ಸಿಎಂ ಸಿದ್ದರಾಮಯ್ಯ ಸೇರಿ 4 ಕಾಂಗ್ರೆಸ್‌ ನಾಯಕರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್ : ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಸೂಚನೆ

ಬೆಂಗಳೂರು: 2022ರ ಏಪ್ರಿಲ್‌ನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಕರ್ನಾಟಕ ಹೈಕೋರ್ಟ್ 10,000 ರೂಪಾಯಿ ದಂಡ ವಿಧಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಂಪುಟದ ಸಚಿವರಾದ ಎಂ.ಬಿ.ಪಾಟೀಲ, ರಾಮಲಿಂಗಾರೆಡ್ಡಿ ಹಾಗೂ ಕರ್ನಾಟಕದ … Continued

ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು : 6 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ

ಬೆಂಗಳೂರು : ಬೆಂಗಳೂರು ನಗರದಲ್ಲಿ ಸರಣಿ ಬಾಂಬ್‌ ಸ್ಫೋಟ ಮಾಡಲು ಸಂಚು ರೂಪಿಸಿದ್ದ 6 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಕಳೆದ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, … Continued

ಕೇಂದ್ರ ಸರ್ಕಾರದ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಇಂದಿನಿಂದ 29 ರೂ.ಗೆ ಲಭ್ಯ

ನವದೆಹಲಿ: ಏರುತ್ತಿರುವ ಅಕ್ಕಿ ಬೆಲೆಯ ಹೊರೆ ಕಡಿಮೆ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಎಂಬ ಹೊಸ ಅಕ್ಕಿ ಬ್ರಾಂಡ್ ಅನ್ನು ಪ್ರಾರಂಭಿಸಿದೆ. ಪ್ರತಿ ಕಿಲೋಗ್ರಾಂಗೆ 29 ರೂ. ಬೆಲೆಯಲ್ಲಿ ಮಾರಾಟವನ್ನು ಇಂದು, ಮಂಗಳವಾರ ಪ್ರಾರಂಭುಸಲಾಯಿತು. ಇದು ಗ್ರಾಹಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಅಕ್ಕಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ‘ಭಾರತ್ ರೈಸ್’ ವಿತರಣೆಯನ್ನು ನ್ಯಾಷನಲ್ … Continued

ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆ ವಿಧೇಯಕ 2024 ಮಂಡನೆ : ಪರೀಕ್ಷೆ ಅಕ್ರಮಕ್ಕೆ ಗರಿಷ್ಠ 10 ವರ್ಷ ಜೈಲು, 1 ಕೋಟಿ ರೂ.ದಂಡ

ನವದೆಹಲಿ: ಯುಪಿಎಸ್‌ಸಿ, ನೀಟ್‌, ಜೆಇಇ, ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಸೇರಿದಂತೆ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ ಮತ್ತು ನಕಲಿ ವೆಬ್‌ಸೈಟ್‌ಗಳಂತಹ ಅವ್ಯವಹಾರಗಳನ್ನು ಪರಿಶೀಲಿಸಲು ಕೇಂದ್ರವು ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕ- 2024 ಅನ್ನು ಮಂಡಿಸಿದೆ.  ಮಸೂದೆಯು ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ … Continued

ವೀಡಿಯೊ…| ಚಂಡೀಗಢ ಮೇಯರ್ ಚುನಾವಣೆ : ಮತಪತ್ರಗಳ ಮೇಲೆ ರಿಟರ್ನಿಂಗ್ ಆಫೀಸರ್ ಟಿಕ್ ಮಾಡುವ ಮತ್ತೊಂದು ವೀಡಿಯೊ ವೈರಲ್‌

ಚಂಡೀಗಢ : ಚಂಡೀಗಢದ ಮೇಯರ್ ಚುನಾವಣೆಯ ವಿವಾದದ ಮತ್ತೊಂದು ಟ್ವಿಸ್ಟ್‌ನಲ್ಲಿ, ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ, ಇದರಲ್ಲಿ ಸಭಾಂಗಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಪ್ರಿಸೈಡಿಂಗ್ ಆಫೀಸರ್ ಅನಿಲ ಮಸಿಹ್ ಅವರು ಮತಪತ್ರಗಳಿಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಜನವರಿ 30 ರಂದು ನಡೆದ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ವಿಜೇತರಾಗಿ ಹೊರಹೊಮ್ಮಿದ ಚುನಾವಣೆಯ ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನಿಸಿ … Continued

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಶೇ. 50ರಷ್ಟು ಇರುವ ಮೀಸಲಾತಿ ಮಿತಿ ತೆಗೆದುಹಾಕ್ತೇವೆ : ರಾಹುಲ್ ಗಾಂಧಿ

ರಾಂಚಿ : ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ, ರಾಷ್ಟ್ರವ್ಯಾಪಿ ಜಾತಿ ಗಣತಿ ಮತ್ತು ಮೀಸಲಾತಿ ಮೇಲಿನ ಶೇಕಡಾ 50 ಮಿತಿಯನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಾತಿ ಗಣತಿಗೆ ಬೇಡಿಕೆ ಬಂದಾಗ ಮತ್ತು … Continued

ಪ್ರಜಾಪ್ರಭುತ್ವವನ್ನು ಈ ರೀತಿ ಕಗ್ಗೊಲೆ ಮಾಡಲು ಬಿಡುವುದಿಲ್ಲ: ಚಂಡೀಗಢ ಮೇಯರ್ ಚುನಾವಣೆ ಬಗ್ಗೆ ಸುಪ್ರೀಂ ಕೋರ್ಟ್‌ ಸಿಡಿಮಿಡಿ

ನವದೆಹಲಿ: ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿಯನ್ನು ಕಾನೂನುರೀತ್ಯಾ ವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. ಚುನಾವಣಾಧಿಕಾರಿಯು ಮತಪತ್ರ ವಿರೂಪಗೊಳಿಸುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿತು. ಮೇಯರ್ ಚುನಾವಣೆಯಲ್ಲಿ ಸೋತ ಆಮ್ ಆದ್ಮಿ ಪಕ್ಷದ (ಎಎಪಿ) … Continued

ಜ್ಞಾನವಾಪಿ ಮಸೀದಿ ಮುಚ್ಚಿದ ನೆಲಮಾಳಿಗೆಗಳ ಎಎಸ್ಐ ಸಮೀಕ್ಷೆಗೆ ಅವಕಾಶ ನೀಡಿ : ವಾರಾಣಸಿ ನ್ಯಾಯಾಲಯಕ್ಕೆ ಹಿಂದೂ ದಾವೆದಾರರ ಮನವಿ

ವಾರಾಣಸಿ : ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಹಾಗೂ ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸಮೀಕ್ಷೆ ವ್ಯಾಪ್ತಿಗೆ ಒಳಪಡದ ನೆಲಮಾಳಿಗೆಗಳ ಸಮೀಕ್ಷೆಯನ್ನು ನಡೆಸಬೇಕೆಂದು ಕೋರಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. 2022ರ ಶೃಂಗಾರ ಗೌರಿ ಪೂಜೆ ದಾವೆಯಲ್ಲಿ ಮೊದಲ ದಾವೆದಾರೆಯಾಗಿರುವ ರಾಖಿ ಸಿಂಗ್ ಈ ಕುರಿತ ಅರ್ಜಿ ಸಲ್ಲಿಸಿದ್ದಾರೆ. ಜ್ಞಾನವಾಪಿ ಆವರಣದ … Continued

ʼಭಾರತೀಯರು ಸೋಮಾರಿಗಳು, ಕಡಿಮೆ ಬುದ್ಧಿವಂತರೆಂದು ನೆಹರೂ ಭಾವಿಸಿದ್ರು, ಇಂದಿರಾ ಗಾಂಧಿ ಇದಕ್ಕಿಂತ ಭಿನ್ನವಾಗಿ ಯೋಚಿಸಲಿಲ್ಲ’: ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ ನೆಹರೂ ಅವರು ಅಮೆರಿಕ ಮತ್ತು ಚೀನಾದವರಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆಯುಳ್ಳವರು ಎಂದು ಭಾವಿಸಿದ್ದರು ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ‘ಧನ್ಯವಾದಗಳ ನಿರ್ಣಯ’ಕ್ಕೆ ನೀಡಿದ ಉತ್ತರದಲ್ಲಿ, ಪ್ರಧಾನಿ ಮೋದಿ ಸುಮಾರು 2 ಗಂಟೆಗಳ ತಮ್ಮ ಭಾಷಣದಲ್ಲಿ, … Continued

ಬಜೆಟ್‌ ಅಧಿವೇಶನದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದಿದ್ರೆ ಉಸ್ತುವಾರಿ ಸಚಿವರ ಕಚೇರಿ ಮುಂದೆಯೇ ಆಮರಣಾಂತ ಉಪವಾಸ : ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಎಚ್ಚರಿಕೆ

 ಕುಮಟಾ : ಭೌಗೋಳಿಕ ಪರಿಸ್ಥಿತಿ ಹಾಗೂ ಜಿಲ್ಲೆಯ ವಿಸ್ತಾರ ಗಮನಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅಗತ್ಯವಿದ್ದು, ಒಂದು ವೇಳೆ ಫೆಬ್ರವರಿ ೧೬ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಕಚೇರಿ ಮುಂದೆ ಕುಳಿತು ಆಮರಣಾಂತ … Continued