ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು : ಭಕ್ತವತ್ಸಲ ಸಮಿತಿ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ ಸಚಿವ ಸಂಪುಟ ಅಸ್ತು

ಬೆಂಗಳೂರು: ಹಿಂದುಳಿದ ವರ್ಗಳಿಗೆ ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ಕುರಿತು ರಚಿಸಲಾಗಿದ್ದು ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯು ನೀಡಿದ್ದ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಗುರುವಾರ ಹೇಳಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ … Continued

ಮಹಾದೇವ ಆ್ಯಪ್‌ ಪ್ರಕರಣ: ಕಪಿಲ್ ಶರ್ಮಾ, ಹುಮಾ ಖುರೇಷಿ, ಹಿನಾ ಖಾನ್ ಗೆ ಇ.ಡಿ.ಸಮನ್ಸ್: ವರದಿ

ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿನೆಮಾ ನಟಿಯರಾದ ಶ್ರದ್ಧಾ ಕಪೂರ್, ಹುಮಾ ಖುರೇಷಿ, ಹಿನಾ ಖಾನ್ ಮತ್ತು ಹಾಸ್ಯ ಶೋ ನಡೆಸುವ ಕಪಿಲ್ ಶರ್ಮಾ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ ಎಂದು ವರದಿಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ನಡೆದ ಮಹಾದೇವ ಬುಕ್ ಆ್ಯಪ್‌ನ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಆ್ಯಪ್‌ನ ಪ್ರಚಾರಕ್ಕಾಗಿ ಹುಮಾ … Continued

ವೀಡಿಯೊ..| ಔಷಧಿ ಖರೀದಿಗೆಂದು ಔಷಧದ ಅಂಗಡಿಗೆ ಬಂದಾಗಲೇ ಹೃದಯಘಾತದಿಂದ ಸಾವು

ಮೈಸೂರು: ಈ ಹೃದಯ ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕುಳಿತಲ್ಲೇ ಕುಸಿಯುವುದು, ಮಾತನಾಡುತ್ತಿರುವಾಗಲೇ ಸ್ತಬ್ದವಾಗುವುದು, ನೃತ್ಯ ಮಾಡುತ್ತಲೇ ಬೀಳುವುದು.. ಹೀಗೆ ಸಾವಿನ ಹತ್ತಾರು ಸನ್ನಿವೇಶಗಳು ಕಂಡುಬರುತ್ತಿವೆ. ಮೈಸೂರಿನಲ್ಲಿ ಔಷಧದ ಅಂಗಡಿಯೊಂದಕ್ಕೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆಯೊಂದು ವರದಿಯಾಗಿದೆ. ಘಟನೆಯ ದೃಶ್ಯಗಳು … Continued

ಅಕ್ಟೋಬರ್ 9 ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

ನವದೆಹಲಿ: ಪ್ರಸ್ತುತ ರಾಜಕೀಯ ಪರಿಸ್ಥಿತಿ, ಜಾತಿ ಗಣತಿ ಮತ್ತು ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸಿಡಬ್ಲ್ಯುಸಿ (CWC) ಅಕ್ಟೋಬರ್ 9 ರಂದು ದೆಹಲಿಯಲ್ಲಿ ಸಭೆ ನಡೆಸಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಅಧಿಕಾರವನ್ನು ಬರಲು ಹಾಗೂ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಅಧಿಕಾರವನ್ನು … Continued

ಅದ್ಭುತ..! : 4100 ಮೀಟರ್ ಎತ್ತರದಲ್ಲಿ ವಿಮಾನದಿಂದ ಸ್ಕೈ ಡೈವ್‌ ಮಾಡಿದ 104 ವರ್ಷದ ಮಹಿಳೆ | ವೀಡಿಯೊ

ಚಿಕಾಗೋದ 104 ವರ್ಷದ ಡೊರೊಥಿ ಹಾಫ್ನರ್ ಎಂಬ ಮಹಿಳೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ. ಡೊರೊಥಿ ಹಾಫ್ನರ್ ಅವರು ವಿಮಾನದಿಂದ ಜಿಗಿದ ಮತ್ತು ಸ್ಕೈಡೈವ್ ಮಾಡಿದ ಅತ್ಯಂತ ಹಿರಿಯ ಅಥವಾ ವಯಸ್ಸಾದ ವ್ಯಕ್ತಿಯಾದರು. ಆದರೆ, ಗಿನ್ನಿಸ್ ದಾಖಲೆಗಳ ಪರಿಶೀಲನೆ ಇನ್ನೂ ಬಾಕಿ ಇದೆ. ಡೊರೊಥಿ ಹಾಫ್ನರ್ ವಾಕರ್ ಎತ್ತರದಲ್ಲಿ ವಿಮಾನದಿಂದ ನಂಬಿಕೆಯ ಜಿಗಿತವನ್ನು … Continued

ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡ್ತಿದ್ರು ..! : ಮಂಗಳೂರಲ್ಲಿ ರೈಲ್ವೆ ಪೊಲೀಸರಿಗೆ ಸಿಕ್ಕಿಬಿದ್ರು ಹೈಟೆಕ್‌ ಕಳ್ಳರು…!

ಮಂಗಳೂರು : ವಿಮಾನದಲ್ಲಿ ಆಗಮಿಸಿ ಮಂಗಳೂರಿನಲ್ಲಿ ರೈಲು ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕಳ್ಳರಿಬ್ಬರನ್ನು ರೈಲ್ವೇ ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಭಯ ರಾಜ್‌ ಸಿಂಗ್ (26) ಹಾಗೂ ರಾಜಪುರದ ಹರಿಶಂಕರ (25) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ. ಸೆಪ್ಟೆಂಬರ್ 28ರಂದು ಮಂಗಳೂರು ಮತ್ತು ಸುರತ್ಕಲ್ ನಡುವೆ ಸಂಚರಿಸುತ್ತಿದ್ದ … Continued

ಬೆಂಗಳೂರು : ಪೊಲೀಸ್‌ ಆಯುಕ್ತರ ಕಚೇರಿ ಬಳಿಯ ಬಸ್‌ ಶೆಲ್ಟರ್‌ ಅನ್ನೇ ಕದ್ದೊಯ್ದ ಕಳ್ಳರು…!

ಬೆಂಗಳೂರು: ಬೆಂಗಳೂರಿನಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿದ ಒಂದು ವಾರದ ನಂತರ 10 ಲಕ್ಷ ರೂ.ವೆಚ್ಚದಲ್ಲಿ ಸ್ಟೀಲ್ ರಚನೆಯೊಂದಿಗೆ ನಿರ್ಮಾಣವಾಗಿದ್ದ ಬಸ್‌ ನಿಲ್ದಾಣ ನಾಪತ್ತೆಯಾಗಿದೆ…! ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಬಳಿಯಲ್ಲೇ ನೂತನವಾಗಿ ನಿರ್ಮಿಸಲಾಗಿದ್ದ ಬಿಎಂಟಿಸಿ ಬಸ್ ತಂಗುದಾಣ (ಬಸ್ ಶೆಲ್ಟರ್)ವನ್ನು ಇತ್ತೀಚಿಗೆ ಕಳ್ಳರು ನಾಪತ್ತೆ ಮಾಡಿದ್ದಾರೆ. ಈ ಜಾಗದಲ್ಲಿದ್ದ … Continued

ಏಷ್ಯನ್ ಗೇಮ್ಸ್ 2023 : ಸಂಯುಕ್ತ ಬಿಲ್ಲುಗಾರಿಕೆಯಲ್ಲಿ ಚಿನ್ನ ಗೆದ್ದ ಭಾರತದ ಪುರುಷ, ಮಹಿಳಾ ತಂಡ, ಮಿಶ್ರ ಸ್ಕ್ವಾಶ್‌ ನಲ್ಲೂ ಬಂಗಾರದ ಪದಕ

ಹ್ಯಾಂಗ್‌ಝೌ : ​ಚೀನಾದಲ್ಲಿ ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಓಜಸ್ ದಿಯೋತಾಲೆ, ಅಭಿಷೇಕ ವರ್ಮಾ ಮತ್ತು ಪ್ರಥಮೇಶ ಜಾವ್ಕರ್ ಅವರ ಭಾರತೀಯ ಪುರುಷರ ಸಂಯುಕ್ತ ಬಿಲ್ಲುಗಾರಿಕೆ ತಂಡವು ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ. ಇದು ಭಾರತದ 23ನೇ ಚಿನ್ನದ ಪದಕವಾಗಿದೆ. ಭಾರತದ ಮೂವರು ಕೊರಿಯಾದ ಜೇಹೂನ್ ಜೂ, ಜೇವೊನ್ ಯಾಂಗ್ ಮತ್ತು ಜೊಂಗೊ … Continued

ಇಂತಿಷ್ಟು ವರ್ಷಗಳ ನಂತರ ʼಬೆನ್ನುʼ ಕ್ಷುದ್ರಗ್ರಹವು 24 ʼಪರಮಾಣು ಬಾಂಬ್‌ʼಗಳಿಗೆ ಸಮಾನವಾದ ʼಬಲʼದೊಂದಿಗೆ ಭೂಮಿಗೆ ಅಪ್ಪಳಿಸಬಹುದು ಎಂದ ನಾಸಾ

ನಾಸಾ ವಿಜ್ಞಾನಿಗಳು ʼಬೆನ್ನುʼ ಎಂಬ ಕ್ಷುದ್ರಗ್ರಹವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಇದು ಸರಿಸುಮಾರು 159 ವರ್ಷಗಳ ನಂತರ ಭೂಮಿಗೆ ಅಪ್ಪಳಿಸಬಹುದು ಎಂದು ಅವರು ಹೇಳಿದ್ದಾರೆ. ಇದು 1,610 ಅಡಿ ಅಗಲದ ಕಾಸ್ಮಿಕ್ ವಸ್ತುವಾದ ‘ಬೆನ್ನು’ ಹೆಸರಿನ ಈ ಕ್ಷುದ್ರಗ್ರಹವನ್ನು ನಾಸಾ ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ (NASA)ದ OSIRIS-REx ವಿಜ್ಞಾನ ತಂಡದ ಪ್ರಕಾರ, 1999 ರಲ್ಲಿ ಮೊದಲ … Continued

ಸಿಕ್ಕಿಂನಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ : 14 ಜನರು ಸಾವು, 23ಯೋಧರ ಸಹಿತ 102 ಮಂದಿ ನಾಪತ್ತೆ

ಗ್ಯಾಂಗ್ಟಕ್‌: ಸಿಕ್ಕಿಂನಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ನಂತರ 14 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಸೇನಾ ಸಿಬ್ಬಂದಿ ಸೇರಿದಂತೆ 120 ಜನರು ನಾಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಲ್ಹೋನಕ್ ಸರೋವರದ ಮೇಲೆ ಸಂಭವಿಸಿದ ಮೇಘಸ್ಫೋಟವು ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು, ಇದು ಅಂತಿಮವಾಗಿ ಮಾರಣಾಂತಿಕ ಪ್ರಹಾವಾಗಿ ಮಾರ್ಪಟ್ಟಿತು. ಸಿಕ್ಕಿಂನಲ್ಲಿ ಮಂಗಳವಾರ ತಡರಾತ್ರಿ … Continued