ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಜಯಭೇರಿ ; ಭಾರತದ ಷೇರು ಮಾರುಕಟ್ಟೆಯಲ್ಲಿ ಏರಿಕೆ

ಮುಂಬೈ : 2024 ರ ಅಮೆರಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಭಾರತದ ಸ್ಟಾಕ್ ಮಾರ್ಕೆಟ್ ಬುಧವಾರ (ನವೆಂಬರ್ 6) ಏರಿಕೆ ಕಂಡಿದೆ. ಅಮೆರಿಕದ ಚುನಾವಣಾ ಫಲಿತಾಂಶಗಳಲ್ಲಿ ಟ್ರೆಂಡ್‌ಗಳು ಟ್ರಂಪ್ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬಿಎಸ್‌ಇ ಸೆನ್ಸೆಕ್ಸ್ 1,093.1 ಪಾಯಿಂಟ್‌ಗಳು ಅಥವಾ ಶೇಕಡಾ 1.37 ರಷ್ಟು ಏರಿಕೆ ಕಂಡು ಇಂಟ್ರಾಡೇ ಗರಿಷ್ಠ 80,569.73 … Continued

ಅದ್ಭುತ ಪುನರಾಗಮನ ; ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ, ಕಮಲಾ ಹ್ಯಾರಿಸ್‌ ಪರಾಭವ

ವಾಷಿಂಗ್ಟನ್‌ : 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ (US presidential elections 2024) ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಯಗಳಿಸಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ನ ಪ್ರೊಜೆಕ್ಷನ್ ಪ್ರಕಾರ, ಟ್ರಂಪ್ ಅವರು 277 ಎಲೆಕ್ಟೊರಲ್ ಮತಗಳನ್ನು  ಪಡೆದಿದ್ದಾರೆ. ಅವರು ಗೆಲ್ಲಲು ಅಗತ್ಯವಿರುವ 270-ಸಂಖ್ಯೆಯನ್ನು ದಾಟಿದ್ದಾರೆ. ಇದರೊಂದಿಗೆ, ಅವರು ತಮ್ಮ ಎದುರಾಳಿಯಾದ … Continued

ಮುಡಾ ಹಗರಣ : ಸತತ ಎರಡು ಗಂಟೆಗಳ ಕಾಲ ಸಿಎಂ ಸಿದ್ದರಾಮಯ್ಯ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು, ಬುಧವಾರ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಲೋಕಾಯುಕ್ತ ಪೊಲೀಸರು ಸತತ 2 ತಾಸುಗಳ ಕಾಲ ಸಿದ್ದರಾಮಯ್ಯ ಅವರನ್ನು ವಿಚಾರಣೆ ನಡೆಸಿದ್ದು, ಅವರಿಗೆ ಸುಮಾರು 40 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರು ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಕರ್ನಾಟಕದ … Continued

ವೀಡಿಯೊಗಳು…| ಬಾಂಗ್ಲಾದೇಶದಲ್ಲಿ ಹಿಂದೂ ಪ್ರತಿಭಟನಾಕಾರರ ಮೇಲೆ ಸೇನೆಯಿಂದ ಕಾರ್ಯಾಚರಣೆ, ಲಾಠಿ ಚಾರ್ಜ್‌

ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಮತ್ತು ಸನಾತನ ಧರ್ಮದ ವಿರುದ್ಧ ಮುಸ್ಲಿಂ ವ್ಯಾಪಾರಿಯ ಅವಹೇಳನಕಾರಿ ಪೋಸ್ಟ್ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಬಾಂಗ್ಲಾದೇಶದ ಭದ್ರತಾ ಪಡೆಗಳು ಚಿತ್ತಗಾಂಗ್‌ನಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿವೆ. ಇಸ್ಕಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ವ್ಯಾಪಾರಿ ಉಸ್ಮಾನ್ ಮೊಲ್ಲಾ ಅವರ ಫೇಸ್‌ಬುಕ್ ಪೋಸ್ಟ್ ನಂತರ … Continued

ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ…!

ಗದಗ : ಕೌಟುಂಬಿಕ ಕಲಹದ ಕಾರಣಕ್ಕೆ ಮನನೊಂದು ಮೂರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ವ್ಯಕ್ತಿಯೊಬ್ಬ ತಾನೂ ನದಿಗೆ ಹಾರಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಮುಂಡರಗಿ ತಾಲೂಕಿನ ಮಕ್ತುಂಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ (38) ಎಂಬಾತ ತನ್ನ ಮಕ್ಕಳಾದ ವೇದಾಂತ (3), ಪವನ … Continued

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಸೃಷ್ಟಿ ; ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಬೆಂಗಳೂರು : ಕೇರಳದ ದಕ್ಷಿಣ ಕರಾವಳಿ ಹಾಗೂ ಶ್ರೀಲಂಕಾದಿಂದ ದೂರದಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಹೀಗಾಗಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಚಂಡಮಾರುತದ ಪರಿಚಲನೆಯ ಪ್ರಭಾವದಿಂದ ಕರ್ನಾಟಕದಲ್ಲಿ ನವೆಂಬರ್ 9 ರ ನಂತರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ನವೆಂಬರ್ 9 ರ ನಂತರ … Continued

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ 40 ಬಂಡಾಯ ನಾಯಕರನ್ನು ಉಚ್ಚಾಟಿಸಿದ ಬಿಜೆಪಿ

ಮುಂಬೈ : ಸೀಟು ಹಂಚಿಕೆ ಕುರಿತು ಮಹಾಯುತಿ ಮಿತ್ರಪಕ್ಷಗಳ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟದ ನಡುವೆ ಬಿಜೆಪಿ ಮಂಗಳವಾರ 37 ವಿಧಾನಸಭಾ ಕ್ಷೇತ್ರಗಳಲ್ಲಿ 40 ನಾಯಕರು ಮತ್ತು ಪದಾಧಿಕಾರಿಗಳನ್ನು ಉಚ್ಚಾಟಿಸಿದೆ. ಬಿಜೆಪಿ ಪದಾಧಿಕಾರಿ ಹುದ್ದೆಯನ್ನು ಹೊಂದಿದ್ದರೂ, ನೀವು ಪಕ್ಷದ ಶಿಸ್ತು ಉಲ್ಲಂಘಿಸುವ ಕೆಲಸ ಮಾಡಿದ್ದೀರಿ. ಇಂತಹ ಕ್ರಮಗಳು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ ಮತ್ತು ನಿಮ್ಮನ್ನು ತಕ್ಷಣ … Continued

ಬೆಂಗಳೂರಿನ ರಾಯರ ಮಠಕ್ಕೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ ಭೇಟಿ ; ವಿಶೇಷ ಪೂಜೆ

ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ದಂಪತಿ ಭಾರತ ಪ್ರವಾಸದಲ್ಲಿದ್ದು, ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಂಗಳವಾರ ಭೇಟಿ ನೀಡಿ ಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಮಠಕ್ಕೆ ಮಾವ ಹಾಗೂ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ, … Continued

ನೊಣಗಳ ಸಹಾಯದಿಂದ ಕಗ್ಗಂಟಾಗಿದ್ದ ಕೊಲೆ ರಹಸ್ಯ ಭೇದಿಸಿದ ಪೊಲೀಸರು…!

ಜಬಲ್ಪುರ : ಮಧ್ಯಪ್ರದೇಶದ ಪೊಲೀಸರು 26 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ಶಂಕಿತನ ಅಂಗಿ ಮೇಲಿದ್ದ ನೊಣಗಳು ಈ ಪ್ರಕರಣದ ರಹಸ್ಯ ಭೇದಿಸಲು ಪೊಲೀಸರಿಗೆ ನೆರವಾಗಿವೆ. ಈ ನೊಣಗಳು 19 ವರ್ಷದ ಯುವಕನು ತಾನು ಅಪರಾಧವನ್ನು ಎಸಗಿರುವುದಾಗಿ ಒಪ್ಪಿಕೊಳ್ಳಲು ಕಾರಣವಾಯಿತು. ಆದರೆ ಇದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಪೋಲೀಸರು ಆತನನ್ನು ಈ ಮೊದಲು ಬಿಟ್ಟುಕಳುಹಿಸಿದ್ದರು. ಹಾಗಾದರೆ … Continued

ನವೆಂಬರ್ 24, 25 ರಂದು ಐಪಿಎಲ್ 2025 ಮೆಗಾ ಹರಾಜು; 1574 ಆಟಗಾರರಿಂದ ನೋಂದಣಿ

ನವದೆಹಲಿ: ಐಪಿಎಲ್ 2025ರ ಮೆಗಾ ಹರಾಜಿಗಾಗಿ ಆಟಗಾರರ ನೋಂದಣಿಯನ್ನು ಅಧಿಕೃತವಾಗಿ ನವೆಂಬರ್ 4ರಂದು ಸ್ಥಗಿತಗೊಳಿಸಲಾಯಿತು, ಎರಡು ದಿನಗಳ ಹರಾಜು ಪ್ರಕ್ರಿಯೆಗೆ 1,574 ಆಟಗಾರರು ಸೈನ್ ಅಪ್ ಮಾಡಿದ್ದಾರೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಹರಾಜಿನಲ್ಲಿ 1,165 ಭಾರತೀಯ ಆಟಗಾರರು ಮತ್ತು 409 ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ರೆ. ಬಿಸಿಸಿಐ … Continued