ಶಾಲಾ ಸಮಯದಲ್ಲಿ ಹೆಚ್ಚಿನ ಬಸ್‌ ಬಿಡಲು ಮನವಿ

ಬೆಂಗಳೂರು: ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಸಮಯಕ್ಕೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಸಾರಿಗೆ ಸಚಿವರಿಗೆ ಆ ಪತ್ರ ಬರೆದಿರುವ … Continued

ಬರಹಗಾರ ಪ್ರೊ. ಭಗವಾನ್‌ ಮುಖಕ್ಕೆ ಕಪ್ಪು ಮಸಿ ಬಳಿದ ವಕೀಲೆ

ಬೆಂಗಳೂರು: ಬರಹಗಾರ ಪ್ರೊ. ಕೆ. ಎಸ್. ಭಗವಾನ್ ಅವರ ಮುಖಕ್ಕೆ ವಕೀಲೆಯೊಬ್ಬರು ಕಪ್ಪು ಮಸಿ ಬಳಿದ ಘಟನೆ ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದಿದೆ. ವಕೀಲಾರದ ಮೀರಾ ರಾಘವೇಂದ್ರ ಎಂಬುವವರು ಭಗವಾನ್‌ ಅವರು ಹಿಂದೂ ದೇವರನ್ನು ಅವಮಾನಿಸುತ್ತಿರುವುದನ್ನು ಖಂಡಿಸಿ ಕೋರ್ಟ್‌ ಆವರಣದಲ್ಲಿಯೇ ಭಗವಾನ್‌ ಅವರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಹಿಂದೂ ಧರ್ಮದ ಕಟು ಟೀಕಾಕಾರರಾಗಿರುವ … Continued

ಅಯೋಧ್ಯ ರಾಮಂದಿರ ಕಾಮಗಾರಿ ವೀಕ್ಷಣೆಗೆ ಅವಕಾಶವಿಲ್ಲ

ಅಯೋಧ್ಯ: ಸುರಕ್ಷತಾ ಕಾರಣಗಳಿಗಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವನ್ನು ವೀಕ್ಷಿಸಲು ರಾಮ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಕ್ರೇನ್‌ಗಳು ಹಾಗೂ ದೊಡ್ಡ ಕಲ್ಲು ಪುಡಿ ಮಾಡುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ … Continued

ಕೊವಿಡ್‌ ರೋಗಿಗಳಲ್ಲಿ ಮಾರಣಾಂತಿಕ ಶಿಲೀಂಧ್ರ ಸೋಂಕು ಪತ್ತೆ..!

ಭಾರತದ ಹಲವಾರು ಕೊವಿಡ್‌-೧೯ ರೋಗಿಗಳಲ್ಲಿ ಮಾರಣಾಂತಿಕ ಶಿಲೀಂಧ್ರ ಸೋಂಕು ತಗುಲಿರುವುದು ವರದಿಯಾಗಿದೆ ಭಾರತದ COVID-19 ರೋಗಿಗಳಲ್ಲಿ ಮುಕೋರ್ಮೈಕೋಸಿಸ್ ಎಂಬ ಅಪರೂಪದ ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳ ಹೆಚ್ಚಳವನ್ನು ವೈದ್ಯರು ವರದಿ ಮಾಡುತ್ತಿದ್ದಾರೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ತೀವ್ರವಾದ ಮಧುಮೇಹದಂತಹ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಚಿಕಿತ್ಸೆ ನೀಡದೆ ಬಿಟ್ಟರೆ ಅದು ಜೀವಕ್ಕೆ ಮಾರಕವಾಗಬಹುದಾಗಿದೆ. ಚಿಕಿತ್ಸೆಗಾಗಿ … Continued

ವಿಶ್ವಸಂಸ್ಥೆ ಮಾಹಿತಿ.. ಭಾರತಕ್ಕೆ ಆತಂಕ

ಜಾಗತಿಕ ಭಯೋತ್ಪಾದಕ ಸಮೂಹ ಐಎಸ್‍ಐ ಮತ್ತು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಲೆವೆಂಟ್- ಖೋರಾಸಾನ್ಸ್ (ಐಎಸ್‍ಐಎಲ್-ಕೆ) ನಾಯಕ ಶಿಹಾಬ್ ಅಲ್-ಮುಹಾಜಿರ್ ಭಾರತದಲ್ಲಿ ಉಗ್ರ ಕಾರ್ಯಾಚರಣೆಗಳ ಮುಖ್ಯಸ್ಥನಾಗಿ ನೇಮಕಗೊಂಡಿದ್ದಾನೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಹಿಂದಿನ ಹಕ್ಕಾನಿ ನೆಟ್‍ವರ್ಕ್‍ನೊಂದಿಗೆ ಶಿಹಾಬ್ ಅಲ್-ಮುಹಾಜಿರ್ ಸಂಬಂಧ ಹೊಂದಿರಬಹುದು ಎಂದು ವಿಶ್ವಸಂಸ್ಥೆ ಹೇಳಿದ್ದು, ಈತ ಭಾರತ ಸೇರಿದಂತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, … Continued

ಕೊರೊನಾ ನಿವಾರಣೆಗೆ ಸಿಂಗಲ್ ಡೋಸ್ ಲಸಿಕೆ ..!

ನವ ದೆಹಲಿ: ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಿಗೆ ನೀಡುತ್ತಿರುವ ಎರಡು ಶಾಟ್‍ಗಳ ಲಸಿಕೆ ಬದಲಿಗೆ ಸದ್ಯದಲ್ಲೇ ಬರಲಿರುವ ಎಂಆರ್‍ಎನ್‍ಎ ಲಸಿಕೆಯ ಒಂದೇ ಒಂದು ಶಾಟ್ ಮಾತ್ರ ಸಾಕಾಗಬಹುದು ಎಂದು ಸಂಶೋಧನಾ ನಿರತ ವಿಜ್ಞಾನಿಗಳು ಹೇಳಿದ್ದಾರೆ. ನೊವೆಲ್ ಕೊರೊನಾ ವೈರಸ್‍ನಿಂದ ಸೋಂಕಿನಿಂದ ಚೇತರಿಸಿಕೊಂಡ ಜನರು ಮಾಡೆರ್ನಾ ಅಥವಾ ಫೈಜರ್‌ ಹೀಗೆ ಎರಡು ಕೋವಿಡ್-19 ಲಸಿಕೆ ತೆಗೆದುಕೊಳ್ಳುತ್ತಿದ್ದವವರಿಗೆ ಈಗ … Continued

ಉಡುಪಿಯಲ್ಲಿ ೧೨ನೇ ಶತಮಾನದ ವಿಷ್ಣು ಮೂರ್ತಿ ಪತ್ತೆ

ಉಡುಪಿ: ಜಿಲ್ಲೆಯ ಶಿರ್ವಾದಲ್ಲಿ ೧೨ನೇ ಶತಮಾನದ ವಿಷ್ಣುವಿನ ವಿಗ್ರಹ ಪತ್ತೆಯಾಗಿದ್ದು, ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚ್ಯ ಇತಿಹಾಸ ಹಾಗೂ ಪುರಾತತ್ವ ವಿಭಾಗ ಹರಿಯ ಮೂರ್ತಿಯನ್ನು ಪತ್ತೆ ಮಾಡಿದೆ. ಇಲ್ಲಿನ ಪಂಚಾಯತ ಕಚೇರಿಯ ಹಿಂದೆ ಹಳೆಯ ದೇವಸ್ಥಾನದ ಸಮೀಪ ಉತ್ಖನನ ಮಾಡುತ್ತಿದ್ದ ಸಂದರ್ಭದಲ್ಲಿ ೨೦ ಅಡಿ ಆಳದಲ್ಲಿ ಸುಂದರ ವಿಷ್ಣು ಮೂರ್ತಿ ಪತ್ತೆಯಾಗಿದೆ. ಮೂರ್ತಿ ಕಾರಂದ ಮುಕುಟ, ಮಕರ … Continued

ತೇಜಸ್‌ ನಿರ್ಮಾಣ ಅವಲೋಕಕ್ಕೆ ವಾಯುಸೇನೆ ತಂಡ

ಬೆಂಗಳೂರು: ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಉತ್ಪಾದಿಸುವ ಯುದ್ಧವಿಮಾನ ತೇಜಸ್‌ ನಿಗದಿತ ಸಮಯದಲ್ಲಿ ರೂಪಗೊಳ್ಳುವ ದಿಸೆಯಲ್ಲಿ ಭಾರತೀಯ ವಾಯುಸೇನೆ ಉಪ ಮುಖ್ಯಸ್ಥರ ನೇತೃತ್ವದಲ್ಲಿ ಸಂಯೋಜಿತ ಪ್ರಾಜೆಕ್ಟ್‌ ಅವಲೋಕನ ತಂಡವನ್ನು ರಚಿಸಲು ವಾಯುಸೇನೆ ಮುಂದಾಗಿದೆ. ಗುಣಮಟ್ಟದ ಯುದ್ಧ ವಿಮಾನ ನೀಡುವ ದಿಸೆಯಲ್ಲಿ ತೇಜಸ್ ನಿರ್ಮಾಣದ ಸಂದರ್ಭದಲ್ಲಿ ಅವಶ್ಯಕ ಮಾರ್ಪಾಡುಗಳನ್ನು  ಮಾಡಲು ಸ್ಟೇಕ್‌ ಹೋಲ್ಡರ್‌ಗಳ ದ್ವೈವಾರ್ಷಿಕ ಅವಲೋಕನಕ್ಕೆ ಅವಕಾಶ ಕಲ್ಪಿಸಲು … Continued

ವಾರದಲ್ಲಿ ಕಾರ್ಯಾರಂಭ ಮಾಡಲು ವಿಸ್ಟ್ರಾನ್‌ ನಿರ್ಧಾರ

ಬೆಂಗಳೂರು: ಹಲವು ತಿಂಗಳುಗಳ ಹಿಂದೆ ದಾಳಿಗೊಳಗಾಗಿದ್ದ ತೈವಾನ್‌ ಕಂಪನಿ ವಿಸ್ಟ್ರಾನ್‌ ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಿದೆ. ಕಾರ್ಖಾನೆ ಆರಂಭಿಸಲು ವಿಸ್ಟ್ರಾನ್‌ ಸರಕಾರದಿಂದ ಅಗತ್ಯ ಅನುಮತಿ ಪಡೆದುಕೊಂಡಿದ್ದು, ಇನ್ನೊಂದು ವಾರದಲ್ಲಿ ಉತ್ಪಾದನೆ ಆರಂಭಿಸುವುದು. ಡಿಸೆಂಬರ್‌ ೧೨ರಂದು ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಉಗ್ರ ರೂಪ ತಳೆದಿದ್ದರಿಂದ ಕೋಲಾರ ಜಿಲ್ಲೆ ನಾರಾಯಣಪುರದಲ್ಲಿರುವ ಕಾರ್ಖಾನೆಯಲ್ಲಿ ಸುಮಾರು ೫೨ ಕೋಟಿ ರೂ. … Continued

ಹಿಂದಿನ ಸರ್ಕಾರಗಳ ಬಜೆಟ್‌ ಪ್ರಚಾರಕ್ಕೆ ಮಾತ್ರ ಸೀಮಿತ : ಪ್ರಧಾನಿ ಮೋದಿ

ನವದೆಹಲಿ:  ಮತಬ್ಯಾಂಕ್‌ ಕೇಂದ್ರಿಕರಿಸಿ ಬಜೆಟ್‌ ಮಾಡುತ್ತಿದ್ದ ಹಿಂದಿನ ಸರಕಾರಗಳು ಆಯವ್ಯಯವನ್ನು ಈಡೇರಿಸದೇ ಘೋಷಣೆಯ ಮಾಧ್ಯಮವಾಗಿಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರಕಾರಗಳನ್ನು ಟೀಕಿಸಿದ್ದಾರೆ, ದಶಕಗಳಿಂದ ಬಜೆಟ್‌ನಲ್ಲಿ ಯಾರ ಹೆಸರಿನಲ್ಲಿ ಯಾವ ಘೋಷಣೆಯಾಗಿದೆ ಎಂಬುದಕ್ಕೆ ಆಯವ್ಯಯ ಸೀಮಿತವಾಗುತ್ತಿತ್ತು. ಇದು ಮತಬ್ಯಾಂಕ್‌ಗೆ ಪೂರಕ ಘೋಷಣೆಯಂತಿತ್ತು, ಹಿಂದೆ ಬಜೆಟ್ ಪೂರ್ಣವಾಗಿ ಜಾರಿಗೆ ಬರುವಂತಿರಲಿಲ್ಲ.  ನಾವೆಲ್ಲ ಪ್ರಸಕ್ತ ಅವಶ್ಯಕತೆಗಳು ಹಾಗೂ … Continued