ರಾಜ್ಯದಲ್ಲಿ ೩೯೫ ಜನರಿಗೆ ಕೊರೋನಾ ಸೋಂಕು, ೪೧೨ ಗುಣಮುಖ

ಬೆಂಗಳೂರು: ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ ೩೯೫ ಜನರಿಗೆ ಕೊರೋನಾ ಸೋಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. ಒಟ್ಟು ೪೧೨ ಜನ ಗುಣಮುಖರಾಗಿ ಆಸ್ಪತ್ರೆಯಿಂದ   ಬಿಡುಗಡೆಯಾಗಿದ್ದಾರೆ. ಐಸಿಯುವಿನಲ್ಲಿ ೧೪೮ ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟಾರೆಯಾಗಿ ರಾಜಯದಲ್ಲಿ ೫೯೨೪ ಸಕ್ರಿಯ ಪ್ರಕಣಗಳಿವೆ.

ಪ್ರಗತಿಗಾಗಿ ಭಾರತವು ಒಟ್ಟಾಗಿ ನಿಂತಿದೆ: ಅಮಿತ್‌ ಶಾ

ನವ ದೆಹಲಿ: ಪ್ರಚಾರವು ಭಾರತದ ಏಕತೆಗೆ ಭಂಗ ತರುವುದಿಲ್ಲ ಅಥವಾ ಭಾರತದ ಭವಿಷ್ಯವನ್ನೂ ನಿರ್ಧರಿಸುವುದಿಲ್ಲ. ಭಾರತವು ಒಗ್ಗಟ್ಟಿನಿಂದ ಮತ್ತು ಪ್ರಗತಿಯನ್ನು ಸಾಧಿಸಲು ಒಟ್ಟಾಗಿ ನಿಂತಿದೆ  ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಅವರು ಇಂಡಿಯಾ ಅಗೆನೆಸ್ಟ್‌ ಪ್ರೊಪಗಂಡ ಮತ್ತು   ಇಂಡಿಯಾ ಟುಗೆದರ್ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹೀಗೆ ಬರೆದಿದ್ದಾರೆ. ಅನೇಕ ಮಂತ್ರಿಗಳು ಮತ್ತು ಬಿಜೆಪಿ … Continued

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಪೂರ್ಣ ಹಾಜರಿಗೆ ಅನುಮತಿ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.೫೦ರಷ್ಟು  ಪ್ರೇಕ್ಷಕರ ಸಾಮರ್ಥ್ಯಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಚಿತ್ರರಂಗದಲ್ಲಿ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ   ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೇಕಡ ನೂರರಷ್ಟು ಪ್ರೇಕ್ಷಕರ ಹಾಜರಾತಿಯಲ್ಲಿ  ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ. ರಾಜ್ಯ ಸರ್ಕಾರ ನಿನ್ನೆ ಥಿಯೇಟರ್ ಗಳಲ್ಲಿ ಶೇ.೫೦ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಿ, ಕೊರೋನಾ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿತ್ತು. ಸರ್ಕಾರದ … Continued

ಸೂಕಿ ಬಂಧನಕ್ಕೆ ಪೊಲೀಸರು ಸಜ್ಜು

ಉಚ್ಚಾಟಿತ ಮಾಯನ್ಮಾರ ಅಧ್ಯಕ್ಷೆ  ಆಂಗ್ ಸಾನ್ ಸೂಕಿ ವಿರುದ್ಧ ಕಾನೂನುಬಾಹಿರವಾಗಿ ಸಂವಹನ ಸಾಧನಗಳನ್ನು ಆಮದು ಮಾಡಿಕೊಂಡ ಕಾರಣ ನೀಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಮತ್ತು ತನಿಖೆಗಾಗಿ ಫೆಬ್ರವರಿ 15 ರ ವರೆಗೆ  ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಮ್ಯಾನ್ಮಾರ್‌ನ ಸೈನ್ಯವು ಸೋಮವಾರ ಅಧಿಕಾರವನ್ನುತನ್ನ ವಶಕ್ಕೆ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ. 75 ವರ್ಷದ ನೊಬೆಲ್ … Continued

೩ ಖಾಸಗಿ ವಿವಿ ಸ್ಥಾಪನೆಗೆ ಪರಿಷತ್ತಿನಲ್ಲೂ ಅಂಗೀಕಾರ

ಬೆಂಗಳೂರು: ಮೂರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ. ಭೋಜನ  ವಿರಾಮದ ಬಳಿಕ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ , ನ್ಯೂ ಹೊರೈಜನ್, ವಿದ್ಯಾಶಿಲ್ಷ್ ವಿಶ್ವವಿದ್ಯಾಲಯ, ಏಟ್ರಿಯಾ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕ  ಮಂಡನೆ ಮಾಡಿದರು. ತಪ್ಪು ನಡೆದರೆ ಮಾನ್ಯತೆಯನ್ನೇ ರದ್ದು … Continued

ಇಂಡಿಯಾ ಟುಗೆದರ್‌: ಕೇಂದ್ರ ಸಚಿವರಿಂದ ಸೋಶಿಯಲ್‌ ಮೀಡಿಯಾ ಚಳವಳಿ

ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆಗೆ ‘ಅಂತಾರಾಷ್ಟ್ರೀಯ ಪ್ರಚೋದನೆ’ ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ಎಲ್ಲ ಸಚಿವರು    ಈ ಹೇಳಿಕೆ ಖಂಡಿಸಿ  # ಇಂಡಿಯಾ ಟುಗೆದರ್ ಮತ್ತು # ಇಂಡಿಯಾ ಅಗೆನೆಸ್ಟ್‌ ಪ್ರೊಪಗೆಂಡ ಎಂಬ ಸಾಮಾಜಿಕ ಜಾಲತಾಣದ ಚಳವಳಿ ಆರಂಭಿಸಿದ್ದಾರೆ. ‌ ಇದು ಸಾಮಾಜಿಕ ಮಾಧ್ಯಮದ … Continued

ಬೆಂಗಳೂರಿನ ಮಾನದಂಡ ಅನುಸರಿಸಿ ನಮಗ್ಯಾಕೆ ಶಿಕ್ಷೆ..?

ಧಾರವಾಡ:  ಅವೈಜ್ಞಾನಿಕವಾಗಿರುವ  ಶೇ. ೭೦ರಷ್ಟು ಶುಲ್ಕಪಡೆಯುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಶಾಲಾ ಶುಲ್ಕ ಪಡೆಯುವ ಆಧಾರವಾಗಲಿ, ನಗರಗಳ ಗ್ರೇಡ್ ಮೇಲಾಗಲಿ ಶುಲ್ಕ   ಕಡಿತಗೊಳಿಸುವಂತೆ ಆಗಬೇಕು ಎಂದು ಧಾರವಾಡ ಅನುದಾನ ರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಆಗ್ರಹಸಿವೆ. ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಈ … Continued

ರೈತರ ಪ್ರತಿಭಟನೆ: ವಿದೇಶಿಯರ ಹಸ್ತಕ್ಷೇಪಕ್ಕೆ ಕೇಂದ್ರ ಆಕ್ಷೇಪ

ನವ ದೆಹಲಿ: ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಕೆಲ ವಿದೇಶಿಯರು ಹೇಳಿಕೆ ನೀಡಿದ್ದನ್ನು ಭಾರತ ಖಂಡಿಸಿದೆ. ಖ್ಯಾತ‌  ಪಾಪ್‌ ಗಾಯಕಿ‌ ರಿಹಾನಾ ಹಾಗೂ ಪರಿಸರ ಹೋರಾಟಗಾರರಾದ ಗ್ರೆಟಾ ಥಂಬರ್ಗ್‌ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮರುದಿನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಕೆಲ ಸ್ವ ಹಿತಾಸಕ್ತಿ ಹೊಂದಿದ ಗುಂಪುಗಳು ತಮ್ಮ … Continued

ಎನ್‌ಸಿಪಿಗೆ ಬಿಜೆಪಿ ಶಾಸಕನ ೫ ಕೋಟಿ ರೂ. ದೇಣಿಗೆ !

ಮುಂಬೈ: ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ೨೦೧೯-೨೦ನೇ ಸಾಲಿನಲ್ಲಿ ೫೯.೯೪ ಕೋಟಿ ರೂ. ಪಕ್ಷದ ದೇಣಿಗೆ ಸಂಗ್ರಹ ಮಾಡಿದ್ದು, ಕಳೆದ ವರ್ಷ ಪಕ್ಷ ಕೇವಲ ೧೨.೦೫ ಕೋಟಿ ರೂ. ದೇಣಿಗೆ ಸಂಗ್ರಹಿಸಿತ್ತು. ಶಿವಸೇನಾ, ಕಾಂಗ್ರೆಸ್‌ ನೊಂದಿಗೆ ಮಹಾ ವಿಕಾಸ ಅಗಾಢಿ ಸರಕಾರ ನಡೆಸುತ್ತಿರುವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಹಣ ಹರಿದು … Continued

ಟ್ವಿಟರ್‌ಗೆ ಕೇಂದ್ರದ ನೋಟಿಸ್‌

ನವದೆಹಲಿ: ರೈತರ ನರಮೇಧ ಎಂಬಂತೆ ತಪ್ಪು ಮಾಹಿತಿಯಿರುವ ಹ್ಯಾಷ್ ಟ್ಯಾಗ್ ಹೊಂದಿರುವ ಖಾತೆಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರ ಮೈಕ್ರೊ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ಗೆ ನೊಟೀಸ್‌ ನೀಡಿದ್ದು, ಆದೇಶ ಪಾಲನೆಗೆ ತಪ್ಪಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ-೨೦೦೦ರ ಕಾಯ್ದೆಯ ೬೯ ಎ ಅನುಚ್ಛೇದದಡಿ ತುರ್ತು ಮಧ್ಯಂತರ … Continued