ಪ್ರಕಟಣೆ ನಿಲ್ಲಿಸಿದ ಕನ್ನಡ ವಾರಪತ್ರಿಕೆ ʼಮಂಗಳʼ

ಕನ್ನಡ ಓದುಗರ ಮನೆಮಾತಾಗಿದ್ದ ‘ಮಂಗಳ’ ವಾರ ಪತ್ರಿಕೆ ತನ್ನ ಪ್ರಕಟಣೆ ನಿಲ್ಲಿಸಲಿದೆ ಎಂದು ವರದಿಯಾಗಿದೆ. ಕನ್ನಡ ಪತ್ರಿಕಾರಂಗದಲ್ಲಿ ಅನೇಕ ದಶಕಗಳಿಂದ ಗುರುತಿಸಿಕೊಂಡಿದ್ದ ಮಂಗಳ ವಾರಪತ್ರಿಕೆ ಇನ್ನುಮುಂದೆ ಪ್ರಕಟವಾಗುವುದಿಲ್ಲ. ಈ ಕುರಿತು ಮಂಗಳ ವಾರ ಪತ್ರಿಕೆ ಸಂಪಾದಕರು ಪ್ರಕಟಣೆ ನೀಡಿದ್ದು, ಈ ವಾರ ಮಂಗಳ ವಾರಪತ್ರಿಕೆಯ ಕೊನೆಯ ಸಂಚಿಕೆ ಮುದ್ರಣಗೊಂಡಿದೆ ಎಂದು ತಿಳಿಸಿದ್ದಾರೆ. ಸರಿಸುಮಾರು ನಾಲ್ಕು ದಶಕಗಳ … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಐದಾರು ದಿನ ಮಳೆಯ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಮುಂದಿನ ಐದಾರು ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆ ಹಾಗೂ ಕೆಲವಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ … Continued

ಸಿಕ್ಕಿಂ ಹಠಾತ್ ಪ್ರವಾಹ: ಸಾವಿನ ಸಂಖ್ಯೆ 56ಕ್ಕೆ ಏರಿಕೆ, 100ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆ

ಸಿಕ್ಕಿಂನಲ್ಲಿ ಸಂಭವಿಸಿದ ತೀಸ್ತಾ ನದಿಯ ಭಾರೀ ಪ್ರವಾಹದಲ್ಲಿ ಸತ್ತವರ ಸಂಖ್ಯೆ ಶನಿವಾರ 56 ಕ್ಕೆ ತಲುಪಿದೆ. ಇದುವರೆಗೆ ಸಿಕ್ಕಿಂನಲ್ಲಿ 26 ಮೃತದೇಹಗಳು ಪತ್ತೆಯಾದರೆ, ಪಶ್ಚಿಮ ಬಂಗಾಳದ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ 30 ಮೃತದೇಹಗಳು ಪತ್ತೆಯಾಗಿವೆ. ಸೇನಾ ಸಿಬ್ಬಂದಿ ಸೇರಿದಂತೆ ಸಿಕ್ಕಿಂನಲ್ಲಿ ಕನಿಷ್ಠ 142 ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ವಿಪತ್ತು ನಿರ್ವಹಣಾ ಅಧಿಕಾರಿಗಳು ಸಿಕ್ಕಿಂನಲ್ಲಿ ಇದುವರೆಗೆ … Continued

ಐತಿಹಾಸಿಕ…: ಏಷ್ಯನ್ ಗೇಮ್ಸ್‌ನಲ್ಲಿ 100-ಪದಕಗಳ ಮೈಲಿಗಲ್ಲು ಮುಟ್ಟಿದ ಭಾರತ

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಭಾರತವು ಅಧಿಕೃತವಾಗಿ 100 ಪದಕಗಳ ಮೈಲಿಗಲ್ಲನ್ನು ತಲುಪಿದೆ. ಶನಿವಾರ ಬೆಳಿಗ್ಗೆ ಭಾರತೀಯ ಕ್ರೀಡಾಪಟುಗಳು ಅಮೋಘ ಸಾಧನೆಗೈದಿದ್ದು 3 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ವರ್ಣ ದಿನವನ್ನು ಆರಂಭಿಸಿದ್ದಾರೆ. ಏಶ್ಯನ್‌ ಗೇಮ್ಸ್‌ ಶನಿವಾರ (ಅ.7) ನಡೆದ ಕಬ್ಬಡ್ಡಿಯ ಅಂತಿಮ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ … Continued

ದೇಶದ ಉತ್ತರದ ಗಡಿ ತಿರುಚಲು ಯತ್ನ : ಎಫ್‌ಐಆರ್‌ನಲ್ಲಿ ನ್ಯೂಸ್‌ಕ್ಲಿಕ್‌ ಸಂಸ್ಥಾಪಕರ ವಿರುದ್ಧ ಆರೋಪ

ನವದೆಹಲಿ: ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಮತ್ತು ಪೋರ್ಟಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರು ವಿದೇಶಿ ನಿಧಿಯ ಮೂಲಕ ಕೋಟ್ಯಂತರ ರೂಪಾಯಿ ಸ್ವೀಕರಿಸಿದ್ದಾರೆ. ಹಾಗೂ ಅದನ್ನು ಭಾರತದ ಸಮಗ್ರತೆ ಮತ್ತು ಭದ್ರತೆಗೆ ಹಾನಿ ಮಾಡಲು ಬಳಕೆ ಮಾಡಿದ್ದಾರೆ ಎಂದು ದೆಹಲಿ ಪೊಲೀಸ್‌ ವಿಶೇಷ ಘಟಕ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಎಫ್‌ಐಆರ್‌ನಲ್ಲಿ ಪ್ರಬೀರ್‌, ಚಕ್ರವರ್ತಿ … Continued

ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ

ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಧಾರವಾಡ ಮತ್ತು ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ ಎಕ್ಸ್ ಪ್ರೆಸ್ ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಅಕ್ಟೋಬರ್ 7ರಿಂದ ಜಾರಿಗೆ ಬರುವಂತೆ ಹುಬ್ಬಳ್ಳಿ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಸಮಯವನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ ಎಕ್ಸ್ ಪ್ರೆಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 11:30/11:35 … Continued

ವಿವಾಹೇತರ ಸಂಬಂಧ ಹೊಂದಿರುವ ಮಹಿಳೆಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್​​

ಬೆಂಗಳೂರು: ವಿವಾಹೇತರ ಸಂಬಂಧ ಹೊಂದಿರುವ ಪತ್ನಿಯು ಪತಿಯಿಂದ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ ಅವರಿದ್ದ ನ್ಯಾಯಪೀಠವು ಈ ರೀತಿ ಅಭಿಪ್ರಾಯಪಟ್ಟು ಪತ್ನಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರರು ವಿವಾಹೇತರ ಸಂಬಂಧ ಹೊಂದಿರುವಾಗ, ಪ್ರಾಮಾಣಿಕರಲ್ಲದಿದ್ದಾಗ ಪತಿಯು ಜೀವನಾಂಶ ಕೊಡಬೇಕು ಎಂಬ ವಾದ ಒಪ್ಪಿಕೊಳ್ಳಲಾಗುವುದಿಲ್ಲ. ಪತಿಯ ಕಡೆಯಿಂದ … Continued

ಇರಾನಿನ ನರ್ಗೆಸ್ ಮೊಹಮ್ಮದಿ ಅವರಂತೆಯೇ ಇವರಿಗೂ ಜೈಲಿನಲ್ಲಿದ್ದಾಗಲೇ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿತ್ತು

ತುಳಿತಕ್ಕೊಳಗಾದ ಮಹಿಳೆಯರ ಪರವಾಗಿ ಹೋರಾಡಿದ ಇರಾನಿನ ಮಾನವ ಹಕ್ಕು ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರಿಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿರುವ ಅವರಿ ಈಗ ಇರಾನಿನ ಜೈಲಿನಲ್ಲಿದ್ದಾರೆ. ಇರಾನ್ ಸರ್ಕಾರವು ನರ್ಗೆಸ್ ಮೊಹಮ್ಮದಿಯನ್ನು 13 ಬಾರಿ ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು … Continued

ಏಷ್ಯಾದ ಈ ದೇಶಲ್ಲಿ ಮತ್ತೆ ಕೋವಿಡ್‌-19 ಸೋಂಕು ಉಲ್ಬಣ….ಪ್ರತಿದಿನ 2,000 ಪ್ರಕರಣ ದಾಖಲು…!

ಸಿಂಗಾಪುರ : ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಅವರು ಶುಕ್ರವಾರ ದೇಶವು ಮತ್ತೊಂದು ಕೋವಿಡ್‌-19 ಉಲ್ಬಣದ ಅಲೆಯನ್ನು ಅನುಭವಿಸುತ್ತಿದೆ ಎಂದು ಹೇಳಿದ್ದಾರೆ. ಅಂದಾಜು ದೈನಂದಿನ ಪ್ರಕರಣಗಳು ಮೂರು ವಾರಗಳ ಹಿಂದೆ ಸುಮಾರು 1,000 ಇದ್ದಿದ್ದು, ಕಳೆದ ಎರಡು ವಾರಗಳಲ್ಲಿ 2,000 ಕ್ಕೆ ಏರಿದೆ ಎಂದು ಒಂಗ್ ಹೇಳಿದ್ದಾರೆ. ಆದಾಗ್ಯೂ, ಸರ್ಕಾರ ಇದನ್ನು “ಸ್ಥಳೀಯ … Continued

ಭಾರತ ‘ಗಡುವು’ ನೀಡಿದ ನಂತರ ಭಾರತದಿಂದ ಅನೇಕ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ : ವರದಿ

ಟೊರೊಂಟೊ : ಕೆನಡಾ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ಸೂಚಿಸಿ ಅಕ್ಟೋಬರ್ 10ರ ಗಡುವು ನೀಡಿದ ನಂತರ ಕೆನಡಾವು ದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ … Continued