ಹಂಪಿ ಪ್ರವಾಸಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ

ಹುಬ್ಬಳ್ಳಿ:ಹೊಸಪೇಟೆ ಮತ್ತು ಐತಿಹಾಸಿಕ ಹಂಪಿ ಪ್ರವಾಸಕ್ಕೆ ಕೈಗೊಂಡಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಎಂ.ಉಷಾ ಅ ಇಂದು ಸಂಜೆ (ಶುಕ್ರವಾರ) ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಆಗಮಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ , ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ್ ಶೆಟ್ಟರ್ ಶಾಲು ಹಾಕಿ … Continued

ಇಬ್ಬರ ಅಂಗಾಂಗ ದಾನ, 14 ಜನರಿಗೆ ಜೀವದಾನ

ಮೈಸೂರು: ಮಿದುಳು ವೈಫಲ್ಯಕ್ಕೆ ಒಳಗಾಗಿದ್ದ ಇಬ್ಬರ ಅಂಗಾಗಗಳನ್ನು ದಾನ ಮಾಡಲಾಗಿದ್ದು, ಇದರಿಂದ 14 ಜನರಿಗೆ ಜೀವದಾನವಾಗಿದೆ. ಈ ಇಬ್ಬರು ದಾನ ಮಾಡಿದ ಅಂಗಗಳು 14 ಜೀವಗಳನ್ನು ಉಳಿಸಿವೆ. ೪ ಮೂತ್ರ ಪಿಂಡಗಳು (ಕಿಡ್ನಿ) 2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನುಈ ಇಬ್ಬರು ದಾನಮಾಡಿದ್ದರು. ಅದನ್ನು ಒಂದೇ ಬಾರಿ 14 ಜನರಿಗೆ ಅಳವಡಿಸಲಾಯಿತು. ಹುಣಸೂರಿನ … Continued

ಮೋಹರಂ ಆಚರಣೆ ವೇಳೆ ವಿದ್ಯುತ್ ಅವಘಡ:ಇಬ್ಬರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ಅವಘಡ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಹಸನ್ ಸಾಬ್ ಮುಲ್ಲಾ (55) ಹಾಗೂ ಹುಲಿಗೆಮ್ಮ (25) ಎಂದು ಗುರುತಿಸಲಾಗಿದೆ. ಮೋಹರಂ ಆಚರಣೆಯ ಸಂದರ್ಭದಲ್ಲಿ ದೇವರನ್ನ ಭೇಟಿಗೆ ಕರೆದೊಯ್ಯುವ ಸಂದರ್ಭದಲ್ಲಿ ವಿದ್ಯುತ್ ತಂತಿ ದೇವರ ಪಂಜಾಕ್ಕೆ ತಗುಲಿದ … Continued

ಕೊನೆಗೂ ಕೊಡಗು ಬಾಲಕಿ ಕೈಸೇರಿದ ಕಳೆದುಹೋಗಿದ್ದ ಅಮ್ಮನ ನೆನಪಿನ ಮೊಬೈಲ್..!

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ಪುಟ್ಟ ಬಾಲಕಿ ಹೃತಿಕ್ಷಾ ಪ್ರಾರ್ಥನೆ ಕೊನೆಗೂ ಫಲಿಸಿದೆ. ಕೋವಿಡ್‌ನಿಂದ ಮೃತಪಟ್ಟ ತಾಯಿಯ ನೆನಪು ಇರುವ ಮೊಬೈಲ್ ಮೂರು ತಿಂಗಳ ನಂತರ ಆಕೆಯ ಕೈ ಸೇರಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹೃತಿಕ್ಷಾ ತಾಯಿ ಮೇ 16ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಆದರೆ ತಾಯಿಯ ಜೊತೆಗಿದ್ದ ಮೊಬೈಲ್ ಕಳೆದುಹೋಗಿತ್ತು. ತಾಯಿಯ ನೆನಪು … Continued

ಮಂತ್ರಾಲಯದಲ್ಲಿ ಗುರು ರಾಯರ 350ನೇ ಆರಾಧನೆ; ಆ.21ರಿಂದ 27ರ ವರೆಗೆ ಸಪ್ತ ರಾತ್ರೋತ್ಸವ

ರಾಯಚೂರು: ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿಆಗಸ್ಟ್ 21 ರಿಂದ 27ರ ವರೆಗೆ ಏಳು ದಿನ ಸಪ್ತ ರಾತ್ರೋತ್ಸವ (Saptha Rathotsava) ನಡೆಯಲಿದೆ ಹಾಗೂ ಆಗಸ್ಟ್‌ 22, 23, 24ರಂದು ರಾಯರ 350ನೇ ಆರಾಧನೆ ಮಹೋತ್ಸವ ನಡೆಯಲಿದೆ ಎಂದು ಮಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ. ಹಿನ್ನೆಲೆ ವಿಶೇಷ ಪೂಜೆ ಮಹಾಭಿಷೇಕ ನಡೆಯಲಿದೆ. ಕೊರೊನಾ ಸಂಕಷ್ಟ ಗಮನದಲ್ಲಿಟುಕೊಂಡು … Continued

ಕರ್ನಾಟಕದಲ್ಲಿ 1 ರಿಂದ 8 ತರಗತಿ ಆರಂಭ:ಪಾಲಕರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

ಬೆಂಗಳೂರು:ಕರ್ನಾಟಕದಲ್ಲಿ 1ರಿಂದ 8 ತರಗತಿ ಶಾಲಾರಂಭಕ್ಕೆ ಸಂಬಂಧಿಸಿದಂತೆ ಅಂಕಿ-ಅಂಶಗಳ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಇದೇ ಸಮಯದಲ್ಲಿ ಶಾಲೆಗಳನ್ನು ತೆರೆಯುವ ಕುರಿತು ಪೋಷಕರಿಂದ ಅಭಿಪ್ರಾಯ ಸಂಗ್ರಹ ಮಾಡುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಗಸ್ಟ್‌ ೨೩ರಿಂದ ರಾಜ್ಯದಲ್ಲಿ ೯ ರಿಂದ … Continued

ಕರ್ನಾಟಕದಲ್ಲಿ ಗುರುವಾರ ಹತ್ತು ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಪ್ರಕರಣ

ಬೆಂಗಳೂರು:ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ (ಗುರುವಾರ) 1,432 ಕೊರೊನಾ ಸೋಂಕು ಪತ್ತೆಯಾಗಿದೆ. ಇದೆ ವೇಳೆ ಸೋಂಕಿನಿಂದಾಗಿ 27 ಜನರು ಮೃತಪಟ್ಟಿದ್ದಾರೆ ಹಾಗೂ 1538 ಸೋಂಕಿತರು ಚೇತಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,34,624ಕ್ಕೆ ಏರಿಕೆಯಾಗಿದೆ. ಒಟ್ಟು 2876377 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 37,088ಕ್ಕೆ … Continued

ರಾಜ್ಯ ಸಂಪುಟ ಸಭೆಯಲ್ಲಿ 2859 ಆರೋಗ್ಯ ಉಪಕೇಂದ್ರಗಳ ಮೇಲ್ದರ್ಜೆಗೇರಿಸಲು 478 ಕೋಟಿ ರೂ.ಗಳಿಗೆ ಅನುಮೋದನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಗುರುವಾರ) ನಡೆದ ಸಂಪುಟ ಸಭೆಯಲ್ಲಿ 2859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 478 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಯಿತು. ಸಭೆಯ ಬಳಿಕ ಸಚಿವ ಮಾಧುಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ, 2859 ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೆ 478 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಶೇ … Continued

ಜನಾರ್ದನ ರೆಡ್ಡಿಗೆ ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕರ್ನಾಟಕದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ 8 ವಾರಗಳ ಕಾಲ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. 8 ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ಜನಾರ್ಧನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ. ವಿನೀತ್ ಸಾರನ್ … Continued

ಯೋಗೀಶ್ ಗೌಡ ಹತ್ಯೆ ಪ್ರಕರಣ; ಮತ್ತೊಂದು ಕೇಸಿನಲ್ಲೂ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜಾಮೀನು

ಬೆಂಗಳೂರು: ಬಿಜೆಪಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯ ಅವರಿಗೆ ಆ.11ರಂದು ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು … Continued