಒಂದಾದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವ ನವರಾತ್ರಿ ಪ್ರಯುಕ್ತ ಸೋಮವಾರ ನಡೆಯಿತು. ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ದೇವರಗುಡ್ಡದ ಪವಿತ್ರ ‘ಕರಿಯಾಲ್ ಕಟ್ಟಿ’ಯ ಬಳಿ ಈ ವರ್ಷದ ಕಾರ್ಣಿಕ ದೈವವಾಣಿ ಮೊಳಗಿತು. ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲನ್ನೇರಿ, ‘ಕೆಂಪುಕೋಟೆಯ … Continued