ಮೋದಿ ಲೂಟಿಕೋರ; ರಾಹುಲ್‌ ಗಾಂಧಿ ಆರೋಪ

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಪ್ರಧಾನಿ ಮೋದಿ ಕಾರ್ಪೋರೇಟ್‌ಗಳತ್ತ ಗಮನ ಹರಿಸಿ ತಮ್ಮ ಇಬ್ಬರು ಸ್ನೇಹಿತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇರ ಆರೋಪ ಮಾಡಿದ್ದಾರೆ. ಕೊವಿಡ್‌-೧೯ ಸಂದರ್ಭದಲ್ಲಿ ಮೋದಿ ಸಾರ್ವಜನಿಕರ ಹಣವನ್ನು ಲೂಟಿಗೈದಿದ್ದಾರೆ ಎಂದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಆಸ್ಸಾಂ ರಾಜ್ಯವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, … Continued

ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುವತಿ ಬಂಧನ

ನೂತನ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆಯ “ಟೂಲ್ ಕಿಟ್‌ʼ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ೨೧ ವರ್ಷದ ಪರಿಸರ ಕಾರ್ಯಕರ್ತೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ನ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫ್ರೈಡೇಸ್‌ ಫಾರ್‌ ಫ್ಯೂಚರ್‌ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ದಿಶಾ ರವಿ ಬಂಧಿತ ಯುವತಿ. ಇವರು ಟೂಲ್‌ಕಿಟ್‌ ಅನ್ನು ಸಂಪಾದಿಸಿದ್ದಲ್ಲದೇ ಅದನ್ನು … Continued

ಕೆನಡಾಕ್ಕೆ ಭಾರತದಿಂದ ೫ ಲಕ್ಷ ಕೊರೊನಾ ಲಸಿಕೆ ಪೂರೈಕೆ

ನವದೆಹಲಿ: ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ಕೋರಿಕೆ ಮೇರೆಗೆ ಫೆಬ್ರವರಿಯಲ್ಲಿ ೫ ಲಕ್ಷ ಕೊರೊನಾ ಲಸಿಕೆಗಳನ್ನು ಕೆನಡಾಕ್ಕೆ ಪೂರೈಸಲು ಭಾರತ ಒಪ್ಪಿಕೊಂಡಿದೆ. ಕೆನಡಾ ಮಾತ್ರವಲ್ಲದೇ ಕೋವಿಡ್ ಲಸಿಕೆಯನ್ನು ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಇತರ ನೆರೆಯ ರಾಷ್ಟ್ರಗಳಿಗೆ ಪೂರೈಸಲು ಮೋದಿ ಸರ್ಕಾರ ನಿರ್ಧರಿಸಿದೆ. ಸರಬರಾಜು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಮಿಶ್ರಣವಾಗಿರುತ್ತದೆ. ಫೆಬ್ರವರಿ 10 ರಂದು … Continued

ರೈತರ ಪ್ರತಿಭಟನೆ ಮಧ್ಯೆ ಸಾರ್ವಜನಿಕ ಆಸ್ತಿಹಾನಿ ಮರುಪಡೆಯುವ ಹಕ್ಕು ಮಸೂದೆ ಶೀಘ್ರ ಜಾರಿಗೆ ತಯಾರಿ

ನವ ದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಹರಿಯಾಣ ವ್ಯಾಪಕ ರೈತರ ಆಂದೋಲನಕ್ಕೆ ಸಾಕ್ಷಿಯಾಗುತ್ತಿದ್ದರೂ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಮರುಪಡೆಯುವ ಹಕ್ಕು ಪಡೆಯುವ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು ಎಂದು ಶನಿವಾರ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೈತರ … Continued

ಡಿಸಿಎಂ ದಿಢೀರ್‌ ದೆಹಲಿ ಭೇಟಿ ತಂದ ಕುತೂಹಲ

ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ದಿಢೀರನೆ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವರಿಷ್ಠರ ಸೂಚನೆಯಂತೆ ಶನಿವಾರ ಬೆಳಗ್ಗೆ ನವದೆಹಲಿಗೆ ತೆರಳಿರುವ ಅವರು ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲೇ ಉಳಿಯಲಿದ್ದು, ಪಕ್ಷದ ಕೆಲವು ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ಅವರು ದೆಹಲಿಗೆ ತೆರಳಿದ್ದಾರೆ ಎಂಬುದು ಖಚಿತಪಟ್ಟಿಲ್ಲ. … Continued

ಜಪಾನ್‌ನಲ್ಲಿ ಭೂಕಂಪ, ಅಲ್ಲಾಡಿದ ಕಟ್ಟಡಗಳು.

ಪೂರ್ವ ಜಪಾನ್‌ನ ಕರಾವಳಿಯಲ್ಲಿ ಶನಿವಾರ 7.1 ರಿಕ್ಟರ್‌ ತೀವ್ರತೆಯ ತೀವ್ರ ಭೂಕಂಪನ ಸಂಭವಿಸಿ, ಕಟ್ಟಡಗಳನ್ನು ಅಲುಗಾಡಿಸಿದೆ. ಆದರೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಭೂಕಂಪ ಕೇಂದ್ರವು ಫುಕುಶಿಮಾ ಪ್ರಾಂತ್ಯದ ಕರಾವಳಿಯಲ್ಲಿ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇದು ರಾತ್ರಿ 11:08 ಕ್ಕೆ , (7.38 p.m.ಭಾರತದ ಕಾಲಮಾನ) ಸಂಭವಿಸಿದೆ. … Continued

18 ಸಾವಿರ  ಕೋಟಿ  ಅದಿರು ನಿಧಿ ಬಳಕೆಗೆ ಕೇಂದ್ರದಿಂದ ಕಾನೂನು ನೆರವು ಕೋರಿದ ನಿರಾಣಿ 

ನವದೆಹಲಿ: ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಳೆದ ಆರು ವರ್ಷಗಳಿಂದ ಕಬ್ಬಿಣದ ಅದಿರು ಗಣಿ ಕಂಪನಿಗಳಿಂದ  ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡುವ ನಿಟ್ಟಿನಲ್ಲಿ ಕಾನೂನು ಮತ್ತು ಆಡಳಿತಾತ್ಮಕ ನೆರವು ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ  ಮುರುಗೇಶ್ ನಿರಾಣಿ, ಕೇಂದ್ರ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ. … Continued

ಮೊದಲ ಕೋವಿಡ್‌ ಪ್ರಕರಣಗಳ ಕಚ್ಚಾ ದತ್ತಾಂಶ ಡಬ್ಲುಎಚ್‌ಒ ತಂಡಕ್ಕೆ ನೀಡಲು ನಿರಾಕರಿಸಿದ ಚೀನಾ: ತಂಡದ ಸದಸ್ಯ

ಆರಂಭಿಕ ಕೋವಿಡ್ ಪ್ರಕರಣಗಳ ಬಗ್ಗೆ ಡಬ್ಲ್ಯುಎಚ್‌ಒ ತಂಡಕ್ಕೆ ಕಚ್ಚಾ ಡೇಟಾವನ್ನು ನೀಡಲು ಚೀನಾ ನಿರಾಕರಿಸಿದೆ ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. 2019 ರ ಡಿಸೆಂಬರ್‌ನಲ್ಲಿ ಚೀನಾದ ನಗರವಾದ ವುಹಾನ್‌ನಲ್ಲಿ ಏಕಾಏಕಿ ಉಂಟಾದ ಆರಂಭಿಕ ಹಂತದಿಂದ ಚೀನಾ ಗುರುತಿಸಿದ ಕೋವಿಡ್‌-19 174 ಪ್ರಕರಣಗಳ ಬಗ್ಗೆ ರೋಗಿಗಳ ದತ್ತಾಂಶವನ್ನು ತಂಡವು ಕೋರಿತ್ತು, ಆದರೆ ಅವರಿಗೆ ಸಾರಾಂಶವನ್ನು ಮಾತ್ರ ನೀಡಲಾಗಿದೆ, … Continued

ಮೀಸಲಾತಿ ಬೇಡಿಕೆ: ಕಾನೂನು ಚೌಕಟ್ಟಿನೊಳಗೆ ನ್ಯಾಯ ಒದಗಿಸುವ ಭರವಸೆ

ಮೈಸೂರು:ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿ ಹೋರಾಟ ಆರಂಭಿಸಿವೆ. ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮೀಸಲಾತಿ ಹೋರಾಟ ಸಂಬಂಧ ತಜ್ಞರ ಜೊತೆ ಚರ್ಚೆಗಳು ನಡೆದಿವೆ. ಎಲ್ಲ ಸಮುದಾಯಗಳಿಗೆ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಸಾಧ್ಯವೂ ಅದನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.. ಮೀಸಲಾತಿಗಾಗಿ ನಾಯಕ, ಕುರುಬ, ವೀರಶೈವ ಪಂಚಮ‌ಸಾಲಿ ಸೇರಿದಂತೆ … Continued

ಫೆ.೨೧ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪಂಚಸಾಲಿಗಳ ಬೃಹತ್‌ ಸಮಾವೇಶ

ತುಮಕೂರು: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ೨ಎ ಮೀಸಲಾತಿಗಾಗಿ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿದ್ದು, ಫೆ. ೨೧ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ತೀರ್ಮಾನವನ್ನು ಕೈಗೊಂಡಿದೆ. ನಗರದ ಸಿದ್ದಗಂಗಾ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳುಶುಕ್ರವಾರ ಬೆಳಿಗ್ಗೆ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಹಾಗೂ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಸಭೆ ನಡೆಸಿ … Continued