ವೀಡಿಯೊ..| ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ; ಸಾವಿನ ಸಂಖ್ಯೆ 24ಕ್ಕೆ ಏರಿಕೆ; ಸ್ಫೋಟದ ಕ್ಷಣ ಸಿಸಿಟಿವಿಯಲ್ಲಿ ಸೆರೆ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ರೈಲು ನಿಲ್ದಾಣದ ಬಳಿ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಮತ್ತು 46 ಜನರು ಗಾಯಗೊಂಡಿದ್ದಾರೆ. ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿಯ ಹೊಣೆ ಹೊತ್ತುಕೊಂಡಿದೆ. ರೈಲು ತನ್ನ ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ … Continued

ಪಾಕಿಸ್ತಾನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟ : 20 ಮಂದಿ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಸಮಯದಲ್ಲಿ, ಪೇಶಾವರಕ್ಕೆ ಹೊರಡಲು ರೈಲು ಸಿದ್ಧವಾಗಿತ್ತು ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಕ್ವೆಟ್ಟಾ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಕಾರ್ಯಾಚರಣೆಗಳ ಮೊಹಮ್ಮದ್ ಬಲೋಚ್ … Continued

ಬೆಂಗಳೂರು | ವಿದ್ಯಾರ್ಥಿಯ ಹಲ್ಲು ಮುರಿದ ಶಿಕ್ಷಕಿ : ಪ್ರಕರಣ ದಾಖಲು

ಬೆಂಗಳೂರು: ಶಾಲಾ ಕೊಠಡಿಯಲ್ಲಿ ಸಹಪಾಠಿಗಳ ಜತೆ ಆಟವಾಡುತ್ತಾ ನೀರು ಚೆಲ್ಲಿ ಗಲೀಜು ಮಾಡಿದ ಕಾರಣಕ್ಕೆ ಕೋಪಗೊಂಡ ಶಿಕ್ಷಕಿಯೊಬ್ಬರನ್ನು ವಿದ್ಯಾರ್ಥಿಯನ್ನು ಥಳಿಸಿದ್ದರಿಂದ ಆತನ ಹಲ್ಲು ಮುರಿದ ಆರೋಪ ಕೇಳಿ ಬಂದಿದ್ದು, ಈಗ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್‌ ನಿವಾಸಿಯಾಗಿರುವ ವಿದ್ಯಾರ್ಥಿ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದು, ಆತ … Continued

97ನೇ ವರ್ಷಕ್ಕೆ ಕಾಲಿಟ್ಟ ಎಲ್​.ಕೆ ಅಡ್ವಾಣಿ : ಭೇಟಿ ಮಾಡಿ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಶುಕ್ರವಾರ ತಮ್ಮ 97ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರಿಗೆ ರಾಜಕೀಯ ವಲಯದಿಂದ ಶ್ಲಾಘನೆಗಳು ಹರಿದುಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮತ್ತು ಭಾರತೀಯ ಜನತಾ ಪಕ್ಷದ ಪಥವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಈ ಮೈಲಿಗಲ್ಲಿನ ವರ್ಷವು … Continued

ವೀಡಿಯೊ..| ಗ್ಯಾರಂಟಿಗಳ ಹೆಸರಲ್ಲಿ ಕರ್ನಾಟಕದಲ್ಲಿ ಲೂಟಿ ಹೊಡಿತಿದ್ದಾರೆ.. ಮಹಾರಾಷ್ಟ್ರದಲ್ಲಿ ಈ ಘೋಷಣೆ ಮಾಡ್ಬೇಡಿ ; ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ..!

ಮೈಸೂರು: ಗ್ಯಾರಂಟಿಗಳ ಹೆಸರಲ್ಲಿ ರಾಜ್ಯ ಸರ್ಕಾರ ಕರ್ನಾಟಕವನ್ನು ಲೂಟಿ ಹೊಡೀತಿದೆ.. ರಕ್ಷಣೆ ಮಾಡಿ ಎಂದು ವ್ಯಕ್ತಿಯೊಬ್ಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಅವರಿಗೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಅವರೂ ವೇದಿಕೆಯಲ್ಲಿದ್ದಾಗಲೇ ಈ ಘಟನೆ ನಡೆದಿದೆ. `ಸಂಗೀತ ಸುಗಂಧ’ ಕಾರ್ಯಕ್ರಮದಲ್ಲಿ ದಿಢೀರ್ ವೇದಿಕೆ ಬಳಿಕ ನುಗ್ಗಿದ ವ್ಯಕ್ತಿಯೊಬ್ಬರು ಘೋಷಣೆ … Continued

ವಕೀಲೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ : 20 ಲಕ್ಷ ರೂ. ಕೊಡ್ತೇವೆ ಹೇಳಿ ಕೇವಲ ₹ 1 ಲಕ್ಷ ಕೊಟ್ರು ; ಪೊಲೀಸರಿಗೆ ದೂರು ನೀಡಿದ ವಕೀಲೆಯ ಕೊಲೆ ಆರೋಪಿ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ವರ್ಷದ ಹಿಂದಿನ ಕೊಲೆ ಪ್ರಕರಣವು ಅಚ್ಚರಿಯ ತಿರುವು ಪಡೆದುಕೊಂಡಿದೆ. ಕೊಲೆ ಮಾಡಿದ್ದಕ್ಕಾಗಿ ಭರವಸೆ ನೀಡಿದಷ್ಟು ಹಣ ಕೊಟ್ಟಿಲ್ಲ ಎಂದು ಗುತ್ತಿಗೆ ಕೊಲೆಗಾರನೇ ಪೊಲೀಸರಿಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ. ವಕೀಲೆ ಅಂಜಲಿ ಅವರನ್ನು ಕೊಲ್ಲಲು 20 ಲಕ್ಷ ರೂ.ಗಳ ಗುತ್ತಿಗೆ ನೀಡಲಾಗಿತ್ತು, ಆದರೆ ಆ ಭರವಸೆ … Continued

ವೀಡಿಯೊ…| ಬ್ಯಾಲೆನ್ಸ್‌ ತಪ್ಪಿ ಮೆಟ್ಟಿಲುಗಳಿಂದ ಜಾರಿ ಬಿದ್ದ ಖ್ಯಾತ ನಟ ವಿಜಯ ದೇವರಕೊಂಡ

ಮುಂಬೈ: ಖ್ಯಾತ ನಟ ವಿಜಯ ದೇವರಕೊಂಡ (Vijay Deverakonda) ಅವರು ತಮ್ಮ ಮುಂಬರುವ ಮ್ಯೂಸಿಕ್ ವಿಡಿಯೋ ಸಾಹಿಬಾ ಪ್ರಚಾರ ಮಾಡಲು ಶುಕ್ರವಾರ ಮುಂಬೈನಲ್ಲಿ ಕಾಲೇಜು ಉತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಮೆಟ್ಟಿಲುಗಳಿಂದ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬ್ಯಾಲೆನ್ಸ್‌ ತಪ್ಪಿ ವಿಜಯ ಬೀಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. … Continued

ವೀಡಿಯೊ | ಕೋಲಾರ ; ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ

ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ದಂಡು ರಸ್ತೆಯ ಬಳಿ ಶುಕ್ರವಾರ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಬಂಗಾರಪೇಟೆ ಪೊಲೀಸರ ಪ್ರಕಾರ, “ರಾಜಕುಮಾರ ಎಂಬವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡದ ನೆಲ ಮಹಡಿಯ ನವೀಕರಣದ ಸಮಯದಲ್ಲಿ ಕಟ್ಟಡ ಕುಸಿದಿದೆ. ಮನೆಯಲ್ಲಿದ್ದ ಮೂರು ಕುಟುಂಬಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ … Continued

ಬೆದರಿಕೆ ಆರೋಪ: ಎಚ್‌ಡಿ ಕುಮಾಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಖರ್ಚಿಗೆ ₹50 ಕೋಟಿ ರೂಪಾಯಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಆರೋಪಿತ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿ ಮತ್ತು ಜೆಡಿಎಸ್‌ ಮಾಜಿ ಮುಖಂಡ ವಿಜಯ ಟಾಟಾ ಅವರ … Continued

ಸುಳ್ಳು ಸುದ್ದಿ ಹರಡಿದ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್​ಐಆರ್

ಹಾವೇರಿ: ‘ನಕಲಿ ಸುದ್ದಿ’ ಹಬ್ಬಿಸಿದ ಆರೋಪದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಎರಡು ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ಮೇಲೂ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಪಹಣಿಯಲ್ಲಿ ವಕ್ಫ್ (Waqf) ಎಂದು ನಮೂದಾದ ಹಿನ್ನೆಲೆ ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತೇಜಸ್ವಿ … Continued