ವೀಡಿಯೊ..| ಪಂದ್ಯ ನಡೆಯುತ್ತಿರುವಾಗಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವು, ಐವರಿಗೆ ಗಾಯ

ಪೆರುವಿನಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿರುವಾಗ ಸಿಡಿಲು ಬಡಿದು ಫುಟ್ಬಾಲ್ ಆಟಗಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೆರುವಿನ ಚಿಲ್ಕಾ ಜಿಲ್ಲೆಯ ಪೆರುವಿಯನ್ ನಗರದಲ್ಲಿ ಹುವಾನ್‌ಕಾಯೊದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ತಂಡಗಳಾದ ಜುವೆಂಟುಡ್ ಬೆಲ್ಲವಿಸ್ಟಾ ಮತ್ತು ಫ್ಯಾಮಿಲಿಯಾ ಚೋಕಾ ನಡುವೆ ಫುಟ್‌ಬಾಲ್ ಪಂದ್ಯ ನಡೆಯುತ್ತಿತ್ತು. ದಿ ಸನ್‌ನ ವರದಿಯ ಪ್ರಕಾರ, … Continued

ವೀಡಿಯೊ..| ಬೆಂಗಳೂರು ; ಬೆಟ್ ಗೆಲ್ಲಲು ಪಟಾಕಿ ಮೇಲೆ ಕುಳಿತ ವ್ಯಕ್ತಿ : ಅದು ಸ್ಫೋಟಗೊಂಡು ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿಯ ರಾತ್ರಿ ಸ್ನೇಹಿತರೊಂದಿಗೆ ಬೆಟ್ಟಿಂಗ್ ಚಾಲೆಂಜ್‌ ನಲ್ಲಿ ಪಟಾಕಿ ಪೆಟ್ಟಿಗೆಯ ಮೇಲೆ ಕುಳಿತ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 32 ವರ್ಷದ ವ್ಯಕ್ತಿಯೊಬ್ಬರು ದೀಪಾವಳಿ ಸಂದರ್ಭದಲ್ಲಿ ಪಟಾಕಿಯ ಪೆಟ್ಟಿಗೆಯ ಮೇಲೆ ಕುಳಿತುಕೊಂಡಿದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ಯದ … Continued

ಖಲಿಸ್ತಾನಿಗಳು-ಟ್ರುಡೊ ವಿರುದ್ಧ ನಿರ್ಣಯ ಅಂಗೀಕರಿಸಿದ ಕೆನಡಾದ 36 ಹಿಂದೂ-ಸಿಖ್ ಗುಂಪುಗಳು…

ಕೆನಡಾದ ಹಿಂದೂ ಮತ್ತು ಸಿಖ್ ಗುಂಪುಗಳು ಖಲಿಸ್ತಾನಿ ಗುಂಪುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಸೋಮವಾರ ಒಗ್ಗೂಡಿ ಸಭೆ ನಡೆಸಿವೆ. ಮೂಲಗಳ ಪ್ರಕಾರ, ಖಾಲ್ಸಾ ದಿವಾನ್ ಸೊಸೈಟಿ ರಾಸ್ ಸ್ಟ್ರೀಟ್ ವ್ಯಾಂಕೋವರ್ ಗುರುದ್ವಾರದಿಂದ ಸಭೆಯನ್ನು ಆಯೋಜಿಸಲಾಗಿತ್ತು, ಅಲ್ಲಿ 36 ಹಿಂದೂ ಸೊಸೈಟಿಗಳು ಮತ್ತು ಸಿಖ್ ಗುಂಪುಗಳ ಸುಮಾರು 1,000 ಜನರು ಭಾಗವಹಿಸಿದ್ದರು. ಈ ಗುಂಪುಗಳು ಖಲಿಸ್ತಾನಿ ಉಗ್ರಗಾಮಿಗಳು … Continued

ಮುಡಾ ಹಗರಣ | ವಿಚಾರಣೆಗೆ ಹಾಜರಾಗಿ ; ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಸಮನ್ಸ್‌

ಮೈಸೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಲೋಕಾಯುಕ್ತ ಪೊಲೀಸರು (Lokayukta Police) ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಮೈಸೂರು ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 6 ರಂದು ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ವಿಚಾರಣೆಗೆ ಹಾಜರಾಗುವಂತೆ ಪ್ರಕರಣದ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರಿಗೆ … Continued

ಡಿಕೆ ಶಿವಕುಮಾರ ವಿರುದ್ಧ ಸಿಬಿಐ ತನಿಖೆ ಅನುಮತಿ ಹಿಂಪಡೆದ ಪ್ರಕರಣ : ವಿಚಾರಣೆ 4 ವಾರ ಮುಂದೂಡಿದ ಸುಪ್ರೀಂ ಕೋರ್ಟ್‌

ನವದೆಹಲಿ : ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿದ್ದ ಹಾಲಿ ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಬಿಐ ಅರ್ಜಿ ಸಲ್ಲಿಸಿದೆ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ … Continued

ಮತ್ತೊಂದು ದೊಡ್ಡ ಹೆಜ್ಜೆ ಇಟ್ಟ ಬಿ ಎಸ್‌ ಎನ್‌ ಎಲ್‌ (BSNL) : ಜಿಯೊ, ಏರ್‌ಟೆಲ್‌, ವೊಡಾಫೋನ್‌-ಐಡಿಯಾಕ್ಕೆ ಪ್ರಬಲ ಪೈಪೋಟಿ…!

ನವದೆಹಲಿ: ಬಿಎಸ್‌ಎನ್‌ಎಲ್‌ (BSNL) ಭಾರತದಾದ್ಯಂತ 4G ನೆಟ್‌ವರ್ಕ್ ಸೇವೆಗಳನ್ನು ತಲುಪಿಸುವಲ್ಲಿ ದಾಪುಗಾಲುಗಳನ್ನು ಇಡುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಹೊಸ ದಾಖಲೆ ಬರೆಯಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ (BSNL) ಇತ್ತೀಚೆಗೆ ರಾಷ್ಟ್ರವ್ಯಾಪಿ 50,000 ಹೊಸ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 41,000 ಟವರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಬಳಕೆದಾರರಿಗೆ ಸಂಪರ್ಕವನ್ನು ಹೆಚ್ಚಿಸಿವೆ. … Continued

ವೀಡಿಯೊ | ದಾಳಿಕೋರರನ್ನು ಬಂಧಿಸುವ ಬದಲು ದೇವಸ್ಥಾನದ ದಾಳಿ ವಿರುದ್ಧ ಪ್ರತಿಭಟಿಸಿದ ಭಕ್ತರ ಮೇಲೆ ಹಲ್ಲೆ ನಡೆಸಿದ ಕೆನಡಾ ಪೊಲೀಸರು..!

ಭಾನುವಾರ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಗುಂಪು ದಾಳಿ ಮಾಡಿದ ನಂತರ, ಪೊಲೀಸರು ದೇವಸ್ಥಾನಕ್ಕೆ ಹೋಗುವವರ ಜೊತೆ ಘರ್ಷಣೆ ನಡೆಸುತ್ತಿರುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು. ಟೊರೊಂಟೊ ಬಳಿಯ ದೇವಸ್ಥಾನದ ಮೇಲೆ “ಭಾರತ ವಿರೋಧಿ” ಖಲಿಸ್ತಾನ ಪ್ರತ್ಯೇಕತಾವಾದಿಗಳು ದಾಳಿಯನ್ನು ಪ್ರತಿಭಟಿಸಿದ ಹಿಂದೂ ಭಕ್ತರ ಜೊತೆಯೇ ಕೆನಡಾದ ಪೊಲೀಸರು ಘರ್ಷಣೆ ನಡೆಸಿದರು. ಪೊಲೀಸರು ದೇವಾಲಯಕ್ಕೆ … Continued

14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು

ನವದೆಹಲಿ: ಚುನಾವಣಾ ಆಯೋಗವು ಉತ್ತರ ಪ್ರದೇಶ, ಪಂಜಾಬ್ ಮತ್ತು ಕೇರಳದ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿದೆ. ಈ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 13ರ ಬದಲಾಗಿ ನವೆಂಬರ್ 20 ರಂದು ಮತದಾನ ನಡೆಯಲಿದೆ. ವಿವಿಧ ಹಬ್ಬಗಳ ಕಾರಣದಿಂದಾಗಿ ಮತದಾನದ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರ ಪ್ರದೇಶದ ಮೀರಾಪುರ್, ಕುಂದರ್ಕಿ, … Continued

ಮಹಾರಾಷ್ಟ್ರ ಚುನಾವಣೆಗೆ ಸ್ಪರ್ಧೆ ಇಲ್ಲ ಎಂದು ಘೋಷಿಸಿದ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ ಜಾರಂಗೆ

ಮುಂಬೈ : ಈ ಹಿಂದೆ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ ಜಾರಂಗೆ ಅವರು ಈ ತಿಂಗಳು ನಡೆಯಲಿರುವ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ ಮತ್ತು ತಮ್ಮ ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಭ್ಯರ್ಥಿಗಳಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ … Continued

ಬಸ್ಸು ಕಮರಿಗೆ ಬಿದ್ದು 22 ಮಂದಿ ಸಾವು

ಅಲ್ಮೋರಾ : ಸೋಮವಾರ ಬೆಳಗ್ಗೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾಮನಗರ ಬಳಿ ಬಸ್ ಕಮರಿಗೆ ಬಿದ್ದು ಕನಿಷ್ಠ 22 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿ ಓವರ್‌ಲೋಡ್‌ ಇತ್ತು ಮತ್ತು ಮೃತಪಟ್ಟವರಲ್ಲಿ ಹಲವಾರು ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಸ್ ಗರ್ವಾಲ್‌ನಿಂದ ಕುಮಾನ್‌ಗೆ ಹೋಗುತ್ತಿದ್ದಾಗ ಅಲ್ಮೋರಾದ ಮಾರ್ಚುಲಾದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕಕುಮಾರ ಪಾಂಡೆ … Continued